Sunday, 15th December 2024

ದಾರಿದೀಪೋಕ್ತಿ

ಒಂದು ವರ್ಷದ ಹಿಂದೆ ನೀವು ಎದುರಿಸಿದ ಸಂಕಷ್ಟ ಅಥವಾ ಕಠಿಣ ಸವಾಲು ಇಂದು ನಿಮಗೆ ಸಮಸ್ಯೆಯೂ ಅಲ್ಲ, ಸವಾಲೂ ಅಲ್ಲ. ಅದರ ನೆನಪೂ ನಿಮಗಿರ ಲಿಕ್ಕಿಲ್ಲ. ಹಾಗೆ ಇಂದು ತೀವ್ರವಾಗಿ ಕಾಡುವ ಸಮಸ್ಯೆ ಕೆಲದಿನಗಳ ನಂತರ ತೇಲಿ ಹೋಗಿರುತ್ತದೆ. ಹೀಗಾಗಿ ಇಂದಿನ ಸಮಸ್ಯೆಯಿಂದ ಕುಸಿದು ಹೋಗಬಾರದು.