ಬೆಂಗಳೂರು: ಅನಾರೋಗ್ಯದಿಂದ ಫೆ.16ರಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ನಟ-ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಡಿಸ್ಚಾರ್ಜ್ ಆಗಿದ್ದಾರೆ. ರಾಘಣ್ಣ ಮಾತನಾಡಿ, ‘ಬೆಳಕು ಸಿನಿಮಾದ ಶೂಟಿಂಗ್ನಲ್ಲಿದ್ದೆ. ಆ ಸಮಯದಲ್ಲಿ ಹೃದಯ ಬಡಿತದಲ್ಲಿ ಏರು ಪೇರು ಕಾಣಿಸಿ ಕೊಳ್ತು. ಆಸ್ಪತ್ರೆಗೆ ದಾಖಲಾದೆ. ಇದೇ ಆಸ್ಪತ್ರೆಯಲ್ಲಿ ನಾನು ಏಳು ವರ್ಷದ ಹಿಂದೆ ಸ್ಟ್ರೋಕ್ ಆದಾಗಲೂ ಅಡ್ಮಿಟ್ ಆಗಿದ್ದೆ. ಇಲ್ಲಿ ಬಂದು ಆಯಂಜಿಯೋಗ್ರಾಮ್ ಮಾಡಿ ಸದ್ಯ ಪೇಸ್ ಮೇಕರ್ ಹಾಕಿದ್ದಾರೆ. ಇನ್ನೊಂದು ವಾರದಲ್ಲಿ ನಾನು ಕೆಲಸಕ್ಕೆ ವಾಪಾ ಸ್ಸಾಗ್ತೇನೆ’ ಎಂದರು. ನಾನು ಬಿಡುವಿಲ್ಲದೇ ಕೆಲಸ ಮಾಡಿದ್ರಿಂದ […]