Viral Video: ಬಲವಂತವಾಗಿ ಕುದುರೆಯ ಬಾಯಿಗೆ ಸಿಗರೇಟ್ ಇಟ್ಟು ವಿಕೃತಿ ಮೆರೆದ ದುಷ್ಕರ್ಮಿಗಳು
ಮದುವೆ ಮೆರವಣಿಗೆ ಸಂದರ್ಭದಲ್ಲಿ ಯುವಕರ ತಂಡವೊಂದು ಕುದುರೆಗೆ ಮನ ಬಂದಂತೆ ಕಿರುಕುಳ ನೀಡಿದ್ದಾರೆ. ಕುದುರೆಗೆ ಮನ ಬಂದಂತೆ ಹಿಂಸೆ ನೀಡಿದ ಯುವಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕುದುರೆಯನ್ನು ನೆಲದ ಮೇಲೆ ಮಲಗಿಸಿ ಅದರ ಬಾಯಿಗೆ ಬಲವಂತವಾಗಿ ಸಿಗರೇಟ್ ತುರುಕಿಸಿದ್ದಾರೆ.

animal cruelty

ನವದೆಹಲಿ: ಸಾಕು ಪ್ರಾಣಿಗಳನ್ನು ಹಿಂಸಿಸುವುದು ಅಪರಾಧ ಎಂದು ತಿಳಿದಿದ್ದರೂ ಕೆಲ ಕಿಡಿಗೇಡಿಗಳು ಆಗಾಗ ಇಂತಹ ವಿಕೃತಿ ಮರೆಯುತ್ತಿರುತ್ತಾರೆ. ಇದೀಗ ಕುದುರೆಯನ್ನು ಯುವಕರ ತಂಡವೊಂದು ಮನಬಂದಂತೆ ಥಳಿಸಿ, ಬಲವಂತವಾಗಿ ಸಿಗರೇಟ್ ಸೇದುವಂತೆ ಮಾಡಿರುವ ಆಘಾತಕಾರಿ ವಿಡಿಯೊವೊಂದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಡು ವೈರಲ್ ಆಗಿದ್ದು ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ (Viral Video). ಅಲ್ಲದೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮದುವೆ ಮೆರವಣಿಗೆ ಸಂದರ್ಭದಲ್ಲಿ ಯುವಕರ ತಂಡವೊಂದು ಕುದುರೆಗೆ ಮನ ಬಂದಂತೆ ಕಿರುಕುಳ ನೀಡಿದ್ದಾರೆ. ಕುದುರೆಗೆ ಮನ ಬಂದಂತೆ ಹಿಂಸೆ ನೀಡಿದ ಯುವಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕುದುರೆಯನ್ನು ನೆಲದ ಮೇಲೆ ಮಲಗಿಸಿ ಬಲವಂತವಾಗಿ ಅದರ ಬಾಯಿಗೆ ಸಿಗರೇಟ್ ಇಟ್ಟು ವಿಕೃತವಾಗಿ ಹಿಂಸೆ ನೀಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ಬೂಟುಗಳೊಂದಿಗೆ ಕುದುರೆಯ ಮೇಲೆ ಹತ್ತಿ ಅದರ ದೇಹದ ಮೇಲೆ ಪುಷ್-ಅಪ್‌ಗಳನ್ನು ಮಾಡಿದ್ದಾನೆ. ಬಳಿಕ ಕುದುರೆ ಮೇಲೆ ಒಬ್ಬರಾದ ಮೇಲೆ ಒಬ್ಬರಂತೆ ಎರಗಿ ಪುಷ್ ಅಪ್ ಮಾಡುತ್ತಿರುವ ಕ್ರೌರ್ಯದ ದೃಶ್ಯ ಸೆರೆಯಾಗಿದೆ.
ಇಟ್ಸ್ ಜೀನ್ವಾಲ್ ಶಾಬ್ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದ್ದು ಕುಡಿತದ ಮತ್ತಿನಲ್ಲಿ ಯುವಕರು ಈ ರೀತಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಕೃತ್ಯ ನಡೆಯುತ್ತಿದ್ದರೂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ಯಾರೊಬ್ಬರು ಇದನ್ನು ವಿರೋಧಿಸದೆ ಈ ಕೃತ್ಯ ಕಂಡು ಆನಂದಿಸಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರು ಈ ವಿಕೃತ ಯುವಕರು ನೃತ್ಯ ಮಾಡುವುದನ್ನು ಮತ್ತು ಪ್ರಾಣಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನೋಡಿ ಖುಷಿ ಪಟ್ಟಿದ್ದಾರೆ. ಅಲ್ಲಿದ್ದವರ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕುದುರೆ ಹಿಂಸೆಯಿಂದ ಬಿದ್ದು ಒದ್ದಾಡುವುದನ್ನು ಸಮಾರಂಭದಲ್ಲಿ ಪಾಲ್ಗೊಂಡವರು ಕಣ್ಣಾರೆ ಕಂಡರೂ ಮರುಗದಿರುವುದು ಮನುಷ್ಯತ್ವವೇ ಸತ್ತು ಹೋದಂತೆ ಭಾಸವಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಇನ್ನು ಕೆಲವು ಪ್ರಾಣಿ ಪ್ರಿಯರು ರೀ ಪೋಸ್ಟ್ ಮಾಡಿ ಕೃತ್ಯ ಎಸೆಗಿದ್ದ ತಪಿತಸ್ಥರನ್ನು ಶಿಕ್ಷಿಸುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: Viral Video: ನಾಲ್ಕೇ ನಾಲ್ಕು ನಿಮಿಷದಲ್ಲಿ ಎಟಿಎಂ ದೋಚಿದ ಕಿಲಾಡಿ ಕಳ್ಳರು; ವಿಡಿಯೊ ವೈರಲ್
ಕುದುರೆಯನ್ನು ಹಿಂಸಿಸುವ ವಿಡಿಯೊಗೆ ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಕಿಡಿಕಾರಿದ್ದಾರೆ. ಬಾಲಿವುಡ್ ನಟಿ ಕರಿಷ್ಮಾ ಕೆ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ, ವಿಡಿಯೊ ಕಂಡರೆ ರಕ್ತ ಕುದಿಯುತ್ತಿದೆ, ನನಗೆ ಅಧಿಕಾರ ಇದ್ದರೆ ಖಂಡಿತಾ ಶಿಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ನಟಿ ಟೀನಾ ದತ್ತಾ ಕೂಡ ಈ ವಿಡಿಯೊ ಕಂಡು ಗರಂ ಆಗಿದ್ದಾರೆ.