Saturday, 21st September 2024

ಸರಕಾರಕ್ಕೆ ಸಂಕಟ

#corona

ಕರೋನಾ 2ನೇ ಅಲೆಯ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಸರಕಾರಕ್ಕೆ ಕಳೆದ ಬಾರಿಗಿಂತ ಹೆಚ್ಚು ಸಂಕಷ್ಟದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳು ಗೋಚರಿಸುತ್ತಿದೆ.

ಕರೋನಾ ಮೊದಲ ಅಲೆ ಹಾಗೂ ಎರಡನೇ ಅಲೆ ನಡುವೆ ಬಹಳಷ್ಟು ವ್ಯತ್ಯಾಸಗಳು ಗೋಚರಿಸುತ್ತಿದೆ. ರಾಜಧಾನಿಯಲ್ಲಿ ಕಳೆದ ಬಾರಿ ಶೇ.0.7ರಷ್ಟಿದ್ದ ಸೋಂಕಿನ ಪ್ರಮಾಣ ಈ ಬಾರಿ ಶೇ.7ಕ್ಕೆ ಏರಿಕೆಯಾಗಿದೆ. ಅಂದರೆ ಸೋಂಕು ಏರಿಕೆ ಪ್ರಮಾಣದಲ್ಲಿ 10 ಪಟ್ಟು ಹೆಚ್ಚಾಗಿದೆ. ಮಕ್ಕಳು ಮತ್ತು ಯುವಕರಲ್ಲಿ ಈ ಬಾರಿ ಸೋಂಕು ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿ. ರಾಜ್ಯ ಸರಕಾರ ಗಳು ಹರಸಾಹಸ ಪಡುತ್ತಿದ್ದು, ಬಹುತೇಕ ಎಲ್ಲಾ ರಾಜ್ಯಗಳೂ ಕಠಿಣ ನಿಯಮಾವಳಿಗಳ ಮೊರೆ ಹೋಗುತ್ತಿವೆ.

ಕರೋನಾ ಮೊದಲ ಅಲೆಯ ಸಂದರ್ಭದಲ್ಲಿ ಜನರಿಗಿದ್ದ ಭಯ ಈಗ ಕ್ಷೀಣಿಸಿದೆ. ಎರಡನೇ ಅಲೆಯ ಗಂಭೀರತೆ ಜನರಿಗೆ ಅರ್ಥ ವಾಗುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಮೇ ತಿಂಗಳ ವೇಳೆಗೆ ಅತ್ಯಂತ ಕಠಿಣ ಸ್ಥಿತಿಗೆ ಹೊರಳಲಿದ್ದೇವೆ ಎಂಬುದು ತಜ್ಞರ ಅಭಿಮತ . ರಾಜಧಾನಿಯಲ್ಲಿ ಕಳೆದ ಬಾರಿ ಶೇ.o.7ರಷ್ಟಿದ್ದ ಸೋಂಕಿನ ಪ್ರಮಾಣ ಈ ಬಾರಿ ಶೇ.7ಕ್ಕೆ, ಅಂದರೆ ಶೇ.10ರಷ್ಟು ಏರಿಕೆ ಯಾಗಿದೆ. ಯುವಕರು ಮತ್ತು ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಇದೊಂದು ಆತಂಕಕಾರಿ ಸಂಗತಿ.

ನಿಯಮಾವಳಿ ಪಾಲನೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಸೋಂಕಿನ ಹೆಚ್ಚಳಕ್ಕೆ ಕಾರಣ. ಕರೋನಾ ನಿಯಂತ್ರಣಕ್ಕೆ ಕಠಿಣ ನಿರ್ಧಾರ ಕೈಗೊಳ್ಳಬೇಕೆನ್ನುವುದು ತಜ್ಞರ ಅಭಿಪ್ರಾಯ. ಆದರೆ ಲಾಕ್‌ಡೌನ್ ಮೊರೆ ಹೋದರೆ ಆರ್ಥಿಕ ಚಟುವಟಿಕೆ ಕುಸಿಯಲಿದೆ ಎಂಬುದು ಮತ್ತೊಂದು ವರ್ಗದವರ ಅನಿಸಿಕೆ. ಇಂಥ ಸಂಕಷ್ಟದ ಪರಿಸ್ಥಿತಿಯನ್ನು ಸರಕಾರ ಹೇಗೆ
ನಿಭಾಯಿಸಲಿದೆ ಎಂಬುದೆ ಪ್ರಸ್ತುತ ಎಲ್ಲರ ಕುತೂಹಲ.