Saturday, 27th July 2024

ಬರಬಾರದ ದಿನಗಳಲ್ಲಿ ಬಂದ ನೀರಿನ ಹಳವಂಡ

ಸುಪ್ತ ಸಾಗರ

rkbhadti@gmail.com

ನಮ್ಮ ದೇಶ ಎಂದಿಗೂ ಬರಗಾಲದ ದೇಶವಲ್ಲವೇ ಅಲ್ಲ. ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರಮಾಣ ಅದೆಷ್ಟೋ ಹೆಚ್ಚು. ಕಳೆ ನೂರು ವರ್ಷಗಳ ಅಂಕಿ ಅಂಶಗಳನ್ನೇ ತಿರುವಿ ಹಾಕಿದರೆ ನಮ್ಮ ಬಯಲುಸೀಮೆ ಎಂದು ಗುರುತಿಸುವ ಪ್ರದೇಶಗಳಲ್ಲೇ ಬಿದ್ದ ವಾರ್ಷಿಕ ಮಳೆಯ ಸರಾಸರಿ ೧೧೭೦ ಮಿಲಿಮೀಟರ್‌ಗೂ ಹೆಚ್ಚು. ಹಾಗೆ ನೋಡಿದರೆ ಇದು ಅತಿ ಕಡಿಮೆ.

ಅ ದೇನು ದುರದೃಷ್ಟವೋ, ಈ ವರ್ಷ ನೋಡ ನೋಡುತ್ತಿದ್ದಂತೆಯೇ ಚಳಿಗಾಲ ಕಾಲ್ಕಿತ್ತುಬಿಟ್ಟಿತು. ಅವಽಗೂ ಮುನ್ನವೇ ಬೇಸಿಗೆ ಬಂದೆರಗಿದೆ. ಹಾಗೆಂದು ಅಕಾಲದಲ್ಲಿ ಬಿಸಿಲು ಬಾರಿಸುತ್ತಿದೆ ಎಂದೇನೂ ಅಲ್ಲ. ಬಿಸಿಲಿಗೆ ಇದು ಸಕಾಲವೇ. ಆದರೆ ಅಂದುಕೊಂಡದ್ದಕ್ಕಿಂತ ಹೆಚ್ಚು ನಮ್ಮನ್ನು ಕಾಡುತ್ತಿದೆ ಈ ಬಾರಿಯ ಬೇಸಿಗೆ. ಸಹಜವಾಗಿ ಏಪ್ರಿಲ್‌ನಲ್ಲಿ ಬಿಸಿಲು ಹೆಚ್ಚೇ ಇರುತ್ತದೆ. ಮೇನಲ್ಲಿ ತಾಳಲಾರದಷ್ಟು ಬಿಸಿಲು ಕಾಯ್ದ ದಿನ ಥವಾ ಮರುದಿನ ಅಲ್ಲಲ್ಲಿ ಮಳೆ ಕಾಣಿಸಿಕೊಳ್ಳುತ್ತದೆ. ಅಂತೂ ಜೂನ್‌ನಲ್ಲಿ ಮಳೆಗಾಲ ಆರಂಭವಾಗುತ್ತದೆ. ಜನ ನಿಟ್ಟುಸಿರು ಬಿಟ್ಟು ಕೃಷಿಗೆ ಇಳಿಯುತ್ತಾರೆ. ಆದರೆ ಈ ಬಾರಿ ಶಿವರಾತ್ರಿ ಬರುವುದಕ್ಕೆ ಮುವೇ ನೆತ್ತಿ ಉರಿಯಲಾರಂಭಿಸಿದ್ದು, ಒಂದು ವಾರದಲ್ಲಿ ನಾಡಿನ ಜಲಮೂಲಗಳೆಲ್ಲವೂ ಬತ್ತಿ ಬರಡಾಗಿ ನಿಂತಿವೆ.

