Wednesday, 30th October 2024

ಚಿತ್ರರಂಗದ ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್

‌ಜ್ವಲಂತ ಸ್ವೀಪ ಮಾರಿಷಸ್ ದೇಶದಲ್ಲಿ ವಿಜೃಂಭಣೆಯಿಂದ ಘೋಷಣೆ

ಬೆಂಗಳೂರು: ಕಲಾ ಸಾಮ್ರಾಟ್ ಡಾ.ಎಸ್ ನಾರಾಯಣ್, ಹೆಸರಾಂತ ನಿರ್ಮಾಪಕ, ಉದ್ಯಮಿ ಹಾಗೂ ಜನಪ್ರಿಯ ರಾಜಕಾರಣಿ ಸಿ.ಆರ್.ಮನೋಹರ್, ತಾಜ್‌ಮಹಲ್ ಖ್ಯಾತಿಯ ಆರ್.ಚಂದ್ರು ಸೇರಿದಂತೆ ಐದು ಚಿತ್ರರಂಗದ ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ದೂರದ ಮಾರಿಷಸ್‌ ನಲ್ಲಿ ಘೋಷಣೆಯಾಗಿದೆ.

ಚಿತ್ರಸಂತೆ ಖ್ಯಾತಿಯ ಹೆಸರಾಂತ ನಿರ್ಮಾಪಕ ಗಿರೀಶ್ ವಿ.ಗೌಡ ಕೂಡ ಈ ಸಲದ ಪ್ರಶಸ್ತಿ ಪಡೆದಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರ ಕರ್ನಾಟಕದ ಅಳಿಯ ಚಿತ್ರಕ್ಕೆ ವಿಶೇಷ ಗೌರವ ಪ್ರಶಸ್ತಿ ಲಭಿಸಿದೆ.

ವಿಶ್ವೇಶ್ವರ ಭಟ್ ಸಾರಥ್ಯದಲ್ಲಿ ಇದೇ ಮೇ ೧೯ರಂದು ಮಾರಿಷಸ್ ನಲ್ಲಿ ನಡೆದ ಈ ಅದ್ದೂರಿ ಸಮಾರಂಭ ಕನ್ನಡ ಪತ್ರಿಕೋದ್ಯಮದ ವಿಭಿನ್ನ ಪ್ರಯತ್ನ ವಾಗಿದೆ. ಅವಧೂತ ವಿನಯ್ ಗುರೂಜಿ, ಡಾ. ಜಯಮಾಲಾ ಸೇರಿದಂತೆ ವಿಶೇಷ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಚಿತ್ರೋದ್ಯಮದ ಪರವಾಗಿ ಪ್ರಶಸ್ತಿ ಪಡೆದವರು ಸಂತಸ ವ್ಯಕ್ತಪಡಿಸಿದ್ದು, ಚಂದನವನದ ಸಾಧಕರನ್ನು ಗುರುತಿಸಿದ್ದಕ್ಕೆ ವಿಶ್ವವಾಣಿ ಬಳಗಕ್ಕೆ ಧನ್ಯವಾದ ತಿಳಿಸಿದ್ದಾರೆ.