Saturday, 27th July 2024

ಸುಭಾಷಿತಗಳು ಶಿಕ್ಷಕರೂ ಹೌದು, ಸ್ನೇಹಿತರೂ ಹೌದು!

ತುಂಬಾ ಜನ ಯುವಕರು, ನನ್ನ ಕಾರ್ಯಕ್ರಮಕ್ಕೆೆ ಬರುವವರು, ಕಾರ್ಯಕ್ರಮ ಮುಗಿದ ಮೇಲೆ ನನ್ನನ್ನು ಕೇಳುವ ಒಂದೇ ಒಂದು ಪ್ರಶ್ನೆೆ-ನಾವು ಯಾವ ಪುಸ್ತಕ ಓದಬೇಕು ಸಾರ್? ಎಲ್ಲವನ್ನೂ ಓದಬೇಕು ಎಂದು ಹೇಳಿದರೆ ಅಷ್ಟು ಸಮಯವಿಲ್ಲ ಸಾರ್, ನಾವು ನಿಮ್ಮಂತೆ ಖಾಲಿ ಇರುವವರಲ್ಲ ಎಂಬ ಅರ್ಥದ ಮಾತನಾಡುತ್ತಾಾರೆ, ಯಾವದಾದರೂ ಒಂದು, ಎರಡು ಪುಸ್ತಕದ ಹೆಸರು ಹೇಳಿ ಸಾರ್ ಸಾಕು ಎನ್ನುತ್ತಾಾರೆ. ಜೀವನ ಪರ್ಯಂತದ ಬಾಳುವೆಗೆ ಎರಡು ಪುಸ್ತಕಗಳ ಅಧ್ಯಯನ ಸಾಕೆ? ಯಾವದಾದರೂ ಜೋಕ್ಸ ಪುಸ್ತಕ ಹೇಳಿ ಸಾರ್ ಎನ್ನುತ್ತಾಾರೆ, ಎಲ್ಲವನ್ನು ಹಗುರವಾಗಿ ತೆಗೆದುಕೊಳ್ಳಿಿ ಸಾಕು ಆದರೆ, ಓದುವ ವಿಷಯಕ್ಕೆೆ ಸಾಕು ಎಂಬುದಿಲ್ಲ ಎಂದು ಎಷ್ಟು ಹೇಳಿದರೂ ಜನರಿಗೆ ಮನವರಿಕೆ ಆಗುವದಿಲ್ಲ. ನೀವು ಹೇಳುವ ಎಲ್ಲ ವಿಷಯವೂ ಒಂದೇ ಪುಸ್ತಕದಲ್ಲಿದೆಯಾ, ಅದು ಯಾವದು ಹೇಳಿ ಸಾರ್ ಎಂದೇ ಕೇಳುತ್ತಾಾರೆ.

ಸಾಕು ಎಂಬುದು ಬಂತೆಂದರೆ ಅಲ್ಲಿಗೆ ನಿಮಗೆ ಬದುಕೇ ಸಾಕಾಗಿದೆ, ನಿಮ್ಮ ಬದುಕೇ ಮುಗಿಯುತ್ತಾಾ ಬಂದಿದೆ ಎಂದೇ ಅರ್ಥವೆಂದು ಹೇಳಬೇಕೆನಿಸುತ್ತದೆ. ಆದರೆ, ವಿವೇಕ ಅದನ್ನು ತಡೆಯುತ್ತದೆ. ನಾವು ರಾಜಕಾರಣಿಗಳನ್ನು ಈ ವಿಷಯಕ್ಕೆೆ ನೋಡಿ ಕಲಿಯಬೇಕು. ಅವರು ಎಂದಾದರೂ ಅಧಿಕಾರ ಇನ್ನು ಸಾಕು ಎಂದಿದ್ದಾಾರೆಯೆ? ಹಣ ಆಸ್ತಿಿ ಮಾಡುವದನ್ನು ಸಾಕು ಎಂದಿದ್ದಾಾರೆಯೆ? ಬದುಕುವದು ಸಾಕು ಎಂದಿದ್ದಾಾರೆಯೆ? ಜನರಿಂದ ಉಗಿಸಿಕೊಳ್ಳುವದು ಸಾಕು ಎಂದವರಿಗೆ ಎನಿಸಿದೆಯೆ? ಇಂಥ ಇಳಿವಯಸ್ಸಿಿನಲ್ಲೂ ದೇವೇಗೌಡರು ಮತ್ತೆೆ ಮತ್ತೆೆ ನಾಲ್ಕೈದು ಕಡೆ ಎಲೆಕ್ಷನ್ನಿಿಗೆ ನಿಲ್ಲಲು ಸಿದ್ಧರಿದ್ದಾಾರೆ. ಪ್ರಧಾನಿ ಆಗಲು, ರಾಷ್ಟ್ರಪತಿ ಆಗಲು ಈ ಕ್ಷಣಕ್ಕೂ ಹತ್ತು ಜನರ ಹೆಗಲ ಮೇಲೆ ಕೈ ಹಾಕಿಕೊಂಡು ಮೆಲ್ಲಗೆ ನಡೆಯುತ್ತಲೇ ಬರುತ್ತಾಾರೆ.