ಬಹುತೇಕ ಕಡೆ ಮಳೆಗಾಲದಲ್ಲೇ ಹೇಳಿಕೊಳ್ಳುವಂಥ ಮಳೆಯೂ ಸುರಿದಿಲ್ಲ. ಹೀಗಾಗಿ ಬೇರೆಡೆಗಳಲ್ಲಿ ಹಾಗಿರಲಿ, ಮಲೆನಾಡಿನಲ್ಲೇ ಒರತೆಯ ಕಣ್ಣು ತೆರೆಯುವುದರೊಳಗೆ ಮಳೆ ನಾಡಿಗೆ ಬೆನ್ನು ಹಾಕಿ ಹೋಗಿಯಾಗಿತ್ತು. ಸಾಲದ್ದಕ್ಕೆ ದಿಢೀರನೆ ಅಪ್ಪಳಿಸಿದ ಬೇಸಿಗೆ. ಎಷ್ಟೋ ಊರುಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಕೊನೆಯ ಭಾಗ ಎಂಬುವಾಗ ಕೆರೆಗಳಲ್ಲಿ, ಹಳ್ಳಗಳಲ್ಲಿ ಉಳಿದಿರುತ್ತಿದ್ದ ಪ್ರಮಾಣದಷ್ಟು ನೀರು ಈ ವರ್ಷ ಫೆಬ್ರವರಿಯಲ್ಲೇ ಮುಗಿದು ಹೋಗಿದೆ.
ಹೀಗಾಗಿ ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರ. ನೀರಿನ ಸಮಸ್ಯೆ ಒಂದೇ ಆದರೂ ಅದರ ಸ್ವರೂಪ ಬೇರೆ ಬೇರೆ ರೀತಿಯದ್ದಾಗಿದೆ. ಮಲೆನಾಡಿನಲ್ಲೇ ಈ ಬಾರಿ ಕುಡಿಯುವ ನೀರಿಲ್ಲ. ಅಲ್ಲಿನ ಭತ್ತದ ಕಾರು ಬೇಸಾಯ ಹಳ್ಳಹಿಡಿದಿದೆ. ಬೇಸಿಗೆಯ ಹಣ್ಣು, ತರಕಾರಿ, ಮೆಣಸು ಇತ್ಯಾದಿ ಬೆಳೆಯಲು ಹೊಲದ ಅಂಚಿನ ಹಳ್ಳದಲ್ಲಿ ನೀರೇ ಇಲ್ಲ. ಆಗುಂಬೆಯಲ್ಲೇ ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾದ ಸ್ಥಿತಿ. ಇನ್ನು ಚೆಂಡೆ ಒಣಗಿ ನಿಂತಿರುವ ಅಡಕೆಗೆ ಸ್ಪಿಂಕ್ಲರ್ ನೀರಾದರೂ ಹಾರಿಸೋಣವೆಂದರೆ ವಿದ್ಯುತ್ ಕ್ಷಾಮವೂ ಕಾಡುತ್ತಿದೆ.

