Wednesday, 11th December 2024

ಉತ್ತಮ ನಿರ್ಧಾರ

ಒಂದೆಡೆ ದೇಶದಲ್ಲಿ ಲಸಿಕೆ ತಯಾರಿಕೆ ಹಾಗೂ ವಿತರಣೆಯ ಪ್ರಯತ್ನಗಳು ಪ್ರಗತಿಯ ಹಂತದಲ್ಲಿರುವಾಗಲೇ ರಾಜ್ಯ ಸರಕಾರ ದಿಂದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸುತ್ತಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ಕರೋನಾ ನಿರ್ಮೂಲನೆಗಾಗಿ ಲಸಿಕೆ ಪ್ರಯತ್ನಗಳು ಕಡೆಯ ಹಂತದಲ್ಲಿವೆ. ಈ ದಿನಗಳಲ್ಲಿಯೇ ಮತ್ತೊಂದು ಆತಂಕವೂ ಎದು ರಾಗಿದೆ. ಸೆಪ್ಟೆಂಬರ್ ನಲ್ಲಿ ನಡೆಸಲಾದ ಸಮೀಕ್ಷೆ ಪ್ರಕಾರ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ ನಂತರ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಆಗಮಿಸಲಿರುವ ಚಳಿಗಾಲದಲ್ಲಿ ಸೋಂಕು ಮತ್ತಷ್ಟು ಹರಡುವ ಸಾಧ್ಯತೆ ಇರುವ ಕಾರಣದಿಂದಾಗಿ ಜಾಗ್ರತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನದ ಒಂದು ಭಾಗವಾಗಿ ರಾಜ್ಯ ಸರಕಾರವು ಶಾಲಾ – ಕಾಲೇಜುಗಳನ್ನು ಪುನರಾ ರಂಭಿಸುವುದು ಸೂಕ್ತವಲ್ಲ ಎಂಬ ಪ್ರಯತ್ನಕ್ಕೆ ಮುಂದಾಗಿದೆ.

ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸನ್ನು ರಾಜ್ಯ ಸರಕಾರ ಒಪ್ಪಿದೆ. ಶಾಲೆ ಪುನರಾರಂಭಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಮೂರನೇ ವಾರದಲ್ಲಿ ಸಭೆ ನಡೆಸಿ, ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಬೆಂಗಳೂರಿನಲ್ಲಿ ಕಾಲೇಜು ಆರಂಭವಾದ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ದಿನದಲ್ಲಿ ೧೧೭ ವಿದ್ಯಾರ್ಥಿಗಳು ಹಾಗೂ ೫೧ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆರಂಭಿಸಿರುವ ಕಾಲೇಜುಗಳನ್ನು ಚಳಿಗಾಲ ಮುಗಿಯುವವರೆಗೆ ಸ್ಥಗಿತಗೊಳಿಸಬೇಕಾದ ಅವಶ್ಯಕತೆ ಕಂಡುಬರುತ್ತಿದೆ.

ಸೋಂಕಿತರ ಪ್ರಮಾಣದಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದತ್ತ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಮುಂಜಾ ಗ್ರತೆಯ ಕ್ರಮವಾಗಿ ಶಾಲಾ – ಕಾಲೇಜುಗಳನ್ನು ಸ್ಥಗಿತಗೊಳಿಸಿರುವುದು ಮಹತ್ವದ ನಿರ್ಣಯ