Fraud Case: ವಂಚನೆ ಪ್ರಕರಣದಲ್ಲಿ ಬೇಕಾಗಿದ್ದ ಅಂಗದ್ ಚಾಂದೋಕ್‌ನನ್ನು ಭಾರತಕ್ಕೆ ಕರೆ ತಂದ ಸಿಬಿಐ ಅಧಿಕಾರಿಗಳು
ಭಾರತದಲ್ಲಿನ ಅನೇಕ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಅಂಗದ್ ಸಿಂಗ್ ಚಾಂದೋಕ್‌ನನ್ನು ಅಮೆರಿಕದ ಫೆಡರಲ್ ಸಂಸ್ಥೆ ಕೇಂದ್ರ ತನಿಖಾ ದಳ (ಸಿಬಿಐ)ಗೆ ಹಸ್ತಾಂತರಿಸಿದೆ. ಚಾಂದೋಕ್ ವೃದ್ಧ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ತಂತ್ರಜ್ಞಾನದ ಬೆಂಬಲದಿಂದ ಅಕ್ರಮ ಹಣ ವರ್ಗಾವಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದ. ಇದಕ್ಕಾಗಿ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿದ್ದ.


ನವದೆಹಲಿ: ಅನೇಕ ಬ್ಯಾಂಕ್ ವಂಚನೆ (Fraud Case) ಪ್ರಕರಣದಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಯಾಗಿರುವ ಅಂಗದ್ ಚಾಂದೋಕ್ (Angad Chandhok)ನನ್ನು ಅಮೆರಿಕದಿಂದ (America) ಭಾರತಕ್ಕೆ(India) ಗಡಿಪಾರು ಮಾಡಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದ 34 ವರ್ಷದ ಅಂಗದ್ ಸಿಂಗ್ ಚಾಂದೋಕ್ ಭಾರಿ ಪ್ರಮಾಣದ ಹಣ ವರ್ಗಾವಣೆ ಚಟುವಟಿಕೆಯನ್ನು ನಡೆಸುತ್ತಿದ್ದ ಆರೋಪದ ಮೇಲೆ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿದ್ದ. 2022ರಲ್ಲಿ ಅಮೆರಿಕ ನ್ಯಾಯಾಲಯವು ಆತನಿಗೆ ಆರು ವರ್ಷಗಳ ಅವಧಿಯ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದೀಗ ನಿರ್ದಿಷ್ಟ ನಿಯಮಾವಳಿಗಳನ್ನು ಪೂರ್ಣಗೊಳಿಸಿ ಆತನನ್ನು ಸಿಬಿಐ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿನ ಅನೇಕ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಅಂಗದ್ ಸಿಂಗ್ ಚಾಂದೋಕ್‌ನನ್ನು ಅಮೆರಿಕದ ಫೆಡರಲ್ ಸಂಸ್ಥೆ ಕೇಂದ್ರ ತನಿಖಾ ದಳ (ಸಿಬಿಐ)ಗೆ ಹಸ್ತಾಂತರಿಸಿದೆ. ಚಾಂದೋಕ್ ವೃದ್ಧ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ತಂತ್ರಜ್ಞಾನದ ಬೆಂಬಲದಿಂದ ಅಕ್ರಮ ಹಣ ವರ್ಗಾವಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದ. ಇದಕ್ಕಾಗಿ ಅಮೆರಿಕದಲ್ಲಿ ಶಿಕ್ಷೆಗೊಳಗಾಗಿದ್ದ.
ಭಾರತೀಯ ತನಿಖಾ ಸಂಸ್ಥೆ ಹುಡುಕಾಡುತ್ತಿದ್ದ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅಂಗದ್ ಸಿಂಗ್ ಚಾಂದೋಕ್‌ನನ್ನು ಅಮೆರಿಕದಿಂದ ಗಡೀಪಾರು ಮಾಡಿದ ಅನಂತರ ಇಲ್ಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ತಂತ್ರಜ್ಞಾನದ ಸಹಾಯದಿಂದ ನಡೆಸುತ್ತಿದ್ದ ಹಗರಣದ ಭಾಗವಾಗಿದ್ದಕ್ಕಾಗಿ ಅಮೆರಿಕ ನ್ಯಾಯಾಲಯವು 2022ರಲ್ಲಿ ಚಾಂದೋಕ್‌ನನ್ನು ದೋಷಿ ಎಂದು ಘೋಷಿಸಿತು. ಈತ ತಂತ್ರಜ್ಞಾನದ ಸಹಾಯದಿಂದ ಅನೇಕ ವೃದ್ಧ ಅಮೆರಿಕನ್ನರಿಗೆ ವಂಚಿಸಿದ್ದ ಎಂದು ಅಮೆರಿಕ ನ್ಯಾಯ ಇಲಾಖೆ ತಿಳಿಸಿದೆ.
ಅಮೆರಿಕದಲ್ಲಿ ವಾಸ ಮಾಡಲು ಪ್ರಾರಂಭಿಸಿದ ಬಳಿಕ ಆತ ಅಂತಾರಾಷ್ಟ್ರೀಯ ತಂತ್ರಜ್ಞಾನದ ಸಹಾಯದಿಂದ ಅನೇಕ ವೃದ್ಧ ಅಮೆರಿಕನ್ನರ ಜೀವಾವಧಿಯ ಉಳಿತಾಯದ ಹಣವನ್ನು ಪಡೆದು ವಂಚಿಸಿದ್ದ. ಆತನಿಗೆ ಆರು ವರ್ಷಗಳ ಫೆಡರಲ್ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕದ ವಕೀಲ ಜಕಾರಿ ಎ. ಕುನ್ಹಾ ತಿಳಿಸಿದ್ದಾರೆ. ಆತ ವಂಚನೆ ಪ್ರಕರಣಗಳಿಗಾಗಿ ಭಾರತದಲ್ಲಿಯೂ ಬೇಕಾಗಿದ್ದ ಆರೋಪಿಯಾಗಿದ್ದಾನೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಚಾಂದೋಕ್ ಕ್ಯಾಲಿಫೋರ್ನಿಯಾದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಹಣ ವರ್ಗಾವಣೆ ಜಾಲವನ್ನು ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಲ್ಲಿ ಆತ ನಕಲಿ ಕಂಪನಿಗಳನ್ನು ರಚಿಸಿ ಅಮೆರಿಕನ್ನರಿಂದ ಕದ್ದ ಲಕ್ಷಾಂತರ ಡಾಲರ್‌ಗಳನ್ನು ಆನ್‌ಲೈನ್ ಟೆಕ್ ಸಪೋರ್ಟ್ ಸ್ಕೀಮ್ ಮೂಲಕ ಮತ್ತು ಅನಂತರ ಆನ್‌ಲೈನ್ ಪ್ರಯಾಣ ಶುಲ್ಕ ಯೋಜನೆಯ ಮೂಲಕ ವರ್ಗಾಯಿಸಿಕೊಂಡಿದ್ದ. ಚಂದೋಕ್ ನಿರ್ದೇಶನದಲ್ಲಿ ಸುಮಾರು ಐದು ಮಂದಿ ಈ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.