ಕರಾವಳಿಯಲ್ಲಿ ಬೆವರಿ ಸುಧಾರಿಸಿಕೊಳ್ಳಲೂ ಆಗದ ಸ್ಥಿತಿ. ಅಲ್ಲೀಗ ನೀರಿನದ್ದೊಂದೇ ಸಮಸ್ಯೆ ಅಲ್ಲ. ‘ಸರಕಾರಿ ನೀರಿನ ವ್ಯವಸ್ಥೆ’ಗೆ ಈಗಾಗಲೇ ಕಾಲಿಟ್ಟುಬಿಟ್ಟಿರುವ ಕರಾವಳಿಯ ಮಂದಿಗೆ ಪಾರಂಪರಿಕ ಜಲ ಸಂರಕ್ಷಣಾ ಕ್ರಮಗಳೇ ಮರೆತು ಹೋದಂತಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಕೈಕೊಟ್ಟಿರುವ ಸರಕಾರಿ ನೀರಿಗೆ ಪರ್ಯಾಯ ಕಂಡುಕೊಳ್ಳುವುದು ಮುಂದಿರುವ ಸವಾಲು. ಇನ್ನು ಕೋಲಾರ, ಚಿತ್ರದುರ್ಗ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಬೋರ್‌ವೆಲ್‌ಗಳು
ಮಾತನಾಡುತ್ತಿಲ್ಲ. ಇನ್ನು ಸಾವಿರ, ಎರಡು ಸಾವಿರ ಅಡಿಯನ್ನೂ ದಾಟಿ ಭೂಗರ್ಭವನ್ನೇ ಗುರಿಯಾಗಿಸಿಕೊಂಡು ಹೋಗಿ ನಿಂತಿರುವ ಕೆಲವು ಬೋರ್‌ಗಳಲ್ಲಿ ನೀರಿದ್ದರೂ ಅದನ್ನು ಕರೆಂಟ್ ಇಲ್ಲದೇ ಮೇಲೆತ್ತಲಾಗದ ಸ್ಥಿತಿ. ಒಂದೊಮ್ಮೆ ಅದರಿಂದ ನೀರೆತ್ತಿಕುಡಿದರೂ ಫ್ಲೋರೈಡ್ ಸೇರಿದಂತೆ ಹಲವು ರಾಸಾಯನಿಕಗಳು ಸೇರಿ ದಿನಕ್ಕೊಂದು ಸಮಸ್ಯೆಗೆ ಜನರನ್ನು ದೂಡುತ್ತಿದೆ.

ಇವೆಲ್ಲವನ್ನೂ ಮೀರಿ, ಕಾವೇರಿ ಹೇಗೂ ಇದ್ದಾಳೆಂಬ ನಿಶ್ಚಿಂತೆಯಲ್ಲಿದ್ದ ಬೆಂಗಳೂರಿನಲ್ಲಿ ಎರಡುದಿನಕ್ಕೊಮ್ಮೆ ನೀರು ಪೂರೈಸುವುದೂ ಕಷ್ಟವೆಂಬ ಸ್ಥಿತಿ. ಹೀಗಾಗಿ ಟ್ಯಾಂಕರ್ ಮಾಲೀಕರ ಬೊಕ್ಕಸ ತುಂಬುತ್ತಿದೆ. ಹೊರವಲಯದ ಬಡಾವಣೆಗಳಲ್ಲಿ ನೀರಿಗಾಗಿ ಅಲೆದಾಟ, ಟ್ಯಾಂಕರ್‌ಗಳ ಹುಡುಕಾಟ, ಚೌಕಾಶಿ ನಿತ್ಯದ
ಸಂಗತಿಯಾಗಿದೆ. ಮನುಷ್ಯರ ಪಾಡೇ ಹೀಗಿರುವಾಗ ಪ್ರಾಣಿ- ಪಕ್ಷಿ ಸಂಕುಲ ಕಂಗಾಲಾಗಿ ಹೋಗಿವೆ. ಅಳಿಲಿನಂಥ ಪುಟ್ಟ ಜೀವಿಗಳೂ ನೀರಿಲ್ಲದೇ ಸಾವಿಗೀಡಾಗುತ್ತಿವೆ. ಎಲ್ಲದಕ್ಕಿಂತ ಭಿನ್ನ ಸಮಸ್ಯೆ ಬಯಲು ಸೀಮೆಯ ಮಂದಿಯದ್ದು. ಒಂದೆಡೆ ಕೆರೆಕಟ್ಟೆಗಳು ಬತ್ತಿ ಅಂಗಳದಲ್ಲಿ ಬಿರುಕುಬಿಟ್ಟು ಕುಳಿತಿವೆ. ಜನ-ಜಾನುವಾರುಗಳು ನೀರು, ಆಹಾರ, ಮೇವಿಲ್ಲದೇ ಗುಳೇ ಹೊರಟಿದ್ದಾರೆ. ಆದರೆ ಗಡಿಯ ಮಹಾರಾಷ್ಟ್ರದಲ್ಲೂ ಈ ಬಾರಿ ಭೀಕರ ಬರ ಬಾಧಿಸುತ್ತಿರುವುದರಿಂದ ದಿಕ್ಕುಗಾಣದಾಗಿದೆ. ಕೂಲಿ ಸಿಕ್ಕುತ್ತಿಲ್ಲ. ಕಾಳು ಉಳಿದಿಲ್ಲ. ನೀರಾವರಿ ಬಗ್ಗೆ ಯೋಚಿಸಬೇಕಾದ ಸರಕಾರ ರಾಜಕೀಯದಲ್ಲಿ ಮುಳುಗಿದೆ.

