Saturday, 27th July 2024

ಸಾಮ್ರಾಟನಾಗುವುದಕ್ಕಿಂತ ಸಂಸದೀಯ ಪಟುವಾಗಲಿ

ಅಶ್ವತ್ಥಕಟ್ಟೆ

ranjith.hoskere@gmail.com

ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದು, ನೂತನ ಸರಕಾರ ಅಽಕಾರಕ್ಕೆ ಬಂದು ಆರು ತಿಂಗಳು ಕಳೆಯುವ ಕೆಲವೇ ದಿನಗಳ ಮೊದಲು ರಾಜ್ಯಾಧ್ಯಕ್ಷ
ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕನ ಆಯ್ಕೆಯ ಪ್ರಕ್ರಿಯೆಗೆ ಬಿಜೆಪಿ ಅಂತ್ಯ ಹಾಡಿದೆ. ಈ ಎರಡೂ ಸ್ಥಾನಗಳಿಗೆ ಹತ್ತಾರು ಹೆಸರುಗಳು ದೊಡ್ಡಮಟ್ಟದಲ್ಲಿ ಕೇಳಿಬಂದರೂ ಕೊನೆಗೆ ಬಿಜೆಪಿ ವರಿಷ್ಠರು ‘ಇವರೇ ಸಮರ್ಥರು’ ಎನ್ನುವ ಅರ್ಥದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರನ್ನೂ, ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆರ್. ಅಶೋಕ್ ಅವರನ್ನು ನೇಮಿಸಿ ಕೈಬಿಟ್ಟಿದೆ.

ಈ ಎರಡೂ ನೇಮಕದ ಬಗ್ಗೆ ಪಕ್ಷದಲ್ಲಿ ಒಪ್ಪಿಗೆಗಿಂತ ‘ಅಸಮಾಧಾನ’ವೇ ಹೆಚ್ಚಾಗಿ ಸದ್ಯಕ್ಕೆ ಕಾಣುತ್ತಿರುವುದು ಸ್ಪಷ್ಟ. ನಿಜವಾಗಿ ಹೇಳಬೇಕೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆಗಿರುವ ಆಯ್ಕೆಗಳು ಪೂರ್ಣ ಗೊಂಡು ತಿಂಗಳುಗಳೇ ಕಳೆಯಬೇಕಿತ್ತು. ಈ ವೇಳೆ ಈ ಇಬ್ಬರೂ ರಾಜ್ಯವನ್ನು ಒಂದು ಸುತ್ತಿ ಬರಬೇಕಿತ್ತು. ಆದರೆ ಚುನಾವಣೆಯಲ್ಲಿನ ಬಿಜೆಪಿ ಹೀನಾಯ ಸೋಲು, ಕಳೆದ ಮೂರು ವರ್ಷದಲ್ಲಿ ಸರಿಪಡಿಸಿಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಕೆಳಗೆ ಬಿದ್ದಿರುವ ಪಕ್ಷದ ಸಂಘಟನೆ ಹಾಗೂ ರಾಜ್ಯ ಮಟ್ಟದ ನಾಯಕರಲ್ಲಿನ ಪ್ರತಿಷ್ಠೆಯ ಸಮಸ್ಯೆಯಿಂದ ಪ್ರಕ್ರಿಯೆ ಆರು ತಿಂಗಳು ಎಳೆದಿದೆ ಎನ್ನುವುದು ಸ್ಪಷ್ಟ.
ಒಂದು ವೇಳೆ ಬೆಳಗಾವಿ ಅಽವೇಶನ ಡಿಸೆಂಬರ್‌ನಲ್ಲಿ ಆರಂಭವಾಗದಿದ್ದರೆ, ಅಥವಾ ಹಲವು ಶಾಸಕರು ಪ್ರತಿಪಕ್ಷ ನಾಯಕನ ನೇಮಕದ ಹೊರತು ಸದನಕ್ಕೆ ಹೋಗುವುದಿಲ್ಲ ಎನ್ನುವ ಸಂದೇಶವನ್ನು ವರಿಷ್ಠರಿಗೆ ರವಾನಿಸದಿದ್ದರೆ ಇನ್ನಷ್ಟು ತಿಂಗಳು ಈ ಎರಡೂ ಖರ್ಚಿಗಳು ಖಾಲಿ ಹೊಡೆಯಬೇಕಿತ್ತು.

