#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
ಕರ್ನಾಟಕ
Gold Price Today: ಸ್ವರ್ಣಪ್ರಿಯರಿಗೆ ಮತ್ತೆ ಶಾಕ್‌! ಚಿನ್ನದ ದರದಲ್ಲಿ ಏರಿಕೆ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ ತಲಾ 15 ರೂ. ಮತ್ತು 16ರೂ. ಏರಿಕೆ ಕಂಡಿದೆ. ಸದ್ಯ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,945 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 8,667 ರೂ. ಇದೆ.

SSLC preparatory Exam: ಫೆ.25ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ

ಫೆ.25ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯೂ ಏಕ ರೂಪದ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ನೀಡಲು ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಆನ್‌ಲೈನ್‌ ಮೂಲಕ ಕಳುಹಿಸಲಿದೆ.

Kumbh Mela: ಫೆ.10ರಿಂದ 3 ದಿನ ಟಿ.ನರಸೀಪುರ ಸಂಗಮದಲ್ಲಿ ಕುಂಭಮೇಳ, ಪುಣ್ಯ ಸ್ನಾನಕ್ಕೆ 5 ಕಡೆ ಸ್ಥಳ ಗುರುತು

ಫೆ.10ರಿಂದ ಟಿ.ನರಸೀಪುರದಲ್ಲಿ ಕುಂಭಮೇಳ, 5 ಕಡೆ ಪುಣ್ಯ ಸ್ನಾನ

ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ಹಾಗೂ ಕಬಿನಿ ನದಿಗಳು ಸಂಗಮಿಸುತ್ತವೆ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಈ ಪುಣ್ಯಕ್ಷೇತ್ರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಯುತ್ತದೆ. ಇಲ್ಲಿ ಭಕ್ತರಿಗೆ ಪುಣ್ಯಸ್ನಾನಕ್ಕೆ 5 ಕಡೆ ಸ್ಥಳ ಗುರುತು ಮಾಡಲಾಗಿದೆ.

Giri Dinesh: ಹೃದಯಾಘಾತದಿಂದ ಕನ್ನಡ ಚಲನಚಿತ್ರ ನಟ ಗಿರಿ ದಿನೇಶ್ ನಿಧನ

ಹೃದಯಾಘಾತದಿಂದ ಕನ್ನಡ ಚಲನಚಿತ್ರ ನಟ ಗಿರಿ ದಿನೇಶ್ ನಿಧನ

ಗಿರಿ ದಿನೇಶ್ ಅವರು ನವಗ್ರಹ, ವಜ್ರ ಹಾಗೂ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ದಿನೇಶ್ ಅವರ ಪುತ್ರ ಗಿರಿ. ಹಾಸ್ಯ ನಟನಾಗಿಯೂ, ಖಳನಟನಾಗಿಯೂ ದಿನೇಶ್‌ ಜನಪ್ರಿಯತೆ ಪಡೆದಿದ್ದರು.

ಇಂದು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಭಾರತ-ಶ್ರೀಲಂಕಾ ದಿಗ್ಗಜ ಆಟಗಾರರ ನಡುವೆ ಕ್ರಿಕೆಟ್

ಮಾನವೀಯತೆಯ ಅಭಿಯಾನದ ಏಕತೆಗಾಗಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ 2025

ಶನಿವಾರ ನಡೆಯುವ ಈ ಪಂದ್ಯವನ್ನು ಸದ್ದುರು ಶ್ರೀ ಮಧುಸೂದನ ಸಾಯಿ ಅವರ ಮಾನವೀಯ ತೆಯ  ಅಭಿಯಾನದ ಏಕತೆಗೆ ಸಮರ್ಪಿಸಲಾಗಿದೆ ಎಂದು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕುಲಾಧಿಪತಿ ನರಸಿಂಹಮೂರ್ತಿ ತಿಳಿಸಿದ್ದಾರೆ

ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ

ಫೆ.10ರಂದು ಬಾಗೇಪಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಹಾಗೂ ಫಲ ಪುಷ್ಪ ಪ್ರದರ್ಶನ ಕಾರ್ಯ ಕ್ರಮದ ಉದ್ಘಾಟನಾ ಸಮಾರಂಭವನ್ನು ಫೆ.10ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ

Pralhad Joshi: ಮಹಾರಾಷ್ಟ್ರ ಮತಪಟ್ಟಿ ವಿಚಾರದಲ್ಲಿ ಕಾಂಗ್ರೆಸ್ ಡ್ರಾಮಾ; ಖರ್ಗೆ ಅವರದ್ದು ಆಧಾರ ರಹಿತ ಆರೋಪ: ಜೋಶಿ ತಿರುಗೇಟು

ಮಹಾರಾಷ್ಟ್ರ ಮತಪಟ್ಟಿ ವಿಚಾರದಲ್ಲಿ ಕಾಂಗ್ರೆಸ್ ಡ್ರಾಮಾ: ಜೋಶಿ

Pralhad Joshi: ಮಹಾರಾಷ್ಟ್ರದಲ್ಲಿ 26.46 ಲಕ್ಷ ಯುವ ಮತದಾರರು ಸೇರಿದಂತೆ 40.81 ಲಕ್ಷ ಮತದಾರರನ್ನು ಚುನಾವಣಾ ಆಯೋಗವು ಪಾರದರ್ಶಕವಾಗಿಯೇ ಸೇರಿಸಿದೆ. ಇದರಲ್ಲಿ ಯಾವುದೇ ರೀತಿಯ ಅಸಹಜ, ಅಕ್ರಮ ಪ್ರಕ್ರಿಯೆ ನಡೆದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ನಗರದ ಅಬ್ದಲ್ ಕಲಾಂ ಭವನದಲ್ಲಿ ನಡೆದ ಪ್ರತಿಭಾಪುರಸ್ಕಾರಕ್ಕೆ ಚಾಲನೆ ನೀಡಿ ಹೇಳಿಕೆ

ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕು

ಮುತ್ತೂಟ್ ಸಂಸ್ಥೆ ಸರ್ಕಾರವೇ ಮಾಡದ ಉತ್ತಮ ಸೇವಾ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ. ಸಮಸ್ಯೆ ಗಳಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಅಗತ್ಯ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಗಳನ್ನು ನಿರ್ಮಿಸಿಕೊಡುವಲ್ಲಿ ಸಂಸ್ಥೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು

ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ : ಉಪ ಕೃಷಿ ನಿರ್ದೇಶಕ ದೀಪಶ್ರೀ

ಮುಂದಿನ ಪೀಳಿಗೆಗೆ ಶುದ್ದ ನೀರು, ಗಾಳಿ ನೀಡಬೇಕು: ಮಾಪುಲ್ಲಾಚಾರ್ ಕರೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ಗೊಲ್ಲಹಳ್ಳಿ, ಮಂಡಿಕಲ್ ಮತ್ತು ಅಡ್ಡಗಲ್ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಈ ಯೋಜನೆಯನ್ನು ಅನು ಷ್ಠಾನ ಮಾಡಲಾಗುತ್ತಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳ ಜೊತೆಗೆ ರೈತರ ಉಪ ಕಸುಬುಗಳಾದ ಹೈನುಗಾರಿಕೆಯನ್ನು , ಮೀನುಗಾರಿಕೆ, ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿ ಕೊಳ್ಳಲು ತಿಳಿಸಲಾಗುತ್ತಿದೆ

Milk Price: ಬೆಂಗಳೂರು ಕರ್ನಾಟಕ ಹಾಲು ಮಹಾಮಂಡಳಿ ಎದುರು ಫೆ.10ರಂದು ಬೃಹತ್ ಪ್ರತಿಭಟನೆ

ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಕೋಡಿಹಳ್ಳಿ ಚಂದ್ರಶೇಖರ್ ಬಣದ ಪ್ರತಿಭಟನೆ

