Friday, 20th September 2024

ಮಿಲಾದ್ ಉನ್ ನಬಿ ದಿನದ ಶುಭಾಶಯ ಕೋರಿದ ಮೋದಿ

ನವದೆಹಲಿ : ಪ್ರವಾದಿ ಮಹಮ್ಮದ್ ಅವರ ಜನ್ಮದಿನ ಹಿನ್ನೆಲೆ ದೇಶಾದ್ಯಂತ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಮಿಲಾದ್ ಉನ್ ನಬಿ ದಿನದ ಶುಭಾಶಯಗಳು, ಈ ದಿನವು ಕರುಣೆ ಮತ್ತು ಸೋದರತ್ವ ವನ್ನು ಮತ್ತಷ್ಟು ವಿಸ್ತರಿಸಲಿ. ಎಲ್ಲರೂ ಆರೋಗ್ಯದಿಂದ ಮತ್ತು ಖುಷಿಯಿಂದ ಇರಲಿ, ಈದ್ ಮುಬಾರಕ್ ಎಂದು ಪ್ರಧಾನಿ ಮೋದಿ ಟ್ವೀಟ್’ನಲ್ಲಿ ಹೇಳಿದ್ದಾರೆ.

ಮುಂದೆ ಓದಿ