Friday, 20th September 2024

ಉತ್ತರಿಸಲು ಅವಕಾಶ ಬೇಕಲ್ಲ?

ಇತ್ತೀಚಿಗೆ ಸಂಸತ್ ಅಧಿವೇಶನವೇ ಇರಲಿ, ವಿಧಾನಸಭೆ ಅಧಿವೇಶನವೇ ಇರಲಿ ಅಲ್ಲಿ ಚರ್ಚೆಗಿಂತ ಹೆಚ್ಚು ಗದ್ದಲ, ಗಲಾಟೆ, ಪ್ರತಿಪಕ್ಷಗಳ ಕೂಗಾಟ, ವಾಕ್ಸಮರ ಸಾಮಾನ್ಯವಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಈ ಅಽವೇಶನದ ಪ್ರತಿ ನಿಮಿಷವೂ ಮುಖ್ಯವಾಗಿರುತ್ತದೆ ಎನ್ನುವುದನ್ನು ಮರೆತು ಜನಪ್ರತಿನಿಽಗಳು ವರ್ತಿಸುವುದನ್ನು ಕಾಣುತ್ತಿದ್ದೇವೆ.

ಸೋಮವಾರ ಆರಂಭವಾದ ಸಂಸತ್ ಅಧಿವೇಶನದ ಮೊದಲ ದಿನವೂ ಇದೇ ರೀತಿಯ ಸನ್ನಿವೇಶ ಸೃಷ್ಟಿಯಾಗಿ, ಉಭಯ ಕಲಾಪವನ್ನು ಬರ್ಖಾಸ್ತುಗೊಳಿಸು ವಂತಾಯಿತು. ಇದು ಹೊಸದೇನೂ ಅಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷದ ನಾಯಕರಿಗೆ ಈ ಗದ್ದಲದ ನಡುವೆಯೇ ಒಂದು ಮಾತನ್ನು ಹೇಳಿದ್ದಾರೆ. ಅದೇನೇಂದರೆ, ‘ಪ್ರತಿಪಕ್ಷದಲ್ಲಿರುವವರು ಕಷ್ಟದ ಪ್ರಶ್ನೆಗಳನ್ನು ಕೇಳಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಆ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ನಮಗೂ ಅವಕಾಶ ಕೊಡಿ. ಆಗ ದೇಶದ ಜನರಿಗೆ ನಂಬಿಕೆ ಬರುತ್ತದೆ’ ಎಂದಿದ್ದಾರೆ.

ಪ್ರತಿಪಕ್ಷಗಳು ಕೇವಲ ಸರಕಾರದ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ, ಸರಕಾರಕ್ಕೆ ಉತ್ತರಿಸಲು ಬಿಡದೇ, ಇತರ ಕಾರ್ಯ ಕಲಾಪಗಳಿಗೂ ಅವಕಾಶ ನೀಡದೇ ಸಮಯ ವ್ಯರ್ಥ ಮಾಡುವುದರಿಂದ ಸಾಽಸುವುದಾದರೂ ಏನು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ಉತ್ತಮ. ಆದರೆ ಬೊಟ್ಟು ಮಾಡಿ, ಸದನದಿಂದ ಎದ್ದು ಹೋಗುವುದು ಅಥವಾ ಸದನ ನಡೆಯದಂತೆ ನೋಡಿಕೊ ಳ್ಳುವುದು ಸರಿಯಲ್ಲ. ಬದಲಿಗೆ ಪ್ರತಿಪಕ್ಷವಾಗಿ ಎತ್ತಿರುವ ಪ್ರಶ್ನೆಗೆ ಆಡಳಿತದಲ್ಲಿರು ವವರು ಸಮರ್ಪಕ ಉತ್ತರ ನೀಡುವ ತನಕ ವಿಷಯವನ್ನು ಜೀವಂತ ವಾಗಿಡಬೇಕು. ಈ ನಿಟ್ಟಿನಲ್ಲಿ ಪ್ರತಿ ಪಕ್ಷಗಳು ಕೆಲಸ ಮಾಡುವಂತಾಗಲಿ.