Monday, 16th September 2024

ಕರೋನಾ ಜಾಗೃತಿ ಅಭಿಯಾನ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ

ಕೇಂದ್ರ ಸರಕಾರ ಅನೇಕ ಅಭಿವೃದ್ಧಿ ಜತೆಗೆ ಅಭಿಯಾನಗಳ ಮೂಲಕವೂ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸ್ವಚ್ಛ ಭಾರತ ಅಭಿಯಾನ. ಇದೀಗ ಕೇಂದ್ರ ಸರಕಾರ ದಿಂದ ಹೊಸದೊಂದು ಜಾಗೃತಿ ಅಭಿಯಾನ ಘೋಷಣೆಯಾಗಿದ್ದು, ಜನತೆಯ ಮೇಲೆ ಪಾಲನೆಯ ಜವಾಬ್ದಾರಿ ಮುಖ್ಯವಾಗಿದೆ.

ಈ ಹಿಂದೆ ಕೇಂದ್ರ ಸರಕಾರ ಜನರ ಸಹಭಾಗಿತ್ವದಲ್ಲಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತೆಯ ಕಾಳಜಿ ಬಗ್ಗೆ ಹೊಸ ಸಂಚಲವನ್ನು ಸೃಷ್ಟಿಸಿತು. ಕೇಂದ್ರ ಸರಕಾರ ಹಾಗೂ ಪ್ರಧಾನಿಯವರ ಸ್ವಚ್ಛತೆಯ ಕಾಳಜಿಗೆ ಮಾರುಹೋದ ಜನತೆ ಪ್ರಧಾನಿ ಯವರ ಪ್ರತಿ ಮಾತುಗಳಿಗೆ, ಭಾಷಣಗಳಿಗೆ ಬಹಳಷ್ಟು ಆದ್ಯತೆ ನೀಡುವಲ್ಲಿ ಆಸಕ್ತಿ ತೋರಿದರು. ನಂತರ ಕರೋನಾ ಸಂಕಷ್ಟ ಕಾಲದಲ್ಲಿ ಲಾಕ್ ಡೌನ್ ಘೋಷಣೆ ವೇಳೆ ಪ್ರಧಾನಿ ಮೋದಿ ಯವರು ಕರೆ ನೀಡಿದ ಜನತಾ ಕರ್ಫ್ಯೂ ಕೂಡ ಯಶಸ್ವಿಯಾಯಿತು. ಈ ಎರಡು ಅಭಿಯಾನಗಳ ಯಶಸ್ಸಿನ ನಂತರ ಇದೀಗ ಮತ್ತೊಂದು ಅಭಿಯಾನಕ್ಕೆ ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ.

ಪ್ರಸ್ತುತ ಸುರಕ್ಷತೆಯ ಪಾಲನೆ ದೃಷ್ಟಿಯಿಂದ ಈ ಅಭಿಯಾನದ ಪಾತ್ರ ಮಹತ್ವವಾಗಿದೆ. ಕರೋನಾ ವೈರಸ್ ಸೋಂಕಿನಿಂದ ಪಾರಾಗುವ ಸಲುವಾಗಿ ಮುಖಗವಸು ಧಾರಣೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ಕೈ ತೊಳೆಯುವ ಕ್ರಮವನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅ.೮ರ ಗುರುವಾರ ಸಾರ್ವಜನಿಕ ಅಭಿಯಾನಕ್ಕೆ ಚಾಲನೆ
ನೀಡಿzರೆ. ಈ ಅಭಿಯಾನಕ್ಕೆ ಕರೋನಾ ಜಾಗೃತಿ ಅಭಿಯಾನ ಎಂದು ಹೆಸರಿಸಲಾಗಿದೆ.

ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ಜನರ ಸಹಭಾಗಿತ್ವದಲ್ಲಿ ಕರೋನಾ ಸೋಂಕಿನಿಂದ ರಕ್ಷಣೆಗಾಗಿ ಮುಖವಾಡ ಗಳನ್ನು ಧರಿಸುವ ಅಭ್ಯಾಸ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿಯಮಿತವಾಗಿ ಕೈ ತೊಳೆಯುವ ಸಲುವಾಗಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಈ ಅಭಿಯಾನವನ್ನು ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ
ದಿಂದ ಪ್ರಾರಂಭಿಸಲಾಗುತ್ತಿದೆ. ಪ್ರತಿಯೊಬ್ಬರೂ ಜಾಗೃತಿ ನಿಯಮಗಳನ್ನು ಪಾಲಿಸುವುದೇ ಅಭಿಯಾನದ ನಿಜವಾದ ಯಶಸ್ಸು.

Leave a Reply

Your email address will not be published. Required fields are marked *