ಈ ಎಲ್ಲ ಪ್ರಹಸನ ಪೂರ್ಣಗೊಳ್ಳಲು ಯಡಿಯೂರಪ್ಪ ಅವರ ಒತ್ತಡ, ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಗೆಲುವಿನ ಅನಿವಾರ್ಯವೇ ಕಾರಣ. ಬಿಜೆಪಿ ವರಿಷ್ಠರು ಪಂಚರಾಜ್ಯ ಚುನಾವಣೆಯ ಬ್ಯುಸಿಯಲ್ಲಿಯೂ ಕರ್ನಾಟಕಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಗೆ ಸಮಯ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಕಳೆದ ಆರು ತಿಂಗಳಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದ್ದ ಹತ್ತಾರು ಹೆಸರು, ಜಾತಿ ಲೆಕ್ಕಾಚಾರ ಗಳಲ್ಲ ಪಕ್ಕಕ್ಕಿಟ್ಟು, ವಿಜಯೇಂದ್ರ ಅವರಿಗೆ ಈ ಪಟ್ಟವನ್ನು ಬಿಜೆಪಿ ವರಿಷ್ಠರು ಕಟ್ಟಿದ್ದಾರೆ. ಇನ್ನು ಇದೇ ರೀತಿ (ಅಚ್ಚರಿಯೂ ಹೌದು), ಏಳು ಬಾರಿ ಗೆದ್ದಿರುವ ಆರ್. ಅಶೋಕ್ ಅವರಿಗೆ ವಿಧಾನಸಭಾ ಪ್ರತಿಪಕ್ಷ ನಾಯಕನ ಸ್ಥಾನ ನೀಡುವ ಮೂಲಕ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ವಿಜಯೇಂದ್ರ ಆಯ್ಕೆಯ ವಿಷಯದಲ್ಲಿ ಬಿಜೆಪಿಯಲ್ಲಿ ಕೆಲವೊಂದು ಅಸಮಾಧಾನವಿದ್ದರೂ, ಯಡಿಯೂರಪ್ಪ ಪುತ್ರ, ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಛಾಪು
ಮೂಡಿಸಿಕೊಂಡಿರುವ ಕಾರಣಕ್ಕೆ ಬಹುತೇಕರು ವರಿಷ್ಠರ ತೀರ್ಮಾನವನ್ನು ಅರಗಿಸಿಕೊಂಡಿದ್ದಾರೆ. ರಾಜಕೀಯ ವಲಯದಲ್ಲಿಯೂ ವಿಜಯೇಂದ್ರ ಅವರ ಆಯ್ಕೆ ಒಂದು ‘ರಿಸ್ಕ್’ ಎನ್ನುತ್ತಿದ್ದಾರೆಯೇ ಹೊರತು, ಕೆಟ್ಟ ಆಯ್ಕೆ ಎನ್ನುತ್ತಿಲ್ಲ. ಆದರೆ ಬಿಜೆಪಿಯ ಬಹುತೇಕ ನಾಯಕರಲ್ಲಿ, ಶಾಸಕ ರಲ್ಲಿ ಹಾಗೂ ಕಾರ್ಯಕರ್ತರಲ್ಲಿರುವ ಬಹುದೊಡ್ಡ ಅಸಮಾಧಾನವೆಂದರೆ ಆರ್. ಅಶೋಕ್‌ಗೆ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟಿರುವುದು.

ಬಸನಗೌಡ ಯತ್ನಾಳ್, ವಿಜಯೇಂದ್ರ ಅವರನ್ನು ವಿರೋಽಸಲು ಇವರಿಬ್ಬರ ನಡುವಿನ ವೈಯಕ್ತಿಕ ಕಾರಣದ ಹೊರತಾಗಿ ಬೇರೇನಿಲ್ಲ. ಆದರೆ ಅಶೋಕ್ ಅವರ
ನೇಮಕದ ಬಗ್ಗೆ ಬಹುತೇಕರು ಪ್ರಶ್ನೆ ಎತ್ತಲು ಹಲವು ಕಾರಣಗಳಿವೆ. ಈ ಎರಡು ಸ್ಥಾನಗಳಿಗೆ ಇಬ್ಬರನ್ನು ನೇಮಿಸುವ ಹಿಂದೆ ಕ್ಯಾಲಕ್ಯುಲೇಟೆಡ್ ರಿಸ್ಕ್ ಎನ್ನುವುದು ಸ್ಪಷ್ಟ. ವಿಜಯೇಂದ್ರ ಅವರ ನೇಮಕಕ್ಕಿಂತ ಅಶೋಕ್ ಅವರ ನೇಮಕದ ಬಗ್ಗೆ ಇರುವ ಅನುಮಾನಗಳು ಹೆಚ್ಚಿವೆ. ವಿಜಯೇಂದ್ರ ಬಗ್ಗೆ ಹೇಳುವ ಮೊದಲು, ಅಶೋಕ್ ಅವರಿಗೆ ಸಿಕ್ಕಿರುವ ಪ್ರತಿಪಕ್ಷ ನಾಯಕನ ಸ್ಥಾನದ ಬಗ್ಗೆ ಹೇಳುವುದು ಸೂಕ್ತ. ಆರ್.ಅಶೋಕ್ ಎಂದಿಗೂ ತಮ್ಮಲ್ಲಿ ‘ಮಾಸ್ ಲೀಡರ್’ಗಿರುವ ಗುಣವಿದೆ ಎಂದು ತಾವೇ ನಂಬಿಲ್ಲ.

ಏಳು ಬಾರಿ ಶಾಸಕ, ಒಮ್ಮೆ ಉಪಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸರಕಾರ ಬಂದಾಗಲೆಲ್ಲ ಅಧಿಕಾರದಲ್ಲಿದ್ದಾರೆ. ಆದರೆ ಎಂದಿಗೂ ತಾನೊಬ್ಬ ಒಂದು ಸಮುದಾಯವನ್ನು ಪಕ್ಷದತ್ತ ಸೆಳೆಯುವ ನಾಯಕ ಎನ್ನುವುದನ್ನು ಸಾಬೀತುಪಡಿಸಿಲ್ಲ. ಇದರೊಂದಿಗೆ ಬೆಂಗಳೂರಿಗೆ ಸಾಮ್ರಾಟ್ ಅಶೋಕ್ ಎನ್ನುವ ಮಾತುಗಳನ್ನು ಈ ಹಿಂದೆ ಬಿಜೆಪಿಯಲ್ಲಿ ಹೇಳಲಾಗುತ್ತಿತ್ತು. ಆದರೆ ಬೆಂಗಳೂರನ್ನು ನಿಭಾಯಿಸುವ ವಿಷಯದಲ್ಲಿಯೂ ಅಶೋಕ್ ಸೋತಿದ್ದರು. ಆ ಕಾರಣ ಕ್ಕಾಗಿಯೇ ಯಡಿಯೂರಪ್ಪ ಅವರ ಎರಡನೇ ಅವಽಯಲ್ಲಿ ಒಕ್ಕಲಿಗ ಕೋಟಾದಲ್ಲಿ ಅಶ್ವತ್ಥ ನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಸಿಕ್ಕಿತ್ತು. ಅಶೋಕ್ ಮೇಲಿರುವ ಬಹುದೊಡ್ಡ ಆರೋಪವೆಂದರೆ ‘ಹೊಂದಾಣಿಕೆ’ ರಾಜಕೀಯ ಎನ್ನುವುದು. ಆಡಳಿತ ಅಥವಾ ಪ್ರತಿಪಕ್ಷದಲ್ಲಿರುವಾಗ ತಮ್ಮ ವಿರೋಧಿಗಳೊಂದಿಗೆ
ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಈ ಕಾರಣದಿಂದಲೇ ಬೆಂಗಳೂರು ದಕ್ಷಿಣದಲ್ಲಿ ರಾಜಕೀಯ ಚಿತ್ರಣ ಬಹುದೊಡ್ಡ ಮಟ್ಟದಲ್ಲಿ ಬದಲಾಗುವುದಿಲ್ಲ ಎನ್ನುವುದು ಹಲವು ಬಿಜೆಪಿ ಗರ ಅಭಿಪ್ರಾಯವಾಗಿದೆ.

