Saturday, 21st September 2024

ಮಾದರಿಯಾದ ಉತ್ತರಾಖಂಡದ ನಡೆ

ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಅಗ್ರಸ್ಥಾನ. ದೇವಾಲಯಗಳು ಶ್ರದ್ಧೆ, ಭಕ್ತಿಯ ಕೇಂದ್ರಗಳಾಗಿರುವುದರ ಜತೆಗೆ
ಅಧ್ಯಾತ್ಮದ ಮೂಲಕ ಜನರ ಮಾನಸಿಕ ಆರೋಗ್ಯ ಕಾಪಾಡುವ ಮಹತ್ವದ ತಾಣಗಳು. ದೇವಾಲಯಗಳು ಎಂದಿಗೂ ಭಕ್ತರಿಗೆ ಮುಕ್ತವಾಗಿರಬೇಕು.

ಇದಕ್ಕೆ ದೇವಾಲಯಗಳು ಭಕ್ತರ ಆಡಳಿತದಲ್ಲೇ ಸಾಗಬೇಕು. ಆದರೆ ಇತ್ತೀಚೆಗೆ ಸರಕಾರಗಳು ದೇವಾಲಯಗಳ ಮೇಲೆ ನಿಯಂತ್ರಣ
ಹೇರುವ ಸ್ಥಿತಿ ಕಂಡಬರುತ್ತಿದೆ. ಈ ಬೆಳವಣಿಗೆ ಸಹಿಸಲು ಅಸಾಧ್ಯ. ಈ ಕಾರಣದಿಂದಾಗಿ ಈಗಾಗಲೇ ವಿರೋಧಗಳೂ ವ್ಯಕ್ತವಾಗತೊಡಗಿವೆ.

ತಮಿಳುನಾಡಿನ ದೇವಾಲಯಗಳನ್ನು ಉಳಿಸುವಂತೆ ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್ ಸೇರಿದಂತೆ ಹಲವರಿಂದ ಆಂದೋಲನಗಳು ಆರಂಭಗೊಂಡಿವೆ. ರಾಜ್ಯದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಗೊಳ್ಳುತ್ತಿರುವುದು ಮತ್ತಷ್ಟು ಕಳವಳಕಾರಿ ಸಂಗತಿ. ಈ ವೇಳೆ ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಪ್ರಕಟಪಡಿಸಿರುವ ನಿರ್ಧಾರ ಇತರ ರಾಜ್ಯಗಳಿಗೂ ಮಾದರಿಯಾಗಿದೆ.

ಉತ್ತರಾಖಂಡದ ಮುಜರಾಯಿ ಇಲಾಖೆಯ ಅಧೀನದಲ್ಲಿದ್ದ 51 ಹಿಂದು ದೇವಾಲಯಗಳನ್ನು ಮುಕ್ತಗೊಳಿಸಿ ಆದೇಶ ನೀಡಿzರೆ. ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸುವ ಅಭಿಯಾನಕ್ಕೆ ಉತ್ತರಾಖಂಡ ಸರಕಾರ ಮೊದಲ ಹೆಜ್ಜೆ ಯನ್ನಿರಿಸಿದೆ. ಇದೀಗ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ವಿವಿಧ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತ ಗೊಳಿಸಬೇಕು ಎಂಬ ಅಭಿಯಾನ ಆರಂಭವಾಗಿದೆ. ಈ ವೇಳೆ ಉತ್ತರಾಖಂಡದ ನಡೆಯನ್ನು ಇತರ ರಾಜ್ಯಗಳು ಅನುಸ ರಿಸುವ ಮೂಲಕ ಭಕ್ತರ ಆಗ್ರಹಕ್ಕೆ ಮನ್ನಣೆ ನೀಡಬೇಕಿರುವ ಅವಶ್ಯಕತೆ ಕಂಡುಬರುತ್ತಿದೆ.