Saturday, 27th July 2024

ವಿಜ್ಞಾನಿಗಳು ತಿರುಪತಿಗೆ, ಅಜ್ಞಾನಿಗಳು ಕಿತಾಪತಿಗೆ!

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಜಗತ್ತಿಗೇ ವಿಜ್ಞಾನವನ್ನು ತೋರಿಸಿಕೊಟ್ಟಿದ್ದು ಸನಾತನ ಪರಂಪರೆ. ಇಂದು ಮನೆಮನೆಗೂ ವಿದ್ಯುತ್ ಪ್ರಸರಣಕ್ಕೆ ಪವರ್ ಜನರೇಟರ್, ಹೈಟೆನ್ಷನ್ ಟವರ್, ಟ್ರಾನ್ಸ್ ಫಾರ್ಮರ್, ಇಲೆಕ್ಟ್ರಿಕ್ ಪೋಲ್ ಇತ್ಯಾದಿಗಳಿದ್ದು ಇವೆಲ್ಲ ೨೦೦ ವರ್ಷಗಳಷ್ಟು ಹಿಂದಿನ ವಿಜ್ಞಾನವಷ್ಟೇ. ಆದರೆ ಯುಗಗಳ ಹಿಂದೆಯೇ ಇಂಥ ವಿಜ್ಞಾನ ನಮ್ಮ ದೇವಾಲಯಗಳಲ್ಲಿತ್ತು.

ದಿನನಿತ್ಯ ಕುಡಿಯುವ ಕುಡುಕರೂ, ಅನಕ್ಷರಸ್ಥರೂ ಇಂಥ ಅನಾಗರಿಕ ಮಾತುಗಳನ್ನಾಡುವುದಿಲ್ಲ. ವಿಶ್ವವೇ ಗಮನಿಸುತ್ತಿರುವ, ನಮ್ಮ ದೇಶದ ಕೀರ್ತಿ ಮತ್ತು ಸಾಧನೆಯನ್ನು ಮುಗಿಲೆತ್ತರಕ್ಕೆ ಏರಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಶ್ರಮಿಸಿರುವ ‘ಚಂದ್ರಯಾನ-೩’ರ ಯಶಸ್ಸಿಗಾಗಿ ಇಡೀ ದೇಶವೇ ಎದುರು ನೋಡು ತ್ತಿದೆ. ಆದರೆ ಹುಲಿಕುಂಟೆ ಮೂರ್ತಿ ಎಂಬ ಮಹಾಪ್ರಜೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ‘ಚಂದ್ರಯಾನ ಈ ಸಲ ತಿರಪತಿ ನಾಮವೇ ಗತಿ ಅನ್ಸತ್ತೆ..’ ಎಂದು ಬರೆದುಕೊಂಡಿದ್ದಾರೆ.

ಹಾಳಾಗಿಹೋಗಲಿ ಎನ್ನುವುದಕ್ಕೆ ಇವರೇನೂ ಎಣ್ಣೆ ಅಂಗಡಿ ಗಿರಾಕಿಯಲ್ಲ. ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಹೇಳಿಕೊಡುವ ಉಪನ್ಯಾಸಕರಾದ ಇವರಿಗೆ ಅದ್ಯಾವ ‘ಮಹಾ ಗುರು’ ಪಾಠ ಹೇಳಿಕೊಟ್ಟರೋ, ಇವರಿಂದ ಪಾಠ ಕಲಿತ ವಿದ್ಯಾರ್ಥಿಗಳು ದೇಶಕ್ಕೆ ಇನ್ನೆಂಥ ಬುದ್ಧಿಜೀವಿ ಗಳಾಗುತ್ತಾರೋ ಆ ‘ಮಹದೇವ’ನೇ ಬಲ್ಲ. ಸರಿಯಾಗಿ ‘ತಿರುಪತಿ’ ಎಂದು ಬರೆಯಲಾಗದ ಇವರ ಕನ್ನಡ ‘ವಿಧ್ವಂಸಕತೆ’ ಮೆಚ್ಚಿ ಅದ್ಯಾರು ಇವರಿಗೆ ಕನ್ನಡ ಉಪನ್ಯಾಸಕ ನಷ್ಟು ದೊಡ್ಡಹುದ್ದೆ ನೀಡಿದರೋ? ಇವರ ಮೇಲೆ ಕ್ರಮ ಕೈಗೊಳ್ಳಲು ಶಾಸಕ ಸುರೇಶ್ ಕುಮಾರ್ ಅವರು ಶಿಕ್ಷಣ ಮಂತ್ರಿಗೆ (?) ಪತ್ರ ಬರೆದ ಕಾರಣ ಸ್ಪಷ್ಟೀಕರಣ ನೀಡುವಂತೆ ಈ ಮನುಷ್ಯನಿಗೆ ಪಿಯು ಬೋರ್ಡ್ ನೋಟಿಸ್ ನೀಡಿದೆ.

‘ಸಂವಿಧಾನ ನಮಗೆ ಬೈಬಲ್ ಇದ್ದಂತೆ’ ಎನ್ನುವ ಸಮಾಜ ಕಲ್ಯಾಣ ಸಚಿವರು, ‘ಮುಸ್ಲಿಮರ ಆಶೀರ್ವಾದದಿಂದಲೇ ಕಾಂಗ್ರೆಸ್ ಸರಕಾರ ಬಂದಿದ್ದು’ ಎನ್ನುವ ಗೃಹಸಚಿವರು, ‘ಕಿತ್ತು ಬಿಸಾಕಿದ್ದೇವೆ’ ಎನ್ನುವ ಶಿಕ್ಷಣ ಸಚಿವರು ಇರುವಾಗ, ಈ ಉಪನ್ಯಾಸಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಸಿಕ್ಕಾಪಟ್ಟೆ ಇದೆ!

‘ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು, ವಂದಿಸಿ ಸ್ತುತಿಸುವ ಜನರೆಲ್ಲರೂ ನಮ್ಮ ಹೊಂದಿದ ಪುಣ್ಯವನೊಯ್ಯುವರಯ್ಯ, ದುಷ್ಟ ಜನರು ಈ ಸೃಷ್ಟಿಯೊಳಿದ್ದರೆ ಶಿಷ್ಟ ಜನರಿಗೆಲ್ಲ ಕೀರ್ತಿಗಳು, ನಿಂದಕರಿರಬೇಕು ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ’ ಎಂದಿದ್ದಾರೆ ಮಹಾನುಭಾವ ರೊಬ್ಬರು. ಎಲ್ಲಾ ಕಾಲದಲ್ಲೂ ನಿಂದಕರಿದ್ದಂತೆ ಈ ಕಾಲದಲ್ಲೂ ಈ ಲದ್ದಿ ಜೀವಿಗಳು, ವಿಚಾರ‘ವ್ಯಾಧಿ’ಗಳೆಂಬ ನಿಂದ ಕರಿದ್ದಾರೆ. ಬರಿಯ ಹಿಂದೂಗಳ ನಂಬಿಕೆಗಳ ವಿರುದ್ಧ ಮಾತ್ರವೇ ಅಜ್ಞಾನ ಪ್ರದರ್ಶಿಸುವ ಇಂಥವರಿಂದ ದೇಶಕ್ಕೆ, ರಾಜ್ಯಕ್ಕೆ ಯಾವ ಉಪಯೋಗವೂ ಇಲ್ಲ. ಇವರೊಂಥರ ನಾಯಿಮೊಲೆಯ ಹಾಲಿದ್ದಂತೆ.

