Wednesday, 19th June 2024

ಚೆನ್ನೈಗೆ ಗೆಲ್ಲಲು 142 ರನ್‌ ಗುರಿ

ಚೆನ್ನೈ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್ ಗಳಿಸಿತು.

ಚೆನ್ನೈನ ಅಸಾಧಾರಣ ಬೌಲಿಂಗಿಗೆ ರಾಜಸ್ಥಾನ ತಂಡದಲ್ಲಿ ಒಂದೇ ಒಂದು ಅರ್ಧಶತಕ ಬರಲಿಲ್ಲ. ಮಧ್ಯಮ ಕ್ರಮಾಂಕದ ರಿಯಾನ್ ಪರಾಗ್ ಅತ್ಯಧಿಕ

47 ರನ್‌ ಬಾರಿಸಿದರು.  ಅವರ ಇನ್ನಿಂಗ್ಸ್ ನಲ್ಲಿ ಮೂರು ಸಿಕ್ಸರ್‌ ಒಳಗೊಂಡಿತ್ತು. ಸ್ಯಾಮ್ಸನ್‌ ನಾಯಕನ ಆಟವಾಡಲು ವಿಫಲರಾದರು. ಚೆನ್ನೈ ಪರ ವೇಗಿ ಸಿಮ್ರನ್ ಜಿತ್ ಸಿಂಗ್ ಮೂರು ವಿಕೆಟ್ ಹಾಗೂ ತುಷಾರ್‌ ಎರಡು ವಿಕೆಟ್ ಕಿತ್ತರು. ಚೆನ್ನೈ ಪ್ರತಿಯೊಬ್ಬ ಬೌಲರು ನಿಯಂತ್ರಿತ ಬೌಲಿಂಗ್ ಮಾಡಿ, ರಾಜಸ್ಥಾನ ಬ್ಯಾಟ್ಸ್ ಮನ್‌ ಗಳನ್ನು ನಿಯಂತ್ರಿಸಿದರು.
ಇನ್ನೊಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದರೆ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಆದರೆ ಆರ್​ಸಿಬಿ ಪಾಲಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಗೆಲ್ಲಬೇಕಿದೆ.

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಅಧಿಕೃತವಾಗಿ ಪ್ಲೇಆಫ್​​ಗೆ ಎಂಟ್ರಿ ಕೊಡಲಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಪ್ಲೇಆಫ್ ಹಂತಕ್ಕೇರುವ ಹಾದಿ ಸುಗಮವಾಗಲಿದೆ. ಇದೇ ಪಂದ್ಯದ ಫಲಿತಾಂಶ ಆರ್​ಸಿಬಿ ತಂಡದ ಪ್ಲೇಆಫ್ ಕನಸನ್ನು ಕೂಡ ನಿರ್ಧರಿಸಲಿದೆ.

ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್​ಸಿಬಿ ತಂಡದ ಪಾಯಿಂಟ್ಸ್ ಸಮಗೊಳ್ಳಲಿದೆ. ಹೀಗೆ ಪಾಯಿಂಟ್ಸ್ ಸಮಗೊಂಡರೆ ಆರ್​ಸಿಬಿ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೇರುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುವುದನ್ನು ಆರ್​ಸಿಬಿ ಎದುರು ನೋಡಲಿದೆ.

ಒಂದು ವೇಳೆ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ, ಪ್ಲೇಆಫ್ ಹಂತಕ್ಕೇರಲು ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ನಾಕೌಟ್ ಪಂದ್ಯ ನಡೆಯಬಹುದು. ಅಂದರೆ ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿ 12 ಅಂಕಗಳನ್ನು ಪಡೆದುಕೊಂಡರೆ, ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎದುರಿಸಲಿದೆ. ಇದರಿಂದ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ಪ್ಲೇಆಫ್ ಎಂಟ್ರಿ ಫೈಟ್ ಕಂಡು ಬರಲಿದೆ.

Leave a Reply

Your email address will not be published. Required fields are marked *

error: Content is protected !!