ನ್ಯಾಯದ ಗಂಟೆ ಕಪಿಲ್ ಸಿಬಲ್ ಲೋಕಸಭೆ ಚುನಾವಣೆಗೆ ಮುಂಚೆಯೇ ಹೇಮಂತ್ ಸೊರೇನ್ ಮತ್ತು ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರು ವುದು, ನಮ್ಮ ಪ್ರಜಾಪ್ರಭುತ್ವದ ಸ್ಥಿತಿಗತಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಕ್ರಮಗಳನ್ನು ಕೈಗೊಂಡಿರುವ ಕಾಲಘಟ್ಟವೇ ಇದನ್ನು ಹೇಳುತ್ತಿದೆ. ನಿಮಗಿದು ಗೊತ್ತಿರುವ ಸಂಗತಿಯೇ. ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ರೀತಿ ನಿಜಕ್ಕೂ ಅಭೂತಪೂರ್ವವಾಗಿತ್ತು ಅಥವಾ ಇದು ಹಿಂದೆಂದೂ ಕಂಡಿಲ್ಲದ ನಿರ್ದಶನವಾಗಿತ್ತು ಎನ್ನಬೇಕು. ಸೊರೇನ್ ಅವರು ರಾಜೀನಾಮೆ ನೀಡಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು […]