Sunday, 23rd June 2024

ಎಲೆ ಮರೆ ಕಾಯಿಯಂತಿರುವ ಅಧಿಕಾರಿ ಮನೀಷ್ ಮೌದ್ಗಿಲ್

ಮೋಹನ್ ವಿಶ್ವ

ನಮ್ಮಲ್ಲಿ ಸರಕಾರಿ ಅಧಿಕಾರಿಗಳೆಂದರೆ ಹಲವು ಜನರಿಗೆ ಒಂದು ರೀತಿಯ ಹತಾಶೆ ಮನೋಭಾವವಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಎಲ್ಲಾಾ ಸಮಸ್ಯೆೆಗಳೂ ಸಂಭವಿಸುತ್ತವೆ, ಅವರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದೆಲ್ಲಾಾ ಶಾಪ ಹಾಕುತ್ತಿಿರುತ್ತಾಾರೆ. ಈ ಎಲ್ಲ ಶಾಪಗಳ ಮಧ್ಯೆೆಯೂ ತಮ್ಮ ಮಕ್ಕಳನ್ನು ಐಎಎಸ್ ಅಧಿಕಾರಿಯನ್ನಾಾಗಿಸಬೇಕೆಂದು ಇದೇ ಜನರು ಕನಸು ಕಾಣುತ್ತಿಿರುತ್ತಾಾರೆ. ಮತ್ತೊೊಂದು ವಿಚಿತ್ರ ಸಂಗತಿಯೇನೆಂದರೆ, ರಾಜಕೀಯ ನಾಯಕರುಗಳನ್ನು ಹೇಗೆ ಶಪಿಸುತ್ತಾಾರೋ, ಹಾಗೆಯೇ ಅಧಿಕಾರಿಗಳನ್ನು ಶಪಿಸುತ್ತಾಾರೆ. ಎಲ್ಲ ಸಮಸ್ಯೆೆಗಳಿಗೆ ಚಿಟಿಕೆ ಹೊಡೆಯುವುದರೊಳಗೆ ಪರಿಹಾರ ಸಿಗಬೇಕೆಂದು ಬಯಸುವ ಜನರ ಮಧ್ಯೆೆ ಕೆಲಸ ಮಾಡುವುದು ಅಷ್ಟು ಸುಲಭವಲ್ಲ, ಅದೇ ಸಮಯದಲ್ಲಿ ಏನೂ ಕೆಲಸ ಮಾಡದಿರುವುದು ಸಹ ಸರಿಯಲ್ಲ.

ನಮ್ಮಲ್ಲಿ ಹಲವು ಸರಕಾರಿ ಇಲಾಖೆ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಕೆಲಸ ಮಾಡದಿರುವ ವಿಷಯ ಹೊಸದೇನಲ್ಲ, ನಮ್ಮಲ್ಲಿನ ಆಡಳಿತ ಯಂತ್ರವೇ ಹಾಗಿದೆ. ರಾಜಕೀಯ ನಾಯಕರು ಮಾಡಲು ಸಿದ್ಧವಿದ್ದರೆ, ಅಧಿಕಾರಿಗಳು ಮಾಡಲು ತಯಾರಿರುವುದಿಲ್ಲ. ರಾಜಕೀಯ ನಾಯಕರುಗಳಿಗೆ ತಮ್ಮಲ್ಲಿನ ಕುಟುಂಬಸ್ಥರು, ಅಧ್ಯಕ್ಷರು, ಕಾರ್ಯಕರ್ತರ ಮೇಲೆ ಹೆಚ್ಚಿಿನ ಒಲವು ಇರುವುದರಿಂದ ಅವರುಗಳ ಮಾತಿಗೆ ತುಸು ಹೆಚ್ಚು ಬೆಲೆ ನೀಡಿ ಕಾರ್ಯನಿರ್ವಹಿಸುತ್ತಾಾರೆ. ಅವರಿಗೆ ಯಾರು ಸರಿ ಹೊಂದುತ್ತಾಾರೋ, ಅಂಥ ಅಧಿಕಾರಿಗಳನ್ನೇ ತಮ್ಮಲ್ಲಿಟ್ಟುಕೊಂಡು ಕೆಲಸ ಮಾಡಿಸುತ್ತಾಾರೆ. ಈ ಹಗ್ಗ ಜಗ್ಗಾಾಟದ ನಡುವೆ ಹಲವು ಕೆಲಸಗಳು ನಡೆಯದೇ ಹೋಗಬಹುದು. ಯಾರು ಸರಿ, ಯಾರು ತಪ್ಪುು ಎಂದು ಹುಡುಕುತ್ತಾಾ ಹೊರಟರೆ, ಎರಡೂ ಕಡೆ ಸರಿ-ತಪ್ಪುುಗಳು ಕಂಡುಬರುತ್ತವೆ.

ಆದರೆ ಕೆಲವು ನಾಯಕರು ತಮಗೆ ಇಷ್ಟವಾದ ಕೆಲಸವನ್ನು ಬಿಟ್ಟು, ಬೇರ್ಯಾಾವ ಕೆಲಸಗಳನ್ನು ಮಾಡಲು ಅಧಿಕಾರಿಗಳಿಗೆ ಬಿಡುವುದಿಲ್ಲ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಒಳ್ಳೆೆಯ ಕೆಲಸಗಳೂ ಸಹ ಸರಿಯಾದ ಸಮಯದಲ್ಲಿ ಆಗುವುದಿಲ್ಲ. ಕರ್ನಾಟಕದಲ್ಲಿ ಈ ಹಿಂದೆಯೂ ಹಲವು ಒಳ್ಳೆೆಯ ಅಧಿಕಾರಿಗಳು ಬಂದು ಹೋಗಿದ್ದಾಾರೆ. ಅವರ ಹಲವು ಸಾಧನೆಗಳನ್ನು ನಾವು ಮರೆಯುವಂತಿಲ್ಲ. ಕೆಲವರು ತಮ್ಮ ಕಾರ್ಯವನ್ನು ಜನರಿಗೆ ಮುಟ್ಟಿಿಸುವಲ್ಲಿ ಸಫಲರಾಗಿ, ಸ್ಟಾಾರ್‌ಗಳಾಗಿ ಜನರ ಮುಂದೆ ಕಾಣಿಸುತ್ತಾಾರೆ. ಇನ್ನು ಕೆಲವರು ಸೈಲೆಂಟಾಗಿ ಹಲವು ಒಳ್ಳೆೆಯ ಕೆಲಸಗಳನ್ನು ಮಾಡುತ್ತ ಎಲೆ ಮರೆಯ ಕಾಯಿಯಂತೆ ಸುಮ್ಮನಿರುತ್ತಾಾರೆ. ಹೀಗೆ ಎಲೆ ಮರೆಯ ಕಾಯಿಯ ರೀತಿ ಹಲವಾರು ಭೂ ಸುಧಾರಣೆಗಳನ್ನು ತಂದಂಥ ಐಎಎಸ್ ಅಧಿಕಾರಿಯಾದ ಮನೀಷ್ ಮೌದ್ಗಿಿಲ್ ಬಗ್ಗೆೆ ಹೇಳಲೇಬೇಕು.

1998ರ ಬ್ಯಾಾಚ್‌ನ ಐಎಎಸ್ ಅಧಿಕಾರಿಯಾದ ಇವರು, ಮೂಲತಃ ಪಂಜಾಬಿನವರು. ಕರ್ನಾಟಕದ ಅಳಿಯನೆಂಬುದು ಮತ್ತೊೊಂದು ಸಂತಸದ ಸಂಗತಿ. 24ನೇ ವಯಸ್ಸಿಿನಲ್ಲಿಯೇ ಐಎಎಸ್ ಪರೀಕ್ಷೆೆ ಪಾಸು ಮಾಡಿ ಕರ್ನಾಟಕದ ಕೇಡರ್‌ನಿಂದ ಬಂದವರು. ಮುಂಬಯಿಯ ಐಐಟಿಯಲ್ಲಿ ಎಂಜಿನಿಯರಿಂಗ್ ಪದವಿಯನ್ನು ಮುಗಿಸಿ ಸರಕಾರಿ ಆಡಳಿತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಐಎಎಸ್ ಅಧಿಕಾರಿಯಾದರು. ಐಐಟಿಯೆಂದರೆ ಅಂದಿನ ಕಾಲದಲ್ಲಿ ಕನಿಷ್ಠವೆಂದರೂ, ತಿಂಗಳಿಗೆ ಲಕ್ಷಾಾಂತರ ರುಪಾಯಿಯ ಸಂಬಳವನ್ನು ತೆಗೆದುಕೊಂಡು ವಿಲಾಸಿ ಜೀವನವನ್ನು ನಡೆಸಬಹುದಿತ್ತು.

ಇಂದು ಇವರು ಸುಂದರ್ ಪಿಚ್ಚೈ ರೀತಿಯಲ್ಲಿ ಗೂಗಲ್‌ನಲ್ಲೋೋ ಅಥವಾ ಮೈಕ್ರೋೋಸಾಫ್‌ಟ್‌‌ನಲ್ಲಿಯೋ ಉನ್ನತ ಹುದ್ದೆೆಯನ್ನು ಅಲಂಕರಿಸಬಹುದಿತ್ತು. ಅದನ್ನು ಲೆಕ್ಕಿಿಸದೇ ದೇಶದ ಆಡಳಿತ ಯಂತ್ರವನ್ನು ಸೇರುವ ಕನಸಿನಲ್ಲಿ ಐಎಎಸ್ ಅಧಿಕಾರಿಯಾದರು.

ಅವರ ಪ್ರತಿಯೊಂದು ಕೆಲಸಗಳಲ್ಲಿಯೂ ವಿಭಿನ್ನತೆಯನ್ನು ಪ್ರದರ್ಶಿಸಿಕೊಂಡು, ಪ್ರಾಾಮಾಣಿಕತೆಯಿಂದ ಕಾರ್ಯನಿರ್ವಹಿಸಿದವರು. ನಾನು ವಿಚಾರಿಸಿರುವ ಯಾರೊಬ್ಬರೂ ಸಹ ಇವರ ಬಗ್ಗೆೆ ನಕಾರಾತ್ಮಕವಾಗಿ ಮಾತಾಡಲಿಲ್ಲ. ಒಡಿಶಾದಂಥ ನಕ್ಸಲ್ ಪೀಡಿತ (ಅಂದಿನ ಕಾಲದಲ್ಲಿ) ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾಾರೆ. ಒಡಿಶಾ ರಾಜ್ಯದಲ್ಲಿ ‘ಬೊಂಡಾ’ ಎಂಬ ಬುಡಕಟ್ಟು ಜನಾಂಗದ 13 ಜನ ವಿದ್ಯಾಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆೆಯಲ್ಲಿ ಉತ್ತೀರ್ಣಗೊಳಿಸಿ ರಾಷ್ಟ್ರಪತಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ಕುಡಿಯಲು ಸರಿಯಾಗಿ ನೀರೇ ಸಿಗದ ಕಾಡುಗಳಲ್ಲಿ ಬೋಧಿಸಲು ಶಿಕ್ಷಕರೇ ಸಿಗುವುದಿಲ್ಲ. ಅಂಥ ದುರ್ಗಮ ಪ್ರದೇಶದಲ್ಲಿಯೂ ಇವರು 13 ಮಕ್ಕಳನ್ನು ಹತ್ತನೇ ತರಗತಿಯವರೆಗೆ ಓದಿಸಿ, ತೇರ್ಗಡೆಗೊಳಿಸಿ ಅವರನ್ನು ವಿದ್ಯಾಾವಂತರನ್ನಾಾಗಿ ಮಾಡಿದ ಸಾಧನೆ ಸಣ್ಣದೇನಲ್ಲ.

ಇನ್ನು ಕರ್ನಾಟಕದ ಆದಾಯ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ ರೈತರ ಭೂಮಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಜಾರಿಗೆ ತಂದರು. ರೈತರ ‘ಸಾಲಮನ್ನಾಾ’ ಎಂಬ ಯೋಜನೆ ಯಾರಿಗೆ ತಾನೇ ತಿಳಿದಿಲ್ಲ? ಈ ಸಾಲಮನ್ನಾಾ ಎಂಬುದೇ ಒಂದು ದೊಡ್ಡ ಭ್ರಷ್ಟಾಾಚಾರದ ಹೆಬ್ಬಾಾಗಿಲು ಎಂದರೆ ತಪ್ಪಿಿಲ್ಲ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಹಣ ಮಾಡುವವರೇ. ಸರಕಾರದಿಂದ ರೈತನ ಖಾತೆಗೆ ಹಣವು ಜಮಾವಣೆ ಆಗುವವರೆಗೂ, ಮಧ್ಯವರ್ತಿಗಳು ತಮ್ಮ ಕೈ ಹಾಕಿ ಸ್ವಲ್ಪವಾದರೂ ಕೆರೆದುಕೊಳ್ಳುತ್ತಾಾರೆ.

ಇನ್ನು ವ್ಯವಸಾಯವನ್ನೇ ಮಾಡದ ಹಲವು ಜನರು ‘ಸಾಲಮನ್ನಾಾ’ ಯೋಜನೆಯಡಿ ಹಣವನ್ನು ತಿಂದಿರುವ ಹಲವು ಉದಾಹರಣೆಗಳಿವೆ. ಮಾಡಿರುವ ಸಾಲವನ್ನು ಗಾಡಿ ಕೊಂಡುಕೊಳ್ಳಲೋ, ಮದುವೆ ಮಾಡಿಸಲು ಬಳಸಿಕೊಂಡಿರುವ ಕೇಸುಗಳು ಲೆಕ್ಕಕ್ಕೇ ಇಲ್ಲ ಬಿಡಿ. ಸಾವಿರಾರು ಕೋಟಿಗಳ ಆದಾಯವು ಸರಕಾರದ ಬೊಕ್ಕಸದಿಂದ ಪೋಲಾಗುತ್ತಿಿದ್ದ ಸಂದರ್ಭದಲ್ಲಿ ಉತ್ತಮ ತಂತ್ರಜ್ಞಾಾನವನ್ನು ಸ್ವತಃ ತಾವೇ ಅಭಿವೃದ್ಧಿಿಪಡಿಸಿ, ‘ಆಧಾರ್’ ಮೂಲಕ ನಿಜವಾದ ಸಂತ್ರಸ್ತರನ್ನು ಹುಡುಕಿ ಸಾಲಮನ್ನಾಾ ಯೋಜನೆಯನ್ನು ತಳಮಟ್ಟದಲ್ಲಿ ಅನುಷ್ಠಾಾನಗೊಳಿಸಿದ ಕೀರ್ತಿ ಮನೀಷ್ ಮೌದ್ಗಿಿಲ್ ಅವರಿಗೆ ಸಲ್ಲಬೇಕು. ಇವರ ಈ ಪರಿಶ್ರಮದಿಂದ ಕನಿಷ್ಠವೆಂದರೂ, ಸರಕಾರಕ್ಕೆೆ ಸುಮಾರು 6000 ಕೋಟಿ ರುಪಾಯಿಗಳಷ್ಟು ಹಣ ಉಳಿಕೆಯಾಗಿದೆ ಎಂಬ ಅಂದಾಜಿದೆ. ಕೇವಲ ಕೆಲವೇ ಕೆಲವು ತಿಂಗಳುಗಳಲ್ಲಿ ಅವರು ತಂತ್ರಜ್ಞಾಾನವನ್ನು ಬಳಸಿ ಈ ಯೋಜನೆಯನ್ನು ಜಾರಿಗೆ ತಂದರು. ಸಾರ್ವಜನಿಕವಾಗಿಯೂ ಈ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಇವರ ಮತ್ತೊೊಂದು ಮುಖ್ಯವಾದ ಸಾಧನೆಯೆಂದರೆ, ಜಾತಿ ಹಾಗೂ ಆದಾಯ ಪತ್ರದ ಡಿಜಿಟಲೀಕರಣ. ‘ಈ ಕ್ಷಣ’ ಎಂಬ ವೇದಿಕೆಯ ಮೂಲಕ ಕ್ಷಣ ಮಾತ್ರದಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಈ ಮೊದಲು ಈ ಪ್ರಮಾಣಪತ್ರಗಳು ಬೇಕಿದ್ದರೆ, ಅದೆಷ್ಟೋೋ ದಿನಗಳ ಕಾಲ ಕಚೇರಿಗೆ ಅಲೆದಾಡಬೇಕಿತ್ತು. ಇದರ ಮಧ್ಯೆೆ ಮಧ್ಯವರ್ತಿಗಳಿಗೆ ಕಮಿಷನ್ ನೀಡಬೇಕಿತ್ತು, ಅಧಿಕಾರಿಗಳಿಗೆ ಹಣ ನೀಡಬೇಕಿತ್ತು. ಆದರೆ ಈಗ ‘ಈ ಕ್ಷಣ’ದ ಮೂಲಕ ಕಚೇರಿಗಳ ‘ಕಿಯೊಸ್‌ಕ್‌’ *(ಓಐಖಓ) ಮುಂದೆ ನಿಂತು ನೇರವಾಗಿ ತಮ್ಮ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಈ ಕ್ರಮದಿಂದಾಗಿ ಭ್ರಷ್ಟಾಾಚಾರ ಕಡಿಮೆಯಾಗಿದ್ದಲ್ಲದೇ, ಸಮಯದ ಉಳಿತಾಯವೂ ಸಹ ಆಗುತ್ತಿಿದೆ.

ಈ ರೀತಿಯ ವೇದಿಕೆಯು ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಾತಿ ಹಾಗೂ ಆದಾಯ ಪತ್ರವನ್ನು ಹಿಂದೆ ಪಡೆಯುತ್ತಿಿದ್ದವರ ಬಳಿ ಹೋಗಿ ಕೇಳಿದರೆ, ಇದರ ಮಹತ್ವ ತಿಳಿಯುತ್ತದೆ. ಈ ರೀತಿಯ ಒಂದು ದೊಡ್ಡ ಯೋಜನೆಯನ್ನು ಕೆಳಮಟ್ಟದಿಂದ ಮಾಡಬೇಕೆಂದರೆ, ಅಷ್ಟು ಸುಲಭದ ಕೆಲಸವಲ್ಲ. ಆರೂವರೆ ಕೋಟಿ ಜನರ ಮನೆಮನೆಗೂ ತೆರಳಿ, ವಿಷಯವನ್ನು ಸಂಗ್ರಹಿಸಿ ಡಿಜಿಟಲೀಕರಣಗೊಳಿಸುವುದು ಶ್ರಮದಾಯಕ. ಇಂಥದ್ದನ್ನು ಮನೀಷ್ ಮೌದ್ಗಿಿಲ್ ತಮ್ಮ ಅಧಿಕಾರಾವಧಿಯಲ್ಲಿ ಸಾಧಿಸಿ ತೋರಿಸಿದ್ದಾಾರೆ.

ಇನ್ನು ಇವರು ಸಿದ್ಧಪಡಿಸಿರುವ ‘ದಿಶಾಂಕ್’ ಆ್ಯಪ್ ಬಗ್ಗೆೆ ಹೇಳಲೇಬೇಕು. ನಾನೂ ಸಹ ಈ ಆ್ಯಪ್ ಬಳಸುತ್ತಿಿದ್ದೇನೆ. ಎಸ್‌ಎಂ ಕೃಷ್ಣ ಅವರ ಆಡಳಿತಾವಧಿಯಲ್ಲಿ ‘ಭೂಮಿ’ ಎಂಬ ಪಹಣಿ ಡಿಜಿಟಲೀಕರಣದ ಬಗ್ಗೆೆ ನೀವು ಕೇಳಿರಬಹುದು. ಅದರ ಉನ್ನತ ಮಟ್ಟದ ತಂತ್ರಜ್ಞಾಾನವೇ ‘ದಿಶಾಂಕ’. ಗ್ರಾಾಮೀಣ ಮಟ್ಟದಲ್ಲಿ ತಮ್ಮ ಜಮೀನುಗಳ ಪಹಣಿಗಳನ್ನು ಕೇವಲ ಮೊಬೈಲ್‌ನಲ್ಲಿಯೇ ತ್ವರಿತವಾಗಿ ರೈತರು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಮುಂಚೆ ಕಚೇರಿಗಳ ಮುಂದೆ ನಿಂತು ಒಂದು ಪಹಣಿಗೆ 10ರುಪಾಯಿ ನೀಡಬೇಕಿತ್ತು. ಇನ್ನು ಅದನ್ನು ಪ್ರಿಿಂಟ್, ಝೆರಾಕ್‌ಸ್‌ ಮಾಡಲು ಬೇರೆ ಖರ್ಚು ಆಗುತ್ತಿಿತ್ತು. ಮಜಾ ಎಂದರೆ, ನೀವು ಹಳೆಯ ಪ್ರಿಿಂಟೆಡ್ ಪಹಣಿಗಳನ್ನು ನೋಡಿದರೆ, ಆ ಪಹಣಿಗಳ ಮೇಲೆ ಸರಕಾರದ ‘ಎಂಬ್ಲಂ’ ಕಾಣುತ್ತಿಿತ್ತು. ಈ ‘ಎಂಬ್ಲಂ’ನಿಂದ ಯಾವುದೇ ಪ್ರಯೋಜನವಿರಲಿಲ್ಲ. ಕೋಟ್ಯಂತರ ರುಪಾಯಿಯನ್ನು ಸರಕಾರವು ಈ ಎಂಬ್ಲಂಗಾಗಿಯೇ ವ್ಯಯಿಸುತ್ತಿಿತ್ತು. ಆದರೆ ಮನೀಷ್ ಅವರ ಅಧಿಕಾರಾವಧಿಯಲ್ಲಿ ಮೊದಲು ಈ ಎಂಬ್ಲಂ ಬಳಕೆಯನ್ನು ತೆಗೆದು ಹಾಕಿದರು.

ನಾನು ಯಾಕೆ ಈ ಎಂಬ್ಲಂ ಕಥೆ ಹೇಳಿದೆನೆಂದರೆ, ಒಂದು ಸಣ್ಣ ವಿಚಾರ ಕೆಲಸಕ್ಕೆೆ ಬಾರದೇ ಇದ್ದಮೇಲೆ ತೆಗೆದು ಹಾಕಿದ ನಂತರ ಕೋಟ್ಯಂತರ ರುಪಾಯಿಯ ಉಳಿತಾಯ ಆಗುತ್ತಿಿದೆಯೆಂದರೆ, ಅದು ಒಬ್ಬ ಅಧಿಕಾರಿಯ ಸೂಕ್ಷ್ಮತೆ, ದಕ್ಷತೆ ಯಾವ ಮಟ್ಟದಲ್ಲಿ ಕೆಲಸ ಮಾಡಿರಬಹುದು ಎಂಬುದನ್ನು ತಿಳಿಯಬಹುದು. ಸರಕಾರ ಆಡಳಿತ ಯಂತ್ರವನ್ನು ನಡೆಸಲು ಇಂಥ ಅಧಿಕಾರಿಗಳ ಅವಶ್ಯಕತೆಯು ಅತಿ ಮುಖ್ಯವಾದುದು. ಸರಕಾರದಲ್ಲಿನ ಅನವಶ್ಯಕ ಖರ್ಚುಗಳು ಏನೇ ಆಗಿದ್ದರೂ ಸಹ ಕಡಿಮೆ ಮಾಡಬೇಕು. ಸರಕಾರದ ಹಣ ನಮ್ಮ ನಿಮ್ಮೆೆಲ್ಲರ ತೆರಿಗೆಯ ಹಣ ತಾನೇ?

