ಇದು ನಿಜಕ್ಕೂ ಆಘಾತಕಾರಿ ಸಂಗತಿ. ಮೋರಿಸ್ ಸ್ಯಾಮ್ಯುಯೆಲ್ ಎಂಬಾತ ಗುಜರಾತಿನ ಗಾಂಧಿನಗರದಲ್ಲಿನ ತನ್ನ ಕಚೇರಿಯಲ್ಲಿ ನ್ಯಾಯಾಲಯದ ಸಜ್ಜಿಕೆಯನ್ನು ಮಾಡಿಸಿ, ನ್ಯಾಯಾಧೀಶನಂತೆ ಸ್ವತಃ ಛದ್ಮವೇಷ ಧರಿಸಿ ಜನರನ್ನು ವಂಚಿಸುತ್ತಿದ್ದನಂತೆ. ‘ಆರ್ಬಿಟ್ರಲ್ ಟ್ರಿಬ್ಯೂನಲ್ ಕೋರ್ಟ್’ ಎಂಬ ಫಲಕ ಹಾಕಿಕೊಂಡು, ಭೂವ್ಯಾಜ್ಯ ಸಂಬಂಧಿತದಾವೆಗಳನ್ನು ವಿಚಾರಣೆ ಮಾಡುವಂತೆ ನಟಿಸಿ, ಹಣ ನೀಡಿದವರಿಗೆ ಅನುಕೂಲಕರ ಆದೇಶಗಳನ್ನು ನೀಡುತ್ತಾ ಬಂದಿದ್ದನಂತೆ ಈ ವಂಚಕ. ಈತ ಕಳೆದ 5 ವರ್ಷಗಳಿಂದ ಜನರ ಕಣ್ಣಿಗೆ ಮಣ್ಣೆರಚಿದ್ದು ಮಾತ್ರವಲ್ಲದೆ ಅಲ್ಲಿನ ಆಳುಗ ವ್ಯವಸ್ಥೆಯನ್ನೂ ಅಣಕಿಸಿ ದ್ದಾನೆ ಎನ್ನಲಡ್ಡಿಯಿಲ್ಲ. ಈ ಸುದ್ದಿ […]