ಪ್ರಸ್ತುತದ ದಿನಗಳಲ್ಲಿ 1ಲೀ. ನೀರಿನ ಬಾಟಲನ್ನು 20 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ರೈತರು ಕಷ್ಟಪಟ್ಟು ಉತ್ಪಾದಿಸುವ ಹಾಲಿಗೆ 31 ರೂ. ನಿಗಧಿಪಡಿಸಿರುವುದು ಅವೈಜ್ಞಾನಿಕ ವಾಗಿದೆ. ಇತ್ತೀಚಿಗೆ 33 ರೂಗಳಿದ್ದ 1ಲೀ. ಹಾಲಿನ ದರವನ್ನು ರಾಜ್ಯ ಸರ್ಕಾರ 2 ರೂ.ಗಳನ್ನು ಕಡಿತಗೊಳಿಸಿ, ಗ್ರಾಹಕರಿಗೆ 3 ರೂ.ಗಳನ್ನು ಹೆಚ್ಚಿಸಿದೆ. ಪಶು ಆಹಾರದ ಬೆಲೆಗಳನ್ನೂ ಹೆಚ್ಚಿಸಿ ರೈತರನ್ನು ಹೈನು ಗಾರಿಕೆ ಯಿಂದ ಒಕ್ಕಲೆಬ್ಬಿಸುವ ಕಾರ್ಯವನ್ನು ಮಾಡುತ್ತಿದೆ

ತಹಶೀಲ್ದಾರ್‌ರಿಂದ ಮೈಕ್ರೋ ಫೈನಾನ್ಸ್ ಮತ್ತು ಕಿರು ಸಾಲ ನೀಡುವ ಸಂಸ್ಥೆಗಳ ಪ್ರತಿನಿಧಿಗಳ ಸಭೆ

ವಿಮೆ ಹೆಸರಿನಲ್ಲಿ ಸಾವಿರಾರು ರೂಗಳ ವಸೂಲಾತಿ ಮಾಡುತ್ತಿದ್ದಾರೆ

ಮೈಕ್ರೋ ಫೈನಾನ್ಸ್ನ ವರು, ಧರ್ಮಸ್ಥಳ ಸಂಘದವರು ದೇವರ ಹೆಸರಿನಲ್ಲಿ ಹಣಕಾಸಿನ ದಂಧೆ ಮಾಡುತ್ತಿದ್ದಾರೆ. ಸಾಲ ಪಡೆದವರಿಗೆ ಯಾವುದೇ ಪಾಸ್‌ಬುಕ್ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಮೈಕ್ರೋ ಪೈನಾನ್ಸ್ ನಡೆಸುವವರು ಆರ್ ಬಿ ಐ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನಬಂದಂತೆ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಇದರಿಂದಾಗಿ ಸಾಲ ಪಡೆದು ಕೊಂಡವರ ಬದುಕು ಮೂರಾಬಟ್ಟೆಯಾಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಸರಣಿಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ

Samsung: ಸ್ಮಾರ್ಟ್ ಫೋನ್ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತ ಆಸಕ್ತರು

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸ್ಯಾಮ್ ಸಂಗ್, ಗ್ಯಾಲಕ್ಸಿ ಎಸ್25 ಸರಣಿಗೆ 430,000 ಪ್ರೀ- ಆರ್ಡರ್‌ ಗಳು ಬಂದಿದ್ದು, ಈ ಸರಣಿಗೆ ಗ್ರಾಹಕರಿಂದ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಘೋಷಿಸಿದೆ. ಭಾರತದಲ್ಲಿ ಗ್ಯಾಲಕ್ಸಿ ಎಸ್24 ಸರಣಿಗೆ ಹೋಲಿಸಿದರೆ ಗ್ಯಾಲಕ್ಸಿ ಎಸ್25 ಸರಣಿಗೆ ಶೇ.20ರಷ್ಟು ಹೆಚ್ಚು ಪ್ರೀ ಆರ್ಡರ್ ಪಡೆದಿದೆ.