ಕೇಂದ್ರ-ರಾಜ್ಯ ಸರಕಾರಗಳು ಪರಸ್ಪರ ಹೊಣೆಗಾರಿಕೆಯ ಹೆಗಲು ಬದಲಿಸುವ ಕಾರ್ಯದಲ್ಲಿ ನಿರತವಾಗಿವೆ. ನಿಜವಾಗಿ ಜಲ ಕ್ಷಾಮದ ಬಗ್ಗೆ ಯೋಚಿಸಬೇಕಾದ
ಸಂದರ್ಭದಲ್ಲಿ ನಿರಾವರಿ ಯೋಜನೆಗಳ ಹೆಸರಿನಲ್ಲಿ ಹಣ ಮತ್ತು ಸಮಯವನ್ನು ವ್ಯಯಿಸುತ್ತಿದ್ದೇವೆ. ನೀರು ಪೂರೈಕೆ ಯೋಜನೆಗಳನ್ನು ರೂಪಿಸುವಾಗ ಜಲ ಮೂಲವನ್ನು ನಿರ್ಲಕ್ಷಿಸಿ ದುದೇ ಇಷ್ಟಕ್ಕೆಲ್ಲ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಸತ್ಯ ಆಳುವವರಿಗೆ ಅರ್ಥವಾಗುವವರೆಗೆ ಸಮಸ್ಯೆಗೆ ಪರಿಹಾರ
ದೊರಕಲು ಸಾಧ್ಯವೇ ಇಲ್ಲ. ಹೇಗೂ ಬರಸ್ಥಿತಿ ಯಲ್ಲಿ ಎಲ್ಲ ಕೆರೆಗಳ ಅಂಗಳ ಬತ್ತಿ ನಿಂತಿದೆ.

ಹೂಳೆತ್ತಲು ಇದು ಸಕಾಲ. ಗ್ರಾಮೀಣ ಭಾಗದ ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಕಾಲುಗಳನ್ನು ದುರಸ್ತಿ ಮಾಡಲೇಬೇಕಿದೆ. ಈಗಲ್ಲದಿದ್ದರೆ ಈ ಕಾರ್ಯವನ್ನು ಮತ್ತೆಂದಿಗೂ ಮಾಡಲು ಸಾಧ್ಯವೇ ಇಲ್ಲ. ಅದಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾಡು ಇನ್ನಷ್ಟು ಭೀಕರ ದಿನಗಳನ್ನು ಎದುರಿಸಬೇಕಾಗಿ ಬರುತ್ತದೆ. ಅದಕ್ಕಾಗಿ ತಕ್ಷಣ ಬರಪರಿಹಾರ ಯೋಜನೆಯಡಿ ಅನುದಾನವನ್ನು ಬಿಡುಗಡೆಗೊಳಿಸಿ ಎಲ್ಲ ಜಲ ಮೂಲಗಳ ಸಂರಕ್ಷಣೆಯನ್ನು ಆದ್ಯತೆಯ ಮೇರೆಗೆ ಕೈಗೊಂಡರೆ ನಾಡು ಬರಮುಕ್ತವಾದೀತು.
***

