Thursday, 18th July 2024

ಅಯ್ಯೋ ಪಾಪವೆಂದರೆ ಪಾಪವೇ ಸುತ್ತಿಕೊಳ್ಳುವುದು

ಗಂಗಾವತಿ ಪ್ರಾಣೇಶ್

ಅಯ್ಯೋಪಾಪ, ಪಾಪದವನು ಕಣ್ರಿಿ, ಪಾಪ ಬಡಪಾಯಿ ಕಣ್ರಿ ಇವೆಲ್ಲ ಕರುಣೆ, ಮಾನವೀಯತೆಗಳಿಂದ ಮಿಡಿಯುವಾಗ ಬಾಯಿಂದ ಬರುವ ಶಬ್ದಗಳು. ಹಳೆ ಮೈಸೂರು ಕಡೆಗೆ ‘ಪಾಪದವನು ಕಣ್ರಿ’ ಎಂದರೆ, ತುಂಬಾ ಒಳ್ಳೆಯವನು ಎಂದರ್ಥ. ನಮ್ಮ ಉತ್ತರ ಕರ್ನಾಟಕದ ಕಡೆ ಪಾಪದವರು ಎಂದರೆ, ಘೋರ ಪಾಪ ಮಾಡಿದವನು ಎಂದೇ ಅರ್ಥ. ‘ನೀವ್ಯಾಾರೂ ನನಗೆ ಪಾಪ ಎನ್ನಬೇಡಿ, ಬಂದದ್ದನ್ನು ಅನುಭವಿಸುತ್ತೇನೆ. ನನ್ನ ಪಾಪ ನನ್ನ ಸುತ್ತ’ ಎಂದು ಪಾಪ ಮಾಡಿದ್ದರೂ ಧೈರ್ಯದಿಂದ ಅದನ್ನು ಎದುರಿಸುವವರೂ ಇದ್ದಾಾರೆ ನಮ್ಮ ಕಡೆ. ‘ನೀಯಾರಲೇ ನನಗ ಪಾಪ ಅನ್ನುವವ’ ಎಂದು ಮೇಲೇರಿ ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ‘ಪಾಪ’ ಎಂದರೆ, ಸಣ್ಣ ಮಗುವನ್ನು ಕರೆಯುವುದರಿಂದ ಹಿಡಿದು ಕೊಲೆ, ಸುಲಿಗೆ, ಅತ್ಯಾಾಚಾರಗಳು, ಅಧಿಕಾರ ಹಿಡಿಯಲು ಪಕ್ಷ ಕಟ್ಟುವುದು, ಸಿಗದಾಗ ಅದನ್ನೇ ಒಡೆಯುವವರೆಗೆ ಮಾಡುವ ಎಲ್ಲವೂ ಪಾಪಗಳೇ.

ಒಂದಾನೊಂದು ಕಾಲದಲ್ಲಿ ಪುಣ್ಯಭೂಮಿ ಎನಿಸಿಕೊಂಡಿದ್ದ ಈ ಭಾರತವು ಈಗ ಪಾಪ ಭೂಮಿ ಎನಿಸಿಕೊಂಡಿದೆ. ನಾನೀಗ ಬರೆಯಲು ಹೊರಟಿರುವುದು ಮಾಡುವ ಪಾಪಗಳ ಬಗ್ಗೆ ಅಲ್ಲ, ಆಡುವ ಶಬ್ದ ಪಾಪ ಎಂಬುವುದರ ಬಗ್ಗೆ. ಹತ್ತು ನಿಮಿಷಗಳ ಮಾತಿನಲ್ಲಿ ಎಪ್ಪತ್ತು ಸಲ ಪಾಪ, ಪಾಪ ಎನ್ನುವ ಆಸಾಮಿ ಎಂದರೆ ನನ್ನ ಹಾಸ್ಯ ಲೇಖನಗಳ ಸ್ಫೂರ್ತಿ ಪುರುಷ, ಶಿಷ್ಯ, ಆಗಾಗ ಸ್ನೇಹಿತ, ಬುದ್ಧಿಿ ಕಲಿಸುವ ಗುರು, ನರಸಿಂಹ ಜೋಶಿ.

ಜೋಶಿ ಮಾತನಾಡುವ ಯಾವ ವಿಷಯವಿದ್ದರೂ ಅದರಲ್ಲಿ ‘ಪಾಪ’ ಎಂಬ ಎರಡಕ್ಷರದ ಶಬ್ದ ಬರಲೇಬೇಕು, ಬರುತ್ತದೆ ಕೂಡಾ. ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ಪಾಪ ಎಂಬ ಪದ ಬಳಸಿಯೇ ಮಾತನಾಡುತ್ತಾಾನೆ. ದೇವೇಗೌಡರ ರಾಜಕೀಯಕ್ಕೂ ಈ ಶಬ್ದ ಬಳಸುತ್ತಾಾನೆ. ‘ಪಾಪ ದೇವೇಗೌಡರು ಎಷ್ಟು ಕಷ್ಟಪಟ್ಟರೂ, ಕುಮಾರಸ್ವಾಮಿ ಮುಖ್ಯಮಂತ್ರಿ ಪಟ್ಟ ಕಳ್ಕೊೊಂಡ ನೋಡ್ರಿಿ’ ಎನ್ನುತ್ತಾಾನೆ. ಪಾಪ ರಾಹುಲ್ ಗಾಂಧಿ ಪ್ರಧಾನಿ ಆಗಲೇ ಇಲ್ಲ ನೋಡ್ರಿ, ಪಾಪ, ಮೋದಿ ಪ್ರಧಾನಿ ಆಗಿ ಬಿಟ್ಟರು ನೋಡ್ರಿಿ, ಪಾಪ, 370 ಆರ್ಟಿಕಲ್ ರದ್ಧಾಾಗಿಯೇ ಹೋಯಿತು ನೋಡ್ರಿಿ’ ಎಂದೇ ಅನ್ನುತ್ತಾನೆ.

ಅವರು ಸತ್ತರಂತೆ ನೋಡ್ರಿಿ ಪಾಪ ಅನ್ನುವುದು ಓಕೆ. ಆದರೆ, ಅವನಿಗೆ ಎಷ್ಟು ಸಣ್ಣ ವಯಸ್ಸಿಿಗೇ ಕನ್ಯಾಾ ಸಿಕ್ಕು. ಎಷ್ಟು ಬೇಗ ಲಗ್ನ ಆತು ನೋಡ್ರಿಿ ಪಾಪ! ಎಂದರೆ ಕೇಳುವವರಿಗೂ, ಆ ಹುಡುಗನಿಗೂ ಹೇಗಾಗ ಬೇಡ? ಸಾವಿರ ಬಾರಿ ಹೇಳಿದ್ದೀನಿ, ‘ಜೋಶಿ ಹಾಗೆ ಎಲ್ಲದಕ್ಕೂ ಪಾಪ ಅನ್ನಬಾರದು’ ಅಂತ. ಉಹೂಂ, ಅದು ಆತನ ಕಿವಿಯೊಳಗೇ ಇಳಿದುದನ್ನು ನಾನು ಕಾಣೆ. ಆತ ಉದ್ದೇಶ ಪೂರ್ವಕವಾಗಿಯೂ ಅದನ್ನು ಅನ್ನುವುದಿಲ್ಲ ಪಾಪ, ಅನಾಯಾಸವಾಗಿ ಅದೇ ಬಂದು ಬಿಡುತ್ತದೆ.

