ಲಖನೌ: ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 3 ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿ ದ್ದಾರೆ. ಈ ಅಪಘಾತಕ್ಕೆ ಕೋತಿಗಳು ಕಾರಣ ಎಂದು ಹೇಳಲಾಗಿದೆ. ಕೋತಿಗಳು ರಸ್ತೆಗೆ ಲಗ್ಗೆ ಇಟ್ಟ ಪರಿಣಾಮ ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬ್ಯಾಂಕ್ ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೊರದಾಬಾದ್-ಅಲಿಗಢ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ. ಮೊರದಾಬಾದ್ ನ ಡೋಮ್ ಗಢ್ ಪ್ರದೇಶದಲ್ಲಿ ಈ ಅಪಘಾತ ಘಟನೆ ನಡೆದಿತ್ತು. […]