ದೇಶಾದ್ಯಂತ ಈ ವರ್ಷ ಸುದ್ದಿಯೆಲ್ಲವೂ ಬರಗಾಲದ್ದೇ. ಯಾವ ಪರಿ ನಮ್ಮನ್ನು ನೀರಿನ ಕೊರತೆ ಬಾಧಿಸುತ್ತಿದೆಯೆಂದರೆ ರಾಷ್ಟ್ರಾದ್ಯಂತ ನಾವು ಕಟ್ಟಿ ಹೆಮ್ಮೆಯಿಂದ ಬೀಗುತ್ತಿದ್ದ ಬೃಹತ್ ಅಣೆಕಟ್ಟೆಗಳ ಪೈಕಿ ೯೧ರಲ್ಲಿ ಈ ವರ್ಷ ನೀರೇ ಇಲ್ಲ. ಜನವರಿಯಲ್ಲೇ ದೇಶದ ಬಹುತೇಕ ಅಣೆಕಟ್ಟೆಗಳ ನೀರಿನ ಸಂಗ್ರಹ ಸಂಗ್ರಹ ಪ್ರಮಾಣ
ಅರ್ಧಕ್ಕೆ ಕುಸಿದಿತ್ತು. ಮಹಾರಾಷ್ಟ್ರದಲ್ಲಂತೂ ಬಹುತೇಕ ಜಲಾಶಯಗಳು ಬರಿದೋ ಬರಿದು. ಅಲ್ಲಿನ ಕುಡಿಯುವ ನೀರಿನ ಪ್ರಮುಖ ಮೂಲವೆಂದು ಗುರುತಿಸಿದ್ದ ಮಝರಾ ಅಣೆಕಟ್ಟೆಯಲ್ಲಿ ಸಂಪೂರ್ಣ ಬತ್ತಿ ಹೋಗಿದೆ. ಕೇಂದ್ರ ಜಲ ಆಯೋಗವೇ ನೀಡುವ ಅಂಕಿ- ಅಂಶದ ಪ್ರಕಾರ ದೇಶದಲ್ಲಿನ ಒಟ್ಟು ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ ೧೫೮ ಬಿಸಿಎಂ(ಶತಕೋಟಿ ಕ್ಯೂಬಿಕ್ ಮೀಟರ್). ಆದರೆ ಈಗ ಉಳಿದರುವುದು ಎಲ್ಲ ಜಲಾಶಯಗಳನ್ನು ಸೇರಿಸಿದರೂ ಕೇವಲ ೩೬ ಬಿಸಿಎಂ. ಅಂದರೆ ನಮ್ಮ ಆಲಮಟ್ಟಿಯ ಒಟ್ಟೂ ಸಾಮರ್ಥ್ಯಕ್ಕಿಂತ ತುಸುವಷ್ಟೇ ಹೆಚ್ಚು.

ಅಷ್ಟೇಕೆ ದಕ್ಷಿಣ ಭಾರತದ ಪ್ರಮುಖ ೩೧ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ ಸರಾಸರಿಗಿಂತ ಶೇ ೩೬ರಷ್ಟು ಕುಸಿದಿದೆ. ನೀರಾವರಿ ಯೋಜನೆಗಳ ದುರವಸ್ಥೆಗೆ ಹಿಡಿದ ಕೈಗನ್ನಡಿಯಿದು. ಹಾಗೆ ನೋಡಿದರೆ ನಮ್ಮ ದೇಶ ಎಂದಿಗೂ ಬರಗಾಲದ ದೇಶವಲ್ಲವೇ ಅಲ್ಲ. ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರಮಾಣ ಅದೆಷ್ಟೋ ಹೆಚ್ಚು. ಕಳೆ ನೂರು ವರ್ಷಗಳ ಇತಿಹಾಸವನ್ನು, ಅಂಕಿ ಅಂಶಗಳನ್ನೇ ತಿರುವಿ ಹಾಕಿದರೆ ನಮ್ಮ
ಬಯಲುಸೀಮೆ ಎಂದು ಗುರುತಿಸುವ ಪ್ರದೇಶಗಳಲ್ಲೇ ಬಿದ್ದ ವಾರ್ಷಿಕ ಮಳೆಯ ಸರಾಸರಿ ೧೧೭೦ ಮಿಲಿಮೀಟರ್‌ಗೂ ಹೆಚ್ಚು. ಹಾಗೆ ನೋಡಿದರೆ ಇದು ಅತಿ ಕಡಿಮೆ.