ಸಾಕು ಎನಿಸುತ್ತಿಿರುವದು ಬಡವರಿಗೆ, ಮಧ್ಯಮ ವರ್ಗದವರಿಗೆ. ‘ಸಾಕು’ ಎನಿಸುವ ಎರಡು ಅಕ್ಷರಗಳ ಹಿಂದಿರುವ ಸಮಸ್ಯೆೆಗೆ ‘ಬದುಕು’ ಎಂಬ ಎರಡಕ್ಷರವೇ ಉತ್ತರ. ಬದುಕಿನಲ್ಲಿ ಸಾಕು ಎಂಬುದಿರಬಾರದು, ಆದರೆ, ಬದುಕು ಸಾಕಾಗಬಾರದು. ದಿನ ನಿತ್ಯದ ಏಕತಾನತೆಯ ದಿನಚರಿಯಿಂದಾಗಿಯೇ ಬಹಳಷ್ಟು ಜನರಿಗೆ ಬದುಕು ಸಾಕೆನಿಸುತ್ತದೆ. ಬೇಕಾದರೆ ಕೇಳಿ ನೋಡಿ, ಸಾಕು ಎನ್ನುವವರು, ನಿತ್ಯ ಅದೇ ಅದೇ ಮಾಡುತ್ತಿಿರುತ್ತಾಾರೆ. ವೈವಿಧ್ಯತೆ ಇದ್ದರೆ ಬದುಕು ಸಾಕೆನಿಸುವುದಿಲ್ಲ, ವರ್ಣಮಯ ದಿನಚರಿಯನ್ನು ರೂಢಿಸಿಕೊಂಡರೆ ದಿನಗಳು ಉರುಳುವದೇ ತಿಳಿಯುವದಿಲ್ಲ. ಅಂಥ ದಿನಚರಿ ನಮಗಿಲ್ಲ ಎಂಬ ಕೊರಗು ನಿಮಗಿದ್ದರೆ, ‘ಮಾಡಿದ್ದೇ ಮಾಡಬೇಕು ಸಾರ್ ಬೇರೆ ಬದುಕಿಲ್ಲ, ಹೊಳಪಿಲ್ಲ, ಹೊಸದೆಂಬುದು ಇಲ್ಲವೇ ಇಲ್ಲ’ ಎಂಬುವವರಿಗೆ ಹೇಳಿ ಮಾಡಿಸಿದ ಹವ್ಯಾಾಸವೆಂದರೆ ಓದುವದು.

