Saturday, 27th July 2024

ಮರಣದಂಡನೆಗೆ ಗುರಿಯಾದ ವಿಜ್ಞಾನಿ ಲವಾಸಿಯೇರ್‌

ಹಿಂದಿರುಗಿ ನೋಡಿದಾಗ

ರಸಾಯನ ಮತ್ತು ಜೀವವಿಜ್ಞಾನದ ಐತಿಹಾಸಿಕ ಬೆಳವಣಿಗೆಯಲ್ಲಿ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಲವಾಸಿಯೇರ್, ವಿಜ್ಞಾನಕ್ಕೆ ತಿಳಿದಿದ್ದ ಎಲ್ಲ ಧಾತು ಗಳನ್ನು ಪಟ್ಟಿ ಮಾಡಿ ವೈಜ್ಞಾನಿಕ ನಾಮಧೇಯವನ್ನು ನೀಡಿದ. ಸಿಲಿಕಾನ್ ಧಾತುವನ್ನು ಕಂಡುಹಿಡಿಯುವುದಕ್ಕೆ ಮೊದಲೇ ಅದರ ಅಸ್ತಿತ್ವವನ್ನು ಪ್ರತಿಪಾದಿಸಿದ. ವಸ್ತುವು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಬಹುದು, ಹಾಗೆ ಆಗುವಾಗ ಅದರ ರಾಶಿಯು ಬದಲಾಗುವುದಿಲ್ಲವೆಂದ.

ಮಧ್ಯಯುಗದ ಯುರೋಪಿನಲ್ಲಿ ನಡೆದ ಪುನರುತ್ಥಾನ ಅಥವಾ ರಿನೇಸಾನ್ಸ್ ಅವಧಿಯು ಇಡೀ ಸಾರಸ್ವತ ಜಗತ್ತಿನಲ್ಲಿ ಜ್ಞಾನ ಪ್ರವಾಹವನ್ನೇ ಹರಿಸಿತು. ೧೭ನೇ ಶತಮಾನದಲ್ಲಂತೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಮಹತ್ತರ ಸಂಶೋಧನೆ ಗಳಾದವು. ೧೬೨೮ರಲ್ಲಿ ವಿಲಿಯಂ ಹಾರ್ವೆ ನಮ್ಮ ದೇಹ
ದಲ್ಲಾಗುವ ರಕ್ತಪರಿಚಲನೆಯನ್ನು ಅನಾವರಣ ಮಾಡಿದ. ಇದರೊಂದಿಗೆ ಅಂಗಕ್ರಿಯಾ ವಿಜ್ಞಾನದಲ್ಲಿ ಹೊಸ ಜ್ಞಾನದ್ವಾರ ತೆರೆದುಕೊಂಡಿತು. ಈ ಅವಽಯಲ್ಲಿ ವೈದ್ಯ ವಿಜ್ಞಾನಿಗಳಿಗೆ ಆಹಾರ ಸೇವನೆ, ಉಸಿರಾಟ ಹಾಗೂ ರಕ್ತಪರಿಚಲನೆಯ ಬಗ್ಗೆ ಕುತೂಹಲ ಮೂಡಿತು. ಇದನ್ನು ತಣಿಸುವಂಥ ಬೆಳವಣಿಗೆ ಗಳು ಭೌತ ಮತ್ತು ರಸಾಯನ ವಿಜ್ಞಾನ ಕ್ಷೇತ್ರಗಳಲ್ಲಾದವು. ಇವೆಲ್ಲವೂ ಉಸಿರಾಟ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ತಿಳಿವನ್ನು ಬಯಲು ಮಾಡಿದವು.

೧೭ನೇ ಶತಮಾನದ ಆರಂಭದಲ್ಲಿ ‘ವೈದ್ಯರಸಾಯನ ಪಂಥ’ವು (ಅಯಟ್ರೋಕೆಮಿಕಲ್ ಸ್ಕೂಲ್) ಅಸ್ತಿತ್ವದಲ್ಲಿತ್ತು. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿ ವಿವರಿಸಬಲ್ಲ ರಸಾಯನ ವಿಜ್ಞಾನವಿದು. ಇದರ ಮುಖ್ಯ ಪ್ರವರ್ತಕ, -ಮಿಶ್ ರಸಾಯನ ವಿಜ್ಞಾನಿ ಹಾಗೂ ವೈದ್ಯ ಜಾನ್ ಬ್ಯಾಪ್ಟಿಸ್ಟ್ -ನ್ ಹೆಲ್ಮಂಟ್. ವಿಜ್ಞಾನ-ಅತೀಂದ್ರಿಯತೆ-ಮೌಢ್ಯ-ಚರ್ಚಿನ ಕಿರುಕುಳ-ಧಾರ್ಮಿಕ ವಿಚಾರಣೆಗಳಿಂದ ನುಜ್ಜುಗುಜ್ಜಾಗಿದ್ದ ಇವನು ಮೊದಲ ಬಾರಿಗೆ ಅನಿಲ (ಗ್ಯಾಸ್) ಎಂಬ ಶಬ್ದವನ್ನು ರೂಪಿಸಿದ. ಇದರ ಮೂಲ ‘ಕೇಯಾಸ್’ ಎಂಬ ಗ್ರೀಕ್ ಶಬ್ದ.