ದೌರ್ಭಾಗ್ಯವೇನೆಂದರೆ, ತಮ್ಮ ತೀಟೆ-ತಿಕ್ಕಲು ಗಳಿಗೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು, ಸಂವಿಧಾನವನ್ನು ಗುರಾಣಿಯಂತೆ ಬಳಸಿಕೊಳ್ಳುವುದಕ್ಕೆ, ದೊಡ್ಡ ಮೇಧಾವಿಗಳಂತೆ ತಮ್ಮ ಅನುಕೂಲಕ್ಕೆ ತಕ್ಕಂಥ ಸಂವಿಧಾನದ ವಿಧಿಗಳನ್ನಷ್ಟೇ ಉಲ್ಲೇಖಿಸುವುದಕ್ಕೆ ಇವರ ಜಾಣತನ ಸೀಮಿತ. ಉಳಿದದ್ದೆಲ್ಲ ಸರಕಾರಿ ಪ್ರಾಯೋಜಿತ! ಜಗತ್ತಿಗೇ ವಿಜ್ಞಾನವನ್ನು ತೋರಿಸಿಕೊಟ್ಟಿದ್ದು ಸನಾತನ ಪರಂಪರೆ. ಇಂದು ಮನೆಮನೆಗೂ ವಿದ್ಯುತ್ ಪ್ರಸರಣಕ್ಕೆ ಪವರ್ ಜನರೇಟರ್, ಹೈಟೆನ್ಷನ್ ಟವರ್, ಟ್ರಾನ್ಸ್ ಫಾರ್ಮರ್, ಇಲೆಕ್ಟ್ರಿಕ್ ಪೋಲ್ ಇತ್ಯಾದಿಗಳಿದ್ದು ಇವೆಲ್ಲ ೨೦೦ ವರ್ಷಗಳಷ್ಟು ಹಿಂದಿನ ವಿಜ್ಞಾನವಷ್ಟೇ. ಆದರೆ ಯುಗಗಳ ಹಿಂದೆಯೇ ಇಂಥ ವಿಜ್ಞಾನ ನಮ್ಮ ದೇವಾಲಯಗಳಲ್ಲಿತ್ತು. ಪವರ್ ಜನರೇಟರ್‌ನಂಥ ಗರ್ಭಗುಡಿ, ವಿಮಾನ ಗೋಪುರ, ಗಾಳಿಗೋಪುರ, ಧ್ವಜಸ್ತಂಭ ಒಳಗೊಂಡಂತೆ
ಅರ್ಚಕರು ನಡೆಸುವ ಹಸ್ತಮುದ್ರೆಗಳು ಶರೀರದಲ್ಲಿ ಪ್ರಾಣಶಕ್ತಿಯನ್ನು (ಆಕ್ಯೂಪ್ರೆಷರ್) ವೃದ್ಧಿಸುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.

ಇದನ್ನೇ ‘ತಂತ್ರ’ ಎನ್ನಲಾಗುತ್ತದೆ. ಹಾಗೆಯೇ ಸಾಮೂಹಿಕವಾಗಿ ಪಠಿಸುವ ವೇದಮಂತ್ರಗಳು ವಿದ್ಯುತ್ಕಾಂತೀಯ ಅಲೆಗಳನ್ನು (ಇಲೆಕ್ಟ್ರೋ ಮ್ಯಾಗ್ನೆಟಿಕ್ ವೇವ್ಸ್) ಸೃಷ್ಟಿಸುತ್ತವೆ. ಈ ಶಬ್ದಗಳೇ ಸೂಕ್ಷ್ಮ ಭಾವತರಂಗಗಳಾಗಿ (ಮೈಕ್ರೋವೇವ್ಸ್) ನೆರೆದ ಆಸ್ತಿಕರ ಮನಸ್ಸಿನ ಮೇಲೆ ಪರಿಣಾಮ ಬೀರಿ ಅವರನ್ನು ಶಾಂತಚಿತ್ತದೆಡೆಗೆ ಕೊಂಡೊಯ್ಯುತ್ತವೆ. ಇದನ್ನೇ ‘ಮಂತ್ರ’ ಎನ್ನಲಾಗುತ್ತದೆ. ಇನ್ನು ದೇವಾಲಯ ನಿರ್ಮಾಣದಲ್ಲಿನ ವೈಜ್ಞಾನಿಕತೆ ನೋಡಿ. ಗರ್ಭಗುಡಿಯಿಂದ ಹಿಡಿದುಪ್ರಾಂಗಣ, ಧ್ವಜಸ್ತಂಭ, ನಂದಿ-ಗರುಡಸ್ತಂಭ, ವಿಮಾನ ಗೋಪುರದ ಅಡಿಪಾಯಗಳಲ್ಲಿ ನವರತ್ನ ಗಳು, ಪಂಚಲೋಹಗಳನ್ನಿಟ್ಟು ಕಟ್ಟಡ ಆರಂಭಿಸುತ್ತಾರೆ. ಆ ನಂತರ ಗರ್ಭಗುಡಿ, ಗಾಳಿಗೋಪುರ, ಧ್ವಜಸ್ತಂಭ, ವಿಮಾನ ಗೋಪುರದ ತುದಿಯಲ್ಲೂ ಲೋಹದ ಕಳಸಗಳನ್ನು ಪ್ರತಿಷ್ಠಾಪಿಸುತ್ತಾರೆ.