ಎಲ್ಲವೂ ಅದರಲ್ಲಿಯೇ ಇರಬೇಕು ಎಂಬಂತಹ ‘ಆಲ್ ಇನ್ ಒನ್’ ಪುಸ್ತಕವೆಂದರೆ ಸುಭಾಷಿತಗಳು, ಗಾದೆಮಾತುಗಳು, ಕೊಟೇಶನ್‌ಗಳು. ನನಗಿಷ್ಟವಾದ ಇಂಥ ಪುಸ್ತಕಗಳೆಂದರೆ ಪ್ರಭಾಕರ ಶಾಸ್ತ್ರಿಿಯವರ ‘ಬೃಹತ್ ಸಂಸ್ಕೃತ ಸುಭಾಷಿತ ಭಂಡಾರ’ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಪಾದಿಸಿದ ‘ಸುಭಾಷಿತ ಮಂಜರೀ, ಚಾಣಕ್ಯ ಸಂಪುಟ’, ಎಸ್.ಆರ್. ರಾಮಸ್ವಾಾಮಿಯವರ ‘ಸೂಕ್ತಿಿಸಪ್ತತಿ ಸೂಕ್ತಿಿ-ಸಂಚಯ’, ಪ್ರೊೊ. ವಿಷ್ಣು ಜೋಶಿಯವರ ‘ಕಾಳಿದಾಸ ಸುಭಾಷಿತ ಹಾಗೂ ಭಾಸನ ನಲ್ನುಡಿ’, ಕೆ.ನಾರಾಯಣ ಭಟ್ಟರ ‘ನುಡಿಮುತ್ತು’, ಬಿ.ಎಂ.ಎಂ. ಆರಾಧ್ಯರ ‘ಸೂಕ್ತಿಿ ಮಂದಾರ ಸಂಕಲನ’, ಡಾ.ಸ್ವಾಾಮಿರಾವ್ ಕುಲಕರ್ಣಿಯವರ ಸಂಗ್ರಹಿತ ‘ಹರಿದಾಸರ ನುಡಿ ಹಣತೆ’, ಸಿ.ಪಿ.ಕೆಯವರ ‘ಅಂತರತಮ’, ಮಹಾಬಲ ಸೀತಾಳಭಾವಿಯವರ ‘ನಿತ್ಯ ಜೀವನಕ್ಕೆೆ ಹತ್ತಿಿರದ ಸುಭಾಷಿತಗಳು’, ಗೌರಿಸುತರು ಸಂಪಾದಿಸಿದ ‘1200 ನುಡಿರತ್ನಗಳು’, ಭರ್ತೃಹರಿಯ ‘ಶತಕ ತ್ರಯ’, ಪರಮೇಶ್ವರ ಭಟ್ಟರ ‘ಇಂದ್ರಚಾಪ’, ಶ್ರೀಪಾದ ಆರ್. ಕುಲಕರ್ಣಿಯವರ ‘ಸುಖದ ಅನ್ವೇಷಣೆ’ ಅಲ್ಲದೇ ರಾಷ್ಟ್ರೋೋತ್ಥಾಾನದ ಪ್ರಕಟಣೆಗಳಾದ ‘ಜೀವನ ಮೌಲ್ಯಗಳು ಭಾಗ ಒಂದು, ಎರಡು, ಮೂರು’. ಇನ್ನು ಅಲ್ಲಮನ ‘ವಚನ ಸುಧೆ, ಸರ್ವಜ್ಞನ ಪದಗಳು, ಬಸವಣ್ಣನವರ ವಚನಗಳು,’ ಹೀಗೆ ಓದಬೇಕೆನ್ನುವವರಿಗೆ ಸಾಲು ಸಾಲು ಪುಸ್ತಕಗಳಿವೆ.

ಮೇಲ್ಕಂಡ ಈ ಮಹಾನುಭಾವರೆಲ್ಲ ತಾವು ಓದಿದ ಗ್ರಂಥಗಳಿಂದ ಆಯ್ದ ನುಡಿ ಮುತ್ತುಗಳನ್ನು, ‘ಎಲ್ಲಾಾ ಇರುವ ಒಂದು ಪುಸ್ತಕ ಯಾವದಾದರೂ ಇದ್ದರೆ ಹೇಳಿ ಸಾರ್’ ಎಂಬ ನಮ್ಮಂಥ ಸೋಮಾರಿಗಳಿಗಾಗಿಯೇ ಸಂಗ್ರಹಿಸಿ ಬರೆದಿದ್ದಾಾರೆ, ಇವನ್ನಾಾದರೂ ಓದಿ ಎಲ್ಲವುಗಳ ಮಿಶ್ರಣದ ಭೇಲ್‌ಪುರಿಯನ್ನು ಸವಿಯೋಣ. ನಾನಂತೂ ಮೊದಲಿನಿಂದ ಸುಭಾಷಿತಗಳ ಪ್ರಿಿಯ, ಪಿಯುಸಿ ಓದುತ್ತಿಿದ್ದಾಾಗಲೇ ನನ್ನ ಹದಿನೇಳನೆ ವಯಸ್ಸಲ್ಲಿ ಕನ್ನಡದಲ್ಲಿದ್ದ ‘ಮನುಸ್ಮತಿ ಓದಿದ್ದೆೆ, ಅಲ್ಲಿಂದ ನನಗೆ ಗಾದೆ ಮಾತುಗಳ, ನಾಣ್ಣುಡಿಗಳ, ಸುಭಾಷಿತಗಳ ರುಚಿ ಹತ್ತಿಿತ್ತು. ಕೇವಲ ನಾಲ್ಕು ಸಾಲುಗಳ ಸುಭಾಷಿತಗಳು ನೂರಾರು ವರ್ಷಗಳ ಅನುಭವಗಳನ್ನು ಕಟ್ಟಿಿಕೊಡುತ್ತವೆ. ಬೇರೆಯವರ ಅನುಭವಗಳನ್ನೂ ನಮ್ಮದಾಗಿಸುತ್ತವೆ.