ನೋಡಿದಿರಾ? ಆತನ ಬಗ್ಗೆೆ ಲೇಖನ ಬರೆಯುತ್ತಿರುವ ನನಗೂ ಅದು ಬಂದೇ ಬಿಟ್ಟಿಿತು. ಜೋಶಿ, ಬಾಲ್ಯದಿಂದಲೂ ಅಮಾಯಕತೆ, ಮುಗ್ಧತೆಯಿಂದ ಬೆಳೆದಾತ. ಆತನಿಗೂ ಎಲ್ಲರೂ ‘ಪಾಪ ನಮ್ಮ ನರಸಿಂಹ, ಪಾಪ ಒಳ್ಳೆೆ ಹುಡುಗ, ಪಾಪ ನಮ್ಮ ಜೋಶಿ ಅಂತ ಅಂದು ಅಂದು, ಉಣಿಸಿ, ತಿನಿಸಿ, ಬೆಳಿಸಿದ್ದರಿಂದಲೇ ಆತನಿಗೂ ತಾನು ಎಲ್ಲರಿಗೂ ಪಾಪ ಎನ್ನಬೇಕು ಎಂಬ ಪುಣ್ಯ ಬುದ್ಧಿಿ ಬಂದಿದೆ ಎನಿಸುತ್ತದೆ. ‘ಎಲ್ಲಿಗೆ ಹೊರಟೆ ಜೋಶಿ..?’ ಎಂದರೂ ಸಾಕು, ‘ಪಾಪ ದೇವರ ಗುಡಿಗೆ ಹೋಗಿಬರ್ತಿಿನ್ರಿಿ’ ಎಂದೇ ಅನ್ನುತ್ತಾಾನೆ. ‘ಪಾಪ ನಮ್ಮಪ್ಪ ಕರಿಯಾಕ ಹತ್ತ್ಯಾಾನಂತ ಯಾರೋ ಬಂದು ಹೇಳಿದ ಕೂಡಲೇ ಮಾಸ್ತರ್ರು ನನ್ನ ಸಾಲಿಯಿಂದ ಮನಿಗೆ ಕಳಿಸಿದರ್ರಿಿ’ ಪಾಪ ಎಂದೇ ಕರೆದ ತಂದೆಗೆ, ಕಳಿಸಿದ ಮಾಸ್ತರ್ರಿಿಗೆ ಕೂಡಿಯೇ ಪಾಪ ಪ್ರಜ್ಞೆ ಅಂಟಿಸಿ ಬಿಡುತ್ತಿದ್ದ.

ಇತ್ತೀಚೆಗೆ ಯಾರಿಗೋ ನನ್ನನ್ನು ಪರಿಚಯಿಸುವಾಗ, ‘ಸರ್, ಇವರು ಪಾಪ ನಮ್ಮ ಗುರುಗಳು’ ಎಂದೇ ಪರಿಚಯಿಸಿ ಬಿಟ್ಟ. ಯಾವ ಗಂಭೀರ ವಿಷಯವಿರಲಿ, ಚರ್ಚೆ ಇರಲಿ, ದೇವರು, ಧರ್ಮ, ಜಾತಿ ಇರಲಿ, ಅದರ ಬಗ್ಗೆೆ ಮಾತನಾಡುವಾಗ ಪಾಪ ಶಬ್ದ ಬರದಿದ್ದರೆ ಜೋಶಿಗೆ ಮಾತೇ ಹೊರಡುವುದಿಲ್ಲ. ‘ಸೂರ್ಯೋದಯ, ಸೂಯಾಸ್ತಗಳು ದೇವರ ದಯ ಕಾಣಾ’ ಎಂಬ ಕವಿನುಡಿಯನ್ನೂ ಈತ ಪಾಪ ಸೂರ್ಯೋದಯ, ಸೂರ್ಯಾಸ್ತಗಳು ದೇವರ ದಯ ಕಾಣಾ ಪಾಪ’ ಎಂದೇ ಪೂರ್ಣಗೊಳಿಸುತ್ತಾನೆ.

ಜೋಶಿಯಂತೆಯೇ ಈ ದೇಶದ ಜನರೆಲ್ಲ ಪಾಪ ಪಾಪ ಎಂದು ಕನಿಕರಿಸಿ, ಗೌರವಿಸಿ ಭಕ್ತಿಿಯಿಂದ ಈ ದೇಶ ಸ್ವಾಾತಂತ್ರ್ಯ ಸಿಕ್ಕು 70 ವರ್ಷವಾದರೂ ಕಾಂಗ್ರೆೆಸ್ ಕೈಯಲ್ಲಿ, ಅದರಲ್ಲೂ ನೆಹರೂ ಮನೆತನದ ಕೈಗೆ ಸಿಕ್ಕು ನೆಹರೂ ಫ್ಯಾಾಮಿಲಿಯಲ್ಲಿ ಹುಟ್ಟಿಿದ ನಾಯಿ ಮರಿಯೂ ಈ ದೇಶವನ್ನು ಆಳುವ ಸೌಭಾಗ್ಯವನ್ನು ಪಡೆಯುವಂತಾಗಿತ್ತು. ಸ್ವಾಾತಂತ್ರ್ಯ ಹೋರಾಟಗಾರರೆಲ್ಲ ಜೈಲು ಸೇರಿ ಪಡಬಾರದ ಕಷ್ಟ ಪಡುತ್ತಿಿದ್ದರೆ ನೆಹರೂ ಮಾತ್ರ ಜೈಲಿನಲ್ಲಿ ಹಾಯಾಗಿ ಫ್ಯಾಾನಿನ ಗಾಳಿಗೆ ಮೈಯೊಡ್ಡಿಿ ಮಗಳಿಗೆ ಪತ್ರ ಬರೆಯುತ್ತಿಿದ್ದರು. ಆಕಳು ಕರುವನ್ನು ಚುನಾವಣೆ ಚಿಹ್ನೆೆಯಾಗಿಟ್ಟುಕೊಂಡು ಅವರ ಮಗಳು ಇಂದಿರಾ ಗಾಂಧಿ ಹತ್ತಾಾರು ವರ್ಷ ಗೆದ್ದು ಬಂದಳು. ಚಿತ್ರದಲ್ಲಿರುವ ಚುನಾವಣೆ ಚಿಹ್ನೆೆಗಳಾದ ಆಕಳು ಕರುಗಳನ್ನು ಕಣ್ಣಿಿಗೊತ್ತಿಿಕೊಳ್ಳುತ್ತಿಿದ್ದ ನಮ್ಮ ಜನ ಅವರ ಸರಕಾರದಲ್ಲಿಯೇ ನಿಜವಾದ ಆಕಳು, ಕರುಗಳನ್ನು ದಿನ ನಿತ್ಯ ಕಡಿದು ಉರುಳಿಸುವುದನ್ನು ಪತ್ರಿಿಕೆಗಳಲ್ಲಿ ಓದಲಿಲ್ಲ, ರೇಡಿಯೋಗಳಲ್ಲಿ ಕೇಳಲಿಲ್ಲ, ಇವೆಲ್ಲ ಅವರ ಕೈಗೊಂಬೆ ವಸ್ತುಗಳಾಗಿದ್ದವು.

‘ದೇಶಕ್ಕಾಗಿ ಗಂಡನ್ನ ಬಿಟ್ಟಾಳ ಪಾಪ’ ಅಂತ ಇಂದಿರಾಗಾಂಧಿಯನ್ನೇ ಆರಿಸಿದರು. ಸ್ವತಃ ಇಂದಿರಾ ಗಾಂಧಿಯೇ ಗುಂಡೇಟಿಗೆ ಸಿಕ್ಕು ಸತ್ತಾಾಗ, ರಾಜೀವ್ ಗಾಂಧಿಯನ್ನ ತಾಯಿಯನ್ನ ಕಳ್ಕೊೊಂಡ ಮಗ ಅಂತ ಗೆಲ್ಲಿಸಿ ದೇಶ ಆಳಲು ಕಳುಹಿಸಿದರು ಪಾಪ. ಗರೀಬಿಯನ್ನು ಓಡಿಸದಿದ್ದರೂ ‘ಗರೀಬಿ ಹಠಾವೋ’ ಅಂತಿದ್ದಳು ಪಾಪ. ಇಂದಿಗೂ ಆಕಿ ಫೋಟೋವನ್ನ ಆಫೀಸು, ಸಾಲ್ಯಾಾಗ ನೇತು ಹಾಕ್ತಾಾರ. ರಾಹುಲ್ ಗಾಂಧಿ ಪ್ರಪಂಚ ಅರಿಯದ ಹುಡುಗ, ಅವಗ ಏನು ಗೊತ್ತಿಿಲ್ಲ ಪಾಪ, ಅವನ್ನ ಪ್ರಧಾನಿ ಮಾಡಿದ್ರ ನಾಲ್ಕು ದೇಶ ಸುತ್ತಾಾಡಿ ಎಲ್ಲಾಾ ಕಲ್ಕೋೋತನಾಂತ ಪಾಪ ಓಟು ಹಾಕಿ ಅವನ್ನ ಗೆದಿಸಿದ್ರು. ಆದ್ರ ಅವನ ಮ್ಯಾಾಲೇ ಅಂತಃಕರಣ ಇಲ್ಲದ ಜನ, ಪಾಪ ಮೋದಿನ್ನ ಆರಿಸಿ ಬಿಟ್ರು. ರಾಹುಲ್ ಗಾಂಧಿಗೆ ಪಾಪ ಗೆದ್ದಿದ್ದು ಗೊತ್ತಾಾಗಲಿಲ್ಲ. ಸೋತಿನಂತೂ ತಿಳಿದಿಲ್ಲ. ಪಾಪ ಮನ್ನೆೆ ಮಳಿಗೆ ಊರಿಗೆ ಊರೇ ತೇಲಿ ಹೋಕ್ತಿಿದ್ರ, ಈ ಹುಡುಗ ಹೆಲಿಕ್ಯಾಾಪ್ಟರ್‌ನ್ಯಾಾಗ ಕೂತು ಸಮೋಸ ತಿಂದಕೋತ ‘ಕೆಳಗ ಬರೀ ನೀರವಂತ, ಹೆಲಿಕ್ಯಾಾಪ್ಟರ್ ಇಳಿಯಾಕ ಒಣ ನೆಲನಾ ಇಲ್ಲಂತ ಪಾಪಾ, ಮ್ಯಾಾಲೇನಾ ಹಾರಾಡತ್ತಿದ್ದ. ಇವನ ಜತೆಗೆ ಕೂತವರು ಸಣ್ಣ ಹುಡುಗ ಬಗ್ಗಿಿ ನೋಡಿದ್ರ ಅಂಜಿಕೋತಾನಂತ ಹೆಲಿಕ್ಯಾಾಪ್ಟರ್ ಕಿಡಕಿನ ಮುಚ್ಚಿಸಿದರಂತ ಪಾಪ’.

ಖೋಡಿ ಹುಡುಗ, ಮನ್ನೆೆ ಪಾಪ ಅವರವ್ವನ್ನ ಪಾಪ ಆಕಿಗೂ ಗಂಡ ಇಲ್ಲ. ಮೊದಲಿಂದಲೂ ಹಣಿಗೂ ಕುಂಕುಮ ಹಚ್ಚಿಿದಾಕಿ ಅಲ್ಲ. ಈಗಂತೂ ಪಾಪ ಸದಾ ಹಸಿರು ಹಣೀಲೆ ಇರ್ತಾಾಳ, ಆಕಿನ್ನ ಈ ಹುಡುಗ ಕೇಳ್ತಂತ, ‘ಅವ್ವ ಕಾಶ್ಮೀರದಾಗ 370ನೇ ಕಾಲಂ ತಗದಾರಂತ ಅಂದ್ರ ಇನ್ಮುಂದ ಒಮ್ಮೆೆಲೆ 369 ಬರೆದ ಮ್ಯಾಾಲೇ 371 ಅಂತ ಬರೀಬೇಕೇನವ್ವ. ಸಾಲ್ಯಾಾಗಿನ ಹುಡುಗರು.’ ಅಂತ ಕೇಳ್ತಂತ. ನೋಡ್ರಿಿ, ಪಾಪ ತಿಳವಳಿಕೆ ಇಲ್ಲದ ಹುಡುಗ. ಅವನ್ನ ಪ್ರಧಾನಿ ಮಾಡಿದ್ರ ಎಲ್ಲಾಾ ಕಲ್ಕೋೋತ್ತಿಿದ್ದ. ಈ ಸುಡುಗಾಡ ಮಂದಿ ಬಿಜೆಪಿನ ಗೆಲಿಸಿ, ಲಿಸಿಲಿಸಿ ಮೋದಿನ್ನ ಪ್ರಧಾನಿ ಮಾಡಿ ಬಿಟ್ರು. ಮೋದಿ ಶಾಣ್ಯಾಾ ಇದ್ದಾಾ, ಚಹಾ, ಕಾಫಿ, ಬ್ರೆೆಡ್, ಬಿಸ್ಕಿಿಟ್ ಮಾರಿ ಬದುಕ್ತಿಿದ್ದ. ಪಾಪ ಈ ನೆಹರೂ ಮನೆತನ ಮಂದಿ ಅಧಿಕಾರ ಇಲ್ಲದ ಹೆಂಗ ಬದುಕ್ತಾಾರ ಪಾಪ! ಅಧಿಕಾರ ಮಾರೋದು, ತೂರೋದು, ಒಂದ್ ಗೊತ್ತಿಿತ್ತು ಪಾಪ.