ಈ ಆ್ಯಪ್‌ನಲ್ಲಿ ಒಂದು ಗ್ರಾಾಮ ಪಂಚಾಯತಿಯ ಇಡೀ ನಕ್ಷೆೆಯನ್ನೇ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಕ್ಕಪಕ್ಕದ ಮನೆಗಳು, ಜಮೀನುಗಳ ನಕಾಶೆಯ ಚಿತ್ರಣ ಕಾಣಬಹುದು. ಗ್ರಾಾಮದಲ್ಲಿನ ಕೆರೆಗಳು, ಗೋಮಾಳ, ಸರಕಾರಿ ಜಾಗ ಎಲ್ಲಾಾ ನಕಾಶೆಗಳನ್ನು ಸೆಕೆಂಡ್‌ಗಳಲ್ಲಿ ನಮ್ಮ ಮೊಬೈಲ್‌ನಲ್ಲಿ ನೋಡುವಂಥ ರೀತಿಯಲ್ಲಿ ಡಿಜಿಟಲೀಕರಣ ವ್ಯವಸ್ಥೆೆಯನ್ನು ಮಾಡಲಾಗಿದೆ.

ನೀವು ಕೆಲಸ ಮಾಡುತ್ತಿಿರುವ ಕಂಪನಿಗಳಲ್ಲಿ ನಿಮ್ಮ ಕೆಲಸದ ರೀತಿಯನ್ನು ಅಳೆಯಲು ಕೆಲವು ಮಾಪನಗಳಿರುತ್ತವೆ. ಈ ಮಾಪನಗಳ ಮೂಲಕವೇ ನೀವು ಸರಿಯಾಗಿ ಕೆಲಸ ಮಾಡುತ್ತಿಿದ್ದೀರೋ, ಇಲ್ಲವೋ ಎಂದು ತಿಳಿಯುತ್ತದೆ. ಅದೇ ರೀತಿ ಸರಕಾರಿ ನೌಕರರು ಕೆಲಸವನ್ನು ಸರಿಯಾಗಿ ಮಾಡುತ್ತಿಿದ್ದಾಾರೋ, ಇಲ್ಲವೋ ಎಂಬುದನ್ನು ತಿಳಿಯುವುದು ಅತಿ ಮುಖ್ಯ. ಸಾರ್ವಜನಿಕರಿಂದ ಎಷ್ಟು ಅರ್ಜಿಗಳು ಬಂದಿವೆ, ಅದರಲ್ಲಿ ತಿರಸ್ಕರಿಸಿದ ಅರ್ಜಿಗಳೆಷ್ಟು, ಪುರಸ್ಕರಿಸಿದ ಅರ್ಜಿಗಳೆಷ್ಟು, ಯಾವ ಜಿಲ್ಲೆೆಯಲ್ಲಿನ ಕಚೇರಿಗಳಲ್ಲಿ ಎಷ್ಟು ಅರ್ಜಿಗಳು ಬಾಕಿ ಉಳಿದಿವೆ… ಈ ಎಲ್ಲಾಾ ವಿಚಾರಗಳು ಸಾರ್ವಜನಿಕರಿಗೆ ಸಿಗಲೇಬೇಕು. ಈ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಜಿಲ್ಲಾಾ ಮಟ್ಟದಲ್ಲಿ ಒದಗಿಸಲು ಮನೀಷ್ ಮೌದ್ಗಿಿಲ್ ಆನ್‌ಲೈನ್‌ನಲ್ಲಿ ವ್ಯವಸ್ಥೆೆಯನ್ನು ಕಲ್ಪಿಿಸಿದ್ದಾಾರೆ.

ತಮ್ಮದೇ ಇಲಾಖೆಯ ಕೆಳಗಿರುವ ಹಲವು ಅರ್ಜಿಗಳ ವಿವರಗಳನ್ನು ಈ ವೆಬ್‌ಸೈಟ್‌ನಲ್ಲಿ ಕಾಣಬಹುದು. ಠಿಠಿ://ಜಟಠ್ಞ್ಝಿಠಿಜ್ಚಿಿ.್ಟ್ಞಠಿ.ಜಟ.ಜ್ಞಿಿ ಎಂಬಲ್ಲಿ ಹೋಗಿ ನೋಡಿದರೆ, ತಾಲೂಕು, ಜಿಲ್ಲಾಾವಾರು ಅರ್ಜಿಗಳ ವಿಲೇವಾರಿಯ ಮಾಹಿತಿಯು ದೊರೆಯುತ್ತದೆ. ಇದರ ಜತೆಗೆ ಯಾವ ಜಿಲ್ಲೆೆಯು ಅತಿ ವೇಗವಾಗಿ ಕೆಲಸ ಮಾಡುತ್ತಿಿದೆ, ಯಾವ ಜಿಲ್ಲೆೆ ಹಿಂದಿದೆ, ತಾಲೂಕು ಮಟ್ಟದಲ್ಲಿ ಯಾವ ರೀತಿ ಕೆಲಸ ನಡೆಯುತ್ತಿಿದೆ, ಅದರ ಗುಣಮಟ್ಟದ ಮಾಪನಗಳ ಬಗ್ಗೆೆ ಮಾಹಿತಿ, ಅರ್ಜಿ ವಿಲೇವಾರಿ ಹೀಗೆ ಹತ್ತು ಹಲವು ರೀತಿಯ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಿದೆ. ನಾವುಗಳು ಸ್ವಲ್ಪ ಒಳಹೊಕ್ಕು ನೋಡಿ ಮಾಹಿತಿಯನ್ನು ಪಡೆಯಬೇಕಷ್ಟೇ. ಬೆರಳ ತುದಿಯಲ್ಲಿ ಇಡೀ ರಾಜ್ಯದ ಮಾಹಿತಿಯನ್ನು ಒಂದೆಡೆ ಸೇರಿಸಿ ಕೆಲಸವನ್ನು ನಿಭಾಯಿಸುತ್ತಿಿರುವ ಅಪರೂಪದ ಅಧಿಕಾರಿ ಮನೀಷ್ ಮೌದ್ಗಿಿಲ್.

