ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಅರಳುಹುರಿದಂತೆ ತಮಿಳು ಮಾತನಾಡಿದ ನೇಪಾಳಿ ಪತ್ನಿ; ಹೆಂಡತಿಗೆ ದೆವ್ವ ಹಿಡಿದಿದೆಯೆಂದು ಶಾಕ್‌ ಆದ ಗಂಡ!

ನೇಪಾಳಿ ಮಹಿಳೆಗೆ ತಮಿಳು ಭಾಷೆಯ ಬಗ್ಗೆ ಸ್ವಲ್ಪವೂ ತಿಳಿಯದಿದ್ದರೂ ಕೂಡ ಆಕೆ ಇದ್ದಕ್ಕಿದ್ದಂತೆ ತಮಿಳು ಮಾತನಾಡಿದ್ದಾಳೆ. ಇದನ್ನು ನೋಡಿ ಶಾಕ್‌ ಆದ ಆಕೆಯ ಪತಿ ದೆವ್ವದ ಕಾಟ ಎಂದು ಬೆಚ್ಚಿಬಿದ್ದಾನೆ.ಈ ವಿಚಾರವನ್ನು ಆತನ ಮಾಲೀಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

ಹೆಂಡತಿಗೆ ದೆವ್ವ ಹಿಡಿದಿದೆಯೆಂದು ಶಾಕ್‌ ಆದ ಗಂಡ ಮಾಡಿದ್ದೇನು ನೋಡಿ!

Profile pavithra May 7, 2025 1:33 PM

ಚೆನ್ನೈ: ಸಾಮಾನ್ಯವಾಗಿ ಯಾವುದೇ ಭಾಷೆಯನ್ನು ಕಲಿಯದೇ ಅದನ್ನು ನಿರರ್ಗಳವಾಗಿ ಮಾತನಾಡಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬ ನೇಪಾಳಿ ಮಹಿಳೆಗೆ ತಮಿಳು ಭಾಷೆಯ ಬಗ್ಗೆ ಸ್ವಲ್ಪವೂ ತಿಳಿಯದಿದ್ದರೂ ಕೂಡ ಇದ್ದಕ್ಕಿದ್ದಂತೆ ತಮಿಳನ್ನು ಮಾತನಾಡಲು ಶುರುಮಾಡಿದ್ದಾಳಂತೆ.ಹೆಂಡತಿಯ ಈ ವಿಚಿತ್ರ ನಡವಳಿಕೆಯನ್ನು ಕಂಡ ಆಕೆಯ ಗಂಡ ಆಕೆಗೆ ದೆವ್ವ ಹಿಡಿದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾನೆ. ಈ ವಿಚಾರವನ್ನು ಆತನ ಮಾಲೀಕ ನಾರಾಯಣನ್ ಹರಿಹರನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

ಮೂಲತಃ ನೇಪಾಳದವರಾದ ಈ ದಂಪತಿ ಚೆನ್ನೈನಲ್ಲಿ ವಾಸವಾಗಿದ್ದಾರೆ.ಮಹಿಳೆಯ ಗಂಡ, ನಾರಾಯಣನ್ ಹರಿಹರನ್ ಕಾರಿನ ಕ್ಲೀನರ್ ಆಗಿ ಕೆಲಸ ಮಾಡುತ್ತಾನಂತೆ. ಇತ್ತೀಚೆಗೆ ಆತ ತನ್ನ ಮಾಲೀಕನ ಬಳಿ ತಾನು ಅರ್ಜೆಂಟಾಗಿ ಊರಿಗೆ ಹೋಗಬೇಕಾಗಿದ್ದರಿಂದ ತನಗೆ ಒಂದು ತಿಂಗಳ ದೀರ್ಘ ರಜೆ ಬೇಕೆಂದು ಕೇಳಿದ್ದಾನಂತೆ. ಆರ್ಥಿಕ ಸಹಾಯ ಮಾಡಲು ಮುಂದಾದ ಮಾಲೀಕನ ಬಳಿ ಆತ ತನ್ನ ಪತ್ನಿಗೆ ಹುಷಾರಿಲ್ಲ ಅವಳಿಗೆ ದೆವ್ವ ಹಿಡಿದಿದೆ ಎಂದು ಹೇಳಿದ್ದಾನಂತೆ. ಈ ವಿಚಿತ್ರ ಘಟನೆಯನ್ನು ಅವನ ಮಾಲೀಕ ನಾರಾಯಣ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.



ಹೃದ್ರೋಗದಿಂದ ಬಳಲುತ್ತಿರುವ ತನ್ನ ಪತ್ನಿ ತನ್ನ ಜೊತೆಯಲ್ಲಿ ನೆಲೆಸಿದ್ದರು ಆಕೆಗೆ ತಮಿಳು ಭಾಷೆ ಬಗ್ಗೆ ತಿಳಿದಿಲ್ಲ. ಆದರೂ ಕಳೆದ ಆರು ತಿಂಗಳಿನಿಂದ ನಿರಾಳವಾಗಿ ತಮಿಳು ಮಾತನಾಡಲು ಶುರುಮಾಡಿದ್ದಾಳೆ. ಇದರಿಂದ ಹತಾಶನಾದ ಆ ವ್ಯಕ್ತಿ ಮೊದಲು ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತೋರಿಸಿದ್ದಾನಂತೆ. ಅಲ್ಲಿ ಯಾವುದೇ ಸಮಸ್ಯೆ ಕಾಣಿಸಲಿಲ್ಲ. ಹಾಗಾಗಿ ನಂತರ ಅವನು ಹತ್ತಿರದ ಮಸೀದಿಗೆ ಹೋಗಿ ಸಮಸ್ಯೆ ಹೇಳಿಕೊಂಡಿದ್ದಾನೆ. ಅಲ್ಲಿ ಕೂಡ ಯಾವುದೇ ಪರಿಹಾರ ಸಿಗಲಿಲ್ಲ! ಆದರೆ ಅಲ್ಲಿ ಆಕೆಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗದ ಕಾರಣ,ಅವಳ ಸುರಕ್ಷತೆಗಾಗಿ ನೇಪಾಳಕ್ಕೆ ಮರಳಲು ಸಿದ್ಧನಾಗಿದ್ದಾನಂತೆ.

ಭಯ ಹುಟ್ಟಿಸಿದ ಹಾವಿನ ಪ್ರಕರಣ

ಉತ್ತರ ಪ್ರದೇಶದ ಮೀರತ್‍ನಲ್ಲಿ 25 ವರ್ಷದ ಯುವಕನೊಬ್ಬ ಪದೇ ಪದೇ ನಾಗರಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಆಘಾತಕಾರಿ ಸಂಗತಿಯೆಂದರೆ, ಹಾವು ವ್ಯಕ್ತಿಯ ದೇಹದ ಬಳಿಯೇ ಇತ್ತು ಮತ್ತು ಅವನು ಸತ್ತ ನಂತರವೂ ದಾಳಿಯನ್ನು ಮುಂದುವರಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಹಾವಿನ ಈ ಅಸಾಮಾನ್ಯ ನಡವಳಿಕೆಯು ಸ್ಥಳೀಯರಲ್ಲಿ ಮೂಢನಂಬಿಕೆ ಭಯವನ್ನು ಹುಟ್ಟುಹಾಕಿತು. ಅನೇಕರು ಸೇಡಿಗಾಗಿ ಹಾವು ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ. ಆದರೆ ಹಾವುಗಳು ಪ್ರತೀಕಾರದಂತಹ ಭಾವನೆಗಳನ್ನು ಹೊಂದಿಲ್ಲ ಮತ್ತು ಅಂತಹ ವ್ಯಾಖ್ಯಾನಗಳು ವೈಜ್ಞಾನಿಕ ಬೆಂಬಲವಿಲ್ಲದೆ ಉಳಿದಿವೆ ಎಂದು ತಜ್ಞರು ಸಮರ್ಥಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್‌, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್‌? ದೃಶ್ಯಗಳು ವೈರಲ್‌

ಈ ವಿಚಿತ್ರ ಪ್ರಕರಣಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದವು. ಅನೇಕರು ಅಂತಹ ಘಟನೆಗಳನ್ನು ಅಲೌಕಿಕ ಕಾರಣಗಳಿಂದಾಗಿದೆ ಎಂದು ಆರೋಪಿಸುವ ಮೊದಲು ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆಯ ನೀಡುವ ಮೂಲಕ ಪರಿಹರಿಸಿಕೊಳ್ಳಲು ಕರೆ ನೀಡಿದ್ದಾರೆ.