ಕೇಯಾಸ್ ಎಂದರೆ ‘ಅಸ್ತವ್ಯಸ್ತ’ ಎನ್ನಬಹುದು. ಅನಿಲದಲ್ಲಿ ಅಣುಗಳು ಹೇಗೆಂದರೆ ಹಾಗೆ ಚಲಿಸುತ್ತಿರುವುದೇ ಈ ನಾಮಕರಣಕ್ಕೆ ಕಾರಣವೆನ್ನಬಹುದು. ಹೆಲ್ಮಂಟ್, ಗಾಳಿಯು ಶ್ವಾಸಕೋಶಗಳ ಮೂಲಕ ಹಾದುಹೋಗುವಾಗ, ಅದು ‘ಜರಡಿ’ಯಂತೆ ಕೆಲಸ ಮಾಡುತ್ತದೆ ಎಂದ. ಆದರೆ ಅವನು ಉದರ ಸ್ನಾಯುಗಳು ಈ ಜರಡಿಹಿಡಿವ ಕೆಲಸ ಮಾಡುತ್ತವೆ ಎಂದು ತಪ್ಪಾಗಿ ಭಾವಿಸಿದ್ದ.

೧೬೬೦ರಲ್ಲಿ ವಿಜ್ಞಾನಿ ರಾಬರ್ಟ್ ಬಾಯ್ಲ್, ‘ಜೀವಿಗಳು ಉಸಿರಾಡಲು ಇಡೀ ಗಾಳಿಯ ಅಗತ್ಯವಿಲ್ಲ. ಅದರಲ್ಲಿನ ಯಾವುದೋ ಒಂದು ಘಟಕವಷ್ಟೇ ಸಾಕು’ ಎಂದ. ಆದರೆ ವಿಜ್ಞಾನಿಗಳು ಈ ಮಾತನ್ನು ಒಪ್ಪಲಿಲ್ಲ. ಅವರೆಲ್ಲ ‘ದಹನಸತ್ವ ಸಿದ್ಧಾಂತ’ವನ್ನು (ಹ್ಲಜಿಸ್ಟನ್ ಥಿಯರಿ) ನಂಬಿದ್ದರು. ಇದರನ್ವಯ, ಉರಿಯುತ್ತಿರುವ ಪ್ರತಿ ವಸ್ತುವು ‘ಹ್ಲಜಿಸ್ಟನ್’ ಎಂಬ ಅದೃಶ್ಯ ಅನಿಲವನ್ನು ಉತ್ಪಾದಿಸುವ ಕಾರಣ, ಶಾಖವು ಉತ್ಪಾದನೆಯಾಗುತ್ತದೆ ಎಂದು ತಿಳಿದಿದ್ದರು. ಈ ಹೊತ್ತಿಗಾಗಲೇ ರಾಬರ್ಟ್ ಬಾಯ್ಲ್ ತನ್ನ ‘ಬಾಯ್ಲ್ ನಿಯಮ’ವನ್ನು ರೂಪಿಸಿದ್ದು, ಅನಿಲದ ಒತ್ತಡ ಮತ್ತು ಗಾತ್ರದ ನಡುವೆ ಇರುವ ವಿಲೋಮ ಸಂಬಂಧವನ್ನು ಅನಾವರಣ ಮಾಡಿದ್ದ.

ವೈದ್ಯರಸಾಯನ ಶಾಖೆಯ ಮತ್ತೊಬ್ಬ ವಿಜ್ಞಾನಿ ಜಾನ್ ಮೇಯಾವ್; ಆಂಟಾಯಿನ್ ಲವಾಸೀಯೇರ್‌ಗಿಂತಲೂ ಮೊದಲೇ ‘ಉರಿಯುವಿಕೆ’ ಹಾಗೂ ‘ಉಸಿರಾಡುವಿಕೆ’ಗೆ ಸಂಬಂಧಿಸಿ ಪ್ರಯೋಗ ನಡೆಸಿದವನು. ಇವನು ವಸ್ತುಗಳು ಉರಿಯುವಾಗ/ಪ್ರಾಣಿಗಳು ಉಸಿರಾಡುವಾಗ ಹೊರಬರುವ ಗಾಳಿಯನ್ನು ಸೈ-ನ್ ಬಳಸಿ ನೀರಿನ ಕೆಳಗೆ ಸಂಗ್ರಹಿಸುವ ಪ್ರಯೋಗ ಮಾಡಿ ‘ಒಟ್ಟು ಗಾಳಿಯಲ್ಲಿ ನಿರ್ದಿಷ್ಟ ಭಾಗವು ಮಾತ್ರ ಉಪಯುಕ್ತವಾಗಿದೆ’ ಎಂದು ತೋರಿಸಿ ಅದನ್ನು ‘ನೈಟ್ರೋ-ಏರಿಯಲ್’ ಎಂದ.

ಈ ನೈಟ್ರೋ-ಏರಿಯಲ್ ಈಗ ‘ಆಕ್ಸಿಜನ್’ ಹೆಸರಿನಲ್ಲಿ ಪರಿಚಿತವಾಗಿದೆ. ಈತ, ‘ನಾವು ಉಸಿರಾಡಲು ಗಾಳಿ ಅಗತ್ಯ. ಶ್ವಾಸಕೋಶಗಳು ಪರಿಸರದಲ್ಲಿನ
ಗಾಳಿಯನ್ನು ಹೀರುತ್ತವೆ. ಅಲ್ಲಿಂದ ಮಿದುಳಿಗೆ ಹೋಗಿ ಸ್ನಾಯುಗಳಿಗೆ ಸಾಗುತ್ತದೆ’ ಎಂಬ ವಿಚಾರವನ್ನೂ ಮಂಡಿಸಿದ. ಸ್ನಾಯುಗಳು ಹೆಚ್ಚೆಚ್ಚು ಕೆಲಸ ಮಾಡುವಾಗ, ಹೆಚ್ಚೆಚ್ಚು ಉಸಿರಾಡಬೇಕಾಗುತ್ತದೆ ಹಾಗೂ ಹೆಚ್ಚೆಚ್ಚು ನೈಟ್ರೋ- ಏರಿಯಲ್ ಬಳಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದ. ವಿಲಿಯಂ ಹಾರ್ವೆಯ ಅನುಯಾಯಿ ರಿಚರ್ಡ್ ಲೋವರ್ ೧೬೬೯ರಲ್ಲಿ ರಕ್ತ ಪೂರಣವನ್ನು (ಬ್ಲಡ್ ಟ್ರಾನ್ಸ್ ಫ್ಯಾಶನ್) ಜಾರಿಗೆ ತಂದ ಆದ್ಯ. ಈತ ಉಸಿರಾಟ ಸಂಬಂಧಿತ ವಿಶಿಷ್ಟ ಪ್ರಯೋಗವನ್ನು ನಿರ್ವಹಿಸಿದ. ಧಮನಿಗಳಲ್ಲಿ ಹರಿವ ರಕ್ತ ಅಚ್ಚಗೆಂಪಗೆ ಇದ್ದರೆ, ಸಿರೆಯಲ್ಲಿ ಹರಿವ ರಕ್ತ ಮಾಸಲು ಗೆಂಪು ಬಣ್ಣಕ್ಕಿ ರುತ್ತದೆ. ಇದಕ್ಕೆ ಕಾರಣ ತಿಳಿಯಲು ಈತ ಪ್ರಯೋಗಗಳನ್ನು ಕೈಗೊಂಡ. ಈ ಕುತೂಹಲ ಲೋವರ್ ಗಿಂತಲೂ ಮೊದಲೇ ಆಂಡ್ರಿಯಸ್ ವೆಸಾಲಿಯಸ್ ಮತ್ತು ರಾಬರ್ಟ್ ಹೂಕ್‌ರನ್ನು ಕಾಡಿತ್ತು.

ಇವನು ನಾಯಿಯ ಎದೆಗೂಡನ್ನು ಛೇದಿಸಿ, ಶ್ವಾಸಕೋಶಕ್ಕೆ ತಿದಿ ಜೋಡಿಸಿ, ಅದರ ಮೂಲಕ ಗಾಳಿಯನ್ನು ಪಂಪ್ ಮಾಡಲು ವ್ಯವಸ್ಥೆಯನ್ನು
ರೂಪಿಸಿದ. ಮಾಸಲುಗೆಂಪು ರಕ್ತವನ್ನು ಕೊಂಡೊಯ್ಯುವ (ಆಕ್ಸಿಜನ್ ಕೊರೆಯಿರುವ ಮತ್ತು ಕಾರ್ಬನ್-ಡೈಯಾಕ್ಸೈಡ್ ಅಧಿಕವಿರುವ) ಮಹಾಸಿರೆಗಳ (ವೀನ-ಕೇವ) ಮೂಲಕ ರಕ್ತ ವನ್ನು ಪಂಪ್ ಮಾಡಿದ. ಪಂಪ್ ಮಾಡುವಾಗಲೇ ಗಾಳಿಯನ್ನೂ ಹಾಯಿಸಿದ. ಆಗ ಹೃದಯದಿಂದ ಹೊರಬರುವ
ಶ್ವಾಸಕ ಸಿರೆಗಳ (ಪಲ್ಮನರಿ ವೇನ್ಸ್) ಮೂಲಕ ಹೊರಬರುವ ರಕ್ತ ಅಚ್ಚಗೆಂಪಗೆ ಇರುವುದನ್ನು ತೋರಿಸಿ ‘ಮಾಸಲುಗೆಂಪು ರಕ್ತ ತನ್ನ ಬಣ್ಣ ಬದಲಿಸಲು ಅದು ಗಾಳಿಯೊಡನೆ ಬೆರೆತದ್ದೇ ಕಾರಣ’ ಎಂದು ಸಾರಿದ.

ಆದರೆ ‘ಗಾಳಿಯಲ್ಲಿರುವ ಆಕ್ಸಿಜನ್ ಮಾಸಲುಗೆಂಪು ರಕ್ತವನ್ನು ಅಚ್ಚಗೆಂಪು ರಕ್ತವನ್ನಾಗಿಸುತ್ತದೆ’ ಎನ್ನುವುದನ್ನು ವಿವರಿಸಲು ಲವಾಸಿಯರ್ ಬರಬೇಕಾಯಿತು. ಉಸಿರಾಟ ವಿಜ್ಞಾನಕ್ಕೆ ಮಹಾತಿರುವು ಬರಲು ಗಾಳಿಯಲ್ಲಿ ರುವ ವಿವಿಧ ಅನಿಲಗಳ ಆವಿಷ್ಕಾರವಾಗಬೇಕಾಯಿತು. ಸ್ಕಾಟಿಶ್ ರಸಾಯನ ವಿಜ್ಞಾನಿ ಜೋಸೆ- ಬ್ಲಾಕ್ ೧೭೫೯ರಲ್ಲಿ ಕಾರ್ಬನ್ ಡೈಯಾಕ್ಸೈಡನ್ನು ಕಂಡುಹಿಡಿದ. ಜತೆಗೆ ಪ್ರಾಣಿ ಗಳು ಉಸಿರಾಡಿ ಬಿಟ್ಟ ಗಾಳಿಯಲ್ಲಿ ಕಾರ್ಬನ್ ಡೈಯಾಕ್ಸೈಡ್ ಇರುತ್ತದೆ ಎಂದೂ ಸಾರಿದ. ಹೆನ್ರಿ ಕ್ಯಾವೆಂಡಿಶ್ ೧೭೬೬ರಲ್ಲಿ ಹೈಡ್ರೋಜನ್ ಅಸ್ತಿತ್ವವನ್ನು ಅನಾವರಣ ಮಾಡಿದ.

