ಭೋಪಾಲ್: ಮಧ್ಯಪ್ರದೇಶದ ಛತರ್ ಪುರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಒಂದು ವರ್ಷ ಮೂರು ತಿಂಗಳ ಮಗುವನ್ನು ರಕ್ಷಣೆ ಮಾಡಲಾಗಿದೆ. ಕೊಳವೆಬಾವಿಯಲ್ಲಿ 15 ಅಡಿ ಆಳದಲ್ಲಿ ಮಗು ಸಿಲುಕಿದ್ದು, ಸೇನೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ದಿಂದ ರಕ್ಷಣಾ ಕಾರ್ಯ ನಡೆಸಲಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದೆ. ಗುರುವಾರ ಸಂಜೆ 4 ರಿಂದ ಆರಂಭವಾದ ರಕ್ಷಣಾ ಕಾರ್ಯಾಚರಣೆಯು ಮಧ್ಯರಾತ್ರಿ 12:30(ಶುಕ್ರವಾರ) ವರೆಗೆ ನಡೆಯಿತು. ಮಗು ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಾಗ ಸಿಲಿಂಡರ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗಿತ್ತು ಎಂದು […]