ವಿಚಾರ ಅನಿಲ್ ಕೆ.ಆಂಟನಿ ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ ಬರಿಗಣ್ಣಿಗೆ ಕಾಣಿಸದ ಕೋಟ್ಯಂತರ ಸಂಗತಿಗಳೊಂದಿಗೆ ಚಿಪ್‌ಗಳು ಅಳವಡಿಕೆ ಯಾಗುತ್ತಿವೆ. ಕಣ್ಣಿಗೆ ಕಾಣದ ಅದೆಷ್ಟೋ ಮಿನಿಯೇಚರ್ ಅಂಶಗಳನ್ನು ಒಳಗೊಂಡಿರುವ ಚಿಪ್‌ಗಳು ಈಗ ಇನ್ನಷ್ಟು ಸಣ್ಣದಾ ಗಿವೆ. ವಿಶ್ವದ ಸರ್ವಪ್ರಥಮ ಕಂಪ್ಯೂಟರ್ ತಯಾರಕ ಕಂಪನಿ 1945ರಲ್ಲಿ ತಯಾರಿಸಿದ ಕಂಪ್ಯೂಟರ್‌ನ ತೂಕ 30 ಟನ್‌ನಷ್ಟಿತ್ತು. ಅದರಲ್ಲಿ ಬಹುಪಾಲು ವ್ಯಾಕ್ಯೂಮ್ ಟ್ಯೂಬ್‌ಗಳದ್ದವು ಮತ್ತು ಅದರ ತೂಕವೇ 18 ಟನ್‌ನಷ್ಟಿತ್ತು. ಅದೆಲ್ಲವೂ ಗಾತ್ರದಲ್ಲಿ ಬೃಹತ್ತಾಗಿತ್ತು. ಹೆಚ್ಚು ವಿದ್ಯುತ್ ಬೇಡುತ್ತಿತ್ತು ಮತ್ತು ತಾತ್ವಿಕವಾಗಿ ದುರ್ಬಲವೂ ಆಗಿತ್ತು. […]