ಡೆನಿಯಲ್ ರುದರ್ ಫೋರ್ಡ್ ೧೭೨೨ರಲ್ಲಿ ನೈಟ್ರೋಜನ್ ಅಸ್ತಿತ್ವವನ್ನು ನಿರೂಪಿಸಿದ. ಜೋಸೆ- ಫ್ರೀಸ್ಟ್ಲೆ ಮತ್ತು ಕಾರ್ಲ್ ವಿಲ್ಹೆಲ್ಮ್ ಶೀಲೆ ೧೭೭೧ರಲ್ಲಿ ಆಕ್ಸಿಜನ್ ಅಸ್ತಿತ್ವವನ್ನು ಪುರಾವೆ ಸಮೇತ ಸಾರಿದರು. ಇದಾದ ೪ ವರ್ಷಗಳ ನಂತರ, ಲವಾಸಿಯೇರ್ ಈ ಎಲ್ಲ ಮಾಹಿತಿಯನ್ನು ಸಮನ್ವಯಗೊಳಿಸಿ,
ಈ ಅನಿಲಗಳ ನಡುವಿನ ಸಂಬಂಧಗಳನ್ನು ವಿಶದೀಕರಿಸಿ, ಉಸಿರಾಟ ವಿಜ್ಞಾನದ ಸಮಾಗ್ರ ಮಾಹಿತಿಯನ್ನು ಸಮೀಕರಿಸಿ, ವಿಜ್ಞಾನಿಗಳ ಮುಂದೆ ನಿಖರ ವಿವರಣೆ ತೆರೆದಿಟ್ಟ. ಆಂಟೋಯಿನ್ ಲಾರಂಟ್ ದೆ ಲವಾಸಿಯೇರ್ ಆಗಸ್ಟ್ ೨೬, ೧೭೪೩ರಲ್ಲಿ ಪ್ಯಾರಿಸ್‌ನಲ್ಲಿ ಹುಟ್ಟಿದ. ತಂದೆ ಜೀನ್ ಆಂಟೋಯಿನ್ ಲವಾಸಿಯೇರ್ ವಕೀಲನಾಗಿದ್ದ. ತಾಯಿ ಎಮಿಲಿ ಪಂಕ್ಟಿಸ್ ಓರ್ವ ನ್ಯಾಯಾಽಶನ ಮಗಳಾಗಿದ್ದಳು.

ಹಾಗಾಗಿ ಹೆತ್ತವರ ಬಯಕೆ ಪೂರ್ಣಗೊಳಿಸಲು ಕಾನೂನು ಶಾಲೆ ಸೇರಿ ಪದವಿ ಪಡೆದು ‘ಆರ್ಡರ್ ಆಫ್ ಬ್ಯಾರಿಸ್ಟರ್’ ಸೇರಿದ. ಆದರೆ ಎಂದಿಗೂ ವಕೀಲಿ ವೃತ್ತಿ ನಡೆಸಲಿಲ್ಲ. ಕಾರಣ ಇವನಿಗೆ ವಿಜ್ಞಾನದಲ್ಲಿ ಆಸಕ್ತಿಯಿತ್ತು. ಈತ ಗಿಯೋಲ್ಮ -ಂಸ್ವ ರೊವಾಲ್‌ರಿಂದ ರಸಾಯನ ವಿಜ್ಞಾನ ಮತ್ತು ಜೀನ್
ಈಟಿಯೆನ್ನ ಗೀಟರ್ಡ್‌ರಿಂದ ಭೂವಿಜ್ಞಾನವನ್ನು ಕಲಿತಿದ್ದ. ಈ ಹಿನ್ನೆಲೆಯಲ್ಲಿ ‘ಜಿಪ್ಸಮ್’ ಮೇಲೆ ಜೀವಮಾನದ ಮೊದಲ ಮಹಾಪ್ರಬಂಧ ಬರೆದು ಫ್ರೆಂಚ್ ವಿಜ್ಞಾನ ಅಕಾಡೆಮಿಗೆ ಸಲ್ಲಿಸಿದ. ಪ್ಯಾರಿಸ್‌ನಲ್ಲಿ ಎಲ್ಲೆಲ್ಲಿ ಎಂಥ ಬೀದಿದೀಪಗಳನ್ನು ಹೇಗೆ ನಿರ್ಮಿಸಬೇಕೆಂದು ಮತ್ತೊಂದು ಮಹಾಪ್ರಬಂಧ ಸಲ್ಲಿಸಿದ.

ಕೂಡಲೇ ಆತನಿಗೆ ಅಕಾಡೆಮಿ ಸದಸ್ಯತ್ವ ದೊರೆಯಿತು. ಈ ಅವಧಿಯಲ್ಲಿ ‘-ರ್ಮೇ ಜೆನೆರೇಲ್’ ಎಂಬ ಖಾಸಗಿ ಸಂಸ್ಥೆಯಲ್ಲಿ ಭಾಗೀದಾರನಾದ. ಇದು ಫ್ರೆಂಚ್ ಅರಸರ ಪರವಾಗಿ ಸಾರ್ವಜನಿಕರಿಂದ ಸುಂಕ ಮತ್ತು ತೆರಿಗೆ ಸಂಗ್ರಹಿಸುವ ಸಂಸ್ಥೆಯಾಗಿತ್ತು. ಈ ನಡುವೆ ಸಂಸ್ಥೆಯ ಪಾಲುದಾರರೊಬ್ಬರ ಮಗಳಾದ ಮೇರಿ ಆನ್ ಪಿಯರೆಟ್ ಪೌಲ್ಜ್‌ಳನ್ನು ಮದುವೆಯಾದ. ಈಕೆ ಲವಾಸಿಯೇರ್ ಪಾಲಿಗೆ ಕೇವಲ ಹೆಂಡತಿಯಾಗಿರದೆ ಸಹಾಯಕಿ, ಅನುವಾದಕಿ,
ಚಿತ್ರಗಾರಳಾಗಿದ್ದಳು ಹಾಗೂ ತನ್ನದೇ ಆದ ರೀತಿಯಲ್ಲಿ ರಸಾಯನ ವಿಜ್ಞಾನದ ಅಭಿವರ್ಧನೆಗೆ ಕಾರಣಳಾದಳು. ಇಂಗ್ಲಿಷ್‌ನಲ್ಲಿ ಪ್ರಕಟವಾಗುತ್ತಿದ್ದ ವೈಜ್ಞಾನಿಕ ಬರಹಗಳನ್ನೆಲ್ಲ -ಂಚಿಗೆ ಅನುವಾದಿಸಿ ಲವಾಸಿಯೇರ್‌ಗೆ ನೀಡುತ್ತಿದ್ದಳು. ರಸಾಯನ ಮತ್ತು ಜೀವವಿಜ್ಞಾನದ ಐತಿಹಾಸಿಕ ಬೆಳವಣಿಗೆ
ಯಲ್ಲಿ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಲವಾಸಿಯೇರ್, ತನ್ನ ಕಾಲದಲ್ಲಿ ವಿಜ್ಞಾನಕ್ಕೆ ತಿಳಿದಿದ್ದ ಎಲ್ಲ ಧಾತುಗಳನ್ನು ಪಟ್ಟಿ ಮಾಡಿ ಕ್ರಮಬದ್ಧ ವೈಜ್ಞಾನಿಕ ನಾಮಧೇಯವನ್ನು ನೀಡಿದ.

ಸಿಲಿಕಾನ್ ಧಾತುವನ್ನು ಕಂಡುಹಿಡಿಯುವುದಕ್ಕೆ ಮೊದಲೇ ಅದರ ಅಸ್ತಿತ್ವವನ್ನು ಪ್ರತಿಪಾದಿಸಿದ. ವಸ್ತುವು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಾಗಬಹುದು, ಹಾಗೆ ಆಗುವಾಗ ಅದರ ರಾಶಿಯು (ಮಾಸ್) ಬದಲಾಗುವುದಿಲ್ಲವೆಂದ. ಗ್ರೀಕ್ ಭಾಷೆಯಲ್ಲಿ ‘ಆಮ್ಲ ಉತ್ಪಾದಕ’ ಎಂಬ ಅರ್ಥ ಕೊಡುವ ‘ಆಕ್ಸಿಜನ್’ ಎಂಬ ಹೆಸರನ್ನು ನೀಡಿದ. ಉರಿಯುವಿಕೆ ಹಾಗೂ ಉತ್ಕರ್ಷಣ ಕ್ರಿಯೆಗಳಲ್ಲಿ ಆಕ್ಸಿಜನ್ ಅನಿಲದ ಪಾತ್ರವನ್ನು ಖಚಿತಪಡಿಸಿದ. ಹೊತ್ತಿ ಉರಿಯುವ ಅನಿಲವು ನೀರಿನ ಉತ್ಪಾದನೆಯಲ್ಲಿ ಪಾಲುಗೊಳ್ಳುವ ಕಾರಣ ಅದಕ್ಕೆ ‘ಹೈಡ್ರೋ ಜನ್’ ಎಂಬ ಹೆಸರು ಸೂಚಿಸಿದ. ಅಳತೆ ಮತ್ತು ತೂಕಕ್ಕೆ ಸಂಬಂಧಿಸಿ ಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತಂದ.

೧೭೬೦ರಲ್ಲಿ ವಿಜ್ಞಾನ ಕ್ಷೇತ್ರದಲ್ಲಾದ ಹಲವು ಸಂಶೋಧನೆ ಗಳು ಉಸಿರಾಟ ವಿಜ್ಞಾನದ ಸ್ವರೂಪ ಅರಿಯಲು ನೆರವಾದವು. ‘ಜಲವಾಯು ರಸಾಯನ ವಿಜ್ಞಾನ’ದಲ್ಲಿ (ನ್ಯುಮ್ಯಾಟಿಕ್ ಕೆಮಿಸ್ಟ್ರಿ) ಹೊಸ ಸಂಶೋಧನೆಗಳಾದವು. ಒಂದು ವಸ್ತು ಉರಿದಾಗ ಅಥವಾ ಒಂದು ಜೀವಿ ಉಸಿರಾಡಿದಾಗ, ನಿಶ್ಚಿತ
ಪ್ರಮಾಣದ ಗಾಳಿ ಉತ್ಪಾದನೆಯಾಗುತ್ತದೆ ಎಂಬುದನ್ನು ಪ್ರಯೋಗಗಳಿಂದ ನಿರೂಪಿಸಿದ. ಉಸಿರಾಟ ವಿಜ್ಞಾನದ ಪರಿಕಲ್ಪನೆಯಲ್ಲಿ ತಪ್ಪಿಹೋಗಿರುವ ಕೊಂಡಿಗಳನ್ನು ಸರಿ ಜೋಡಿಸಲು ಲವಾಸಿಯೇರ್ ನಿರ್ಧರಿಸಿದ. ೧೯೭೭ರಲ್ಲಿ ‘ಶ್ವಾಸಕೋಶಗಳ ಒಳಬರುವ ಪರಿಶುದ್ಧ ಗಾಳಿ, ಹೊರಹೋಗುವಾಗ ಸ್ಥಿರಪ್ರಮಾಣದ ಗಾಳಿಯ ರೂಪದಲ್ಲಿ ಅಥವಾ ಸೀಮೆಸುಣ್ಣದ ಆಮ್ಲವಾಗಿ ಪರಿವರ್ತಿತವಾಗುತ್ತದೆ’ ಎಂದು ಪ್ರಬಂಧದಲ್ಲಿ ಪ್ರಕಟಿಸಿದ.

