Saturday, 27th July 2024

ಬದುಕಿಗೆ ಆದರ್ಶ ಜೇನುಗೂಡೋ, ಒಂಟಿ ಸಲಗವೊ?

ಸಹವಾಸ ಎಂಬುದು ನಾಲ್ಕು ಅಕ್ಷರಗಳ ಶಬ್ದವಾದರೂ ಸಾಗರದಷ್ಟು ವಿಶಾಲ ಅರ್ಥ ಕೊಡುವಂಥದು. ಸಹವಾಸದಿಂದ ಸನ್ಯಾಾಸಿಯೂ ಕೆಟ್ಟ ಎಂಬ ಗಾದೆಯ ಮಾತೇ ಇದೆ. ಹಣ, ಹೆಸರು, ಆಸ್ತಿಿ, ವಂಶ ಎಷ್ಟೇ ದೊಡ್ಡದಾಗಿದ್ದರೂ ನೀವು ಯಾರ ಸಹವಾಸ ಮಾಡುತ್ತಿಿದ್ದೀರಿ, ಯಾರ ಸಹವಾಸದಲ್ಲಿದ್ದೀರಿ ಎಂಬುದರ ಮೇಲೆಯೇ ಜನ ನಿಮ್ಮನ್ನು ಅಳೆಯುತ್ತಾಾರೆ, ನಿಮ್ಮ ಬುದ್ಧಿಿಮತ್ತೆೆಯನ್ನು ಗುರುತಿಸುತ್ತಾಾರೆ. ಸದ್ಯದ ಪರಿಸ್ಥಿಿತಿಯಲ್ಲಿ ಒಂದು ಉದಾಹರಣೆ ಕೊಡಬೇಕೆಂದರೆ ನೀವು ಎಷ್ಟೇ ಜಾಣರಿದ್ದೀರೆಂದರೂ, ಸಮರ್ಥರು, ಸದೃಢರು, ವಿಚಕ್ಷಣಾ ಬುದ್ಧಿಿಯುಳ್ಳವರು, ಜನಬೆಂಬಲ ಇರುವವರೂ ಇದ್ದೀರೆಂದರೂ ಕಾಂಗ್ರೆೆಸ್, ಜೆಡಿಎಸ್ ಪಕ್ಷದಲ್ಲಿದ್ದಿರೆಂದರೆ ಮುಗಿಯಿತು ನಿಮ್ಮನ್ನು ನೋಡುವ ದೃಷ್ಟಿಿ ಕೋನವೇ ಬೇರೆಯಾಗುವದಿಲ್ಲವೆ? ಹಾಗೆಯೇ ಈ ಸಹವಾಸವೆಂಬುದು.

ಅದಕ್ಕೇ ‘ಯಾರೋ ಒಬ್ಬರ ಜೊತೆ ಇದ್ದರಾಯಿತು, ಯಾರೊಂದಿಗೊ ಮಾತನಾಡಿದರಾಯಿತು, ಯಾರ ಮನೆಯ ಹೆಣ್ಣನ್ನೊೊ ಮಾಡಿಕೊಂಡರಾಯಿತು, ಯಾರದೋ ಒಬ್ಬರ ಮನೆಗೆ ನಮ್ಮ ಮನೆಯ ಹೆಣ್ಣನ್ನು ಕೊಟ್ಟರಾಯಿತು’ ಎಂಬ ಲಘು ಧೋರಣೆಯ ಲಘು ನಿರ್ಧಾರಗಳು ಬೇಡ. ಅವು ನಮ್ಮ ಬದುಕನ್ನೇ ಬದಲಿಸುತ್ತವೆ, ಒಮ್ಮೊೊಮ್ಮೆೆ ಬದುಕನ್ನೇ ಭಸ್ಮ ಕೂಡಾ ಮಾಡಿಬಿಡುತ್ತವೆ. ಅದಕ್ಕೇ ನೋಡಿ, ಸಹವಾಸ ದೋಷ ಎಂಬ ಶಬ್ದವೇ ಸಹವಾಸದೊಂದಿಗೆ ಸೇರಿಹೋಗಿದೆ. ಹಾವಿನ ತಲೆಯ ಮೇಲೆ ಬೆಲೆಬಾಳುವ ಮಣಿಯಿರುವದು, ಕೇದಿಗೆಯ ಬನದಲ್ಲಿ ಹಾವುಗಳಿರುವುದು, ನೀಳ ಸುಂದರ ಕೇಶರಾಶಿಯಲ್ಲಿ ಹೇನುಗಳಿರುವುದು, ಇತ್ಯಾಾದಿ ಇತ್ಯಾಾದಿ, ಹಾಗೆಯೇ ಈ ಲೇಖನದ ಕಥಾ ನಾಯಕಿ ಭಾಗೀರಥಿ ಎಂಬ ಹೆಣ್ಣು ಮಗಳು ದೊಡ್ಡ ಮನೆತನ ನಮ್ಮದು ಎಂದು ಹೇಳಿಕೊಂಡು ದಡ್ಡ, ಗೂಬೆ ಕುಟುಂಬದ ಮನೆಯ ಸೊಸೆಯಾಗಿ ಬಂದದ್ದು.

ಭಾಗೀರಥಿ ಎಂಬ ಬಾಲೆ ಹುಟ್ಟಿಿದ್ದು ಆರು ಜನ ಗಂಡು ಮಕ್ಕಳ ತಂದೆ ತಾಯಿಯ ಕೊನೆಯ ಕುಡಿಯಾಗಿ. ‘ಕಡೆಯ ಹುಟ್ಟು ಕಡ್ಲಿಿ ಬೆಲ್ಲ’ ಎಂಬ ಮಾತಿನಂತೆ ಭಾಗಿರಥಿ ಎಲ್ಲರ ಮುದ್ದಿನ ಮಗುವಾಗೇ ಬೆಳೆದಳು. ಆರು ಜನ ಅಣ್ಣಂದಿರು, ತಂದೆಯ ತಮ್ಮಂದಿರು ಅಂದರೆ ಭಾಗೀರಥಿಗೆ ಚಿಕ್ಕಪ್ಪಂದಿರು ಏಳು ಜನ. ತಾಯಿಗೂ ಏನು ಕಡಿಮೆ ಇಲ್ಲ, ತಾಯಿಗೆ ಒಂಬತ್ತು ಜನ ಅಕ್ಕ ತಂಗಿಯರು. ಎಲ್ಲರಿಗೂ ಗಂಡು ಮಕ್ಕಳೇ ಜಾಸ್ತಿಿ. ಇಂಥ ಅಕ್ಷೋಹಿಣಿ ಸೈನ್ಯ ಹೋಲುವ ಮನೆತನದಲ್ಲಿ ಭಾಗೀರಥಿ ಏಕಮಾತ್ರ ಹೆಣ್ಣು ಕೂಸಾಗಿ ಜನ್ಮತಾಳಿದಳು, ಸದಾ ಒಬ್ಬರಲ್ಲ ಒಬ್ಬರ ಕೈಯಲ್ಲಿಯೇ ಇರುತ್ತಿಿದ್ದ ಕೂಸು, ಹತ್ತು-ಹನ್ನೆೆರಡು ವರ್ಷದವರೆಗೂ ನೆಲಕ್ಕೆೆ ಕಾಲು ಸೋಕಿಸಲಿಲ್ಲ. ಹಾಸಿಗೆಯ ಮೇಲೆ ಮಲಗಲಿಲ್ಲ, ಕುರ್ಚಿ, ಸೋಫಾ, ಸ್ಟೂಲ್‌ಗಳ ಮೇಲೆ ಕೂರಲಿಲ್ಲ, ಯಾರದಾದರೂ ತೊಡೆಯ ಮೇಲೆಯೇ ಕೂತು, ಮಲಗಿಯೇ ದೊಡ್ಡವಳಾದಳು.