Namma Metro: ನಮ್ಮ ಮೆಟ್ರೋ ಕಿತ್ತಳೆ ಮಾರ್ಗ; ಪೀಣ್ಯ ನಿಲ್ದಾಣ ಸ್ಥಳಾಂತರಕ್ಕೆ ಬಿಎಂಆರ್​ಸಿಎಲ್ ಚಿಂತನೆ

ಪೀಣ್ಯ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಬಿಎಂಆರ್​ಸಿಎಲ್ ಚಿಂತನೆ

Namma Metro: ಹೊಸ ನಿಲ್ದಾಣವನ್ನು ಪೀಣ್ಯ ಮತ್ತು ಗೊರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕಿಸಲು ಯೋಜಿಸಲಾಗಿದೆ. ಕಿತ್ತಳೆ ಮಾರ್ಗದಲ್ಲಿ 300 ಮೀಟರ್‌ಗಳಷ್ಟು ಅಂತರ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರದ ಮುಂದೆ ಬಿಎಂಆರ್‌ಸಿಎಲ್‌ ಪ್ರಸ್ತಾವನೆ ಇಟ್ಟಿದೆ.

Kalaburagi News: ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!

ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!

Kalaburagi News: ಮನೆ ಕೆಲಸದಾಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಪತ್ನಿಯು, ಪತಿಯ ಎರಡೂ ಕಾಲುಗಳನ್ನೂ ಸುಪಾರಿ ಕೊಟ್ಟು ಮುರಿಸಿದ್ದಾಳೆ. ಪೊಲೀಸ್‌ ವಿಚಾರಣೆ ವೇಳೆ ಸತ್ಯಾಂಶ ಹೊರಬಂದಿದ್ದರಿಂದ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Santosh Lad: ಅಪಘಾತದ ಗಾಯಾಳುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸಚಿವ ಸಂತೋಷ್‌ ಲಾಡ್‌

ಗಾಯಾಳುವನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದ ಸಚಿವ ಸಂತೋಷ್‌ ಲಾಡ್‌

Santosh Lad: ಟ್ರ್ಯಾಕ್ಟರ್ ಹಿಂಬದಿ ಹೋಗುತ್ತಿದ್ದ ಬೈಕ್ ಸವಾರ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಜಮಖಂಡಿಯಿಂದ ಅದೇ ಮಾರ್ಗವಾಗಿ ತೆರಳುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ಬೈಕ್ ಸವಾರ ಬಿದ್ದಿರುವುದನ್ನು ಕಂಡು ತಮ್ಮ ಕಾರಲ್ಲೇ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Turuvekere News: ತುರುವೇಕೆರೆಯಲ್ಲಿ 11 ಟನ್ ಕಳಪೆ ರಸಗೊಬ್ಬರ ವಶ

ತುರುವೇಕೆರೆಯಲ್ಲಿ 11 ಟನ್ ಕಳಪೆ ರಸಗೊಬ್ಬರ ವಶ

Turuvekere News: ತುರುವೇಕೆರೆಯ ಶ್ರೀ ಸ್ವಾಮಿ ಅಯ್ಯಪ್ಪ ಫರ್ಟಿಲೈಸರ್ಸ್ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 11.25 ಟನ್ ಕಳಪೆ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಇಲಾಖೆ ಅನುಮತಿ ಪಡೆಯದೆ ಕಳಪೆ ದರ್ಜೆಯ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಸೊನಾಲಿಕಾದಿಂದ ಜನವರಿ ತಿಂಗಳಲ್ಲಿ ಅತ್ಯಂತ ಹೆಚ್ಚು 10,350 ಟ್ರಾಕ್ಟರ್ ಮಾರಾಟದ ಮೂಲಕ 2025ರ ಯಶಸ್ವಿ ಪ್ರಾರಂಭ