ವಸ್ತುಗಳು ಉರಿದಾಗ, ಶಾಖ ಉತ್ಪಾದನೆಯಾಗುತ್ತದೆ. ಶ್ವಾಸಕೋಶಗಳಲ್ಲಿ ಇದೇ ಶಾಖ ‘ಪ್ರಾಣಿಶಾಖ’ವಾಗಿ ಹೊರಹರಿಯುತ್ತದೆ ಎಂದ. ಲವಾಸಿಯೇರನಿಗೆ ಪಿಯರಿ-ಸೈಮನ್ ಲಪ್ಲಾಸ್ ಎಂಬ ಗಣಿತ ವಿಜ್ಞಾನಿ ಗೆಳೆಯನಾಗಿದ್ದ. ಅವನ ನೆರವಿನಿಂದ ಉಸಿರಾಟ ವಿಜ್ಞಾನದ ಪ್ರಯೋಗಗಳನ್ನು ಮುಂದುವರಿಸಿದ.
೧೭೮೨ರಲ್ಲಿ ಐಸ್ ಕೆಲಾರಿಮೀಟರ್ ಎಂಬ ಸಾಧನವನ್ನು ರೂಪಿಸಿದ. ವಸ್ತುವೊಂದು ಉರಿಯುವಾಗ ಅಥವಾ ಜೀವಿ ಯೊಂದು ಉಸಿರಾಡುವಾಗ ಎಷ್ಟು ಶಕ್ತಿ ಉತ್ಪಾದನೆಯಾಗುತ್ತದೆ ಎಂಬುದನ್ನು ಈ ಸಾಧನ ಅಳೆಯುತ್ತಿತ್ತು. ಐಸ್ ಕೆಲಾರಿ ಮೀಟರಿನಲ್ಲಿ ಒಂದರೊಳಗೆ ಒಂದರಂತೆ ೩ ವೃತ್ತಗಳಿದ್ದವು.

ಮಧ್ಯದ ವೃತ್ತದಲ್ಲಿ ಪರೀಕ್ಷಾ ವಸ್ತುವನ್ನು, ಅಂದರೆ ಗಿನಿಪಿಗ್ ಅಥವಾ ಉರಿಯುವ ಕಲ್ಲಿದ್ದಲ ತುಂಡನ್ನು ಇಡುತ್ತಿದ್ದರು. ಜತೆಗೆ ನಿಗದಿತ ಪ್ರಮಾಣದ ಮಂಜನ್ನು ಇರಿಸುತ್ತಿದ್ದರು. ಗಿನಿಪಿಗ್ ಉಸಿರಾಡುವಾಗ ಇಲ್ಲವೇ ಕಲ್ಲಿದ್ದಲ ತುಂಡು ಉರಿಯುವಾಗ ಉತ್ಪಾದನೆಯಾಗುತ್ತಿದ್ದ ಶಾಖವು ಈ ಮಂಜನ್ನು ಕರಗಿಸುತ್ತಿತ್ತು. ಅತ್ಯಂತ ಹೊರಗಿನ ವೃತ್ತದಲ್ಲಿ ಮತ್ತೆ ಮಂಜನ್ನು ಇಟ್ಟು ಶಾಖವು ಹೊರಹೋಗದಂತೆ ರಕ್ಷಿಸುತ್ತಿದ್ದರು. ಈ ವ್ಯವಸ್ಥೆಯಲ್ಲಿ ಉತ್ಪಾದನೆ ಯಾಗುವ ಸ್ಥಿರ ಪ್ರಮಾಣದ ಗಾಳಿಯನ್ನು (ಕಾರ್ಬನ್ ಡೈಯಾಕ್ಸೈಡ್) ಸಂಗ್ರಹಿಸುವ ಸಜ್ಜಿಕೆಯೂ ಇತ್ತು. ಲವಾಸಿಯೇರ್ ಹಾಗೂ ಲಾಪ್ಲಾಸ್ ಸೇರಿ ಸರಣಿ ಪ್ರಯೋಗಗಳನ್ನು ಕೈಗೊಂಡು, ಉತ್ಪಾದನೆಯಾಗುವ ಶಾಖ ಮತ್ತು ಸ್ಥಿರಪ್ರಮಾಣದ ಗಾಳಿಯನ್ನು ಲೆಕ್ಕ ಹಾಕಿದರು.