ಇಂದಿನ ಪಾಲಕರು, ಮಕ್ಕಳು, ರ್ಯಾಾಂಕ್-ಅಂಕಗಳ ಹಿಂದೆ ಬಿದ್ದು ಜೀವನದ ಸ್ವಾಾರಸ್ಯವನ್ನೇ ಕಳೆದುಕೊಳ್ಳುತ್ತಿಿದ್ದಾಾರೆ. ಇನ್ನು ಹಿರಿಯರು ಹಾಳು ಕಾಡುಹರಟೆಗಳಿಗೆ, ರಾಜಕೀಯ ಸುದ್ದಿಗಳಿಗೆ ಮನಸೋತು ಕುಳಿತಲ್ಲಿಯೇ ಮೈಮನಗಳನ್ನು ಭಾರವಾಗಿಸಿಕೊಳ್ಳುತ್ತಿಿದ್ದಾಾರೆ- ಇದಕ್ಕೂ ಒಂದು ಸುಭಾಷಿತದ ಮೂಲಕವೇ ಚಾಟಿ ಏಟು ಬೀಸಿದ್ದಾಾರೆ ಸುಭಾಷಿತಕಾರರು! ಅದೆಂದರೆ ‘ಬೊಗಳೆ ಮಾತುಗಳನ್ನಾಾಡುವದಕ್ಕಿಿಂತ ಮನುಜ ತನ್ನ ಸದ್ಗುಣಗಳನ್ನು ಅಭಿವೃದ್ಧಿಿ ಮಾಡಿಕೊಳ್ಳಬೇಕು, ಆಕಳು ಹಾಲನ್ನು ಹೆಚ್ಚು ಕೊಡುವದರಿಂದ ಕಾಮಧೇನು ಎನಿಸಿಕೊಳ್ಳುತ್ತದೆಯಾಗಲಿ ಕೊರಳಲ್ಲಿ ಕಟ್ಟಿಿಸಿಕೊಂಡಿರುವ ದೊಡ್ಡ ದೊಡ್ಡ ಗಂಟೆಗಳ ಸದ್ದಿನಿಂದಲ್ಲ’. ಇದು ರಾಜಕಾರಣಿಗಳಿಗೆ ಹೇಳಿ ಮಾಡಿಸಿದ ಮಾತು, ‘ಸತತ ನಾಲ್ಕು ಬಾರಿ ಕ್ಷೇತ್ರದಿಂದ ಗೆದ್ದವನು, ಹ್ಯಾಾಟ್ರಿಿಕ್ ಹೀರೋ, ಸೋಲಿಲ್ಲದ ಸರದಾರ,’ ಎಂಬ ಬಿರುದುಗಳನ್ನು ಪತ್ರಿಿಕೆಗಳಲ್ಲಿ ಬರೆಸಿಕೊಳ್ಳುವ, ತಮ್ಮದೇ ಕೃಪಾಪೋಷಿತ ಚಾನಲ್‌ಗಳಲ್ಲಿ ಹೇಳಿಸಿಕೊಳ್ಳುವ ರಾಜಕೀಯ ನಾಯಕರು ಕ್ಷೇತ್ರಕ್ಕೆೆ ಸೇವೆ, ಅಭಿವೃದ್ಧಿಿ ಎಂಬ ಹಾಲು ಕೊಡದೇ, ‘ಬಾರಿ ಬಾರಿಗೆ ಆರಿಸಿ ಬರುತ್ತೇವೆ’ ಎಂಬ ಗಂಟೆಗಳನ್ನೇ ಕಟ್ಟಿಿಕೊಂಡು ಅವನ್ನೇ ಶಬ್ದ ಮಾಡುತ್ತಾಾ ಅಡ್ಡಾಾಡಿದಂತೆ.