ಈ ರೀತಿ ಹೊಂದಾಣಿಕೆ ಮಾಡಿ ಕೊಳ್ಳುವ ಆರೋಪವಿರುವ ಅಶೋಕ್ ಅವರನ್ನು ಪ್ರತಿಪಕ್ಷ ನಾಯಕನನ್ನಾಗಿ ನೇಮಿಸಿದರೆ, ಆಡಳಿತ ಪಕ್ಷವನ್ನು ಯಾವ
ರೀತಿ ಎದುರಿಸುತ್ತಾರೆ? ಆಡಳಿತ ಪಕ್ಷದ ಪ್ರತಿಹೆಜ್ಜೆಯ ಲ್ಲಿಯೂ ಹುಳುಕು ಕಂಡುಹಿಡಿದು, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ನಾಯಕನೇ ‘ಅಡ್ಜಸ್ಟ್’ ಮಾಡಿಕೊಂಡರೆ ಪಕ್ಷವಾಗಿ ಸದನದೊಳಗೆ ಏನು ಮಾಡಲು ಸಾಧ್ಯ ಎನ್ನುವುದು ಹಲವು ಶಾಸಕರ ಪ್ರಶ್ನೆಯಾಗಿದೆ. ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿರುವುದಕ್ಕೆ ತಾನೂ ಈ ಸ್ಥಾನಕ್ಕೆ ಅರ್ಹ ಎನ್ನುವುದನ್ನು ಸಾಬೀತುಪಡಿಸುವುದಕ್ಕೆ ಹೊಂದಾಣಿಕೆಯಿಂದ ಹೊರಬಂದು ನಿರ್ಭೀತಿಯಿಂದ ಸರಕಾರದ ವಿರುದ್ಧ ಹೋರಾಟ ಮಾಡಬಹುದು. ಇಷ್ಟು ದಿನ ಸಿಗದ ಅವಕಾಶ ಈಗ ಸಿಕ್ಕಿರುವುದರಿಂದ ಸಾಬೀತು ಪಡಿಸುವ ಸಾಧ್ಯತೆಯಿದೆ ಎನ್ನುವುದು ಕೆಲವರ ಲೆಕ್ಕಾಚಾರ. ಆದರೆ ಅಶೋಕ್ ಅವರಿಗೆ ಇರುವ ಇನ್ನೊಂದು ಸವಾಲು ಎಂದರೆ, ಕಳೆದ ಮೂರು ವರ್ಷದಲ್ಲಿ ಎಂದಿಗೂ ತಾನೊಬ್ಬ ಸಂಸದೀಯ ಪಟುವಾಗಿ ಎಂದು ಕಾಣಿಸಿಕೊಂಡಿಲ್ಲ.

ಪ್ರತಿಪಕ್ಷ ನಾಯಕನಿಗೆ ಮೊದಲಿಗೆ ಆಲಿಸುವ, ಆಲಿಸಿದ್ದರಲ್ಲಿ ಆಡಳಿತ ಪಕ್ಷವನ್ನು ವಿರೋಧಿಸುವ ಹಾಗೂ ಸದನದ ನಡವಳಿಗಳ ಬಗ್ಗೆ ಸಂಪೂರ್ಣ ಹಿಡಿತ ಹಾಗೂ ಸರಕಾರವನ್ನು ಕಟ್ಟಿಹಾಕುವ ಸುದೀರ್ಘ ಭಾಷಣದ ಕಲೆಯಿರಬೇಕು. ಆದರೆ ಇಲ್ಲಿಯವರೆಗೆ ಅಶೋಕ್ ಈ ಯಾವ ಲಕ್ಷಣವನ್ನು ಸಚಿವನಾಗಿ, ಶಾಸಕನಾಗಿ ತೋರಿಲ್ಲ ಎನ್ನುವುದೇ ಬಹು ದೊಡ್ಡ ಹಿನ್ನಡೆ. ಇದರೊಂದಿಗೆ ಅಶೋಕ್ ಒಕ್ಕಲಿಗ ನಾಯಕನೆಂದು ಹೇಳಿ ಕೊಂಡರೂ ಅದನ್ನು ಇಲ್ಲಿಯವರೆಗ ಸಾಬೀತುಪಡಿಸಿಲ್ಲ.
ಆದರೆ ಇತ್ತೀಚಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ‘ಹೊಂದಾಣಿಕೆ’, ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಇಬ್ಬರನ್ನು ‘ಹ್ಯಾಂಡಲ್’ ಮಾಡುವ ಕಲೆ ಗೊತ್ತಿದೆ ಎನ್ನುವುದೇ ಬಹುದೊಡ್ಡ ‘ಪ್ಲಸ್‌ಪಾಯಿಂಟ್’.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯ ಬಿ.ವೈ.ವಿಜಯೇಂದ್ರ ಅವರಿಗೆ ಅಶೋಕ್‌ಗೆ ಇರುವಂತೆ ಹೊಂದಾಣಿಕೆ, ವರ್ಚಸ್ಸಿನ ಸಮಸ್ಯೆಯಿಲ್ಲ. ಯಡಿಯೂರಪ್ಪ
ಅವರು ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿದ್ದಾಗಲೇ ರಾಜಕೀಯವನ್ನು ಹತ್ತಿರದಿಂದ ಅಧ್ಯಯನ ಮಾಡಿರುವ ವಿಜಯೇಂದ್ರ ಅವರಿಗೆ ಇಲ್ಲಿಯವರೆಗೆ ಪಕ್ಷದ ವರಿಷ್ಠರು ನೀಡಿದ್ದ ಬಹುತೇಕ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದರು. ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿರುವ ಅವರು, ಯಡಿಯೂರಪ್ಪ ಅವರ ಪುತ್ರ ಎನ್ನುವ ಕಾರಣಕ್ಕೋ ಅಥವಾ ಲಿಂಗಾಯತ ಸಮುದಾಯದ ಯುವ ನಾಯಕ ಎನ್ನುವ ಕಾರಣಕ್ಕೋ ಒಂದಷ್ಟು ವರ್ಚಸ್ಸನ್ನು ಗಳಿಸಿಕೊಂಡಿದ್ದಾರೆ.