ಕೊನೆಗೆ ‘ಉಸಿರಾಟವು ಶ್ವಾಸಕೋಶಗಳಲ್ಲಿ ನಡೆಯುತ್ತದೆ. ಇದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ನಡುವೆ ನಿಧಾನವಾಗಿ ನಡೆವ ಉತ್ಕರ್ಷಕ ಕ್ರಿಯೆ. ಇದರಲ್ಲಿ ಉತ್ಪತ್ತಿಯಾಗುವ ಶಾಖ ಶರೀರದಾದ್ಯಂತ ಪಸರಿಸುತ್ತದೆ, ಜೀವಿ ಬದುಕುಳಿಯಲು ನೆರವಾಗುತ್ತದೆ’ ಎಂದು ತೀರ್ಮಾನಿಸಿದ. ಜೀವಕೋಶಗಳ ಒಳಗಿರುವ ಮೈಟೋಕಾಂಡ್ರಿಯ ಎನ್ನುವ ಕಣಾಂಗಗಳಲ್ಲಿ ನೈಜ ಕೋಶಾಂತರ್ಗತ ಉತ್ಕರ್ಷಣ ನಡೆದು ಶಕ್ತಿ ಬಿಡುಗಡೆಯಾಗುತ್ತದೆ ಎನ್ನುವ ವಿಚಾರ ೧೯ನೇ ಶತಮಾನದಲ್ಲಿ ಎಡ್ವರ್ಡ್ -ಗರ್‌ನ ಪ್ರಯೋಗಗಳಿಂದ ದೊರೆಯಿತು.

ಜೀವಿ ಉಸಿರಾಡುವಾಗ ನಿರ್ದಿಷ್ಟವಾಗಿ ಎಷ್ಟು ಆಕ್ಸಿಜನ್ನನ್ನು ಬಳಸಿಕೊಳ್ಳುತ್ತದೆ ಎಂಬುದನ್ನು ಲವಾಸಿಯೇರ್ ಪ್ರಾಯೋಗಿಕವಾಗಿ ನಿರೂಪಿಸ ಬೇಕಾಯಿತು. ಇದಕ್ಕಾಗಿ ಅವನು ಸರಣಿ ಪ್ರಯೋಗ ನಡೆಸಿದ, ರಸಾಯನ ವಿಜ್ಞಾನಿ ಆರ್ಮಂಡ್ ಸೀಗ್ವಿನ್‌ನ ನೆರವು ಪಡೆದ. ಸೀಗ್ವಿನ್ ತನ್ನ ಮುಖಕ್ಕೆ
ಗಾಳಿಯಾಡದಂಥ ಮಾಸ್ಕ್ ಹಾಕಿಕೊಂಡ. ಅದರಿಂದ ಹೊರಟ ಕೊಳವೆ ಆಕ್ಸಿಜನ್‌ಭರಿತ ಟ್ಯಾಂಕಿನ ಸಂಪರ್ಕ ಪಡೆದಿತ್ತು. ಸೀಗ್ವಿನ್ ಒಂದು ಗಂಟೆವರೆಗೆ ಉಸಿರಾಡಿದ. ಈ ಅವಧಿಯಲ್ಲಿ ಎಷ್ಟು ಸಲ ಉಸಿರಾಡಿದ, ಎಷ್ಟು ಆಕ್ಸಿಜನ್ ಬಳಸಿಕೊಂಡ ಇತ್ಯಾದಿ ಅಂಶಗಳನ್ನು ಕಲೆಹಾಕಿದ. ಈ ಪ್ರಯೋಗವು, ಒಬ್ಬ
ವ್ಯಕ್ತಿ ಮಾಡುವ ಕೆಲಸಕ್ಕೆ ಬೇಕಾಗುವ ಆಕ್ಸಿಜನ್ ಪ್ರಮಾಣವನ್ನು ನಿರ್ಧರಿಸುತ್ತದೆ.

ವ್ಯಕ್ತಿ ಆರಾಮವಾಗಿರುವಾಗ ಎಷ್ಟು ಆಕ್ಸಿಜನ್ನನ್ನು ಬಳಸಿಕೊಳ್ಳುತ್ತಾನೋ, ವ್ಯಾಯಾಮ/ದೈಹಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಅದಕ್ಕಿಂತಲೂ ೩ ಪಟ್ಟು ಹೆಚ್ಚು ಆಕ್ಸಿಜನ್ ಬೇಕಾಗುತ್ತದೆ. ಉಪವಾಸ ಇರುವಾಗ ಬೇಕಾಗುವುದಕ್ಕಿಂತ ೩ ಪಟ್ಟು ಹೆಚ್ಚು ಆಕ್ಸಿಜನ್ ಊಟ ಮಾಡುವಾಗ ಬೇಕಾಗುತ್ತದೆ. ಈ ಭಿನ್ನ ಚಟುವಟಿಕೆಗಳನ್ನು ನಡೆಸುವಾಗ, ವ್ಯಕ್ತಿ ಉಸಿರಾಡುವ ಪ್ರಮಾಣ ಮತ್ತು ನಾಡಿಮಿಡಿತವೂ ಹೆಚ್ಚೂಕಡಿಮೆಯಾಗುತ್ತದೆ ಇತ್ಯಾದಿ ಕುತೂಹಲಕರ
ಅಂಶಗಳನ್ನು ಲವಾಸಿಯೇರ್ ದಾಖಲಿಸಿದ. ಪ್ರಯೋಗಗಳನ್ನು ಪೂರ್ಣಗೊಳಿಸಿದ ಮೇಲೆ ಲವಾಸಿ ಯೇರ್, ‘ಪ್ರಾಣಿಯೆಂಬ ಯಂತ್ರವನ್ನು ೩ ಆಯಾಮಗಳು ನಿಯಂತ್ರಿಸುತ್ತವೆ.