ಪ್ರೈಮರಿ, ಹೈಸ್ಕೂಲ್ ಶಿಕ್ಷಣದಿಂದಲೇ ಮಕ್ಕಳಿಗೆ ಸುಭಾಷಿತಗಳ ರುಚಿ ಹಚ್ಚಿಿಸಬೇಕು. ಶಾಲಾದಿನಗಳಲ್ಲಿ ಮಕ್ಕಳಿಗೆ ತುಂಬಾ ಕೀಳರಿಮೆ ಇರುತ್ತದೆ. ತಮಗೆ ಬಟ್ಟೆೆ ಸರಿಯಿಲ್ಲವೆಂದೋ ಕೆಲವು ವಿಷಯಗಳು ತಲೆಗೆ ಹೋಗವದಿಲ್ಲವೆಂದೋ, ಮಾರ್ಕ್ಸ ಕಮ್ಮಿಿ ಬಂತೆಂದೋ ಯೋಚಿಸುತ್ತಾಾ, ಯೋಚಿಸುತ್ತಾಾ ನಾನು ದುರ್ಬಲ, ದಡ್ಡ ಎಂಬ ಭಾವನೆ ಬಂತೆಂದರೆ ಅವನ ಏಳಿಗೆ ಕಷ್ಟ, ಆಗ ಅವನಿಗೆ ಈ ಸುಭಾಷಿತವು ಔಷಧದಂತೆ ಕೆಲಸ ಮಾಡುತ್ತದೆ: ಅದೆಂದರೆ, ‘ನಾನು ತುಂಬಾ ಕಡಿಮೆ ಇದ್ದೇನೆ, ಕೆಳಗಿದ್ದೇನೆ ಎಂದು ದುಃಖಿಸಬಾರದು. ಅದರ ಬದಲಿಗೆ ಇತರರಲ್ಲಿನ ಸದ್ಗುಣಗಳನ್ನು, ಲಲಿತ ಕಲೆಗಳಾದ ಹಾಡುವಿಕೆ, ಚಿತ್ರ ಬಿಡಿಸುವಿಕೆ, ಭಾಷಣ, ಅಭಿನಯಗಳನ್ನು ಬೆಳೆಸಿಕೊಂಡರೆ, ನೂರಾರು ಅಡಿ ಒಳಗಿರುವ ಬಾವಿಯ ಸಿಹಿ ನೀರನ್ನು ಜನರು ಹಗ್ಗ ಹಾಕಿ ಎಳೆದುಕೊಂಡು ಪಾತ್ರೆೆಗಳಲ್ಲಿ ತುಂಬಿಸಿಕೊಂಡು ಕುಡಿಯುವಂತೆ ನಿನ್ನನ್ನು ಬಳಸುತ್ತಾಾರೆ’. ಈ ಮಾತಿನಿಂದ ದಡ್ಡ ಹುಡುಗನಲ್ಲಿ ಆಶಾಕಿರಣ ಮೂಡಿ ಅವನು ಆ ದಿಸೆಯಲ್ಲಿ ಪ್ರಯತ್ನ ಮಾಡುತ್ತಾಾನೆ.