ರೈತರ ಯಶಸ್ಸಿಗೆ ಕೃಷಿ ಆವಿಷ್ಕಾರಗಳನ್ನು ಪೂರೈಸುವಲ್ಲಿ ಸದೃಢ ಪ್ರಯತ್ನ

ಭಾರತದ ಕೃಷಿ ವಲಯವು ಸುಸ್ಥಿರತೆಯ ಯುಗದತ್ತ ಮುನ್ನಡೆಯುತ್ತಿದೆ ಮತ್ತು ಕೃಷಿ ರೂಢಿಗಳಲ್ಲಿ ವಿಕಾಸಗೊಳ್ಳುತ್ತಿದೆ. ಕೃಷಿ ವಲಯಕ್ಕೆ ಆರ್ಥಿಕತೆಯ ಪ್ರಗತಿಯ ಶಕ್ತಿಯಾಗಿ ಸರ್ಕಾರದ ಬಜೆಟ್ ಆದ್ಯತೆ ನೀಡಿರುವುದರಿಂದ ಟ್ರಾಕ್ಟರ್ ಉದ್ಯಮವು ದೇಶವನ್ನು ಮುನ್ನಡೆಸಲು ಪ್ರಮುಖ ಶಕ್ತಿಯಾಗಿದೆ. ಸೊನಾ ಲಿಕಾ ಟ್ರಾಕ್ಟರ್ ಉದ್ಯಮದಲ್ಲಿ ಸದಾ ಹೊಸ ಮಾನದಂಡಗಳನ್ನು ನಿರ್ಮಿಸುತ್ತಿದ್ದು ಪ್ರತಿ ರೈತನಿಗೂ ಶಕ್ತಿಯುತ, ದಕ್ಷ ಮತ್ತು ವಿಶ್ವಾಸಾರ್ಹ ಕೃಷಿ ಯಂತ್ರೋಪಕರಣದ ಲಭ್ಯತೆ ನೀಡುವ ಮೂಲಕ ಅವರ ಕೃಷಿ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ

COVID vaccine: ಕೋವಿಡ್ ಲಸಿಕೆ ಅಡ್ಡ ಪರಿಣಾಮದಿಂದ ಹಠಾತ್ ಸಾವು; ಅಧ್ಯಯನಕ್ಕೆ ಸಮಿತಿ ರಚನೆ

ಕೋವಿಡ್ ಲಸಿಕೆ ಅಡ್ಡ ಪರಿಣಾಮದಿಂದ ಹಠಾತ್ ಸಾವು; ಅಧ್ಯಯನಕ್ಕೆ ಸಮಿತಿ ರಚನೆ

COVID vaccine: ಕೋರೊನಾ ಕಾಲದ ನಂತರದಿಂದ ಎಳೆಯ ವಯಸ್ಸಿನವರು, ಯುವಜನರು ಸೇರಿದಂತೆ ಬದುಕಿ ಬಾಳಬೇಕಾದವರು ಇದ್ದಕ್ಕಿದ್ದಂತೆ ಇಲ್ಲವಾಗುತ್ತಿದ್ದಾರೆ. ಹೀಗಾಗಿ ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿ ನೀಡುವ ವರದಿಯನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Valentines Week Proposal Day Styling: ಪ್ರೀತಿ ನಿವೇದನೆಗೆ ಸಹಕರಿಸುವ ಇಂಪ್ರೆಸಿವ್ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ!

ಪ್ರೀತಿ ನಿವೇದನೆಗೆ ಸಹಕರಿಸುವ ಇಂಪ್ರೆಸಿವ್ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ!

Valentines Week Proposal Day Styling: ವ್ಯಾಲೆಂಟೈನ್ಸ್ ವೀಕ್‌ನ ಎರಡನೇಯ ದಿನವೇ ಪ್ರಪೋಸ್ ಡೇ. ಈ ದಿನದಂದು ಲವ್ ಪ್ರಪೋಸ್ ಮಾಡುವವರು ಒಂದಿಷ್ಟು ಆಕರ್ಷಕ ಸ್ಟೈಲಿಂಗ್ ಬಗ್ಗೆ ಗಮನಹರಿಸಬೇಕು. ಅವು ಯಾವುವು? ಈ ಬಗ್ಗೆ ಸ್ಟೈಲಿಸ್ಟ್‌ಳು ಒಂದಿಷ್ಟು ಸಿಂಪಲ್ ಟಿಪ್ಸ್ ತಿಳಿಸಿದ್ದಾರೆ.

Bengaluru Power Cut:  ಫೆ.9 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಫೆ.9 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಬೆಂಗಳೂರು ನಗರದ 66/11 ಕೆವಿ ನಂದಿನಿ ಲೇಔಟ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ಫೆ. 09 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತ ವಿವರ ಇಲ್ಲಿದೆ.