ಗರ್ಭ ಗುಡಿಯಲ್ಲಿ ಪಂಚಲೋಹದ ಮೂರ್ತಿಗಳು, ದ್ವಾರದಲ್ಲಿ ಹಿತ್ತಾಳೆ, ತಾಮ್ರ, ಚಿನ್ನದಂಥ ಲೋಹದ ಹೊದಿಕೆಗಳು, ಘಂಟೆಗಳು, ಪ್ರಾಂಗಣದ ಕಂಬ
ಗಳಿಗೂ ಧ್ವಜಸ್ತಂಭಕ್ಕೂ ಇಂಥ ಲೋಹದ ಹೊದಿಕೆಗಳನ್ನು ಏಕೆ ಲೇಪನ ಮಾಡುತ್ತಾರೆ ಗೊತ್ತೇ? ಇದು ಬರಿಯ ಅಲಂಕಾರವಲ್ಲದೆ ಈ ಲೋಹಗಳು ಟ್ರಾನ್ಸ್
ಮಿಷನ್ ಸೆಲ್‌ಟವರ್‌ನಂತೆ ತರಂಗಶಕ್ತಿಗಳ ಮುಕ್ತ ವಾಹಕಗಳಾಗಿ ಕೆಲಸಮಾಡುತ್ತವೆ. ಇದನ್ನೇ ‘ಯಂತ್ರ’ ಎನ್ನಲಾಗುತ್ತದೆ. ಹೀಗೆ ದೇವಾಲಯ ದಲ್ಲಿನ ತಂತ್ರ-ಮಂತ್ರಗಳ ಶಕ್ತಿಗಳನ್ನು ಪ್ರಸಾರಿಸುವ ಯಂತ್ರಗಳಾಗಿ ಈ ಲೋಹದ ಪದ್ಧತಿಯ ಮೂಲಕ ಧನಾತ್ಮಕ ಶಕ್ತಿಯನ್ನು ದೇಹಕ್ಕೆ ತಲುಪಿಸಲಾಗುತ್ತದೆ.

