ಮಾಲೆ: ಮಾಲ್ಡೀವ್ಸ್ ರಾಜಧಾನಿಯ ಮೇಯರ್ ಚುನಾವಣೆಯಲ್ಲಿ ಪ್ರಮುಖ ವಿಪಕ್ಷ ಹಾಗೂ ಭಾರತ ಪರ ನಿಲುವಿಗೆ ಹೆಸರಾದ ಮಾಲ್ಡೀವನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭರ್ಜರಿ ಜಯ ಸಾಧಿಸಿದೆ. ಎಂಡಿಪಿ ಅಭ್ಯರ್ಥಿ ಅದಾಮ್ ಅಝೀಂ ಅವರು ಮಾಲೆಯ ಹೊಸ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನವರೆಗೂ ಮುಯಿಝ್ಝು ಈ ಹುದ್ದೆ ಯಲ್ಲಿದ್ದರು. ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಝೀಂ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಮಾಲ್ಡೀವ್ಸ್ ಮಾಧ್ಯಮಗಳು ವರದಿ ಮಾಡಿವೆ. ರಾಷ್ಟ್ರದ […]