ನವದೆಹಲಿ: ತಮಿಳುನಾಡಿನ ಹಿಂದುಳಿದ ಸಮುದಾಯ ವಣ್ಣಿಯಾರ್ಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ನೀಡಲಾಗುತ್ತಿದ್ದ 10.5 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿರನ್ನೊಳ ಗೊಂಡ ಪೀಠವು ಮೀಸಲಾತಿ ರದ್ದುಗೊಳಿ ಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಎಂಬಿಸಿ ಗುಂಪಿನಲ್ಲಿರುವ 115 ಸಮುದಾಯಗಳಿಗಿಂತ ವಿಭಿನ್ನವಾಗಿ ಪರಿಗಣಿಸಲು ವಣ್ಣಿಯಾಕುಲ ಕ್ಷತ್ರಿಯರನ್ನು ಒಂದು ಗುಂಪಿಗೆ ವರ್ಗೀಕರಿಸಲು ಯಾವುದೇ ಗಣನೀಯ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದೇವೆ. ಆದ್ದರಿಂದ 2021 ರ ಕಾಯಿದೆಯು 14, 15 […]