ತುಮಕೂರು: ಕುಲಪತಿ ಹುದ್ದೆ ಅಧಿಕಾರವಾಲ್ಲ, ವಾಸ್ತವವಾಗಿ ಅದೊಂದು ಜವಾಬ್ದಾರಿ ಎಂದು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು. ತುಮಕೂರು ವಿವಿ ಕುಲಪತಿಯಾಗಿ ಅಧಿಕಾರ ಅವಧಿಯ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿ ಸಿಬ್ಬಂದಿ ಯೊ0ದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಕ್ತಿ ಉನ್ನತ ಸ್ಥಾನವನ್ನು ಏರಿದಾಗ ಜವಾಬ್ದಾರಿ ಹೆಚ್ಚಾಗಬೇಕು. ಅಧಿಕಾರವನ್ನು ಚಲಾಯಿಸದೆ ಎಲ್ಲರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಬೆಳವಣ ಗೆ ಕಾಣಬಹುದು. ವೈಯಕ್ತಿಕ ಲಾಭಕ್ಕಾಗಿ ಕಾರ್ಯನಿರ್ವ ಹಿಸದೆ, ಅಭಿವೃದ್ಧಿಗಾಗಿ ದುಡಿಯಬೇಕು. ಅಡ್ಡದಾರಿಯಿಂದ ಯಾವುದೇ ಹುದ್ದೆಗೆ ಏರಬಾರದು […]