ನವದೆಹಲಿ: ಭಾರತದ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಪ್ರಕಟಿಸಿದ್ದಾರೆ. ತಮ್ಮ ಕೊನೆಯ ಪಂದ್ಯವನ್ನು ಜೂನ್ 26 ರಂದು ಕುವೈತ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 2005ರಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಛೆಟ್ರಿ ಅವರು 19 ವರ್ಷಗಳ ಸುದೀರ್ಘ ವೃತ್ತಿಜೀವನ ಕೊನೆಗೊಳಿಸಲು ಸಿದ್ಧರಾಗಿದ್ದಾರೆ. ಛೆಟ್ರಿ ಅವರು ಜನಿಸಿದ್ದು 1984ರ ಆಗಸ್ಟ್ 3ರಂದು. ತಂದೆ ಕೆಬಿ ಛೆಟ್ರಿ, ತಾಯಿ ಸುಶೀಲಾ ಛೆಟ್ರಿ. ಸುನಿಲ್ ಛೆಟ್ರಿ ಅವರು ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದವರು. ಅವರ […]