ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಈಕೆ ಇನ್ಮುಂದೆ ಸಂತೂರ್‌ ಮಮ್ಮಿ! 25ರ ಹರೆಯದ ಯುವತಿಯಂತೆ ಕಂಗೊಳಿಸಿದ 68 ವರ್ಷದ ಮಹಿಳೆ; ಏನಿದರ ಸಿಕ್ರೆಟ್‌?

68 ವರ್ಷದ ಲಿಂಡಾ ಟ್ರೂಸ್‌ಡೇಲ್, 1 ಕೋಟಿ ಮೌಲ್ಯದ ಫೇಸ್‌ಲಿಫ್ಟ್ ಮಾಡಿಸಿಕೊಂಡು ಈಗ 25 ವರ್ಷದ ಯುವತಿಯಂತೆ ಕಾಣಿಸಿಕೊಂಡಿದ್ದಾಳೆ. ಕಾರ್ಲ್ ತನ್ನ ತಾಯಿಯ ಮುಖವನ್ನು ಬದಲಾಯಿಸಿದ ವಿಡಿಯೊಗಳನ್ನು ಸೋಶಿಯಲ್‍ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

25ರ ಹರೆಯದ ಯುವತಿಯಂತೆ ಕಂಗೊಳಿಸಿದ 68 ವರ್ಷದ ಮಹಿಳೆ; ಏನಿದರ ಸಿಕ್ರೆಟ್‌?

Profile pavithra May 10, 2025 2:34 PM

ವಯಸ್ಸಾಗುವಿಕೆಯನ್ನು ಮರೆಮಾಚಲು, ಮುಖದ ಸೌಂದರ್ಯ ಹೆಚ್ಚಿಸಲು ಕೆಲವರು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳುತ್ತಾರೆ. ಇದು ತಕ್ಕಮಟ್ಟಿಗೆ ಅವರ ಮುಖದಲ್ಲಿರುವ ಸುಕ್ಕು, ಕಲೆಗಳನ್ನು ಮರೆಮಾಚುತ್ತದೆ. ಇದೀಗ ಅಂಥದ್ದೇ ಒಂದು ಸುದ್ದಿ ವೈರಲ್‌ ಆಗಿದೆ. ಮಹಿಳೆಯೊಬ್ಬಳು ಪ್ಲಾಸ್ಟಿಕ್ ಸರ್ಜನ್‍ ಆದ ತನ್ನ ಮಗನಿಂದ ಫೇಸ್‌ಲಿಫ್ಟ್ ಮಾಡಿಸಿಕೊಂಡಿದ್ದಾಳೆ. ಈ ಫೇಸ್‌ಲಿಫ್ಟ್‌ನಿಂದ 68 ವರ್ಷದ ಮಹಿಳೆಯ ಮುಖ 25ರ ಯುವತಿಯ ಹಾಗೇ ಕಂಗೊಳಿಸಿದೆ. ಮಹಿಳೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದ್ದು, ಇದನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

68 ವರ್ಷದ ಲಿಂಡಾ ಟ್ರೂಸ್‌ಡೇಲ್ ಈ ಶಸ್ತ್ರಚಿಕಿತ್ಸೆಗೆ ಒಳಗಾಗದ ಮಹಿಳೆ. ಈಕೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಾಲ್ಕು ತಿಂಗಳು ಕಾದಿದ್ದಾಳಂತೆ. ಅವಳ ಮಗ ಡಾ. ಕಾರ್ಲ್ ಟ್ರೂಸ್‌ಡೇಲ್ ಪ್ಲಾಸ್ಟಿಕ್‌ ಸರ್ಜರಿ ಮಾಡಿ ತಾಯಿಯ ರೂಪವನ್ನು ಬದಲಾಯಿಸಿದ್ದಾನಂತೆ. ಇದರಿಂದಾಗಿ ಅವಳು 25 ವರ್ಷದ ಯುವತಿಯಂತೆ ಆಗಿದ್ದಾಳೆ.

