ವೈದ್ಯಕೀಯ ಡಾ.ಕಿರಣ್ ವಿ.ಎಸ್ ಕೆಲ ದಶಕಗಳ ಹಿಂದೆ ಸಂಸ್ಕೃತ ಕಲಿಯುವವರು ಕಡಿಮೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಅಂದಿನ ಸರಕಾರ ಒಂದು ಭಯಂಕರ ಆಲೋಚನೆ ಮಾಡಿತು. ಪ್ರೌಢಶಾಲೆಯ ಮಟ್ಟದಲ್ಲಿ ಸಂಸ್ಕೃತ ತೆಗೆದುಕೊಂಡವರಿಗೆ ಧಾರಾಳವಾಗಿ ಅಂಕ ಕೊಡುವುದು! ಮೂರು ವರ್ಷಗಳ ಅವಧಿಯಲ್ಲಿ ಸಣ್ಣವಯಸ್ಸಿನ ಮಕ್ಕಳು ಸಂಸ್ಕೃತ ಕಲಿಯುವುದು ಹೇಗೆ? ಚಿಂತೆಯಿಲ್ಲ; ಶೇಕಡಾ 15 ಅಂಕಗಳ ಪ್ರಶ್ನೆಗಳನ್ನು ಸಂಸ್ಕೃತದಲ್ಲಿ ಉತ್ತರಿಸಿದರೆ ಸಾಕು. ಉಳಿದ 85 ಅಂಕಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಇಲ್ಲವೇ ಮರಾಠಿ ಭಾಷೆ ಗಳಲ್ಲಿ ಉತ್ತರಿಸಬಹುದು ಎಂಬ ಏರ್ಪಾಡು. ಮಕ್ಕಳಿಗೆ ಸಂಸ್ಕೃತ […]