ನಾನು ಕೇವಲ ಎಲ್ಲಿಯೋ ಕೇಳಿಕೊಂಡು ಈ ಮಾಹಿತಿಗಳನ್ನು ಬರೆಯುತ್ತಿಿಲ್ಲ. ಸ್ವತಃ ನಾನೇ ಇವೆಲ್ಲವನ್ನೂ ಪರಿಶೀಲಿಸಿ ನಿಮ್ಮ ಮುಂದೆ ಇಡುತ್ತಿಿದ್ದೇನೆ. ನೀವೂ ಸಹ ಈ ಮಾಹಿತಿಗಳನ್ನು ಪರಿಶೀಲಿಸಬಹುದು. ಏನೂ ಆಗಿಲ್ಲ, ಕೆಲಸಗಳು ನಡೆಯುತ್ತಿಿಲ್ಲ ಎನ್ನುವವರು ದಯವಿಟ್ಟು ಈ ಮಾಹಿತಿಗಳನ್ನು ಒಮ್ಮೆೆ ನೋಡಿ ಬನ್ನಿಿ. ಎಷ್ಟೆೆಲ್ಲ ಒಳ್ಳೆೆಯ ಕೆಲಸಗಳು ಇದರಡಿಯಲ್ಲಿ ಆಗಿವೆ ಎಂದು ತಿಳಿಯುತ್ತದೆ.

ಇನ್ನು ಇವರ ಮತ್ತೊೊಂದು ಮಹತ್ವದ ಯೋಜನೆ *‘ಖ್ಕಿ’ ನಗರದ ಆಸ್ತಿಿಗಳ ಮಾಲೀಕತ್ವ ಕಾರ್ಡ್‌ಗಳು. ಈ ಯೋಜನೆಯನ್ನು ಮಂಗಳೂರು ಹಾಗೂ ಶಿವಮೊಗ್ಗ ನಗರಗಳಲ್ಲಿ ಪ್ರಾಾಯೋಗಿಕವಾಗಿ ಬಳಸಲಾಗಿದೆ. ನಗರದಲ್ಲಿರುವ ಪ್ರತಿಯೊಂದು ಆಸ್ತಿಿಯನ್ನೂ ಅದರ ಭೌಗೋಳಿಕತೆಗೆ ಅನುಸಾರವಾಗಿ ಮ್ಯಾಾಪ್ ಮಾಡಿಸಿ, ಕಾರ್ಡಿನ ಹಿಂದೆ ಅದರ ಡಿಜಿಟಲ್ ಮ್ಯಾಾಪ್ ಕೂಡ ಅಳವಡಿಸಿ ಮಾಲೀಕರಿಗೆ ನೀಡಲಾಗಿತ್ತು. ಇದು ಒಂದು ರೀತಿಯಲ್ಲಿ ಆಸ್ತಿಿಗಳ ಮಾಲೀಕರ ಆಧಾರ್ ಇದ್ದಹಾಗೆ. ಇಡೀ ಜಾತಕವೇ ಇಲ್ಲಿ ತೆರೆದಿರುತ್ತದೆ. ಇದರಿಂದ ಕಾನೂನುಬಾಹಿರವಾಗಿ ಅತಿಕ್ರಮಿಸಬಹುದಾದ ಸರಕಾರಿ ಜಾಗಗಳು, ಕೆರೆಗಳು, ಗೋಮಾಳಗಳಿಗೆ ದೊಡ್ಡ ಬ್ರೇಕ್ ಬೀಳುತ್ತದೆ. ಕಾನೂನುಬಾಹಿರವಾಗಿ ನಿರ್ಮಾಣ ಮಾಡಲು ಹೊರಟಿರುವ ಲೇಔಟ್‌ಗಳಿಗೂ ಬ್ರೇಕ್ ಬೀಳುತ್ತದೆ. ಇದು ಒಂದು ರೀತಿಯ ಮಾಸ್ಟರ್ ಸ್ಟ್ರೋೋಕ್ ಎಂದರೆ ತಪ್ಪಾಾಗಲಾರದು. ಈ ರೀತಿಯ ಯೋಚನೆಗಳನ್ನು ಕೆಳಮಟ್ಟದಲ್ಲಿ ಅನುಷ್ಠಾಾನಗೊಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಪ್ರಸ್ತುತ ಈ ಕಾರ್ಡುಗಳು ಬಳಕೆಯಲ್ಲಿಲ್ಲ ಎಂಬುದೇ ಒಂದು ವಿಷಾದದ ಸಂಗತಿ. ನಿಮ್ಮ ಸ್ನೇಹಿತರು ಮಂಗಳೂರು ಅಥವಾ ಶಿವಮೊಗ್ಗದಲ್ಲಿದ್ದರೆ, ಒಮ್ಮೆೆ ವಿಚಾರಿಸಿ ನೋಡಿ ಈ ಯೋಜನೆಯ ಮಾಹಿತಿ ಸಿಗುತ್ತದೆ.