ಈ ಮೋದಿ ಬಂದ ಮ್ಯಾಾಲಂತೂ, ಪಾಪ ಪಾಕಿಸ್ತಾಾನದವರಿಗೆ ಬಹಳ ತ್ರಾಾಸಾಗೆದಂತವ್ವ. ಪಾಪ, ಎಲ್ಲಂದ್ರಲ್ಲೇ ಬಂದು ಗದ್ಲ ಮಾಡ್ತಿಿದ್ರು, ಬಾಂಬ್ ಇಡ್ತಿಿದ್ರು, ಆಯುಷ್ಯ ಮುಗದವರು ಸತ್ತು ಹೋಗಿದ್ರು. ಈಗೇನದವ್ವಾಾ ಎಲ್ಲಾಾ ಕಡೆ ಪೊಲೀಸರು, ಸೈನಿಕರು ಯಾರನ್ನು ಬಿಡದೇ ಪರೀಕ್ಷಾ ಮಾಡ್ಲಿಿಕ್ಕತ್ಯಾಾರಂತ, ಪಾಪ. ನಮಗ ಬರೇ ಪೊಲೀಸರಂದ್ರಷ್ಟ ಗೊತ್ತಿಿತ್ತವ್ವಾಾ, ಪಾಪ ಅದ್ಯಾಾರೋ ಮಿಲಿಟ್ರಿಿ ಸೈನಿಕರಂತ ದೇಶದೊಳಗ ಯಾರನ್ನು ಬಿಡದಂಗ ಕಾಯ್ತಾಾರಂತ ಹಗಲು-ರಾತ್ರಿಿ, ಮಳಿ, ಗಾಳಿ ಚಳಿ ಅನ್ನದ ಕಾಯ್ತಾಾರಂತ. ಪಾಪ, ಮೊನ್ನೆೆ ಸಾಕ ಸಾಕನ್ನು ಹಂಗ ಮಳಿ ಆಗಿ ಊರಾಗ, ಮನ್ಯಾಾಗ ಸಹಿತ ನೀರು ಹೊಕ್ಕುವು ನೋಡು. ಅವಾಗ ಪಾಪ, ನಡು ನೀರನಾಗ ಸಿಕ್ಕೊೊಂಡವರನ್ನ ಹಗ್ಗ ಕಟ್ಟಿಿ ಮ್ಯಾಾಲ ಎಳಕೊಂಡಿದ್ದು ಪಾಪ ಪೊಲೀಸರಲ್ಲಂತ, ಮಿಲಿಟರಿ ಸೈನಿಕರಂತ. ಇಂಥವರೂ ಇರ್ತಾಾರಂತ ಗೊತ್ತೇ ಇದ್ದಿಲ್ಲ ನೋಡು ನಮಗ ಪಾಪ.
