ವಾಷಿಂಗ್ಟನ್: ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಹಾಗೂ ನಟಿ ಜೋಸೆ ಫೀನ್ (74) ಪ್ಯಾರಿಸ್‌ನಲ್ಲಿ ನಿಧನ ಹೊಂದಿದ್ದಾರೆ. ಜೋಸೆಫೀನ್, ಪಿಯರ್ ಪಾವೊಲೊ ಪಸೊಲಿನಿಯ, ದಿ ಕ್ಯಾಂಟರ್ಬರಿ ಟೇಲ್ಸ್ ಸೇರಿದಂತೆ ಹಲವಾರು ಹಾಲಿವುಡ್ ಚಲನಚಿತ್ರ ಗಳಲ್ಲಿ ನಟಿಸಿದ್ದರು. ಜೋಸೆಫೀನ್ ಚಾಪ್ಲಿನ್ ಹಾಸ್ಯ ಜಗತ್ತಿನ ದಂತಕಥೆ ಚಾರ್ಲಿ ಚಾಪ್ಲಿನ್ ಅವರಿಗೆ ಒಟ್ಟು 11 ಮಕ್ಕಳಿದ್ದು ಅದರಲ್ಲಿ ಜೋಸೆಫೀನ್ 6ನೇಯವರು. ಚಾರ್ಲಿ ಚಾಪ್ಲಿನ್ ಅವರ ನಾಲ್ಕನೇ ಹೆಂಡತಿ, ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಯುಜೀನ್ ಓ’ನೀಲ್ ಅವರ ಮಗಳಾಗಿ ದ್ದರು. […]