ವಿಜಯೇಂದ್ರ ಅವರನ್ನು ಈಗಲೇ ಮಾಸ್ ಲೀಡರ್ ಎನ್ನಲು ಸಾಧ್ಯವಿಲ್ಲವಾದರೂ, ರಾಜ್ಯದ ಯಾವುದೇ ಮೂಲೆಗೆ ಹೋದರೂ ನಿರಾಯಾಸವಾಗಿ ಒಂದಿಷ್ಟು ಸಾವಿರ ಜನರನ್ನು ಸೇರಿಸುವ, ಸಂಘಟನೆಯನ್ನು ಗಟ್ಟಿಗೊಳಿಸುವ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಯಡಿಯೂರಪ್ಪ ಅವರ ನೆರಳಲ್ಲಿಯೇ ಬೆಳೆದಿರುವುದರಿಂದ, ಸಹಜವಾಗಿಯೇ ನೂತನ ಹುದ್ದೆಯ ನಿರ್ವಹಣೆಯಲ್ಲಿ ಯಡಿಯೂರಪ್ಪ ಅವರ ಸುಽರ್ಘ ರಾಜಕೀಯ ಅನುಭವವನ್ನು ಬಳಸಿ ಕೊಳ್ಳುತ್ತಾರೆ. ಇದರೊಂದಿಗೆ ಇಂದಿನ ರಾಜಕಾರಣದಲ್ಲಿ ಅತ್ಯಗತ್ಯವಾಗಿರುವ ‘ಫಂಡ್ ರೈಸಿಂಗ್’ ವಿಷಯದಲ್ಲಿಯೂ ವಿಜಯೇಂದ್ರ ಅವರಿಗೆ ಅನುಭವವಿದೆ.

ವಿಜಯೇಂದ್ರ ನೇಮಕದ ಹಿಂದೆ ಯಡಿಯೂರಪ್ಪ ಅವರ ಒತ್ತಡವಿರುವುದು ಸ್ಪಷ್ಟ. ವಿಧಾನಸಭಾ ಚುನಾವಣೆ ಯಲ್ಲಿ ಭಾರಿ ಹಿನ್ನಡೆಗೆ ಪ್ರಮುಖ ಕಾರಣವೆಂದು ಪಕ್ಷದ
ವರಿಷ್ಠರಿಗೆ ಅರ್ಥವಾಗಿದೆ. ಯಡಿಯೂರಪ್ಪ ಅವರನ್ನು ಸೈಡ್‌ಲೈನ್ ಮಾಡಿದ್ದರಿಂದ ಲಿಂಗಾಯತರು ವಿಮುಖರಾಗಿ ದ್ದಾರೆ. ಸಂಘಟನೆ ಹಳಸಿದೆ ಎನ್ನುವುದು ಸ್ಪಷ್ಟವಾಗಿದೆ. ಇನ್ನಾರು ತಿಂಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ, ಈಗಿರುವ ಬಿಜೆಪಿ ಸಂಘಟನೆಯನ್ನು ಬಳಸಿ ಕೊಂಡು ಚುನಾವಣೆ ಎದುರಿಸಿದರೆ, ‘ಮುಖಭಂಗ’ದ ಆತಂಕವಿರುವುದರಿಂದ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟಕೊಟ್ಟು ಯಡಿಯೂರಪ್ಪ ಅವರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಹಾಗೂ ಲಿಂಗಾಯತರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡುವ ಮೂಲಕ ಆ ಸಮುದಾಯವನ್ನು ಮತ್ತೆ ಪಕ್ಷದತ್ತ ಸೆಳೆಯುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರ.