ಈ ಮೋದಿಗೆ ಪಾಪ ಅಮಿತ್ ಶಾ ಅಂಥ ಒಬ್ಬ ಗೆಳೆಯ ಇದ್ದಾಾನಂತ. ಪಾಪ, ಅವ ಇವಗ ಬಲಗೈ ಬಂಟ ಅಂತ. ಇವರ ಮ್ಯಾಾಲೆ ಒಬ್ಬಂವಾ ಇದ್ದಾಾನಂತ ಪಾಪ. ಅವನ ಹೆಸರು ಅಜಿತ್ ದೋವಲ್ ಅಂತ. ಅವ ಇವ್ರಿಿಗೆಲ್ಲ ಆ, ಈ, ದೇಶದೊಳಗ ವರ್ಷಾನು ಗಟ್ಟಲೆ ಅವರ ಹಂಗ ಇದ್ದು ಸುದ್ದಿ ತಂದು ಕೊಡ್ತಾಾನಂತ ಪಾಪ! ರಾಹುಲ್ ಗಾಂಧಿಗೆ ಪಾಪ ಏನು ತಿಳುವಳಿಕಿ ಅದ ಹೇಳು, ತನಗ ಲಗ್ನಬೇಕು ಅಂತ ಸದೇಕ ಅದಕ್ಕ ತಿಳಿವಲ್ದು ಪಾಪ. ಸುಮ್ಮನ ಅದು ತಾಯಿ ತವರು ಮನಿ ಅದ ಅಂತಲ್ಲ ಪಾಪ, ಕೆಟಿಲೊ, ಇಟಲಿಯೋ ಅಂತ ಅಲ್ಲಿಗೆ ಹೋಗಿ ತಾತ, ಅಜ್ಜಿಿ ಜತೆ ಇರೋದು ಛಲೋ. ಸಣ್ಣದರಾಗ ಹುಡ್ರು ತಾಯಿ ತವರು ಮನ್ಯಾಾಗ ಬೆಳೀಬೇಕುಜ. ಪಾಪ ಅಂದ್ರ ಸುಡುಗಾಡು ಈ ತಂದಿ ಬಳಗದ ಮಂದಿ ಬುದ್ಧಿಿ ಬರೋದಿಲ್ಲ ಪಾಪ. ಇಡೀ ಮನೆತನದಾಗ ಈ ತಂದಿಕಡೆ ಎಲ್ಲಾಾರೂ ಹೊಡೆಸಿಗೊಂಡ ಸತ್ತಾಾರು ಪಾಪ! ಅದರದರ ಅಂಜಿಕೆಬ್ಯಾಾಡ? ಈ ಹುಡುಗ್ಗ ಪಾಪ. ಮನಮೋಹನ ಸಿಂಗನ ಗತೆ ಸುಮ್ನೆೆನೂ ಇರೋದಿಲ್ಲ ಪಾಪ, ಏನೇನೋ ಮಾತಾಡಿ ಮಂದಿ ಬಾಯ್ಯಾಾಗ ಉಗುಳ ಮೋತಿ ಗೊಂಬೆಯಾಗ್ಯದ ಪಾಪ.
ಆತು ಸದ್ಯಕ್ಕಂತೂ ಪಾಪ ಈ ಮೋದಿ ಚೆಂದ ನಕ್ಕೋೋತ, ಎಲ್ಲರ ಕಡೆ ಎಡಗೈ ಆಡಿಸ್ಗೋೋತ ಪಾಪ, ಎಲ್ಲ ದೇಶದವರ ಕೈಯಾಗ ಶಭಾಷ್ ಅನ್ಸಿಿಗೋತ ಪಾಪ, ಏನೇನೋ ಮಾಡ್ಲಿಿಕ್ಕ ಹತ್ಯಾಾನ ಪಾಪ. ಆದರೂ ಕೆಲ ಮಂದಿ ಇನ್ನೂ ಈತನ್ನ ಬೈಕೋತನ ಅಡ್ಡಾಾಡ್ಲಿಿಕ್ಕ ಹತ್ಯಾಾರ ಪಾಪ. ಇನ್ನ ಮುಂದ ನೋಡರಿ ಮೋದಿ ಏನಂತ ತಿಳಿತದಾ ಅಂತಾರ ಪಾಪ. ನೋಡೋಣ, ಲೇಖನ ಓದಿ ನಿಮಗ ಬ್ಯಾಾಸರ ಆತೇನ್ರಿಿ ಪಾಪ. ಏನು ಮಾಡೋದ್ರಿಿ ಮನಿಗೆ ಪೇಪರ್ ತರಿಸಿಂದ ಓದಬೇಕಲ್ರಿಿ ನೀವೂ, ಪಾಪ!

error: Content is protected !!