ಮುಂಬೈ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಮಿಂಚಲು ಸಿದ್ದರಾಗಿದ್ದ ಮೂವರು ಆಟಗಾರರಿಗೆ ಅಫ್ಘಾನಿಸ್ಥಾನ ಕ್ರಿಕೆಟ್ ಮಂಡಳಿ ಅಡ್ಡಿಯಾಗಿದೆ. ನವೀನ್ ಉಲ್ ಹಖ್, ಮುಜೀಬ್ ಉರ್ ರಹಮಾನ್ ಮತ್ತು ಫಜಲಕ್ ಫರೂಖಿ ಅವರಿಗೆ ಐಪಿಎಲ್ ಆಡಲು ನಿರಾಕ್ಷೇಪಣಾ ಪತ್ರ ನೀಡಲು ಮಂಡಳಿ ನಿರಾಕರಿಸಿದೆ. ಎರಡು ವರ್ಷ ಕಾಲ ಮೂವರಿಗೆ ಐಪಿಎಲ್ ಸೇರಿ ಯಾವುದೇ ಟಿ20 ಲೀಗ್ ಆಡಲು ಅನುಮತಿ ನೀಡದಿರಲು ನಿರ್ಧರಿಸಿದೆ. ಆಟಗಾರರು ತಮ್ಮ ವಾರ್ಷಿಕ ಕೇಂದ್ರೀಯ ಒಪ್ಪಂದಗಳಿಂದ ಬಿಡುಗಡೆ ಹೊಂದಲು ಬಯಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಗಳು […]