Sunday, 15th December 2024

Viral News: ದಟ್ಟ ಅರಣ್ಯದಲ್ಲಿ ರೈಲಿನಿಂದ ಬಿದ್ದ ಬಾಲಕ; ಈತ ಬದುಕುಳಿದಿದ್ದೇ ಬಲು ರೋಚಕ! ವಿಡಿಯೋ ಇದೆ

Viral video

ಭುವನೇಶ್ವರ: ಆಯುಷ್ಯ ಗಟ್ಟಿ ಇದ್ದರೆ ತಲೆ ಮೇಲೆ ಎಂತಹ ಅಪಾಯ ಎದುರಾದರೂ ಬದುಕಿ ಬರಬಹುದು ಎಂಬ ಮಾತಿದೆ. ಇದೀಗ ಅಂತಹದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದೆ. ಅರಣ್ಯ ಪ್ರದೇಶದಲ್ಲಿ ರೈಲಿನಿಂದ ಬಿದ್ದ ಬಾಲಕ ವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಇದೀಗ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ(Viral News).

ಒಡಿಶಾದ ಬರ್ಹಾಂಪುರದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಕ್ಸ್‌ಪ್ರೆಸ್ ರೈಲಿನಿಂದ ಐದು ವರ್ಷದ ಬಾಲಕ ಹಳಿಗೆ ಬಿದ್ದಿದ್ದಾನೆ. ಇಡೀ ರಾತ್ರಿ ಬಾಲಕ ಭಯಭೀತಗೊಂಡು ಅರಣ್ಯದಲ್ಲೇ ಕಾಲ ಕಳೆದಿದ್ದಾನೆ. ಕೊನೆಗೆ ಗೂಡ್ಸ್‌ ರೈಲಿನ ಚಾಲಕ ಬಾಲಕನನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ (ರಾಯರಖೋಲ್) ಎಂ.ಕೆ.ಸಾಹು ಮಾತನಾಡಿ, ಬಾಲಕ ತನ್ನ ಚಿಕ್ಕಪ್ಪ ಮತ್ತು ತಂದೆ ಜತೆ ದುರ್ಗ್-ಪುರಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದ.

ತಂದೆ ಮತ್ತು ಚಿಕ್ಕಪ್ಪ ಗಾಢಾ ನಿದ್ದೆಯಲ್ಲಿದ್ದಾಗ ಬಾಲಕ ಮುಂಜಾನೆ 2 ಗಂಟೆ ಸುಮಾರಿಗೆ ಶೌಚಾಲಯಕ್ಕೆಂದು ಎದ್ದಿದ್ದ. ಎದ್ದು ಬಂದು ಹೊರಗೆ ನೋಡುವಾಗ ಬಿದ್ದಾಗ ಕಂಪಾರ್ಟ್‌ಮೆಂಟ್ ಬಾಗಿಲು ತೆರೆದಿತ್ತು. ರಾಯರಖೋಲ್ ನಿಲ್ದಾಣದಿಂದ ಸುಮಾರು ನಾಲ್ಕು ಕಿ.ಮೀ.ದೂರದಲ್ಲಿರುವ ಅಂಗರಪದ ಗ್ರಾಮದ ಬಳಿ ಬಾಲಕ ಅಚಾನಕ್ಕಾಗಿ ಕಾಲು ಜಾರಿ ಬಿದ್ದಿದ್ದಾರೆ.

ಆತ ಟ್ರ್ಯಾಕ್‌ಗೆ ಅಡ್ಡಲಾಗಿ ಬಿದ್ದು ತಲೆ ಮತ್ತು ಕೈಗಳಿಗೆ ಗಾಯಗಳಾಗಿವೆ. ಏನು ಮಾಡಬೇಕೆಂದು ತಿಳಿಯದ ಬಾಲಕ ಹಳಿಗಳ ಮೇಲೆ ಕುಳಿತುಕೊಂಡ. ಕೆಲವು ಗಂಟೆಗಳ ನಂತರ, ಅದೇ ಹಳಿಯಲ್ಲಿ ಬರುತ್ತಿದ್ದ ಗೂಡ್ಸ್ ರೈಲಿನ ಲೋಕೋ ಪೈಲಟ್ ಅವನನ್ನು ಗುರುತಿಸಿ ರಾಯರಖೋಲ್ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರು. ತಕ್ಷಣ ಬಾಲಕನನ್ನು ಲೋಕೋ ಪೈಲಟ್‌ ರಕ್ಷಿಸಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಡುಗನ ತಂದೆ ಧೆಂಕನಾಲ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ತಿಳಿಸುವ ಮೊದಲು ಎಲ್ಲಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಅವನನ್ನು ಹುಡುಕಿದರು. ನಂತರ ಅವರು ತಮ್ಮ ಮಗನನ್ನು ರಕ್ಷಿಸಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Justin Trudeau: ಒಂದು ಕ್ಷಣಕ್ಕೂ ನಿಮ್ಮನ್ನು ನಂಬಲ್ಲ…ಜಸ್ಟಿನ್‌ ಟ್ರೂಡೊ ವಿರುದ್ಧ ಸಿಟ್ಟಿಗೆದ್ದ ಕಾರ್ಮಿಕ-ವಿಡಿಯೋ ವೈರಲ್‌