ಅವರ ಮನೆಯೋ ಸಂತೆಯಂತೆಯೇ ಗಿಜಿಗುಡುತ್ತಿಿತ್ತು. ಎಷ್ಟೋೋ ಸಲ ಮಗು ಭಾಗೀರಥಿ ಮನೆಯ ಸಂತೆಯಲ್ಲಿಯೇ ಯಾರ ಬಳಿ ಇದ್ದಾಾಳೆಂದು ಹುಡುಕಲಾಗದೇ ಅಯ್ಯೋ ಮಗು ಕಳೆದೇ ಹೋಗಿದೆಯಂತೆಯೇ ಗಾಬರಿಯಾಗಿ ಆಕೆಯ ಹೆಸರು ಹಿಡಿದು ಕೂಗುತ್ತಿಿದ್ದ , ಹುಡುಕುತ್ತಿಿದ್ದ ದಿನಗಳು ಬೇಕಾದಷ್ಟಿಿದ್ದವು. ಅದೊಂದು ಸಿಟಿಮಾರ್ಕೆಟ್‌ನಂತಹ ಮನೆ.

ಆ ಮನೆಯಲ್ಲಿ ಮನೆಯವರು ಯಾರೋ, ಹೊರಗಿನವರಾರೋ, ಅತಿಥಿಗಳಾರೋ, ಮನೆಯ ಮಾಲೀಕರಾರೋ, ಆಳುಗಳಾರೋ ತಿಳಿಯಲಾಗದ ತುಂಬಿದ ಮನೆ. ಹಂಡೆಗಟ್ಟಲೆ ನೀರು ಕಾಸುವದು, ತಪ್ಪಲೆಗಟ್ಟಲೆ ಅಡಿಗೆ, ಹೂವು, ಹಣ್ಣು, ತರಕಾರಿ ಮನೆಗೆ ವಾಹನಗಳಲ್ಲೇ ಬರುತ್ತಿಿತ್ತು, ಯಾರೋ ಇಳಿಸಿಕೊಳ್ಳುತ್ತಿಿದ್ದರು, ಯಾರೋ ಒಳಗೊಯ್ಯುತ್ತಿಿದ್ದರು, ಯಾರನ್ನು ಏನೂ ಕೇಳಿದರೂ ಏನೋಪ್ಪ, ನನಗ್ಗೊೊತ್ತಿಿಲ್ಲ, ಯಾರು ಹೇಳಿದ್ರೇನೋ ಎಂಬ ಸಿದ್ಧ ಉತ್ತರ ಪ್ರತಿಯೊಬ್ಬರ ಬಾಯಲ್ಲಿಯೂ ಸರ್ವೇಸಾಮಾನ್ಯ ಸಿದ್ಧವಾಗಿರುತ್ತಿಿತ್ತು.

