ಲಖನೌ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ 2,494 ಶಿಕ್ಷಕರು ನಕಲಿ ದಾಖಲೆಗಳನ್ನು ನೀಡಿ ನೇಮಕವಾಗಿರುವ ಸಂಗತಿ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ವಿಶೇಷ ಕಾರ್ಯ ಪಡೆ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಎಸ್ಟಿಎಫ್ ನ ಹಿರಿಯ ಅಧಿಕಾರಿಯೊಬ್ಬರು, ಇಡೀ ರಾಜ್ಯಾದ್ಯಂತ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದರೆ 10 ಸಾವಿರಕ್ಕೂ ಹೆಚ್ಚು ನಕಲಿ ಶಿಕ್ಷಕರು ಸಿಗು ತ್ತಾರೆ ಎಂದರು. ಶಿಕ್ಷಣ ಇಲಾಖೆಯ ನೇಮಕಾತಿ ಹಗರಣ ಭಾರೀ ಸುದ್ದಿಯಾದ ಬೆನ್ನಲ್ಲೇ 2020 ರಲ್ಲಿ ಉತ್ತರ ಪ್ರದೇಶ ಸರ್ಕಾರ ಎಸ್ಟಿಎಫ್ […]