ಇಷ್ಟೇ ಅಲ್ಲದೆ, ಗರ್ಭಗುಡಿಯಲ್ಲಿ ಜರುಗುವ ಅಭಿಷೇಕ ಕ್ರಿಯೆಗಳೂ ಜಲವಿದ್ಯುತ್‌ನಂತೆ ಸೂಕ್ಷ್ಮ ತರಂಗಗಳನ್ನು ಹೊಮ್ಮಿಸುತ್ತವೆ. ಇನ್ನು ದೇವಾಲಯದ ಸುತ್ತಲಿರುವ ತುಳಸಿ, ಅರಳೀಮರ, ಬೇವಿನಮರ, ಬಿಲ್ವಪತ್ರೆ ಮರಗಳು ಅಲ್ಲಿನ ಗಾಳಿ ಯನ್ನು ಶುದ್ಧೀಕರಿಸುತ್ತವೆ. ಹೀಗೆ ಬಾಹ್ಯದಲ್ಲಿರುವ ಧನಾತ್ಮಕ ಶಕ್ತಿಯನ್ನು (ಪಾಸಿಟಿವ್ ಎನರ್ಜಿ) ಈ ತಂತ್ರ-ಮಂತ್ರ-ಯಂತ್ರಗಳು (ರಿಸೀವರ್) ಆಕರ್ಷಿಸಿ, ಬರುವ ಭಕ್ತರ ಮನಸ್ಸಿಗೆ ಮತ್ತು ದೇಹಕ್ಕೆ ಅದನ್ನು ಚೈತನ್ಯವಾಗಿ ತುಂಬುವ ಬ್ರಹ್ಮಾಂಡ ಶಕ್ತಿಯ (ಕಾಸ್ಮಿಕ್ ಎನರ್ಜಿ) ಉತ್ಪಾದನಾ ಕೇಂದ್ರ ಅರ್ಥಾತ್ ಪ್ರಾಕೃತಿಕ ವಿಜ್ಞಾನವೇ ಹಿಂದೂ ದೇವಾಲಯ. ಇದೇ ನಮ್ಮ ದೇವಾಲಯಗಳ ನಿರ್ಮಾಣದ ಹಿಂದಿರುವ ವಿಜ್ಞಾನ ಮತ್ತು ಬ್ರಹ್ಮಜ್ಞಾನ.

ಬೇರೇನೂ ಬೇಡ, ಮುಂದಿನ ವರ್ಷ ಸಂಭವಿಸಲಿರುವ ಗ್ರಹಣಗಳ ಕಾಲಾವಽಯನ್ನು ನಿಮಿಷಗಳಲ್ಲಿ ನಿಖರವಾಗಿ ದಾಖಲಿಸಿಡುವ ಪಂಚಾಂಗವೇ ಒಂದು ‘ವಿಜ್ಞಾನಗ್ರಂಥ’. ಭೂಮಿಯ ಆಕಾರ ಕಿತ್ತಳೆ ಹಣ್ಣಿನಂತೆ ಇರುತ್ತದೆ ಎಂದು ಹೇಳಿಕೊಟ್ಟರೇ ಹೊರತು, ಪುರಾಣದಲ್ಲಿ ಹಿರಣ್ಯಾಕ್ಷ ಭೂಮಿಯನ್ನೇ ಅಪಹರಿಸಿದಾಗ ಮಹಾವಿಷ್ಣುವು ವರಾಹಾವತಾರದಲ್ಲಿ ಭೂಮಿಯನ್ನು ರಕ್ಷಿಸಿದ ಭೂವರಾಹ ಮೂರ್ತಿಯನ್ನು ನಮಗೆ ತೋರಿಸಲೇ ಇಲ್ಲ. ಹಾಗೆಯೇ, ಹುಟ್ಟಿದಾಗಿನಿಂದ ಸತ್ತ ಮೇಲೆ
ಬಾಯಿಗೆ ಅಕ್ಕಿಕಾಳು, ಮೂಗಿಗೆ ಹತ್ತಿ, ಶವಯಾತ್ರೆಯಲ್ಲಿ ಅಗ್ನಿಯ ಮಡಕೆ ಕೊಂಡೊಯ್ಯುವುದರ ವರೆಗೂ ಬದುಕಿನ ಪ್ರತಿಯೊಂದು ನಡೆಯಲ್ಲೂ ವೈಜ್ಞಾನಿಕ ನೀತಿ-ನಿಯಮಗಳಿವೆ. ಸನಾತನ ಪರಂಪರೆಯಲ್ಲಿ ವೇದ, ಉಪನಿಷತ್ತು, ಪುರಾಣಗಳು, ಪಂಚಭೂತಗಳು, ಗ್ರಹಗಳ ಚಲನೆ, ಪ್ರಕೃತಿ, ಸಂಸ್ಕೃತಿ, ಋತುಗಳು, ಮಾಸಗಳು, ತಿಥಿಗಳು, ಹಬ್ಬ-ಆಚರಣೆಗಳು, ಬದುಕು, ಸಾವು, ಸಂಸ್ಕಾರ, ಪಿತೃತರ್ಪಣ, ಪಿಂಡದಾನ ಹೀಗೆ ಪ್ರತಿಯೊಂದರಲ್ಲೂ ಶ್ರೇಷ್ಠ ಬೌದ್ಧಿಕ ಸಿದ್ಧಾಂತ, ಭೌತಿಕ ವಿಜ್ಞಾನ ಒಳಗೊಂಡಿದೆ.