ವಿಜಯೇಂದ್ರ ಅವರ ನೇಮಕದ ಬೆನ್ನಲ್ಲೇ ವಿಧಾನಸಭಾ ಪ್ರತಿಪಕ್ಷ ನಾಯಕನ ಸ್ಥಾನ ಲಿಂಗಾಯತರಿಗೆ ಸಿಗುವುದು ಡೌಟ್ ಎನ್ನುವುದು ಸ್ಪಷ್ಟವಾಗಿತ್ತು. ಒಕ್ಕಲಿಗರಿಗೆ ಈ ಸ್ಥಾನ ನೀಡುವುದು ಖಚಿತವಾಗಿತ್ತು. ಆದರೆ ಯಾರಿಗೆ ಎನ್ನುವ ಗೊಂದಲದಲ್ಲಿರುವಾಗಲೇ ಯಡಿಯೂರಪ್ಪ ಅವರು ಅಶೋಕ್ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಅಶೋಕ್ ಅವರ ನೇಮಕದಿಂದ ವಿಜಯೇಂದ್ರ ಅವರ ಭವಿಷ್ಯಕ್ಕೆ ಸಮಸ್ಯೆಯಿಲ್ಲ ಎನ್ನುವ ಕಾರಣಕ್ಕೆ ಅಶೋಕ್ ಅವರಿಗೆ ‘ಅರಿಯದೇ’ ವಿಪಕ್ಷ ಸ್ಥಾನ ಲಭಿಸಿತು ಎನ್ನುವುದು ಸ್ಪಷ್ಟ.

ಯತ್ನಾಳ್, ಅರವಿಂದ ಬೆಲ್ಲದ್ ಅವರು ಅಶೋಕ್ ಅವರ ಆಯ್ಕೆಯನ್ನು ವಿರೋಧಿಸಿದ್ದಕ್ಕಿಂತ ಹೆಚ್ಚಾಗಿ ವಿರೋಧಿ ಸಿದ್ದು ವಿಜಯೇಂದ್ರ ಅವರ ಆಯ್ಕೆಯನ್ನು. ಏಕೆಂದರೆ, ಅಶೋಕ್ ಅವರನ್ನು ಹ್ಯಾಂಡಲ್ ಮಾಡುವುದು ಸುಲಭ ಎನ್ನುವುದು ಬಿಜೆಪಿಯ ನಾಯಕರಿಗೂ ಗೊತ್ತಿದೆ. ಆದರೆ ವಿಜಯೇಂದ್ರ ಅವರಿಗೆ ಒಮ್ಮೆ ಅವಕಾಶ ಸಿಕ್ಕರೆ, ಮತ್ತೆ ಮುಂದಿನ ಎರಡು ಮೂರು ದಶಕಗಳ ಕಾಲ ಪಕ್ಷದ ಆಯಕಟ್ಟಿನ ಸ್ಥಾನದಲ್ಲಿ ಯಡಿಯೂರಪ್ಪ ಕುಟುಂಬದ ಕೂರುವುದು ಸ್ಪಷ್ಟ. ಅದರಲ್ಲಿಯೂ ‘ವರ್ಚಸ್ಸು’ ಇರುವುದರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಯಕರ್ತರನ್ನು ಸೆಳೆಯುತ್ತಾರೆ. ಹಾಗಾದರೆ, ನಮಗೆ ಸಿಗಬೇಕಾದ
ಸ್ಥಾನಕ್ಕೆ ಕುತ್ತು ಎನ್ನುವುದು ವಿರೋಽಸುತ್ತಿರುವವರ ಲೆಕ್ಕಾಚಾರ. ಈ ಎಲ್ಲ ಸಾಧಕ-ಬಾಧಕದ ಲೆಕ್ಕಾಚಾರದ ಹೊರತಾಗಿ ವಿಜಯೇಂದ್ರ ಹಾಗೂ ಅಶೋಕ್ ಇಬ್ಬರಿಗೂ ಇರುವ ಬಹುದೊಡ್ಡ ಸವಾಲು ‘ಮುಳುಗುವ ಹಡಗಿನ’ ಸ್ಥಿತಿಯಲ್ಲಿ ರುವ ರಾಜ್ಯ ಬಿಜೆಪಿ ಮರುಹುಟ್ಟು ಕೊಡುವುದಾಗಿದೆ. ಈ ಕಾರ್ಯವನ್ನು ಈ ಇಬ್ಬರು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ.

Leave a Reply

Your email address will not be published. Required fields are marked *

error: Content is protected !!