BY Vijayendra: ಸಿದ್ದರಾಮಯ್ಯನವರನ್ನು ಹೈಕೋರ್ಟ್ ಆರೋಪ ಮುಕ್ತರನ್ನಾಗಿ ಮಾಡಿಲ್ಲ- ವಿಜಯೇಂದ್ರ

ಸಿಎಂ ಸಿದ್ದರಾಮಯ್ಯ ಇನ್ನೂ ಆರೋಪ ಮುಕ್ತರಾಗಿಲ್ಲ- ವಿಜಯೇಂದ್ರ

BY Vijayendra: ಮೈಸೂರಿನ ಮುಡಾ ಹಗರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಹೈಕೋರ್ಟ್‌ನಲ್ಲಿ ಸಂಪೂರ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿದ್ದರು. ಆ ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ. ಅದರ ಅರ್ಥ ಸಿಎಂ ಸಿದ್ದರಾಮಯ್ಯನವರು ನಿರಪರಾಧಿ ಎಂದು ಹೈಕೋರ್ಟ್ ಹೇಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Cult Movie: ಫೆ.11ಕ್ಕೆ ಬಿಡುಗಡೆಯಾಗಲಿದೆ ಝೈದ್ ಖಾನ್ ಅಭಿನಯದ ʼಕಲ್ಟ್ʼ ಚಿತ್ರದ ಟೀಸರ್‌

ಝೈದ್ ಖಾನ್ ನಟನೆಯ ʼಕಲ್ಟ್ʼ ಚಿತ್ರದ ಟೀಸರ್‌ ಫೆ.11ಕ್ಕೆ ರಿಲೀಸ್‌

Cult Movie: ಝೈದ್ ಖಾನ್ ನಾಯಕರಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿರುವ, ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರದ ಟೀಸರ್ ಫೆಬ್ರವರಿ 11, ಝೈದ್ ಖಾನ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Infosys Lays Off: 700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಇನ್ಫೋಸಿಸ್! ಕಾರ್ಮಿಕ ಸಚಿವಾಲಯಕ್ಕೆ ದೂರು

700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಇನ್ಫೋಸಿಸ್!

ಇನ್ಫೋಸಿಸ್ ಸಂಸ್ಥೆಯು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ವಾರದಲ್ಲಿ 70 ಗಂಟೆಗಳು ಕೆಲಸ ಮಾಡಬೇಕೆಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಿಂದ ಬರೋಬ್ಬರಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದ ಹೊರದಬ್ಬಲು ಬೌನ್ಸರ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು,ಕಾರ್ಮಿಕ ಸಚಿವಾಲಯದಲ್ಲಿ ದೂರು ದಾಖಲಾಗಿದೆ.

Daali Dhananjaya: ಅಲ್ಲು ಅರ್ಜುನ್‌, ರಶ್ಮಿಕಾ ಸೇರಿ ಪುಷ್ಪ-2 ಟೀಂನ ಪ್ರಮುಖರಿಗೆ ಮದುವೆ ಆಮಂತ್ರಣ ನೀಡಿದ ನಟ ಡಾಲಿ

ಅಲ್ಲು ಅರ್ಜುನ್‌ ಸೇರಿ ʼಪುಷ್ಪ-2ʼ ಪ್ರಮುಖರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ

Daali Dhananjaya: ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನ ಹಲವು ಸಿನಿಮಾಗಳಲ್ಲಿ ನಟ ಡಾಲಿ ನಟಿಸಿ ಗಮನ ಸೆಳೆದಿದ್ದಾರೆ. ಪುಷ್ಪ-1, ಪುಷ್ಪ-2 ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿ ರಂಜಿಸಿದ್ದ ಡಾಲಿ ಧನಂಜಯ ಅವರು, ಚಿತ್ರದ ನಾಯಕ ನಟ ಅಲ್ಲು ಅರ್ಜುನ್‌, ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್‌, ನಟ ಸತ್ಯದೇವ್‌ ಮತ್ತಿತರರನ್ನು ಮದುವೆ ಆಹ್ವಾನಿಸಿದ್ದಾರೆ.