ಇಂಥ ಸತ್ಯದ ಪರಾಮರ್ಶೆಯನ್ನು ಯಾವ ಅಯೋಗ್ಯನೂ ಮಾಡುವುದಿಲ್ಲ. ಭಾರತೀಯರು ದೇವರನ್ನು ನಂಬುತ್ತಾರೆ, ಅದನ್ನು ಬಿಟ್ಟರೆ ಆತ್ಮಗಳನ್ನು ನಂಬುತ್ತಾರೆ. ಆದರೆ ವಿಕೃತ, ಭಯಾನಕ ಪಿಶಾಚಿಗಳನ್ನು ವಿದೇಶಿಗರೇ ಹೆಚ್ಚು ನಂಬುತ್ತಾರೆ ಎನ್ನುವುದಕ್ಕೆ ಅಲ್ಲಿ ನಿರಂತರ ನಿರ್ಮಾಣವಾಗುವ ಅಂಥ ಸಿನಿಮಾಗಳೇ ಸಾಕ್ಷಿ.
ಇತ್ತೀಚೆಗಷ್ಟೇ ಮೆಕ್ಸಿಕೋದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ತಲೆಯೊಡೆದು ಮಿದುಳನ್ನು ಟ್ಯಾಕೋಸ್‌ನಲ್ಲಿ (ಮೆಕ್ಸಿಕೋದ ಜನಪ್ರಿಯ ಖಾದ್ಯ) – ಮಾಡಿ ತಿಂದು, ಬುರುಡೆಯನ್ನು ಆಶ್‌ಟ್ರೇ ಆಗಿ ಬಳಸಿದ್ದಾನೆ. ಹೀಗೆ ಮಾಡಲು ಸಾಂಟಾ ಮ್ಯೂರ್ಟೆ (ಮರಣ ದೇವತೆ) ಮತ್ತು ದೆವ್ವ ತನಗೆ ಆದೇಶ ನೀಡಿದ್ದಾಗಿ ಪೊಲೀಸರಿಗೆ ಹೇಳಿಕೊಂಡಿದ್ದಾನೆ.

ಮಾಡಲು ಕೆಲಸವಿಲ್ಲದ ‘ಪ್ರಗತಿಭೂತ’ಗಳು ಕೂಡಲೇ ಆತನನ್ನು ಸಂಪರ್ಕಿಸಿ, ಆತನಿಗೆ ಹಿಡಿದಿರುವ ದೆವ್ವ ಬಿಡಿಸಿ, ಮೌಢ್ಯದ ಪಾಠ ಹೇಳಿ ವರ್ಲ್ಡ್ ಫೇಮಸ್ ಆಗಬಹುದಾದ ಅವಕಾಶವಿದೆ. ನಾಸಾದ ಸುನೀತ ವಿಲಿಯಮ್ಸ್ ತಂಡಕ್ಕೆ ಪಾದ್ರಿಗಳು (ಬ್ಯಾಪ್ಟೈಜಿಂಗ್) ದ್ರವಪ್ರೋಕ್ಷಣೆ ಮಾಡುತ್ತಾರೆ. ಬೆನ್ನಿ ಹಿನ್‌ನಂಥವರು, ಪಾದ್ರಿಗಳು ಮುಟ್ಟಿದೊಡನೆಯೇ ಜನರು ಕರೆಂಟ್ ಹೊಡೆದಂತೆ ಹೊರಳಾಡುತ್ತಾರೆ. ಆದರೆ ನಮ್ಮಲ್ಲಿ ವಿಜ್ಞಾನಿಗಳು ಒಂದೊಳ್ಳೆಯ ಸಾಧನೆಗೆ ದೇವರಲ್ಲಿ ಪ್ರಾರ್ಥಿಸಿ
ಬಂದರೆ, ಈ ಲದ್ದಿಜೀವಿಗಳಿಗೆ ಅದು ಮೌಢ್ಯ ಮತ್ತು ಸಂವಿಧಾನ ವಿರೋಧಿ. ಚಂದ್ರಯಾನದಂಥ ಮಹತ್ತರ ಸಾಧನೆಗೆ ಮುಂದಾಗಿರುವ ದೇಶದ ಮೇರುವಿಜ್ಞಾನಿ ಗಳಿಗೆ ಸಂವಿಧಾನದ ಪಾಠ ಹೇಳುವಷ್ಟು ಈ ಅಯೋಗ್ಯರು ದೊಡ್ಡವರಲ್ಲ.