ಮೊದಲನೆಯದು ಉಸಿರಾಟ. ಉಸಿರಾಟದಲ್ಲಿ ಹೈಡ್ರೋಜನ್, ಕಾರ್ಬನ್ ಮತ್ತು ಆಕ್ಸಿಜನ್‌ಗಳ ನಡುವೆ ರಾಸಾಯನಿಕ ಕ್ರಿಯೆ ನಡೆದು ಶಕ್ತಿ ಉತ್ಪಾದನೆ ಯಾಗುತ್ತದೆ. ಎರಡನೆಯದು ಬಾಷ್ಪೀಕರಣ. ಇದು ಉತ್ಪಾದನೆಯಾಗುವ ಶಕ್ತಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಮೂರನೆಯದು ಜೀರ್ಣಕ್ರಿಯೆ. ಪ್ರಾಣಿಯಂತ್ರವು ಯಾವುದನ್ನು ಉಸಿರಾಟ ಹಾಗೂ ಬಾಷ್ಪೀಕರಣದಲ್ಲಿ ಕಳೆದುಕೊಂಡಿದೆಯೋ ಅದನ್ನು ಜೀರ್ಣಕ್ರಿಯೆ ಮೂಲಕ ಪಡೆದುಕೊಳ್ಳುತ್ತದೆ’ ಎಂದು ಸುದೀರ್ಘ ವಿವರಣೆ ನೀಡಿದ. ಹೀಗೆ, ಒಂದು ಜೀವಿ ಕೆಲಸ ಮಾಡಲು ಅಗತ್ಯವಾದ ಶಕ್ತಿ ಹೇಗೆ ಆಹಾರ ಸೇವನೆ ಹಾಗೂ ಉಸಿರಾಟದ ಮೂಲಕ ದೊರೆಯುತ್ತದೆ ಎಂಬುದನ್ನು ಲವಾಸಿಯೇರ್ ನಿರೂಪಿಸಿದ.

ಫ್ರಾನ್ಸಿನ ಮಹಾಕ್ರಾಂತಿ ಭುಗಿಲೆದ್ದಾಗ ಲವಾಸಿಯೇರ್ ತನ್ನೆಲ್ಲ ಸಂಶೋಧನೆಗಳನ್ನು ನಿಲ್ಲಿಸಿದ. ಜೀನ್ ಪಾಲ್ ಮಾರತ್ ಎಂಬ ವೈದ್ಯ ಲವಾಸಿಯೇರನ ಪ್ರಬಲ ಶತ್ರುವಾಗಿ ಹುಟ್ಟಿಕೊಂಡಿದ್ದ. ಇವನು ಫ್ರೆಂಚ್ ಅಕಾಡೆಮಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ. ಈತನಿಗೆ ಸದಸ್ಯತ್ವ ಪಡೆಯುವ ಯೋಗ್ಯತೆಯಿಲ್ಲ
ವೆಂಬ ಕಾರಣದಿಂದ ಲವಾಸಿಯೇರ್ ಈತನ ಅರ್ಜಿಯನ್ನು ತಿರಸ್ಕರಿಸಿದ್ದ. ಈ ರೊಚ್ಚನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಮಾರತ್, ಮಹಾಕ್ರಾಂತಿಯ ಪ್ರಮುಖ ನಾಯಕರಲ್ಲಿ ಒಬ್ಬನಾಗಿದ್ದ.

ಫ್ರಾನ್ಸಿನ ಅರಸನ ಪರವಾಗಿ ಸುಂಕ ಮತ್ತು ಕರವನ್ನು ಸಂಗ್ರಹಿಸುತ್ತಿದ್ದ -ರ್ಮೇ ಜೆನೆರೇಲ್ ಸಂಸ್ಥೆಯ ಭಾಗೀದಾರರಲ್ಲಿ ಲವಾಸಿಯೇರ್ ಸಹ ಒಬ್ಬನಾಗಿದ್ದ ಕಾರಣ, ಜನರ ಮೇಲೆ ನ್ಯಾಯಾಬಾಹಿರ ಸುಂಕ ಹೇರಿ ಶೋಷಣೆ ಮಾಡಿರುವ ಕಾರಣ ಅವನಿಗೆ ಮರಣದಂಡನೆ ವಿಧಿಸಬೇಕೆಂದು ವಾದಿಸಿದ. ಲವಾಸಿಯೇರ್ ವಿಜ್ಞಾನದ ಬೆಳವಣಿಗೆಗೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ ಅವನಿಗೆ ಕ್ಷಮಾದಾನ ನೀಡಬೇಕೆಂಬ ವಾದಕ್ಕೆ ಬೆಲೆಯಿಲ್ಲ
ವಾಯಿತು. ಮಾರ್ಚ್ ೮, ೧೭೯೪ರಲ್ಲಿ ಲವಾಸಿಯೇರ್ ಗಿಲೋಟಿನ್ ಯಂತ್ರಕ್ಕೆ ಕುತ್ತಿಗೆಯನ್ನೊಡ್ಡಿ ಜೀವ ತೆರುವುದ ರೊಂದಿಗೆ ಓರ್ವ ಪ್ರತಿಭಾವಂತ ವಿಜ್ಞಾನಿಯ ಅವಸಾನವಾಯಿತು.

Leave a Reply

Your email address will not be published. Required fields are marked *

error: Content is protected !!