ಕಾರ್ಲ್ ತನ್ನ ತಾಯಿಯ ಮುಖವನ್ನು ಬದಲಾಯಿಸಿದ ವಿಡಿಯೊಗಳನ್ನು ಸೋಶಿಯಲ್‍ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ನೆಟ್ಟಿಗರು ವಿಭಿನ್ನ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲೂ ಕೆಲವರು ಲಿಂಡಾಳನ್ನು ನೋಡಿ 25 ವರ್ಷದ ಯುವತಿಯಂತೆ ಕಾಣುತ್ತಿದ್ದಾಳೆ ಎಂದು ಹೊಗಳಿ ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ತಗುಲಿದ ವೆಚ್ಚವೆಷ್ಟು?

ಕಾರ್ಲ್ ಮಾಡಿದ ಈ ಸರ್ಜರಿಗೆ ಸಾಮಾನ್ಯವಾಗಿ $120,000 (ಸುಮಾರು ರೂ.1 ಕೋಟಿಗಿಂತ ಹೆಚ್ಚು) ಖರ್ಚಾಗುತ್ತದೆಯಂತೆ. ಆದರೆ ಆತ ತನ್ನ ತಾಯಿಗೆ ಮಾತ್ರ ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳಲಿಲ್ಲ ಎಂಬುದಾಗಿ ತಿಳಿಸಿದ್ದಾನೆ. ಈ ಹಿಂದೆ ಒಬ್ಬ ಬ್ರೆಜಿಲಿಯನ್ ಮಹಿಳೆ ತನ್ನ ಶರೀರವನ್ನು ರೂಪಾಂತರಗೊಳಿಸಲು 100ಕ್ಕೂ ಹೆಚ್ಚು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು 10 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಕೊಂಡಿರುವ ವಿಚಿತ್ರ ಘಟನೆ ವರದಿಯಾಗಿತ್ತು. 41 ವರ್ಷದ ಜೆಸ್ಸಿಕಾ ಆಲ್ವೆಸ್, ಎಂಬ ಮಹಿಳೆ ಈ ಸರ್ಜರಿ ಮಾಡಿಸಿಕೊಂಡಿದ್ದು, ಈ ಕಾರಣದಿಂದಾಗಿ ಆಕೆ ವಿಶ್ವಾದ್ಯಂತ ಗಮನ ಸೆಳೆದಿದ್ದಳು.

ಈ ಸುದ್ದಿಯನ್ನೂ ಓದಿ:Viral Video: ಆಟೋ ಚಾಲಕನ ಮಾನವೀಯತೆಗೆ ಮನಸೋತ ವಿದೇಶಿ ಮಹಿಳೆ; ವಿಡಿಯೊ ವೈರಲ್

ಅತಿ ಹೆಚ್ಚು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು ಹೆಸರವಾಸಿಯಾದ ಆಕೆ, ಬ್ರೆಸ್ಟ್ ಮತ್ತು ಹಿಪ್ ಇಂಪ್ಲಾಂಟ್ಸ್, ಹಲ್ಲು, 12 ಮೂಗಿನ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡಿದ್ದಾಳೆ. ಆದರೆ 5 ವರ್ಷಗಳ ಹಿಂದೆ ನಡೆದ ಮೂಗಿನ ಶಸ್ತ್ರಚಿಕಿತ್ಸೆ ನಂತರ ಜೆಸ್ಸಿಕ ಸ್ವಲ್ಪ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಯಿತು. ಆಕೆಯು ತನ್ನ ಮೂಗಿನ ಸರ್ಜರಿ ಮಾಡಿಸಿಕೊಳ್ಳುವಾಗ ಗಂಭೀರ ಸೋಂಕಿಗೆ ಒಳಗಾಗಿದ್ದಳು. ನಂತರ ಆಕೆ ಇದರಿಂದ ಚೇತರಿಸಿಕೊಂಡಿದ್ದಳು ಎನ್ನಲಾಗಿದೆ.