ಅನ್ನದಾತನು ಭೂಮಿಗೆ, ಗೋಮಾತೆಗೆ, ನೇಗಿಲಿಗೆ ನಮಸ್ಕರಿಸಿ ಹೊಲ ಉಳಲಾರಂಭಿಸುವುದು ಆತನ ನಂಬಿಕೆ-ಸಂಸ್ಕಾರ. ನಂತರ ಆತ ಬೆವರು ಹರಿಸಿ ಪಾಪಿ-ಪುಣ್ಯವಂತರಿಗೂ ಅನ್ನವನ್ನುಣಿಸುವುದು ಆತನ ಕಾಯಕ. ನೇಗಿಲಿಗೆ ವಂದಿಸಬಾರದು, ವಿಜ್ಞಾನಿಗಳು ನಾಸ್ತಿಕರಾಗಿರಬೇಕು ಎಂದು ಬಯಸುವುದು ಮಾನಸಿಕ ಅಸ್ವಸ್ಥತೆಯ ಲಕ್ಷಣ. ಇಷ್ಟಕ್ಕೂ ಸಂವಿಧಾನದಲ್ಲಿರುವ ಸಮಾನತೆಯ ನೀತಿಗಳನ್ನು, ಅದರ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಬದ್ಧತೆಯಾದರೂ ಇವರಿಗಿದೆಯೇ? ಅದೂ ಇಲ್ಲ.

ಅದೇ, ಹಿಜಾಬ್ ವಿಚಾರ ಬಂದಾಗ ಸಂವಿಧಾನ ಏನು ಹೇಳಿದೆಯೆಂದು ಯಾವ ಪ್ರಗತಿಪರರೂ ಹೋಗಿ ಆ ವಿದ್ಯಾರ್ಥಿನಿಯರಿಗೆ ತಿಳಿಹೇಳಲಿಲ್ಲ. ಆಹಾರ ಪದಾರ್ಥಗಳಿಗೆ ಎಂಜಲು ಸೋಕಿಸುವ ‘ಪದ್ಧತಿ’ಯಲ್ಲಿರುವ ಅಸಹ್ಯ ನಂಬಿಕೆ, ಅಜಾನ್ ನಿಂದ ಶಬ್ದಮಾಲಿನ್ಯವೆಂದು ನ್ಯಾಯಾಲಯಗಳೇ ಹೇಳಿದರೂ ಈ ಢೋಂಗಿಗಳಿಗೆ ಅದನ್ನು ಅವೈಜ್ಞಾನಿಕ ಎಂದು ಹೇಳುವ ಗಂಡಸುತನವಿಲ್ಲ. ಹೋಗಲಿ, ಜೈನಮುನಿಗಳ ದೇಹವನ್ನು ೯ ತುಂಡು ಮಾಡಿದ ವಿಕೃತಿಯ ಬಗ್ಗೆಯೂ ದನಿಯೆತ್ತಲಿಲ್ಲ. ಮಾತೆತ್ತಿದರೆ ‘ಸಂವಿಧಾನ’, ‘ಅಪಾಯ’ ಈ ಎರಡು ಪದಗಳು ಬಿಟ್ಟರೆ ಉಳಿದದ್ದೆಲ್ಲಾ ಕತ್ತೆಲದ್ದಿಯಷ್ಟೇ!