ಈಗಿನ ಮಕ್ಕಳು ಗೂಗಲ್, ವಾಟ್ಸಪ್, ನೆಟ್, ಫೇಸ್ ಬುಕ್, ಇತ್ಯಾಾದಿಗಳಿಗೆ ಅಡಿಕ್‌ಟ್‌ ಆಗಿ ಕೂತಲ್ಲೇ ಆಯುಷ್ಯ ಕಳೆದುಕೊಳ್ಳುತ್ತಿಿವೆ. ಸ್ನೇಹಿತರಂತೂ ಇಲ್ಲವೇ ಇಲ್ಲ, ಪ್ರವಾಸ, ತಿರುಗಾಟ, ಕುತೂಹಲಗಳು ಉಳಿದೇ ಇಲ್ಲ, ಬಿದ್ದಲ್ಲಿಯೇ ಕೊರಡಿನಂತೆ ಬಿದ್ದು, ಕೂತಲ್ಲಿಯೇ ಕಲಿಯುತ್ತಾಾ, ಊರಿನ ದಾರಿ ತೋರಿಸುವ ಕೈ ಮರದಂತೆ ಇದ್ದಲ್ಲಿಯೇ ಇದ್ದಾಾರೆ. ಅವರಿಗೆ ಈ ಸುಭಾಷಿತ ಚಾಟಿ ಏಟಿನಂತಿದೆ: ‘ಪ್ರವಾಸ ಮಾಡದ ಮನುಷ್ಯ, ಪಂಡಿತರ ಜೊತೆ ಚರ್ಚಿಸದ ಮನುಷ್ಯ, ಸ್ನೇಹಿತರೇ ಇಲ್ಲದ ಮನುಷ್ಯ ನೀರಿನ ಮೇಲಿನ ತುಪ್ಪದಂತೆ ಇದ್ದಲ್ಲಿಯೇ ಇರುತ್ತಾಾನೆ. ಇವುಗಳನ್ನು ಮಾಡುವ ಮನುಷ್ಯ ಅಂದರೆ ಊರೂರು ಸುತ್ತುವದು, ಸಮಾನ ಮನಸ್ಕರು, ಹಿರಿಯರ ಜೊತೆ ಚರ್ಚಿಸುವವನು. ಸ್ನೇಹಿತರ ಗುಂಪಿಗೆ ನಾಯಕನಾಗಿರುವವನು ನೀರಿನ ಮೇಲಿನ ಎಣ್ಣೆೆಯಂತೆ ನೀರಿನ ತುಂಬಾ ಪಸರಿಸುತ್ತಾಾನೆ.’

ಸಜ್ಜನರ ಲಕ್ಷಣವೆಂದರೆ ಯಾರ ಟೀಕೆಗೂ ಅಂಜದೆ, ಅಳುಕದೆ, ಒಮ್ಮೊೊಮ್ಮೆೆ ಕಿವಿಯ ಮೇಲೆ ಹಾಕಿಕೊಳ್ಳದೆ ಸದಾ ಒಳ್ಳೆೆಯದನ್ನೇ ಮಾಡುತ್ತಿಿರುತ್ತಾಾರೆ. ಸದ್ಯದ ಉದಾಹರಣೆ ಎಂದರೆ ಪ್ರಧಾನಿ ಮೋದಿ. ಇದಕ್ಕೆೆ ಅನ್ವಯವಾಗುವ ಸುಭಾಷಿತವೆಂದರೆ ‘ಸಮುದ್ರದ ಉಪ್ಪುು ನೀರನ್ನೇ ಮೋಡಗಳು ಹೀರಿಕೊಂಡು ಕುಡಿದರೂ ಮತ್ತೆೆ ಮಳೆಯ ಮೂಲಕ ಸಿಹಿ ನೀರನ್ನೇ ಜನರಿಗೆ ಕೊಡುತ್ತವೆ. ಸತ್ಪುರುಷರು ಯಾರ ಟೀಕೆಗೂ ಅಂಜುವದಿಲ್ಲ ಸಮುದ್ರದ ನೀರನ್ನು ಹುಲ್ಲು, ಬೆರಣಿ, ಕಟ್ಟಿಿಗೆಯಿಂದ ಬಿಸಿ ನೀರನ್ನಾಾಗಿ ಮಾಡಲು ಸಾಧ್ಯವೇ ಇಲ್ಲ.’

ಇನ್ನು ಹೇರಳ ಹಣವಿದ್ದವರಿಗೆ ಅದನ್ನು ಅನುಭವಿಸಲು ಗೊತ್ತಿಿರುವದಿಲ್ಲ, ಅವರಿಗೇ ಅನುಭವಿಸುವದು ಗೊತ್ತಿಿಲ್ಲವೆಂದರೆ ಸದ್ವಿಿನಿಯೋಗವಂತೂ ಗೊತ್ತೇ ಇಲ್ಲ ಅಂಥವರಿಗಾಗಿ ಈ ಸುಭಾಷಿತ ಅದ್ಭುತ ಚಿತ್ರವನ್ನು ಕಣ್ಮುಂದೆ ಕಟ್ಟಿಿಕೊಡುತ್ತದೆ. ಅದೆಂದರೆ ‘ನಾಯಿ, ಕುತ್ತಿಿಗೆ ಮಟ್ಟದ ನೀರಿನಲ್ಲಿ ಮುಳುಗಿದ್ದರೂ ನೀರನ್ನು ನಾಲಗೆಯಿಂದಲೇ ನೆಕ್ಕುತ್ತಿಿರುತ್ತದೆ, ಗಟ ಗಟನೆ ಕುಡಿಯುವ ಅಭ್ಯಾಾಸ ಅದಕ್ಕೆೆ ಗೊತ್ತೇ ಇಲ್ಲ’. ಹಣವಿದ್ದವರು ಹೇಗಿರಬೇಕೆಂಬುದಕ್ಕೆೆ ನಮ್ಮ ಕಣ್ಮುಂದಿರುವ ಇನ್ಫೋೋಸಿಸ್‌ನ ಸುಧಾ-ನಾರಾಯಣ ಮೂರ್ತಿ ದಂಪತಿ ಶ್ರೇಷ್ಠ ನಿದರ್ಶನ.

