Thursday, 24th October 2024

Vishwavani Editorial: ಆರ್‌ಬಿಐ ಬಡ್ಡಿದರ ಇಳಿಸಬೇಕಿತ್ತು

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ದ್ವೈಮಾಸಿಕ ಸಭೆಯಲ್ಲಿ ರೆಪೋ ದರವನ್ನು ಶೇ. 6.5ರಲ್ಲಿಯೇ ಮುಂದು ವರಿಸಲು ನಿರ್ಧರಿಸಿದೆ. ಇದರಿಂದ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಪಡೆದ ಗ್ರಾಹಕರಿಗೆ ನಿರಾಶೆಯಾಗಿದೆ. ಕಳೆದ ವರ್ಷದ ಡಿಸೆಂಬರ್‌ನಿಂದ ಚಿಲ್ಲರೆ ಹಣದುಬ್ಬರವು ಸತತ ಇಳಿಕೆ ಕಂಡಿದೆ. ಇದು ಆರ್‌ಬಿಐ ನಿಗದಿಪಡಿಸಿದ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕ ಸೆಂಟ್ರಲ್ ಬ್ಯಾಂಕ್ ಕೂಡ ಬಡ್ಡಿ ದರವನ್ನು 50 ಬಿಪಿಎಸ್ ಪಾಯಿಂಟ್‌ ಗಳಷ್ಟು ಇಳಿಸಿತ್ತು. ಮುಂದಿನ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕೂಡ ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಈ ತಿಂಗಳು ಆರ್‌ಬಿಐ ಕೂಡ ಬಡ್ಡಿ ದರವನ್ನು ಇಳಿಸಬಹುದು ಎಂಬ ನಿರೀಕ್ಷೆ ಗ್ರಾಹಕರಲ್ಲಿತ್ತು. ಆದರೆ ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಇರಿಸುವ ಮೂಲಕ ಆರ್‌ಬಿಐ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಹಿಂಜರಿತ ಮತ್ತು ಯುದ್ಧದ ವಾತಾವರಣದ ನಡುವೆ ಭಾರತದ ಜಿಡಿಪಿ ಶೇ. ೭ರಷ್ಟು ಪ್ರಗತಿ ದಾಖಲಿಸಿದೆ. ಮುಂದಿನ ವರ್ಷವೂ ಈ ಪ್ರಮಾಣದ ಬೆಳವಣಿಗೆ ನಿರೀಕ್ಷಿಸಲಾಗಿದೆ. ಗ್ರಾಹಕ ಹಣದುಬ್ಬರ ಸೂಚ್ಯಂಕದ ಪ್ರಕಾರ ಪ್ರಸಕ್ತ ವರ್ಷದ ಹಣದುಬ್ಬರ ಪ್ರಮಾಣ ಶೇಕಡ 4.5 ಎಂದು ಅಂದಾಜಿ ಸಲಾಗಿದೆ. ಈ ಅಂಕಿ ಅಂಶಗಳು ಬಡ್ಡಿದರ ಇಳಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದರೂ ಇಸ್ರೇಲ್- ಇರಾನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿಕೆಯಾಗಿರುವುದು ಹಣದುಬ್ಬರ ಏರುವ ಆತಂಕ ಮೂಡಿಸಿದೆ.

ಇಸ್ರೇಲ್ ಭಾರತದ ಎರಡನೇ ಪ್ರಮುಖ ರಫ್ತುದಾರ ರಾಷ್ಟ್ರವಾಗಿದ್ದು , ಮಧ್ಯಪ್ರಾಚ್ಯ ಬಿಕ್ಕಟ್ಟು ನಮ್ಮ ರಫ್ತಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಏನೇ ಆದರೂ ಆರ್‌ಬಿಐ, ಅಮೆರಿಕ ಸೆಂಟ್ರಲ್ ಬ್ಯಾಂಕ್ ಮಾದರಿಯಲ್ಲಿ ರೆಪೋ ದರ ಇಳಿಸುವ ಧೈರ್ಯ ಮಾಡಿ ದ್ದರೆ ರಾಷ್ಟ್ರ ದಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿತ್ತು. ಮುಖ್ಯವಾಗಿ ಮನೆ ಕಟ್ಟುವ ಕನಸು ಕಾಣುತ್ತಿದ್ದವರಿಗೆ ಬಡ್ಡಿದರ ಇಳಿಕೆಯಿಂದ ಉತ್ತೇಜನ ಸಿಕ್ಕಂತಾಗುತ್ತಿತ್ತು. ತಳ ಕಚ್ಚಿರುವ ರಿಯಲ್ 5000ರಿಂದ 10000 ರು.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅಂಗೀಕರಿ ಸಿರುವುದು ಸ್ವಾಗ ತಾರ್ಹ. ನಗದು ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದ್ದು, ಡಿಜಿಟಲ್ ಇಂಡಿಯಾದ ನಡೆಗೆ ಪೂರಕವಾಗಲಿದೆ.

ಇದನ್ನೂ ಓದಿ: RBI MPC Meet October 2024: ರೆಪೋ ದರ ಯಥಾಸ್ಥಿತಿ; ಗೃಹಸಾಲದ ಇಎಂಐ ಇಳಿಕೆ ಇಲ್ಲ