ಇನ್ನು ಮಲೆನಾಡು, ಗುಡ್ಡ, ಬೆಟ್ಟ, ಅರಣ್ಯ ಪ್ರದೇಶ ಹಾಗೂ ಕರಾವಳಿಯ ಭಾಗದಲ್ಲಿ ಬಿದ್ದ ಮಳೆಯ ಪ್ರಮಾಣ ಇದರ ಮೂರುಪಟ್ಟು ಹೆಚ್ಚಿದೆ. ಜಗತ್ತಿನ ಅದೆಷ್ಟೋ ಭಾಗದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣ ೭೦೦ ಮಿಲಿಮೀಟರ್‌ಗೂ ಕಡಿಮೆ ಎಂದರೆ ನೀವು ನಂಬಲೇಬೇಕು. ಹೀಗಿದ್ದರೂ ಭಾರತದಂಥ ಸಮೃದ್ಧ ಮಳೆಯ ನೆಲ ಇಂದು ಬರದಿಂದ ತತ್ತರಿಸುತ್ತಿದೆ ಎಂದರೆ ಖಂಡಿತಾ ಇದು ನಮ್ಮ ನಿರ್ಲಕ್ಷ್ಯದ ಫಲ. ಪ್ರತಿ ವರ್ಷ ನಮ್ಮ ದೇಶದ ವಿವಿಧ ರಾಜ್ಯಗಳ ಮೇಎಲ ಬೀಳುವ ಮಳೆಯ ಪ್ರಮಾಣವೇ ೩೭೦ ದಶಲಕ್ಷ ಹೆಕ್ಟೇರ್ ಮೀಟರ್‌ಗಳಷ್ಟು. ಇದರಲ್ಲಿ ಶೇ. ೨ರಷ್ಟು ಮಳೆ ನೀರನ್ನು ಮಾತ್ರವೇ ನಾವು ಹಿಡಿದಿಟ್ಟುಕೊಳ್ಳುತ್ತಿದ್ದೇವೆ.
ಹೇಗೆ ನೋಡಿದರೂ ನಿದು ಅಪಾರ ಜಲರಾಶಿಯೇ.

ಒಂದೊಮ್ಮೆ ಇದರಲ್ಲಿ ಶೇ ಹತ್ತರಷ್ಟು ಮಳೆ ನೀರನ್ನು ಹಿಡಿದಿಟ್ಟುಕೊಂಡರೂ ನಾವು ಎರಡು ವರ್ಷ ಮಳೆ ಇಲ್ಲದೆಯೇ ಕಳೆಯಬಹುದು. ಪ್ರತಿ ವರ್ಷವೂ ನಮ್ಮಲ್ಲಿ ಮಳೆ ಕಡಿಮೆ, ಬರದ ಸಮಸ್ಯೆ ಎಂದು ಹುಯಿಲೆಬ್ಬಿಸುವುದು ಮಾಮೂಲಿನ ಸಂಗತಿಯಾಗಿಬಿಟ್ಟಿದೆ. ಕಾಲಕಾಲಕ್ಕೆ ನಮ್ಮಲ್ಲಿ ಮಳೆ ಸುರಿಯುತ್ತಿಲ್ಲ. ಎಲ್ಲೆಡೆ ಮಳೆಯ ಸಮಾನ ಹಂಚಿಕೆಯಾಗುತ್ತಿಲ್ಲ ಎಂಬುದು ಸತ್ಯವಾದರೂ ನೀರಿನ ವಿಚಾರದಲ್ಲಿ ನಮಗೆ ಬಡತನವೆಂಬುದಿಲ್ಲ. ಇಂಥ ದಾರಿದ್ರ್ಯಕ್ಕೆ ನಮ್ಮನ್ನು ನಾವೇ ತಳ್ಳಿಕೊಂಡಿದ್ದೇವೆ. ಬಿದ್ದ ಮಳೆ ನೀರನ್ನು ಬಿದ್ದ ಸ್ಥಳದಲ್ಲಿಯೇ ಹಿಡಿದಿಟ್ಟುಕೊಳ್ಳದ ಪರಿಣಾಮ ಇಂದು ಬರ ಎಂಬುದು ಭೀಕರವಾಗಿ ನಮಗೆ ಕಾಣುತ್ತಿದೆ.