ಇವರ ಮೈ ಮೇಲೆ ಬಂಗಾರವೇ ಇಲ್ಲ, ಶಾಪಿಂಗ್ ಮಾಡುವದೇ ಇಲ್ಲ, ಆದರೆ, ಬರಗಾಲ ನಿಧಿಗೆ, ಯೋಧರ ನಿಧಿಗೆ, ಶಾಲೆ ಕಾಲೇಜುಗಳಿಗೆ ಹೇರಳವಾಗಿ ದಾನ ಮಾಡುತ್ತಾಾರೆ, ಮುಂದಿನ ಜನ್ಮಕ್ಕೆೆ ಅವರು ಹಣ ಕೂಡಿಡುತ್ತಿಿಲ್ಲ, ಪುಣ್ಯವನ್ನೇ ಕೂಡಿಟ್ಟುಕೊಳ್ಳುತ್ತಿಿದ್ದಾಾರೆ, ಪುಣ್ಯವೊಂದಿದ್ದರೆ, ಪುಣ್ಯವೊಂದನ್ನು ಗಳಿಸಿದರೆ ಮಂತ್ರಿಿಗಿರಿಯಷ್ಟೇ ಏಕೆ, ಇಂದ್ರ ಪದವಿಯೂ ನಮಗಾಗಿ ಕಾಯುತ್ತಿಿರುತ್ತದೆ. ಈ ಸತ್ಯ ಬಹಳ ಜನರಿಗೆ ಅರಿವಾಗುವದೇ ಇಲ್ಲ, ಅದಕ್ಕೆೆ ಸುಧಾಮೂರ್ತಿಯಂಥವರನ್ನು ಕುರಿತಂತೇ ಇರುವ ಈ ಸುಭಾಷಿತವನ್ನು ಮಕ್ಕಳಿಗೆ ಬಾಲ್ಯದಲ್ಲೇ ಹೇಳಬೇಕು-‘ಬುದ್ಧಿಿ ಇಲ್ಲದ ಪಶುಗಳೂ ಸಹ ತಮ್ಮ ಹಾಲನ್ನು ಕರುಗಳಿಗೆ ಕುಡಿಸಿದ ಮೇಲೆ ಉಳಿದದ್ದನ್ನು ಜನರಿಗೆ, ದೇವರ ಅಭಿಷೇಕಕ್ಕೆೆ, ರೋಗಿಗಳಿಗಾಗಿ ಕೊಡುತ್ತವೆ. ಹೇರಳ ಸಂಪತ್ತಿಿರುವ ಶ್ರೀಮಂತರು ಗಳಿಸಿದ ಸಂಪತ್ತನ್ನು ಬರೀ ತಮ್ಮ ಮಕ್ಕಳಿಗೇ ವಿನಿಯೋಗಿಸಿದರೆ, ಕೂಡಿಟ್ಟರೆ ಅದರ ಪಾಪವನ್ನೂ ಅವರ ಸಂತಾನ ಭರಿಸಬೇಕಾಗುತ್ತದೆ.

