ನಾಡಿಮಿಡಿತ ವಸಂತ ನಾಡಿಗೇರ ಅದೊಂದು ಸಣ್ಣ ಆಫೀಸು. ಅಲ್ಲೊಂದು ಟೇಬಲ್. ಅದರ ಮೇಲೊಂದು ಕಂಪ್ಯೂಟರ್. ಪಕ್ಕದಲ್ಲಿ ಫೋನ್. ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿ, ಕಂಪ್ಯೂಟರ್ ಪರದೆಯ ಮೇಲೆ ಕಣ್ಣಾಡಿಸಿ ಏನನ್ನೊ ಹುಡುಕುತ್ತಾರೆ. ಮರುಕ್ಷಣವೇ ಒಬ್ಬರಿಗೆ ಕರೆ ಮಾಡುತ್ತಾರೆ. ‘ಹಲೋ’.. ಎಂದು ಅತ್ತಕಡೆಯಿಂದ ಧ್ವನಿ ಬರುತ್ತಿದ್ದಂತೆ ಇವರು, ‘ಹಲೋ, ಅಲಿಸ್ಸಾ ..?’ ಎಂದು ಕೇಳುತ್ತಾರೆ. ‘ಹೌದು’.ಅತ್ತಕಡೆಯಿಂದ ಹೆಣ್ಣು ದನಿ ಉಲಿಯಿತು. ‘ಒಕೆ. ನಾನು ಬರಾಕ್ ಒಬಾಮಾ, ಈ ದೇಶದ ಅಧ್ಯಕ್ಷನಾಗಿದ್ದವನು’ ಎಂದು ಅವರು ಒಂಚೂರೂ ಹಮ್ಮು ಬಿಮ್ಮಿಲ್ಲದೆ ತಮ್ಮ ಪರಿಚಯ […]