ಜನಸಾಮಾನ್ಯರು ಹೆದರಿದ್ದಾರೆ, ರಾಜ್ಯದಲ್ಲಿ ಗೂಂಡಾ ಸರಕಾರ
ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಕಿಡಿ
ವಿಶ್ವವಾಣಿ ಸಂದರ್ಶನ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಮ್ಮ ಪಕ್ಷದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ‘ಆ‘ ಬಳಕೆ ಮಾಡಿದ್ದೇ
ನಿಜವಾಗಿದ್ದರೆ ಪಕ್ಷ ನಿಶ್ಚಿತವಾಗಿ ಕ್ರಮ ಕೈಗೊಳ್ಳುತ್ತಿತ್ತು ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ.
ಮಂಜುಳಾ ಅಭಿಪ್ರಾಯಪಟ್ಟಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ. ರವಿ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ‘ವಿಶ್ವವಾಣಿ’
ಯೊಂದಿಗೆ ಮಾತನಾಡಿರುವ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ
ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಪ್ರತಿಕ್ರಿಯಿಸಿದ್ದು, ಇಬ್ಬರಿಗೂ ತೀವ್ರ ನೋವಾಗಿದ್ದರೂ, ಪ್ರಕರಣದಲ್ಲಿ ಪರಿಷತ್ ಸದಸ್ಯ
ಸಿ.ಟಿ.ರವಿ ಅವರನ್ನು ಸರಕಾರ ನಡೆಸಿಕೊಂಡ ರೀತಿ ಸರಿಯಲ್ಲ. ಇಷ್ಟಕ್ಕೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಂತಹ ಪದ ಬಳಸಿದ್ದರೆ ಮಂದಿನ ತನಿಖೆಯಲ್ಲಿ ಎಲ್ಲ ವಿವರ ವಾಗಿ ತಿಳಿಯಲಿದೆ. ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು ಘಟನೆ ರಾಜಕೀಯಗೊಳಿಸಬಾರದಿತ್ತು ಎಂದು ವಿಷಾದಿಸಿದ್ದಾರೆ.
ಸಿ.ಟಿ.ರವಿ ಪದ ಬಳಕೆ ಬಗ್ಗೆ ಮಹಿಳೆಯಾಗಿ ಏನಂತೀರಾ?
ಪ್ರಕರಣ ನ್ಯಾಯಾಲಯದ ಮುಂದೆ ಹೋಗಿದೆ. ಇತ್ಯರ್ಥ ಪಡಿಸಿಬೇಕಿರುವುದು ನ್ಯಾಯಾಲಯ. ಸತ್ಯಾಸತ್ಯತೆಯ ತೀರ್ಪು ನೀಡಬೇಕಿರುವುದು ಕೋರ್ಟ್. ಸಭಾಪತಿಗಳು ಈ ವಿಚಾರಕ್ಕೆ ಸಂಬಂಽಸಿದಂತೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಹೊರಗಡೆ ಇಲ್ಲದಿದ್ದರೂ ಎರಡೂ ಕಡೆ ಪ್ರಬಲ ವಾದ ಪ್ರತಿಪಾದನೆ ನಡೆಯುತ್ತಿರುವುದರಿಂದ ಅದನ್ನು ಸಭಾಪತಿಗಳೇ ಇತ್ಯರ್ಥ ಪಡಿಸಬೇಕು. ಹೊರಗಡೆಯಿಂದ ಏನೇ ಹೇಳಿದರೂ ಕೂಡ ಸಂಪೂರ್ಣತೆ ಬರುತ್ತಿಲ್ಲ. ಇದನ್ನು ಸದನದಲ್ಲಾದ ವಿಚಾರ ಸದನದಲ್ಲೇ ಇತ್ಯರ್ಥವಾಗಬೇಕಿತ್ತು. ಇದು ದುರದೃಷ್ಟಕರ
ಬೆಳವಣಿಗೆ.
ಸದನದೊಳಗಿನ ವಿಚಾರ ಹೊರಗಡೆ ಚರ್ಚೆಯಾಗುತ್ತಿರುವುದು ಸರಿಯೇ?