ನಮ್ಮ ಹಿಂದಿನ ತಲೆಮಾರು ಬಿದ್ದ ಮಳೆ ಹನಿಯನ್ನು ಅದು ಬಿದ್ದ ಸ್ಥಳದಲ್ಲಿಯೇ ಹಿಡಿದಿಟ್ಟುಕೊಳ್ಳಲು ಹಲವು ಪಾರಂಪರಿಕ ವ್ಯವಸ್ಥೆಯನ್ನು ಕಲ್ಪಿಸಿದ್ದರು. ದೇಶಾದ್ಯಂತ ಕೆರೆ, ಕಟ್ಟೆ, ಒಡ್ಡು, ಕಾಲುವೆ, ಬಾವಿಗಳು ಬಾಗಶಃ ನಮ್ಮ ನೀರಿನ ಅಗತ್ಯವನ್ನು ಪೂರೂಸುತ್ತಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಗತ್ಯದ ನೀರು ನಾವಿರುವ ತಾಣದಲ್ಲೇ ಸಿಗುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಕೃಷಿ ಸೇರಿದಂತೆ ಎಲ್ಲ ಬಳಕೆಗೂ ಎಲ್ಲಿಂದಲೋ ನೀರು ತಂದುಕೊಳ್ಳುವ, ಬೇರೆಯ
ಸ್ಥಳದ ನೀರಿನ ಅವಲಂಬನೆಯ ಸ್ಥಿತಿ ಇರಲಿಲ್ಲ. ಇಂಥ ಸ್ವಾವಲಂಬನೆಯ ಹಿಂದೆ ನೀರಿನ ಕಾಳಜಿಯೂ ಇತ್ತು.

ಜಲಮೂಲಗಳ ಸಂರಕ್ಷಣೆಯ ಹೊಣೆಗಾರಿಕೆಯೂ ಜತೆಗೂಡಿತ್ತು. ಅದನ್ನೀಗ ಮರೆತು ನೀರೆಂಬುದು ಆಳ್ವಿಕೆಯ ಹೊಣೆ, ಜಲ ಸಂರಕ್ಷಣೆಯ ಆಳುವವರ ಕರ್ತವ್ಯ ಎಂಬ ಮನೋಭಾವಕ್ಕೆ ಬಂದ್ದರ ಪರಿಣಾಮವನ್ನು ಬರದ ಸ್ವರೂಪದಲ್ಲಿ ನಾವಿಂದು ಅನುಭವಿಸುತ್ತಿದ್ದೇವೆ. ಸರಕಾರಗಳು ಸಮುದಾಯದ ಬದುಕಿನ
ತಳಹದಿಯನ್ನೇ ಅಲ್ಲಾಡಿಸಿದೆ. ನೀರಿನ ಹೆಳವರಾಗಿ ನಾವು ಅಸಹಾಯಕರಾಗಿ ನಿಂತಿದ್ದೇವೆ.

