ನೋಯ್ಡಾ: ಔಷಧ ಕಂಪನಿ ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಕೆಮ್ಮಿನ ಸಿರಪ್ ಉತ್ಪಾದನೆಯನ್ನು ಸ್ಥಗಿತ ಗೊಳಿಸಿದೆ. ‘ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್’ ಉತ್ಪಾದಿಸಿದ ‘ಡಾಕ್ 1 ಮ್ಯಾಕ್ಸ್’ ಸೇವನೆ ಬಳಿಕ ದೇಶದಲ್ಲಿ ಕನಿಷ್ಠ 18 ಮಕ್ಕಳು ಮೃತಪಟ್ಟಿರುವುದಾಗಿ ಉಜ್ಬೇಕಿಸ್ತಾನ ಸರ್ಕಾರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ಔಷಧ ತಯಾರಿಕೆಯನ್ನು ನಿಲ್ಲಿಸಿದೆ. ಸಂಸ್ಥೆಯ ನೊಯಿಡಾ ಘಟಕವನ್ನು ಉತ್ತರ ಪ್ರದೇಶ ಔಷಧ ನಿಯಂತ್ರಣ ಇಲಾಖೆ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ತಂಡಗಳು ಪರಿಶೀಲನೆ ನಡೆಸಿವೆ. […]