Friday, 22nd November 2024

ಅವೈಜ್ಞಾನಿಕ ಸಂಘರ್ಷ

ಪ್ರತಿ ಬಾರಿ ಗಣರಾಜ್ಯೊತ್ಸವದ ಸಂಭ್ರಮಕ್ಕೆ ಕಾರಣವಾಗುತ್ತಿದ್ದ ದೆಹಲಿ ಇದೀಗ ಸಂಘರ್ಷಕ್ಕೆ ಕಾರಣವಾಗಿರುವುದು ದುರಂತ.

ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ವೇಳೆ ರೈತನೋರ್ವ ಮೃತಪಟ್ಟಿದ್ದು, ಕೆಲ ಪೊಲೀಸರೂ ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವದ ಸಂಭ್ರಮದ ದಿನವಾದ ಮಂಗಳವಾರಕ್ಕೆ ರೈತರ ಪ್ರತಿಭಟನೆ 65ನೇ ದಿನ ಪೂರೈಸಿ ರುವುದಲ್ಲದೆ ಸಂಘರ್ಷಕ್ಕೆ ಕಾರಣವಾಗಿದೆ.

ರೈತರು ಹಾಗೂ ಸರಕಾರದ ನಡುವೆ ಏರ್ಪಟ್ಟಿರುವ ಸಂಘರ್ಷ ನಿವಾರಣೆಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದರೂ, ಸಮಸ್ಯೆ ಮುಂದುವರಿದಿರುವುದು ವಿಪರ್ಯಾಸದ ಸಂಗತಿ. ಇಷ್ಟೊಂದು ಪ್ರಮಾಣದಲ್ಲಿ ರೈತರು ಒಗ್ಗೂಡಿರುವುದರಿಂದ ರೈತ ಸಂಘಟನೆಗಳಿಗೆ ಬಲಬಂದಂತಾಗಿರುವುದು ರೈತರ ಶಕ್ತಿಯನ್ನು ಪ್ರತಿಬಿಂಬಿಸಬಹುದಾದರೂ ಸಂಘರ್ಷದ ಹಾದಿಯೇ ಪರಿಹಾರದ ಮಾರ್ಗವಲ್ಲ.

ಈ ಘಟನೆ ಬಗ್ಗೆ ರೈತ ಸಂಘಟನೆಗಳು, ರಾಜಕೀಯ ಮುಖಂಡರು ನಾನಾ ರೀತಿಯಾಗಿ ವ್ಯಾಖ್ಯಾನಿಸುತ್ತಿದ್ದರೂ ಗಣರಾಜ್ಯೋತ್ಸವ ದಂಥ ಮಹತ್ವದ ದಿನದಂದು ದುರ್ಘಟನೆ ಸಂಭವಿಸಿರುವುದು ಅಸಂವಿಧಾನಿಕ ವಿಧಾನ. ಕಾಯಿದೆ ಹಿಂಪಡೆಯುವ ವಿಚಾರ ದಲ್ಲಿನ ನಿಲುವುಗಳು ಪ್ರಶ್ನಾತೀತ. ಈ ಕಾರಣದಿಂದಾಗಿಯೇ ಸುಪ್ರೀಂ ಕೋರ್ಟ್ ಸಹ ಸಮಿತಿ ರಚನೆಗೆ ಸೂಚನೆ ನೀಡಿದೆ. ಆದರೂ ಸಂಘರ್ಷ ಏರ್ಪಟ್ಟಿರುವುದು ಅವೈಜ್ಞಾನಿಕ ಬೆಳವಣಿಗೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಲವರ ಹೇಳಿಕೆಗಳ ನಡುವೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೇಳಿಕೆ ಮಹತ್ವ ವೆನಿಸುತ್ತದೆ. ರೈತರ ಹಿತಾಸಕ್ತಿಗೆ ಕೇಂದ್ರ ಸರಕಾರ ಆದ್ಯತೆ ನೀಡಿದ್ದು, ತಪ್ಪು ಗ್ರಹಿಕೆಯ ಕಾರಣದಿಂದ ಈ ರೀತಿ ಬೆಳವಣಿಗೆ
ಸಂಭವಿಸಿದೆ. ದೇಶದ ಮಹತ್ವದ ಆಚರಣೆಗಳಿಗೆ ಸಾಕ್ಷಿಯಾಗಿದ್ದ ಕೆಂಪುಕೋಟೆ ರೈತರ ಸಂಘರ್ಷಕ್ಕೆ ಕಾರಣವಾಗಿದ್ದು, ದೇಶದ ದುರಂತ ಸಂಗತಿ.