ಬೆಂಗಳೂರು: ನಾನು ರಾಜಸ್ಥಾನದಿಂದ ಬಂದವನಾಗಿದ್ದರೆ ನಿಮ್ಮ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಇಟಲಿಯಿಂದ ಬಂದವರು. ಅವರು ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ತಿರುಗೇಟು ನೀಡಿದ್ದಾರೆ. ಕೆಐಎಡಿಬಿ ಭೂ ವ್ಯವಹಾರ ಪ್ರಶ್ನಿಸಿದ್ದಕ್ಕಾಗಿ ಖರ್ಗೆ ಜೂನಿಯರ್ ಮತ್ತವರ ಸ್ನೇಹಿತರು ರಾಜಸ್ಥಾನಿ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಕೇಳಲು ಬಯಸುತ್ತೇನೆ ಸೋನಿಯಾ ಗಾಂಧಿ ಅವರು ರಾಜಸ್ಥಾನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇಟಲಿಯ ಜುಂಜುನುದಲ್ಲಿ ಜನಿಸಿದವರು. […]