ಚಂದ್ರಯಾನದ ವಿಜ್ಞಾನಿಗಳು ತಮ್ಮ ಪರಿಶ್ರಮಕ್ಕೆ ದೇವರ ಆಶೀರ್ವಾದವಿರಲಿ ಎಂದು ಬಯಸಿ ಅದನ್ನು ತಿಮ್ಮಪ್ಪನಲ್ಲಿ ನಿವೇದಿಸಿಕೊಂಡು ಬರಲು ತಿರುಪತಿಗೆ ಹೋದರೆ ಈ ಅಜ್ಞಾನಿಗಳ ಕಿತಾಪತಿ! ಅದೇ ರಾಕೆಟ್‌ನ ಮಾದರಿಯನ್ನು ಚರ್ಚ್‌ಗೋ ಮಸೀದಿಗೋ ಕೊಂಡೊಯ್ದಿದ್ದರೆ, ಆಗ ಈ ಕಿತಾಪತಿಗಳು ಕಣ್ಣು-ಕಿವಿ-ಬಾಯಿ ಮುಚ್ಚಿಕೊಂಡಿರುತ್ತಿದ್ದರು. ಸ್ಮಶಾನದಲ್ಲಿ ಮದುವೆ ಮಾಡಿ ಗ್ರಹಣ ದಲ್ಲಿ ಊಟ ಮಾಡಿದ ‘ಪೋಕ್ಸೋ’ ಗಿರಾಕಿಗಳ ಕಥೆ ಏನಾಗಿದೆ ಎಂಬುದನ್ನು ಸಮಾಜ ಕಾಣುತ್ತಿದೆ.

‘ಚಂದ್ರಯಾನ-೩ ಯಶಸ್ವಿಯಾಗಿ ದಡಸೇರುವ ವಿಶ್ವಾಸವಿದೆ. ಅದಕ್ಕಾಗಿ ಪ್ರತಿದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ. ಭಾರತ ಧರ್ಮಪ್ರಧಾನ ದೇಶ. ಇಲ್ಲಿ ಪ್ರತಿಯೊಂದನ್ನೂ ಧರ್ಮದ ತಳಹದಿ ಮೇಲೆ ಪ್ರಾರಂಭಿಸಲಾಗುತ್ತದೆ. ಆದ್ದರಿಂದ ಚಂದ್ರಯಾನ ಯಶಸ್ವಿಯಾಗಲು ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಶ್ಲಾಘನೀಯ’ ಎಂದಿದ್ದಾರೆ ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು. ಧರ್ಮದ ವಿಚಾರ ಬಂದಾಗ ಹೀಗೆ ಸ್ಪಂದಿಸುವುದು ಸ್ವಾಮೀಜಿ ಗಳ ಮೂಲಭೂತ ಪ್ರಶ್ನೆ. ದುರಂತವೆಂದರೆ, ಅನೇಕ ಕಾವಿಧಾರಿಗಳು ಸ್ವಜಾತಿ ವಿಚಾರದಲ್ಲಿ ಮಾತ್ರ ಸಂವೇದನಾಶೀಲರಾಗಿರುತ್ತಾರಷ್ಟೇ! ಹೀಗಾಗಿ,
ಅಯೋಗ್ಯರು, ನಾಲಾಯಕ್ಕುಗಳೆಲ್ಲಾ ಸಮಾಜಕ್ಕೆ ಪಾಠ ಹೇಳುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ರಾಷ್ಟ್ರಕವಿ ಕುವೆಂಪು ಅವರು ಎಂಥ
ಶ್ರೇಷ್ಠರು, ಮಾರ್ಗದರ್ಶಕರು ಎಂಬುದನ್ನು ಇಂಥವರಿಂದ ತಿಳಿಯಬೇಕಾದ ಅಗತ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!