Tuesday, 3rd December 2024

ಗಡಿಯಾಚೆಯ ಶತ್ರುಗಳಿಗಿಂತ ಉದಾರವಾದಿಗಳೇ ಅಪಾಯ

ವಿಶ್ವವಾಣಿ ವಿಶೇಷ

ಆಹ್ವಾನಿತ ಲೇಖನ: ಪ್ರಣಿತಾ ಸುಭಾಷ್ ನಟಿ

‘ಇಸ್ಲಾಂ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಒಂದೇ, ಆರ್‌ಎಸ್‌ಎಸ್ ಹಿಂದೂ ತಾಲಿಬಾನ್’ ಎಂಬ ತಪ್ಪುತಪ್ಪಾದ ಹೇಳಿಕೆಗಳನ್ನು ನೀಡುತ್ತಿರು ವುದು ಅಸಮಾಧಾನವನ್ನುಂಟು ಮಾಡುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಬೆಳವಣಿಗೆ ನಿರಂತರವಾಗಿ ಹೆಚ್ಚುತ್ತಿರುವಾಗ, ಈ ರೀತಿಯ ಜನರು ನಮ್ಮ ಗುರುತು, ಖ್ಯಾತಿ ಮತ್ತು ಜೀವನಕ್ಕೆ ಕಳಂಕವನ್ನು ತರುತ್ತಿದ್ದಾರೆ.

ಅಫ್ಘಾನಿಸ್ತಾನದ ಕೆಲವು ಭಾಗಗಳನ್ನು ಗಾಂಧಾರ ಎಂದು ಕರೆಯಲಾಗುತ್ತಿತ್ತು. ಮಹಾಭಾರತ ಗ್ರಂಥದಲ್ಲೂ ಗಾಂಧಾರ ಸಾಮ್ರಾಜ್ಯದ ಬಗ್ಗೆ ಉಲ್ಲೇಖವಿದೆ. ಕಥೆಯ ಪ್ರಕಾರ, ಸುಬಲರಾಜ ಸುಮಾರು 5500 ವರ್ಷಗಳ ಹಿಂದೆ ಗಾಂಧಾರವನ್ನು ಆಳಿದನು.

ತಜ್ಞರ ಪ್ರಕಾರ, ಗಾಂಧಾರ ಸಾಮ್ರಾಜ್ಯವು ಇಂದಿನ ಉತ್ತರ ಪಾಕಿಸ್ತಾನ ಮತ್ತು ಪೂರ್ವ ಅಫ್ಘಾನಿಸ್ತಾನದ ಭಾಗ ಗಳನ್ನು ಒಳಗೊಂಡಿತ್ತು. ಆ ರಾಜನಿಗೆ ಗಾಂಧಾರಿ ಎಂಬ ಮಗಳಿದ್ದಳು. ಅವಳು ಹಸ್ತಿನಾಪುರ ಸಾಮ್ರಾಜ್ಯದ ರಾಜಕುಮಾರ ಧೃತರಾಷ್ಟ್ರನನ್ನು ಮದುವೆಯಾಗಿದ್ದಳು. ಇಂದು ಅಫ್ಘಾನಿಸ್ತಾನದ ಕಂದಹಾರ  ಹೆಸರಿ ನಿಂದ ಕರೆಯಲ್ಪಡುವ ನಗರವು ಈ ಎಲ್ಲ ಸಂಗತಿಗಳನ್ನು ದೃಢಪಡಿಸುತ್ತದೆ. ಅಫ್ಘಾನಿಸ್ತಾನ ಮತ್ತು ಭಾರತದ ಜನರ ನಡುವಿನ ಸಂಬಂಧಗಳು ಸಿಂಧೂ ನಾಗರಿಕತೆಯನ್ನು ಗುರುತಿಸುತ್ತದೆ. 7ನೇ ಶತಮಾನದ ಅಂತ್ಯದಲ್ಲಿ, ಮುಸಲ್ಮಾನರ ಆಗಮನದವರೆಗೂ ಅಫ್ಘಾನಿಸ್ತಾನದ ಬಹುಭಾಗವು ಬೌದ್ಧ, ಹಿಂದೂ ಮತ್ತು ಜೊರಾಸ್ಟ್ರಿಯನ್ಸ್ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿತ್ತು.

ಅನೇಕ ಅಫ್ಘಾನಿಸ್ತಾನದ ಜನರು ಇಸ್ಲಾಂಗೆ ಮತಾಂತರಗೊಂಡರೂ ಮುಸ್ಲಿಮರು ಮತ್ತು ಹಿಂದೂಗಳು ಒಂದು ಗೂಡಿ ವಾಸಿಸುತ್ತಿದ್ದರು. ಸೋವಿಯತ್-ಅಫ್ಘಾನ್ ಯುದ್ಧದ ಸಮಯದಲ್ಲಿ(1979-89) ಅನೇಕ ಹಿಂದೂ ಗಳು ಮತ್ತು ಸಿಖ್ ರು, ಯುರೋಪ್ ಮತ್ತು ಭಾರತಕ್ಕೆ ವಲಸೆ ಬಂದರು. 1970ರಲ್ಲಿ ಅಫ್ಘಾನಿಸ್ತಾನದಲ್ಲಿ 7 ಲಕ್ಷ ಹಿಂದೂಗಳು ಮತ್ತು ಸಿಖ್‌ರಿದ್ದರು ಎಂಬ ಜನಸಂಖ್ಯೆಯ ವರದಿಗಳಿವೆ. 1980ರ ದಶಕದಲ್ಲಿ, ಅಂದಾಜು 2-3 ಲಕ್ಷಕ್ಕೆ ಕುಸಿಯಿತು. 1990ರ ಯುದ್ಧದ ಸಮಯದಲ್ಲಿ ಮುಜಾಹಿದೀನ್ ಅಧಿಕಾರದಲ್ಲಿದ್ದಾಗ, ತಾಲಿಬಾನ್ ಆಡಳಿತ ನಡೆಸುತ್ತಿದ್ದಾಗ, ಸಿಖ್ ಮತ್ತು ಹಿಂದೂ ಜನಸಂಖ್ಯೆ ಯು 15 ಸಾವಿರಕ್ಕೆ ಇಳಿಯಿತು.

ತಾಲಿಬಾನ್ ಆಳ್ವಿಕೆಯಲ್ಲಿನ ಅವಧಿಯು ಅಫ್ಘಾನಿಸ್ತಾನದ ಹಿಂದೂಗಳು ಮತ್ತು ಸಿಖ್‌ರಿಗೆ ಕರಾಳಸಮಯ ವಾಯಿತು. ಹಿಂದೂಗಳು ಮತ್ತು ಸಿಖ್ ರ ಅಪಹರಣ ಗಳು, ಕೊಲೆಗಳು, ಆಸ್ತಿ ದೋಚುವುದು ಹೇಗೆ ಅನೇಕ ನಿರಂತರ ಕಿರುಕುಳಕ್ಕೆ ಹಿಂದೂ ಮತ್ತು ಸಿಖ್‌ರು ಒಳಗಾದರು. ತಾಲಿಬಾನ್, ಹಿಂದೂಗಳು ಮತ್ತು ಸಿಖ್‌ ರನ್ನು ಗುರುತಿಸಲು ಹಳದಿ ತೋಳುಗಳನ್ನು ಧರಿಸುವಂತೆ ಒತ್ತಾಯಿಸಲಾಯಿತು. ಈ ಕಿರುಕುಳವು ಅಫ್ಘಾನಿಸ್ತಾನದಲ್ಲಿ ಇನ್ನೂ ಮುಂದುವರಿದಿದೆ. ಕಳೆದ ಮೂರು ದಶಕಗಳಲ್ಲಿ ಹಿಂದೂಗಳು ಮತ್ತು ಸಿಖ್‌ರ ಜನಸಂಖ್ಯೆ ಶೇ.99 ಕ್ಕಿಂತಲೂ ಕಡಿಮೆಯಾಗಿ, ಈಗ ಸುಮಾರು 1350 ಮಂದಿ ಮಾತ್ರ ಉಳಿದಿದ್ದಾರೆ. ಪ್ರಜಾಪ್ರಭುತ್ವ ಆಡಳಿತವನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಅಮೆರಿಕವು 20 ವರ್ಷಗಳ ಕಾಲ ಆತಂಕವಾದದ ವಿರುದ್ಧ ಯುದ್ಧ ನಡೆಸಿತ್ತು.

ಆದರೆ ಈಗ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು, ಇಡೀ ಜಗತ್ತನ್ನು ಆಘಾತಕ್ಕೀಡು ಮಾಡಿದೆ. ಇದನ್ನು ತಿಳಿದ ನಂತರ ಕೇವಲ ಅಲ್ಪಸಂಖ್ಯಾತ ರು ಮಾತ್ರವಲ್ಲ, ಇಡೀ ಅಂತಾರಾಷ್ಟ್ರೀಯ ಸಮುದಾಯ ಛಿದ್ರಗೊಂಡಿದೆ. ನಾನು ಅತ್ಯಂತ ದುಃಖಿತಳಾದ ಒಂದು ವಿಷಯವೆಂದರೆ, ತಮ್ಮನ್ನು ಉದಾರವಾದಿ ಗಳೆಂದು ಕರೆದುಕೊಳ್ಳುವ ಕೆಲವು ಜನರು ತರ್ಕಬದ್ಧವಲ್ಲದ ಟೀಕೆಗಳನ್ನು ಮತ್ತು ಹೇಳಿಕೆಗಳನ್ನು ನೀಡುತ್ತಿದ್ದಾರೆ.

’ಇಸ್ಲಾಂ ಭಯೋತ್ಪಾದನೆ ಮತ್ತು ಹಿಂದೂ ಭಯೋತ್ಪಾದನೆ ಒಂದೇ, ಆರ್‌ಎಸ್‌ಎಸ್ ಹಿಂದೂ ತಾಲಿಬಾನ್’ ಎಂಬ ತಪ್ಪುತಪ್ಪಾದ ಹೇಳಿಕೆಗಳನ್ನು ನೀಡುತ್ತಿರು ವುದು ಅಸಮಾಧಾನವನ್ನುಂಟು ಮಾಡುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಬೆಳವಣಿಗೆ ನಿರಂತರವಾಗಿ ಹೆಚ್ಚುತ್ತಿರುವಾಗ, ಈ ರೀತಿಯ ಜನರು ನಮ್ಮ ಗುರುತು, ಖ್ಯಾತಿ ಮತ್ತು ಜೀವನಕ್ಕೆ ಕಳಂಕವನ್ನು ತರುತ್ತಿದ್ದಾರೆ. ನಾನು ಈ ಕಾಳಜಿಯಿಂದ ಹಾಕಿದ್ದ ಟ್ವೀಟ್ ಕೇವಲ ಟ್ವೀಟ್ ಅಲ್ಲ, ಅದು ನನ್ನ ಭಾವನೆ.
ಅಫ್ಘಾನಿಸ್ತಾನದ ಜನರಿಗೆ ಬೆಂಬಲವಾಗಿ ನಿಂತು, ನಮ್ಮ ದೇಶವನ್ನು ಗೌರವಿಸುವ ಬದಲು, ಅಪ್ರಸ್ತುತ ರೀತಿಯ ಟೀಕೆಗಳು ಮತ್ತು ಹೇಳಿಕೆಗಳನ್ನು ನೀಡುತ್ತಿರುವ
ಜನರಿಂದ ನಾವು ದೂರ ಉಳಿಯಬೇಕಿದೆ.

ಜನರು, ಹೇಗೆ ತರ್ಕಬದ್ಧವಲ್ಲದ ಹೇಳಿಕೆಗಳನ್ನು ಕೊಡುತ್ತಾರೆ ಎಂಬುದು ಆಘಾತಕಾರಿ ವಿಷಯ. ಎಲ್ಲವನ್ನೂ ವಿರೋಧಿಸುವ ಕಡ್ಡಾಯ ವಿರೋಧಿಗಳು ಇರುವುದು ಸಹಜ. ಆದರೆ ಈ ವಿಷಯ ಮಾನವೀಯತೆಗೆ ಸಂಬಂಧಪಟ್ಟಿರುವುದು. ಇದು ಪಕ್ಷಪಾತದ ಸಮಯವಲ್ಲ, ಅಂತಾರಾಷ್ಟ್ರೀಯ ವಿಷಯದಲ್ಲಿ ನಮ್ಮ ದೇಶದ ಆಂತರಿಕ ರಾಜಕೀಯವನ್ನು ತಂದು, ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುವುದು ಸರಿಯಲ್ಲ. ಈ ಸಮಯದಲ್ಲಿ ಎಲ್ಲ ಭಾರತೀಯರು ಒಟ್ಟಾಗಿ, ಅಫ್ಘಾನಿಸ್ತಾನದ ಶಾಂತಿಗಾಗಿ ಪ್ರಾರ್ಥಿಸುವುದು ಉಪಯುಕ್ತ.