ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರ ಮಾಜಿ ಉದ್ಯೋಗಿ ಬುಚ್ಚಿಬಾಬು ಅವರನ್ನು ಬಂಧಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬುಚ್ಚಿಬಾಬು ಕೈವಾಡವಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅವರನ್ನು ವಿಚಾರಣೆ ಗೆಂದು ತೆಲಂಗಾಣದಿಂದ ಕರೆಸಿಕೊಂಡು ಬಂಧಿಸ ಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಕಳೆದ ಡಿಸಂಬರ್ 12 ರಂದು ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್‍ನಲ್ಲಿ ಸಿಬಿಐ ತಂಡವು ಕೆಸಿಆರ್ […]