ಅಧರ್ಮ ಇದ್ದಷ್ಟು ಕಾಲ ಮೆರೆಯುತ್ತದೆ ನಿಜ, ಆದರೆ, ಶಾಶ್ವತ ಉಳಿಯುವದಿಲ್ಲ; ಹಸು ಒಂದು ಸಲಕ್ಕೆೆ ಒಂದೇ ಮರಿ ಹಾಕುತ್ತದೆ. ಅದೇ ಹುಲಿ, ಸಿಂಹಗಳು, ಒಂದು ಸಲಕ್ಕೆೆ ನಾಲ್ಕೈದು ಮರಿಗಳನ್ನು ಹಾಕುತ್ತವೆ. ಆದರೂ, ಭೂಮಿಯ ಮೇಲೆ ಹಸುಗಳೇ ಹೆಚ್ಚಿಿವೆ. ಕಾರಣ, ಧರ್ಮ ಸಂತಾನಕ್ಕೆೆ ಉಳಿವು ಹೆಚ್ಚು. ಕ್ರೂರಿ, ಪೀಡಕ, ದರ್ಪಗಳ ಸಂತಾನ ಸಾವಿರಗಟ್ಟಲೇ ಇದ್ದರೂ ಸರ್ವನಾಶ ಖಂಡಿತ. ಕೌರವರು ನೂರು ಜನ, ಒಬ್ಬರೂ ಉಳಿಯಲಿಲ್ಲ, ಅವರ ಹೆಸರನ್ನು ಯಾರಿಗೂ ಇಡಲು ಜನ ತಯಾರಿಲ್ಲ. ಆದರೆ ಪಾಂಡವರು ಕೇವಲ ಐದೇ ಜನ, ಸೂರ್ಯ ಚಂದ್ರರಿರುವರೆಗೂ ಉಳಿದು ಹೋದರು.

ಸಜ್ಜನರಾದವರು ಎಂದಿಗೂ ತಮ್ಮ ಮೂಲ ಸ್ವಭಾವಗಳನ್ನು ಎಂಥ ಕಷ್ಟ ಬಂದರೂ ಬಿಡುವದಿಲ್ಲ, ದೇಹ ಬಿಡುತ್ತಾಾರಾಗಲಿ, ‘ದೇಹಿ’ ಎನ್ನುವದಿಲ್ಲ. ಅದನ್ನು ಈ ಸುಭಾಷಿತವು ಎಷ್ಟು ಮಾರ್ಮಿಕವಾಗಿ ಹೇಳುತ್ತದೆಯೆಂದರೆ, ‘ಕೆಟ್ಟ ಕಾಲ ಬಂದರೂ ಸಜ್ಜನರು ತಮ್ಮ ನೀತಿ ಪಥಗಳಿಂದ ಹಿಂದೆ ಸರಿಯುವದಿಲ್ಲ. ಹೇಗೆ ಸೂರ್ಯನ ತಾಪದಿಂದ ಹಿಮಗಡ್ಡೆೆಯು ತನ್ನ ಆಕಾರವನ್ನು ಕಳೆದುಕೊಂಡು ನೀರಾದರೂ, ಆ ನೀರಿನಲ್ಲೂ ತನ್ನ ತಂಪನ್ನು ಉಳಿಸಿಕೊಂಡಿರುತ್ತದೆಯೋ ಹಾಗೆ ಒಳ್ಳೆೆಯ ನಡೆವಳಿಕೆಯನ್ನೇ ಹೊಂದಿರುತ್ತಾಾರೆ. ಎಷ್ಟು ಅದ್ಭುತ ನುಡಿಯಲ್ಲವೆ?

ಅದಕ್ಕೇ ನಾನು ಯಾವದಾದರೂ ಒಂದು ಪುಸ್ತಕ ಓದಿದರೆ ಎಲ್ಲ ಪುಸ್ತಕಗಳನ್ನು ಓದಿದಂತಾಗುತ್ತದೆಯೋ ಅಂಥ ಪುಸ್ತಕದ ಹೆಸರು ಹೇಳಿ ಎಂದರೆ ಸುಭಾಷಿತಗಳ ಪುಸ್ತಕ ಓದಿ ಎನ್ನುತ್ತೇನೆ. ಅದೊಂದೇ ನಿಮಗೆ ಎಲ್ಲವನ್ನೂ ಓದುವ ಅಭ್ಯಾಾಸ ಮೂಡಿಸುತ್ತದೆ. ಸುಭಾಷಿತಗಳು ಬರಿ ನುಡಿಗಟ್ಟುಗಳಲ್ಲ, ಅವು ಶಿಕ್ಷಕರೂ ಹೌದು, ಸನ್ಮಾಾರ್ಗದಲ್ಲಿ ನಡೆಸುವ ಸ್ನೇಹಿತರೂ ಹೌದು.

Leave a Reply

Your email address will not be published. Required fields are marked *

error: Content is protected !!