Friday, 18th October 2024

ವಿಶ್ವ ಕ್ಷಯರೋಗ ದಿನ: ಕ್ಷಯರೋಗದ ಬಗ್ಗೆ ನೀವು ತಿಳಿದಿರಲೇಬೇಕಾದ 10 ಸಂಗತಿಗಳು

ಕ್ಷಯರೋಗ ಅತ್ಯಂತ ಭೀಕರತೆಯನ್ನು ಉಂಟುಮಾಡುವ ಶಕ್ತಿ ಈ ರೋಗಕ್ಕಿದೆ. ಇದನ್ನು ಪ್ರಾರಂಭದಲ್ಲಿಯೇ ಹತ್ತಿಕ್ಕದಿದ್ದರೆ ಸಾಂಕ್ರಮಿಕ ರೋಗದಂತೆ ಇತರರಿಗೆ ಹರಡುವ ಜೊತೆಗೆ ಕ್ಷಯ ರೋಗ ಅಂತಮಘಟ್ಟಕ್ಕೆ ತಲುಪಿದರೆ ಅವರನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟ. ಹೀಗಾಗಿ ಕ್ಷಯರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸುವುದು ಅತಿಮುಖ್ಯ. ಇಂದು ವಿಶ್ವ ಕ್ಷಯ ರೋಗ ದಿನ. ಪ್ರತಿಯೊಬ್ಬರೂ ಕ್ಷಯರೋಗ ಅಥವಾ ಟಿಬಿ ಬಗ್ಗೆ ತಿಳಿದಿರಲೇ ಬೇಕಾದ 10 ಅಂಶಗಳನ್ನು ಫೋರ್ಟಿಸ್‌ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ. ವಿವೇಕ್‌ ಪಡೆಗಲ್‌ ಅವರು ತಿಳಿಸಿಕೊಟ್ಟಿದ್ದಾರೆ.

1. ಭಾರತದಲ್ಲಿ ನಮ್ಮಲ್ಲಿ ಹೆಚ್ಚಿನವರು ನಮ್ಮ ಶ್ವಾಸಕೋಶದಲ್ಲಿ ಸುಪ್ತ ಕ್ಷಯರೋಗ ಹೊಂದಿರುತ್ತಾರೆ. ಚಿಕ್ಕವಯಸ್ಸಿನಲ್ಲಿಯೇ ಮೈಕೋ ಬ್ಯಾಕ್ಟೀರಿಯಂ ಕ್ಷಯರೋಗಕ್ಕೆ (Mtb)ಕ್ಕೆ ತುತ್ತಾಗಿರುವ ಸಾಧ್ಯತೆ ಇರುತ್ತದೆ. ಇದು ಕಾಲಕ್ರಮೇಣ ಗುಣವಾಗಬಹುದು. ಆದರೆ ಕೆವರಿಗೆ ಇದು ಗುಣವಾಗದೇ ದೇಹದಲ್ಲಿಯೇ ಉಳಿದುಕೊಂಡು ಬಿಡುತ್ತದೆ. ಇದರಿಂದ ದೇಹದ ಇತರ ಅಂಗಾಂಗಗಳಿಗೆ ಹಾನಿಯಾ ಗಬಹುದು. ಕೆಮ್ಮು ವಿಪರೀತ ಕ್ಕೇರಬಹುದು. ಹೆಚ್ಚಾಗಿ ದುಗ್ಧರಸ ಗ್ರಂಥಿ, ಬೆನ್ನುಮೂಳೆಗೆ ವಿಸ್ತರಿಸಿಕೊಂಡು ಹಾನಿ ಯಾಗಬಹುದು. ಹೀಗಾಗಿ ೧೫ ದಿನಗಳಿಗೂ ಮೀರಿ ನಿಮ್ಮಲ್ಲಿ ಕೆಮ್ಮು ಇದ್ದರೆ ನಿಲಕ್ಷಿಸದೇ ವೈದ್ಯರನ್ನು ಭೇಟಿ ಮಾಡಿ.

2. ಕ್ಷಯರೋಗಕ್ಕೆ ಪ್ರಮುಖ ಕಾರಣ ಆರೋಗ್ಯದಲ್ಲಿನ ಏರುಪೇರು. ಹೀಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಕ್ಷಯರೋಗವನ್ನು ತಡೆಗಟ್ಟ ಬಹುದು. ಪೌಷ್ಟಿಕ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒತ್ತಡ-ಮುಕ್ತ ಜೀವನಶೈಲಿಯು ಕ್ಷಯರೋಗ ಸೇರಿದಂತೆ ಯಾವುದೇ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿರುತ್ತದೆ. ಹೀಗಾಗಿ ಉತ್ತಮ ಜೀವನ ಶೈಲಿಯನ್ನು ಹೊಂದುವುದು ಬಹಳಮುಖ್ಯ.

3. ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯು ಟಿಬಿ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಷಯರೋಗವನ್ನು ಉಂಟು ಮಾಡುವ ಸೂಕ್ಷ್ಮಾಣುಜೀವಿಗಳು ಶೀತ, ತೇವದ ವಾತಾವರಣದಲ್ಲಿ ಬೆಳೆಯುತ್ತವೆ. ಆದ್ದರಿಂದ, ಸೂರ್ಯನ ಬೆಳಕು ಮತ್ತು ಗಾಳಿ ಅತಿಮುಖ್ಯ. ಮನೆಯಲ್ಲಿ ಸದಾ ಬಾಗಿಲು ಹಾಕಿಕೊಳ್ಳುವುದು, ಕಿಟಕಿ ಮುಚ್ಚುವುದು ಕೆಲವರಿಗೆ ಅಭ್ಯಾಸ. ಇದು ಅತ್ಯಂತ ಅಪಾಯಕಾರಿ ಯಾಗಿದೆ. ಸ್ವಚ್ಛಂದ ಬೆಳಕು ಹಾಗೂ ಗಾಳಿ ಮನೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಕಾರಿಯಾಗಿದೆ.

4. ಕ್ಷಯರೋಗವು ಪ್ರಾಥಮಿಕವಾಗಿ ಶ್ವಾಸಕೋಶದ ಕಾಯಿಲೆಯಾಗಿದೆ. ಈ ಕಾಯಿಲೆಗೆ ತುತ್ತಾಗುವುದೇ ಮೊದಲು ಶ್ವಾಸಕೋಶ. ಇದರ ಲಕ್ಷಣಗಳೇನೆಂದರೆ, ೧೫ ಅಥವಾ ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು, ಕಫದಲ್ಲಿ ರಕ್ತದ ಗೆರೆಗಳು, ಕಡಿಮೆ ದರ್ಜೆಯ ಜ್ವರ, ಉಸಿರಾಟದ ತೊಂದರೆ ಮತ್ತು ವಿವರಿಸಲಾಗದ ತೂಕ ನಷ್ಟ. ಚರ್ಮದ TB ಅಂದರೆ, ಯಾವುದೇ ಗಾಯ ಬಹಳ ದಿನವಾದರೂ ವಾಸಿಯಾಗದಿರುವುದು, ಚರ್ಮದ ಮೇಲೆ ಹುಣ್ಣಾಗುವುದು, ಬೆನ್ನುಮೂಳೆಯಲ್ಲಿ ಅಗಾಧ ನೋವು ಕಾಣಿಸಿಕೊಳ್ಳುವುದು, ಸಣ್ಣ ಆಗುವುದು, ಹಸಿವಾಗದೇ ಇರುವುದು, ಹೊಟ್ಟೆ ಹಿಗ್ಗುವಿಕೆ, ನಿಶ್ಶಕ್ತಿ ಇತ್ಯಾದಿ. ಈ ಲಕ್ಷಣಗಳು ಕಂಡು ಬಂದರೆ ತಡಮಾಡದೇ ವೈದ್ಯರನ್ನು ಕಾಣಿ.

5. BCG ಲಸಿಕೆ TB ನಿರೋಧವೆನ್ನುವುದು ಕೆಲವರು ನಂಬಿದ್ದಾರೆ. ಆದರೆ ಇದು ಸಂಪೂರ್ಣ ನಿರೋಧಕವಲ್ಲ. ಈಗಾಗಲೇ ಕ್ಷಯರೋಗ ಇರುವರರಿಗೆ ಈ ಲಸಿಕೆ ಕೆಲಸ ಮಾಡುವುದಿಲ್ಲ. ಆದರೆ, ಬಾಲ್ಯದಲ್ಲಿ BCG ಲಸಿಕೆ ಪಡೆಯುವುದು ಉತ್ತಮ. ಇದು ಸೋಂಕಿನ ಅಪಾಯ ವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

6. ಕ್ಷಯರೋಗವು ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆಯಾಗಿದೆ. ಹೌದು, ಔಷಧಿಗಳ ಸಂಪೂರ್ಣ ಕೋರ್ಸ್ ಅನ್ನು ನಿರ್ದೇಶಿಸಿದಂತೆ ಪೂರ್ಣಗೊಳಿಸಿದರೆ ಮತ್ತು ವೈದ್ಯರೊಂದಿಗೆ ನಿಯಮಿತವಾದ ಅನುಸರಣೆಗಳನ್ನು ನಿಗದಿಪಡಿಸಿದರೆ TB ಅನ್ನು ಸಂಪೂರ್ಣವಾಗಿ ಚಿಕಿತ್ಸೆ ನೀಡಬಹುದು. ಭಾರತದಲ್ಲಿ ಟಿಬಿಗೆ ಸೂಕ್ತ ಶಸ್ತ್ರಚಿಕಿತ್ಸೆಗಳಿವೆ. ಇನ್ನು, ಐಸೋನಿಯಾಜಿಡ್, ರಿಫಾಂಪಿಸಿನ್, ಪೈರಾಜಿನಮೈಡ್, ಎಥಾಂಬುಟಾಲ್, ಕ್ಷಯರೋಗಕ್ಕೆ ಚಿಕಿತ್ಸೆ ನೀಡಲು ಬಳಸುವ ಸಾಮಾನ್ಯ ಔಷಧಿಗಳಾಗಿವೆ. ಚಿಕಿತ್ಸೆಯ ಅವಧಿಯು ಬದಲಾಗುತ್ತದೆ ಆದರೆ ಸಾಮಾನ್ಯವಾಗಿ ಕನಿಷ್ಠ ಆರು ತಿಂಗಳವರೆಗೆ ಇರುತ್ತದೆ.

