Thursday, 5th December 2024

Samantha Ruth Prabhu: ನಾಗಚೈತನ್ಯ-ಸಮಂತಾ ಮದ್ವೆ ಫೊಟೋ ಭಾರೀ ವೈರಲ್‌! ನಟಿಗೆ ನೆಟ್ಟಿಗರು ರಿಕ್ವೆಸ್ಟ್ ಮಾಡಿದ್ದೇಕೆ..?

ಹೈದರಾಬಾದ್‌: ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್ ಪ್ರಭು( Samantha Ruth Prabhu) ಮತ್ತು ನಾಗ ಚೈತನ್ಯ(Naga Chaitanya) ಅವರು ವಿಚ್ಛೇದನ(Divorce) ಘೋಷಿಸುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಆದರೆ ಅಂಥದ್ದೊಂದು ಶಾಕಿಂಗ್ ಸುದ್ದಿ ಬಂದಾಗ ಬಹುತೇಕರಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಈಗ ಅದೆಲ್ಲ ಹಳೇ ವಿಷಯ ಆಗಿದೆ. ಹಾಗಿದ್ದರೂ ಕೂಡ ಸಮಂತಾ ಮತ್ತು ನಾಗ ಚೈತನ್ಯ ಅವರ ಬಗೆಗಿನ ಚರ್ಚೆ ನಿಂತಿಲ್ಲ.

ಶೋಭಿತಾ ದುಲಿಪಾಲ( Sobhita Dhulipala) ಮತ್ತು ನಾಗ ಚೈತನ್ಯ(Naga Chaitanya) ಇಂದು ವಿವಾಹವಾಗುತ್ತಿದ್ದಾರೆ. ನವೆಂಬರ್ 29 ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ನಡೆಯುತ್ತಿದೆ. ನಾಗ ಚೈತನ್ಯಗೆ ಇದು ಎರಡನೇ ಮದುವೆ, ಶೋಭಿತಾಗೆ ಇದು ಮೊದಲ ಮದುವೆ. ನಾಗ ಚೈತನ್ಯ, ಖ್ಯಾತ ನಟಿ ಸಮಂತಾ ಜೊತೆ ವಿಚ್ಛೇದನ ಮಾಡಿಕೊಂಡು ಈಗ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಸಮಂತಾ ನಾಗಚೈತನ್ಯ ಹೆಸರು ಒಟ್ಟೊಟ್ಟಿಗೆ ಕೇಳುವುದು ನಿಂತಿಲ್ಲ….

ಹೌದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸದ್ಯ ಸಮಂತಾ ಹಾಗೂ ನಾಗ ಚೈತನ್ಯ ಸಂಬಂಧಪಟ್ಟಂತ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಸೌಥ್ ಬ್ಯೂಟಿ ಸ್ಯಾಮ್ ಎದುರು ನೆಟ್ಟಿಗರು ಒಂದು ಬೇಡಿಕೆಯನ್ನಿಟ್ಟಿದ್ದಾರೆ. ಅದೇನಪ್ಪಾ ಆ ಡಿಮ್ಯಾಂಡ್ ಅಂತೀರಾ…? ಈ ಸ್ಟೋರಿ ಓದಿ…

ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಈ ಜೋಡಿ ದಾಂಪತ್ಯವನ್ನು ಮುರಿದುಕೊಂಡು ಬೇರೆಯಾದರು. ಆ ಬಳಿಕ ನಾಗಚೈತನ್ಯ ಹೆಸರು ಶೋಭಿತಾ ಧುಲಿಪಾಲ ಜೊತೆ ತಳುಕು ಹಾಕಿಕೊಂಡಿತ್ತು. ಎರಡು ವರ್ಷ ಜೊತೆಯಾಗಿ ಅಡ್ಡಾಡಿದ್ದ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವೇಳೆ ಈ ಜೋಡಿ ಬಗ್ಗೆ ಸಮಂತಾ ಪೋಸ್ಟ್(post) ಮಾಡಿದ ಪೋಸ್ಟ್ ವೈರಲ್(vial) ಆಗಿದೆ. ಆ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಿರುವ ನೆಟ್ಟಿಜನ್ಸ್ ಸಮಂತಾಗೆ ನಾಗ ಚೈತನ್ಯ ಜೊತೆಗಿನ ಮದುವೆ ಫೋಟೊಗಳನ್ನು ಡಿಲೀಟ್ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

ನಾಗಚೈತನ್ಯಗೆ ಹುಟ್ಟುಹಬ್ಬಕ್ಕೆ ಸಮಂತಾ ಶುಭಕೋರಿದ ಪೋಸ್ಟ್ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಮಂತಾ ಅಭಿಮಾನಿಗಳು ನಾಗ ಚೈತನ್ಯ ಬಗ್ಗೆ ಸಮಂತಾ ಮಾಡಿರುವ ಪೋಸ್ಟ್‌ಗಳಿಗೆ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಈಗ ಈ ಫೋಟೊಗಳನ್ನು ಇಟ್ಟುಕೊಂಡರೇ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದು, ನಾಗ ಚೈತನ್ಯ ಹಾಗೂ ಸಮಂತಾ ಮದುವೆ ಹಾಗೂ ಕೆಲವು ಹಳೆಯ ಫೋಟೊಗಳನ್ನು ಡಿಲೀಟ್ ಮಾಡಲು ಸೂಚಿಸುತ್ತಿದ್ದಾರೆ.

ಇನ್ನು ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಹೈದರಾಬಾದ್‌ನಲ್ಲಿ ಇರುವ 22 ಎಕರೆ ವಿಸ್ತೀರ್ಣದ ಅನ್ನಪೂರ್ಣ ಸ್ಡುಡಿಯೋದಲ್ಲಿ ನಡೆಯ್ಯುತ್ತಿದ್ದು, ಸುಮಾರು 8 ಗಂಟೆಗಳ ಕಾಲ ಈ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಟಾಲಿವುಡ್, ಬಾಲಿವುಡ್‌ನಿಂದ ಗಣ್ಯರು ಈ ಮದುವೆಗೆ ಬರುವ ಸಾಧ್ಯತೆಗಳು ಹೆಚ್ಚಿವೆ. ಈಗಾಗಲೇ ಶಾರುಖ್ ಖಾನ್, ಆಮಿರ್ ಖಾನ್, ರಾಜಮೌಳಿ ಸೇರಿದಂತೆ ಇತರ ಸೆಲೆಬ್ರೆಟಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’