ನಮ್ಮ ದೇಶದಲ್ಲಿ ಐಡಿಯಾ ಕೊಡುವವರಿಗೇನೂ ಬರವಿಲ್ಲ. ಆದರೆ ಅದನ್ನು ನೆಲಮಟ್ಟದಲ್ಲಿ ಅನುಷ್ಠಾಾನಗೊಳಿಸಲು ಇಚ್ಛಾಾಶಕ್ತಿಿಯೂ ಬೇಕು. ಕೇವಲ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಅದನ್ನು ಅನುಷ್ಠಾಾನಗೊಳಿಸಲು ಸಾಧ್ಯ. ಅಂತಹ ಅಪರೂಪದ ಅಧಿಕಾರಿ ಮನೀಷ್ ಮೌದ್ಗಿಿಲ್. ಇವರ ತಲೆಯಲ್ಲಿ ಇನ್ನೂ ಹಲವಾರು ಯೋಜನೆಗಳಿವೆಯಂತೆ. ಸರಕಾರಿ ಕಚೇರಿಗೆ ಅಲೆಯದೇ ಮೊಬೈಲ್‌ನಲ್ಲಿಯೇ ಡ್ರೋೋಣ್ ಸರ್ವೇ ಮಾಡಿಸಿ, ಆಸ್ತಿಿಗಳನ್ನು ಭಾಗ ಮಾಡಿಕೊಂಡ ಮೇಲೆ, ಪಹಣಿಯಲ್ಲಿನ ಪೋಡಿಯನ್ನು ನಾವೇ ಮಾಡಿ ಹೊಸ ಪಹಣಿಗಳನ್ನು ಪಡೆಯಬಹುದಾದಂಥ ಯೋಜನೆಗಳ ಐಡಿಯಾ ಇವರ ಬಳಿ ಇದೆ. ಬಹುಶಃ ಈ ಮಟ್ಟಿಿನ ಚಿಂತನೆಯು ಮುಂದುವರಿದ ದೇಶಗಳಲ್ಲಿಯೂ ಇರುವುದು ಅನುಮಾನ.

ಮನೀಷ್ ಮೌದ್ಗಿಿಲ್ ಅವರ ಚಿಂತನೆಗಳನ್ನು ನೋಡಿದರೆ, ಇವರು ಎಲ್ಲರಿಗಿಂತಲೂ ಮುಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಂಥ ಅತಿ ಅಪರೂಪದ ಅಧಿಕಾರಿಗಳು ಆಡಳಿತ ಯಂತ್ರವನ್ನು ಚುರುಕಾಗಿಸುತ್ತಾಾರೆ. ತಾವು ಮಾಡಿದ ಅಪರೂಪದ ಕೆಲಸಗಳನ್ನು ಹೇಳಿಕೊಳ್ಳದೆ, ಎಲೆ ಮರೆ ಕಾಯಿಯಂತೆ ಹಿಂದೆಯೇ ಇರುತ್ತಾಾರೆ. ಇಂಥ ಅಧಿಕಾರಿಗಳನ್ನು ಬಹುಶಃ ರಾಷ್ಟ್ರಮಟ್ಟದಲ್ಲಿ ಬಳಸಿಕೊಂಡರೆ, ‘ನೀತಿ ಆಯೋಗ’ ತರಹದ ಸಂಸ್ಥೆೆಗಳಿಗೆ ಒಳ್ಳೆೆಯ ಬಲ ಬಂದಂತಾಗುತ್ತದೆ.

Leave a Reply

Your email address will not be published. Required fields are marked *

error: Content is protected !!