7. ಟಿಬಿ ತಡೆಗಟ್ಟಲು ಸಾಕಷ್ಟು ಕಾರ್ಯಕ್ರಮಗಳಿವೆ. ಆದರೆ, ಸಾಕಷ್ಟು ಜನ ಟಿಬಿ ಔಷಧದ ಸಂಪೂರ್ಣ ಕೋರ್ಸ್ ತೆಗೆದುಕೊಳ್ಳವುದಿಲ್ಲ. ಕೆಲವರು ಅಧಕ್ಕೆ ಔಷಧಿ ನಿಲ್ಲಿಸುತ್ತಾರೆ. ಗುಣವಾಗುವಂತೆ ಭಾಸವಾದರೂ ಕ್ಷಯರೋಗ ಪೂಣವಾಗಿ ವಾಸಿಯಾಗಿರುವುದಿಲ್ಲ. ಹೀಗಾಗಿ ಟಿಬಿಯ ಕೋರ್ಸ್‌ ಪೂರ್ಣ ಗೊಳಿಸುವುದನ್ನು ನಿರ್ಲಕ್ಷಿಸಬೇಡಿ.

8. ಕ್ಷಯರೋಗ ಪ್ರತಿವಷ ೨ ರಿಂದ ೩ ಲಕ್ಷ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಲ್ಲಿ ಶೇ. ೧೩ರಷ್ಟು ಮರು ಚಿಕಿತ್ಸೆಗಾಗಿ ದಾಖಲಾದವರೇ ಹೆಚ್ಚು. ಮರುಚಿಕಿತ್ಸೆಗೆ ಹೆಚ್ಚು ಸಮಯ ಬೇಕಾಗಬಹುದು. ಹೀಗಾಗಿ ಮರುಚಿಕಿತ್ಸೆಗೆ ಒಳಗಾಗುವ ಬದಲು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸದೇ ಮುಂದುವರೆಸುವುದು ಒಳ್ಳೆಯದು.

9. ಮಹಿಳೆಯರಲ್ಲಿ ಟಿಬಿ ಹೆಚ್ಚಾಗಿ ಜನನಾಂಗಕ್ಕೆ ಹರಡುವ ಸಾಧ್ಯತೆ ಹೆಚ್ಚು. ಇದರಿಂದ ಅವರಿಗೆ ಬಂಜೆತನ ಉಂಟಾಗಬಹುದು. ಬಡತನದ ಹಿನ್ನೆಲೆ ಹೊಂದಿರುವ ಸಾಕಷ್ಟು ಜನರಿಗೆ ಬಂಜೆತನಕ್ಕೆ ಕಾರಣವೇ ಟಿಬಿ ಎನ್ನಲಾಗಿದೆ. ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು.

10. ಟಿಬಿ ಮಕ್ಕಳ ಮೇಲೆ, ವಿಶೇಷವಾಗಿ ಶಿಶುಗಳ ಮೇಲೆ ಪರಿಣಾಮ ಬೀ, ಆದರೆ ಬಿರುವ ಸಾಧ್ಯತೆ ಹೆಚ್ಚು ಎಂದು ಡಬ್ಯೂಎಚ್‌ಒ ಹೇಳಿದೆ. ಪ್ರತಿವಷ ವಿಶ್ವದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ನವಜಾತ ಶಿಶುಗಳು ಮತ್ತು ಮಕ್ಕಳು TB ಗೆ ಒಳಗಾಗುತ್ತಾರೆ, 70,000 ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಮೂರು ವರ್ಷದೊಳಗಿನ ಮಕ್ಕಳು ಅನಾರೋಗ್ಯಕ್ಕೆ ಹೆಚ್ಚು ಗುರಿಯಾಗುತ್ತಾರೆ, ಹೀಗಾಗಿ ತಾಯಂದಿರು ಮಕ್ಕಳಿಗೆ ಮರೆಯದೇ ಪ್ರತಿ ೬ ತಿಂಗಳಿಗೊಮ್ಮೆ BCG ನೀಡಬೇಕು. ಜೊತೆಗೆ ಆರು ತಿಂಗಳುಗಳ ಕಾಲ ಎದೆಹಾಲನ್ನು ನೀಡಬೇಕು. ಇದು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.