***
ಈ ದೇಶದಲ್ಲಿ ಬಡವರ್ಗದ ಮಂದಿ ಶತಶತಮಾನಗಳಿಂದ ಶೋಷಣೆಗೊಳಗಾಗುತ್ತಲೇ ಇದ್ದಾರೆ. ನೀರಿನ ವಿಚಾರದಲ್ಲೂ ಅತಿ ಹೆಚ್ಚು ಶೋಷಣೆಗೊಳ ಗಾಗುತ್ತಿರುವವರು ಬಡವರೇ. ಶುದ್ಧ ಕುಡಿಯುವ ನೀರಿಲ್ಲದೇ ಪರದಾಡುವ ಬಡವರಿಗೇ ಹೆಚ್ಚು ಹೆಚ್ಚು ಸಾಂಕ್ರಾಮಿಕ ರೋಗ ಬಾಧಿಸುತ್ತಿದೆ. ನೀರಿನ ಮಾಲಿನ್ಯದ
ಮೊದಲ ಸಂತ್ರಸ್ತರೂ ಆರ್ಥಿಕವಾಗಿ ದುರ್ಬಲರೇ. ಈ ವರ್ಗದ ಮಹಿಳೆಯರು ದಿನದ ೬ ರಿಂದ ೭ ಗಂಟೆ ನೀರು ಸಂಗ್ರಹಕ್ಕಾಗಿಯೇ ವ್ಯಯಿಸುತ್ತಿದ್ದಾರೆ. ಅಂದರೆ ವ್ಯಕ್ತಿಯೊಬ್ಬನ ಸರಾಸರಿ ಆಯುಸ್ಸು ೬೦ ವರ್ಷ ಅಮದುಕೊಂಡರೂ ಜೀವನಮಾನದ ಅತ್ಯಮೈಲ್ಯ೧೫ ವರ್ಷವನ್ನು ಮಹಿಳೆ ನೀರು ತರುವಲ್ಲೇ ಕಳೆಯುತ್ತಿದ್ದಾಳೆ. ಮಾತ್ರವಲ್ಲ ಇಂದಿಗೂ ಗ್ರಾಮೀಣ ಪ್ರದೇಶದ ಶೇ೯ ರಷ್ಟು ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದಾರೆ.

ಶಾಲೆ ತಪ್ಪಿಸಿಕೊಳ್ಳುತ್ತಿರುವ ಬಡ ಗ್ರಾಮೀಣ ಹೆಣ್ಣುಮಕ್ಕಳಲ್ಲಿ ಮುಕ್ಕಾಲುಪಾಲು ನೀರು ಹೊತ್ತು ತರುವುದಕ್ಕಾಗಿಯೇ ಮನೆಯಲ್ಲಿ ಉಳಿಯುತ್ತಿದ್ದಾರೆ. ನಮ್ಮ ಸರಕಾರಗಳ ಆದ್ಯತೆ ಗ್ರಾಮೀಣ ಶುಚಿತ್ವ, ನೀರಿನ ಸಂರಕ್ಷಣೆಯಾಗುತ್ತಲೇ ಇಲ್ಲ. ಬಜೆಟ್‌ನಲ್ಲಿ ಬಹುಪಾಲು ರಕ್ಷಣೆ, ತಂತ್ರಜ್ಞಾನ, ಕೈಗಾರಿಕೆ ಅಭಿವೃದ್ಧಿ,
ಬಾಹ್ಯಾಕಾಶ ಯೋಜನೆಗಳಿಗೆ ಮೀಸಲಾಗುತ್ತಿದೆ. ತಪ್ಪಲ್ಲ. ಆದರೆ, ನೀರು, ಶೌಚಾಲಯಗಳಂಥ ಮೂಲಭೂತ ಅಗತ್ಯವಿಲ್ಲದೇ ಸಾಽಸುವ ಪ್ರಗತಿಗೆ ಏನರ್ಥ?

Leave a Reply

Your email address will not be published. Required fields are marked *

error: Content is protected !!