ಸದನದಲ್ಲಿ ಆ ರೀತಿಯ ಪದ ಬಳಕೆ ಆಗಿದೆಯೋ ಇಲ್ಲವೋ ಎಂಬ ಗೊಂದಲವಿದೆ. ಇಂತಹ ಘಟನೆ ಆಗಬಾರದಿತ್ತು. ಇಬ್ಬರೂ ಕೂಡ ಶಾಸಕರಾಗಿದ್ದಾರೆ. ಹೀಗಿದ್ದರೂ ಪ್ರತಿದಿನ ಹೊರಗಡೆ ಹೇಳಿಕೆ ನೀಡುವುದು, ಮಾತನಾಡುವುದು ಎಷ್ಟು ಸರಿ ಅನ್ನುವುದೂ ಕೂಡ ಪ್ರಮುಖವಾಗುತ್ತದೆ. ಸದನದ ವಿಚಾರ ಕೋರ್ಟಿನ ವ್ಯಾಪ್ತಿಗೆ ಬರುತ್ತದೋ ಎಂಬುದು ಕೂಡ ನ್ಯಾಯಾಲಯದಲ್ಲೇ ಬಗೆಹರಿ ಸಬೇಕಿದೆ. ಸಭಾಪತಿ ಹೊರಟ್ಟಿ ಅವರು ಪ್ರಥಮ ತೀರ್ಪು ನೀಡಿದ್ದಾರೆ. ಅದು ಮತ್ತೂ ಕೂಡ ಚರ್ಚೆಯಾಗುತ್ತಿದೆ.
ಹೀಗಾಗಿ ಸದದ ವ್ಯಾಪ್ತಿ ಹಾಗೂ ಹೊರಗಡೆಯ ವಿಚಾರವೇ ಈಗ ಹೆಚ್ಚು ಚರ್ಚಿತವಾಗುತ್ತಿದೆ. ಹೀಗಾಗಿ
ಇಬ್ಬರಿಗೂ ತೀವ್ರವಾದ ನೋವುಗಳಾಗಿದೆ ಎನ್ನಲಾಗಿದೆ. ಸದನದ ವಿಚಾರ ಹಾಗೂ ವ್ಯಾಪ್ತಿಯೂ ಕೂಡ ಈಗ
ಕಾನೂನು ಪ್ರಶ್ನೆಗಳು ಎದ್ದಿದೆ.
ಇಬ್ಬರಿಗೂ ನೋವಾಗಿದೆ ಎನ್ನುತ್ತೀರಿ? ಅಲ್ಲಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನೋವಾಗಿದೆ ಎಂದು ನೀವೇ ಒಪ್ಪಿಕೊಂಡಂತಲ್ಲವೇ ?
ಇಲ್ಲ. ಒಪ್ಪಿಕೊಳ್ಳುವುದು ಎಂದಲ್ಲ. ಸಿ.ಟಿ.ರವಿ ಅವರಿಗೆ ಆಗಿರುವ ಕಿರುಕುಳ ನೋವಿನ ವಿಚಾರವಲ್ಲವೇ?…
ಅಂದಿದ್ದಾರೆ, ಅಂದಿದ್ದಾರೆ ಎಂದುಕೊಂಡು, ಸದನದ ಅಧ್ಯಕ್ಷರು ಇಲ್ಲ ಎಂದ ಮೇಲೂ., ಅಂದಿದ್ದಾರೆ,
ಅಂದಿದ್ದಾರೆ ಎಂದು ನೋವು ಅನುಭವಿಸುತ್ತಿದ್ದಾರಲ್ಲೇ ಅವರು? ಯಾರೂ ಒಪ್ಪಿಕೊಂಡಿಲ್ಲ ಎಂದರೂ,
ನೋವಾಗಿದೆ ಎನ್ನುವಾಗ ನಾವು ಏನು ಹೇಳಲು ಸಾಧ್ಯ? ಕಾನೂನಿನ ವ್ಯಾಪ್ತಿಗೆ ಹೋಗಿ ಇತ್ಯರ್ಥವಾಗಬೇಕು.
ತಾವೂಬ್ಬರು ಪಕ್ಷದ ಮಹಿಳಾ ಆಧ್ಯಕ್ಷರಾಗಿ, ಆಯೋಗದ ಮಾಜಿ ಅಧ್ಯಕ್ಷೆಯಾಗಿ ಯಾವ ರೀತಿ ನೋಡುತ್ತೀರಿ ?
ನಿಜವಾಗಿ ಆ ರೀತಿಯ ಪದ ಬಳಕೆ ಆಗಿದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಬೇಕು. ಆ ತೀರ್ಮಾನ ಆಗದೆ, ಅಭಿಪ್ರಾಯಗಳನ್ನು ಕೊಡುತ್ತಾ ಹೋಗುವುದು ಸಮಸ್ಯೆ ಪರಿಹಾರವಾದಂತಲ್ಲ. ಹಾಗಾಗಿ ಅವರು ಅಂದಿರುವುದು, ಅನ್ನದಿರುವುದು ಎರಡೂ ತಂಡಗಳು ಕೂಡ ಪ್ರಬಲವಾಗಿ ವಾದಿಸುತ್ತಿರುವಾಗ ವಿಚಾರ ಜಟಿಲವಾಗಿದೆ. ನನ್ನ ಪರವಾಗಿ ಆಗಿಲ್ಲ ಎಂದು ಮಹಿಳೆ ಬೈಯುವುದು, ಬಿಜೆಪಿಗೆ ನಾಚಿಕೆ ಇಲ್ಲವೇ ಎಂದು ಹೇಳುವುದು, ಎಲ್ಲವೂ ಕೋರ್ಟ್‌ಲ್ಲೇ ತೀರ್ಮಾನವಾಗಲಿ. ಅಂದಿದಾರೆ ಅನ್ನುವ ವಿಷಯ ನಿಜವಾಗುವ ಮುನ್ನವೇ ಮಾತನಾಡುತ್ತಾ ಹೋಗುವುದು ಜನರ ಎದುರಿಗೆ ನಗೆಪಾಟಲಿಗೆ ಒಳಗಾಗುತ್ತೇವೆ ಅಂತ ಅನ್ನಿಸುತ್ತಿದೆ. ಮಹಿಳೆಯಾಗಿ ಈ ವಿಚಾರದಲ್ಲಿ ಸೂಕ್ಷ್ಮತೆ ಇದೆ. ಆದರೆ, ಉತ್ತರ ನೀಡದೆ ಪಲಾಯನ ಮಾಡಲು ಸಾಧ್ಯವಿಲ್ಲ.
ಒಂದು ವೇಳೆ ನಿಮ್ಮ ನಾಯಕರ ಮಾತು ನಿಜವೇ ಆಗಿದ್ದಲ್ಲಿ ?
ಆ ರೀತಿ ಪದ ಬಳಕೆ ಆಗಿದಿದ್ದರೆ , ನಮ್ಮ ನಾಯಕರು ಹೇಳಿದಿದ್ದರೆ ಪಕ್ಷ ಖಂಡಿತ ಕ್ರಮ ಕೈಗೊಳ್ಳುತ್ತಿತ್ತು. ಎಫ್ ಐಆರ್ ಹಾಕಿದ ಮೇಲೆ ಕೋರ್ಟ್ ಮುಂದೆ ಹಾಜರುಪಡಿಸಬೇಕಿತ್ತು. ಇಲ್ಲವೇ ಕಾನೂನು ಹಾಗೂ ಭದ್ರತೆ ದೃಷ್ಟಿಯಿಂದ ಬೆಂಗಳೂರಿಗೆ ಕರೆತರಬೇಕಾಗಿತ್ತು. ಅದನ್ನು ಮಾಡಲಿಲ್ಲ, ಜೊತೆಗೆ ಇವರ ಪಿಎ ಗಳು, ಕಾರ್ಯಕರ್ತರು ಎನ್ನುವವರು, ವಿಧಾನಸೌಧದ ಒಳಗೆ ಹಲ್ಲೆಗೆ ಮುಂದಾಗಿದ್ದು , ಕಾಲಿನಲ್ಲಿ ಒದ್ದಿರುವುದು, ಇಲ್ಲಿ ವ್ಯಕ್ತಿಗತವಾಗಿ ನೋವಾಗಿದೆ, ಅವಮಾನವಾಗಿದೆ ಎಂದು ಕೊಂಡರೆ, ಸಂವಿಧಾನಿಕವಾಗಿ ಸುವರ್ಣಸೌಧ ಎಂಬ ದೇಗುಲಕ್ಕೆ ಅವಮಾನ ವಾಗಿರುವುದನ್ನು ಯಾರನ್ನು ಪ್ರಶ್ನೆ ಮಾಡುವುದು?
ಈ ವಿಚಾರದಲ್ಲಿ ಸರಕಾರ ತನ್ನ ನಡೆ ಸಮರ್ಥಿಸಿಕೊಂಡಿದೆಯಲ್ಲಾ ?
-ಸಿ.ಟಿ.ರವಿ ಅವರಿಗೆ ಆಗಿರುವ ಅನ್ಯಾಯ ಸರಿಯಾಗಬೇಕು. ಸುವರ್ಣಸೌಧದಲ್ಲಿ ಆಗಿರುವ ವಿಚಾರವೂ ಇಲ್ಲಿ
ಪ್ರಮುಖ. ಮಹಿಳೆಯರಿಗೆ ಆಗಿದೆ ಎನ್ನಲಾದ ಅಪಮಾನ ಏನಿದೆ ಅದೂ ಕೂಡ ನಿಷ್ಪಕ್ಷಪಾತವಾಗಿ ಸತ್ಯ ಹೊರಗಡೆ
ಬರಬೇಕು. ಹೀಗಿದ್ದರೂ ಜನಸಾಮಾನ್ಯರು ಹೆದರಿದ್ದಾರೆ. ಗೂಂಡಾಗಳೆಲ್ಲ ಜನಪ್ರತಿನಿಽಗೆ ಹೊಡೆಯುವುದು,
ಶಾಸಕರನ್ನು ಕ್ರಿಮಿನಲ್ ರೀತಿ ನಡೆಸಿಕೊಂಡಿರುವುದು ಸರಿಯಲ್ಲ. ಅಷ್ಟೆಲ್ಲ ಅವತಾರ ಮಾಡುವ ಧೈರ್ಯ ಹಾಗೂ
ಗೂಂಡಾತನ ಇದೆಯಲ್ಲ ಅದು ಕರ್ನಾಟಕ ರಾಜ್ಯದ ದುರುಂತ ಹಾಗೂ ಚರ್ಚೆಯ ವಿಷಯ. ಅವರು ಎತ್ತಿರುವ
ವಿಚಾರಗಳು ಜನರ ಮುಂದೆ ತೀರ್ಮಾನವಾಗಲಿ. ಈ ರೀತಿ ಶಾಸಕರನ್ನು ನಡೆಸಿಕೊಂಡಿರುವುದು ಸರಿಯಲ್ಲ.
ಸದನದೊಳಗೆ ನಡೆದುಕೊಂಡಿರುವ ರೀತಿ ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ಅನ್ನು ತೊರಿಸುತ್ತದೆ.
ಲಕ್ಷ್ಮೀ ಹೆಬ್ಬಾಳ್ಕರ್ ನಿಮ್ಮ ಪಕ್ಷದ ವರಿಷ್ಠರು ಹಾಗೂ ರಾಷ್ಟ್ರಪತಿಗೆ ದೂರು ನೀಡುತ್ತಾರಂತಲ್ಲ?
ದೂರು ನೀಡುವುದಕ್ಕೆ ಅವರು ಸ್ವತಂತ್ರರು. ಅವರು ಆ ವಿಷಯ ಹಿಡಿದುಕೊಂಡು ಗಟ್ಟಿಯಾಗಿ ಹೋರಾಟ
ಮಾಡಬೇಕಿತ್ತು.
ಅದನ್ನು ಬಿಟ್ಟು ರೌಡಿಗಳ ಮೂಲಕ ದಾಳಿ ಮಾಡಿಸಿದ್ದು, ಸಿ.ಟಿ.ರವಿ ಅವರಿಗೆ ಕಿರುಕುಳ ಮಾಡಿದ್ದು ಸರಿಯಲ್ಲ. ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡಲು ಬೇರೆ ಬೇರೆ ದಾರಿ ಹುಡುಕುತ್ತಿದೆ. ಈಗಲೂ ಕೂಡ ಇ.ಟಿ.ರವಿ ಅವರ ದೂರನ್ನು ಸ್ವೀಕರಿಸದಿರುವುದು ಇದು ಯಾವ ಪ್ರಜಾಪ್ರಭುತ್ವ ವ್ಯವಸ್ಥೆ ? ಮಹಿಳೆಯಾಗಿ ತನಗೆ ಅನ್ಯಾಯ ವಾಗಿದೆ ಎಂಬ ಹೋರಾಟವನ್ನು ಯಾವ ಹಂತಕ್ಕೆ ಕೊಂಡೊಯ್ಯಲು ಅವರು ಸ್ವತಂತ್ರರು. ಜನಪ್ರತಿನಿಧಿಗಳು ಕೋರ್ಟ್ ಒಳಗಡೆ ತೀರ್ಮಾನವಾಗಲಿ ದೇಗುಲದಲ್ಲಿ ಗೂಂಡಾ ನಡವಳಿಕೆ ಸರಿಯಲ್ಲ.
ಗೂಂಡ ಸಂಸ್ಕೃತಿ ಇದೆಯೇ?
ಯಾರಿಗೆ ಅನ್ಯಾಯ, ಅಪಮಾನ ಮಾಡಿಕೊಳ್ಳಲು ರಾಜಕೀಯ ಜೀವನಕ್ಕೆ ಬರುವುದಿಲ್ಲ. ಅದು ಮಹಿಳೆಯಾಗಲಿ,
ಪುರುಷರಾಗಲಿ, ಅವರು ಕಾನೂನು ಕೈಗೆತ್ತಿಕೊಂಡರು, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅನುಯಾಯಿಗಳು, ಗೂಂಡಾಗಳು ಹಾಗೂ ಕಾಂಗ್ರೆಸಿನ ಪಕ್ಷ ಅಧಿಕೃತವಾಗಿ ಪೊಲೀಸ್ ಇಲಾಖೆಯ ಮೂಲಕ ಗೂಂಡಾ ಕೆಲಸವನ್ನು ಮಾಡಿದ್ದರಿಂದಾಗಿ ಪ್ರಕರಣಕ್ಕೆ ಬೇರೆ ತಿರುವು ನೀಡಿದ್ದಾರೆ. ಗೂಂಡಾ ಸಂಸ್ಕೃತಿಯನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಜನಸಾಮಾನ್ಯರು ಹೆದರಿದ್ದಾರೆ.
ಇದನ್ನೂ ಓದಿ: #RajeshGowdaInterview