ಭುವನೇಶ್ವರ: ಲಾರಿ ಚಾಲಕರು ರಾತ್ರಿ ವೇಳೆಯಲ್ಲಿಯೂ ವಾಹನ ಚಲಾಯಿಸುವುದರಿಂದ ನಿದ್ದೆ ಮಂಪರಿನಲ್ಲಿ ಅಪಘಾತಗಾಳುಗುವ ಸಂಭವ ಹೆಚ್ಚು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಡಿಶಾ ಸರ್ಕಾರ ಲಾರಿ-ಟ್ರಕ್ ಚಾಲಕರಿಗೆ ಉಚಿತ ಟೀ-ಕಾಫಿ ವಿತರಿಸಲು ಮುಂದಾಗಿದೆ. ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆದ್ದಾರಿಗಳಲ್ಲಿ ಸಂಚರಿಸುವ ಲಾರಿ-ಟ್ರಕ್ ಚಾಲಕರಿಗೆ ಉಚಿತ ಟೀ-ಕಾಫಿ ವಿತರಿಸುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ಈ ಬಗ್ಗೆ ಒಡಿಶಾ ಸಾರಿಗೆ ಸಚಿವೆ ತುಕುಣಿ ಸಾಹು ಮಾಹಿತಿ ನೀಡಿದ್ದಾರೆ. ಅಪಘಾತಗಳನ್ನು ನಿಯಂತ್ರಿಸಲು ಸಿಎಂ ನವೀನ್ ಪಟ್ನಾಯಕ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ […]