Thursday, 25th July 2024

ಆತಂಕದ ನಡುವೆ ಆಶಾದಾಯಕ ಬೆಳವಣಿಗೆ

ಕರೋನಾ ಪೀಡಿತ ದೇಶಗಳ ಸಾಲಿನಲ್ಲಿ ಭಾರತ ನಂ.1 ಸ್ಥಾನವನ್ನು ತಲುಪುವ ಸಾಧ್ಯತೆ ಕಂಡುಬರುತ್ತಿದೆ ಎಂಬ ಆತಂಕ ಉಂಟಾ ಗಿದೆ. ಇಂಥ ಸಂದರ್ಭದಲ್ಲಿಯೇ ಆಶಾದಾಯಕ ಬೆಳವಣಿಗೆಯೊಂದು ಸಂಭವಿಸಿರುವುದು ಭಾರತದ ಪಾಲಿಗೆ ನಿರಾಳತೆ ಮೂಡಿ ಸಿದೆ.

ಅಕ್ಟೋಬರ್ ಮೊದಲ ವಾರದಲ್ಲಿ ಭಾರತದ ಕರೋನಾ ಸೋಂಕಿತರ ಸಂಖ್ಯೆ 70ಲಕ್ಷಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಇದರಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೈದ್ಯಕೀಯ ಕ್ಷೇತ್ರಕ್ಕೂ ಈ ಬೆಳವಣಿಗೆ ಸವಾಲೊಡ್ಡಿತ್ತು. ಇದೀಗ ಕರೋನಾದಿಂದ ಗುಣಮುಖರಾದವರ ಸಂಖ್ಯೆಯಲ್ಲಿಯೂ ಭಾರತ ವಿಶ್ವದಲ್ಲಿ ನಂ 1 ಸ್ಥಾನ ಪಡೆದುಕೊಂಡಿದೆ ಎಂಬುದು ಸಂತಸದ ಸಂಗತಿ. ಭಾರತದಲ್ಲಿ ಗುಣಮುಖರಾಗಿರುವವರ ಸಂಖ್ಯೆ 42,08,431ಕ್ಕೂ ಹೆಚ್ಚಿದ್ದು, ಈ ವಿಷಯದಲ್ಲಿ ಭಾರತ ಅಮೆರಿಕ ವನ್ನೂ ಮೀರಿಸಿದೆ.

ಭಾರತದ 15 ರಾಜ್ಯಗಳಲ್ಲಿ ಕರೋನಾದಿಂದ ಗುಣಮುಖರಾದವರ ಪ್ರಮಾಣ ಶೇ.90 ರಷ್ಟಿದೆ. ಪ್ರಮುಖವಾಗಿ ಐದು ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಉಳಿದಂತೆ, ಭಾರತದಲ್ಲಿ ಪ್ರಸ್ತುತ ಗುಣಮುಖರಾದವರ ಪ್ರಮಾಣ ಶೇ.80ರಷ್ಟಿದೆ. ಜಗತ್ತಿನಲ್ಲಿ ಗುಣಮುಖರಾದವರಲ್ಲಿ
ಭಾರತದ ಪಾಲು ಶೇ.19. ಈ ಅಂಕಿಅಂಶಗಳನ್ನು ಗಮನಿಸಿದರೆ ಕರೋನಾ ಪೀಡಿತರ ಸಂಖ್ಯೆಯ ಜತೆಗೆ ಗುಣಮುಖರಾಗುತ್ತಿರು ವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿರುವುದು ನಿರಾಳತೆಯನ್ನು ಮೂಡಿಸಿದೆ.

ಸಾವಿನ ಪ್ರಮಾಣವೂ ಸಹ ಶೇ.1.61ಕ್ಕೆ ಇಳಿಕೆಯಾಗಿದೆ. ಕರೋನಾ ನಿವಾರಣೆಯ ನಿಟ್ಟಿನಲ್ಲಿ ಭಾರತಕ್ಕೆ ಈ ಎಲ್ಲ ಬೆಳವಣಿಗೆಗಳು ಆಶಾದಾಯಕವಾಗಿದ್ದು, ವೈದ್ಯಕೀಯ ಕ್ಷೇತ್ರದ ಸಾಮರ್ಥ್ಯಕ್ಕೆ ಸಾಕ್ಷಿ.

Leave a Reply

Your email address will not be published. Required fields are marked *

error: Content is protected !!