ಯಾರು ಉಂಡರೋ, ಯಾರು ಉಪವಾಸವಿದ್ದಾಾರೋ, ಕಾಯಿಲೆಯವರಾರೋ, ಇಂದು ಯಾರು ಊರಿಂದ ಬಂದರೋ, ಯಾರು ಊರಿಗೆ ಹೊರಟಿದ್ದಾಾರೋ ಎಂದು ಆ ಮನೆಯಲ್ಲಿ ಊಹಿಸುವದೇ ಕಷ್ಟವಾಗಿ ಬಿಡುತ್ತಿಿತ್ತು. ಕೈಯಲ್ಲಿ ಸೂಟ್‌ಕೇಸ್ ಹಿಡಿದು ಬರುವದನ್ನು ಕಂಡು ‘ಬನ್ನಿಿ ಬನ್ನಿಿ ಈಗ ಬಂದಿರಾ?’ ಎಂದು ಅಂದಿರೊ ‘ಅಯ್ಯೋ, ಮಾರಾಯ ಊರಿಗೆ ಹೊಂಟೀನಪಾ ಈಗಿನ್ನು, ಬರೋದು ವಾರ ಆಗ್ತದೆ’ ಎಂದು ಪೇಚಾಡುತ್ತಾಾರೆ. ಬ್ಯಾಾಗು ಹಿಡಿದು ಬರುವವರನ್ನು ಕಂಡು, ‘ ಎಲ್ಲಿಗೆ ಹೊರಟಿರಿ, ಎಂದು ವಾಪಸ್ ಬರುತ್ತಿಿರಿ ಎಂದಿರೋ’, ‘ಈಗಿನ್ನ ಬೆಂಗಳೂರಿಂದ ಬಂದು ಇಳಿದೀನೋ ಮಾರಾಯ, ಮತ್ತೆೆ ಎಲ್ಲಿಗೆ ಕಳಿಸ್ತಿಿ?’ ಎಂದು ಅಲವತ್ತು ಕೊಳ್ಳುತ್ತಿಿದ್ದರು. ಒಟ್ಟಿಿನಲ್ಲಿ ಮನೆ ಬಸ್‌ಸ್ಟ್ಯಾಾಂಡ್ ಅಥವಾ ರೈಲ್ವೇ ಸ್ಟೇಷನ್ ಇದ್ದಂತೆ. ಬ್ಯಾಾಗು, ಸೂಟಕೇಸ್ ಹಿಡಿದಿರುತ್ತಿಿದ್ದವರು ಊರಿಂದ ಬಂದಾರೋ, ಊರಿಗೆ ಹೊರಟಾರೋ ತಿಳೀತಿದ್ದಿಲ್ಲ.

ಇಂಥಾ ಮನೆಯಲ್ಲಿ ಹುಟ್ಟಿಿದ ಏಕಮಾತ್ರ ಹೆಂಣು ಜೀವ ಭಾಗೀರಥಿ ಜಾತ್ರೆೆಯಲ್ಲಿ ಕಳೆದ ಮಗುವಿನಂತೇ ಎಲ್ಲರ ಮಧ್ಯೆೆ ಓಡಾಡುತ್ತಿಿದ್ದಳು. ಒಬ್ಬರು ಎತ್ತಿಿಕೊಂಡು ಮುದ್ದಿಸಿ, ಇಳಿಸಿ, ಮಗು ಎರಡು ಹೆಜ್ಜೆೆ ಇಡುವಲ್ಲಿ ಮತ್ತೊೊಬ್ಬರು ಎತ್ತಿಿಕೊಳ್ಳುತ್ತಿಿದ್ದರು, ಮತ್ತೆೆ ಗಲ್ಲಕ್ಕೆೆ ಮುದ್ದುಕೊಡೋದು, ಇಳಿಸೋದು, ಹೀಗೆ ಇಳಿಸೋದು, ಎತ್ತಿಿಕೊಳ್ಳೋೋದು ಆಗಿ ಮಗುವಿನ ಎರಡು ಕೈಗಳ ಕೆಳಗಿನ ಕಂಕುಳ ಭಾಗದಲ್ಲಿ ರ್ಯಾಾಶಸ್ ಆಗಿ ಮಗುವಿಗೆ ಜ್ವರವೇ ಬಂದು ಬಿಡುತ್ತಿಿತ್ತು.

ತಮ್ಮ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳುವುದು ಇಂಥ ಕಡೆ ಅನಿವಾರ್ಯ. ಬೇಗ ಎದ್ದು ಬಚ್ಚಲು ಖಾಲಿ ಕಂಡ ಕೂಡಲೆ ಸ್ನಾಾನಕ್ಕಿಿಳಿಯುತ್ತಿಿದ್ದರು, ಬಟ್ಟೆೆಗಳನ್ನು ಒಪ್ಪವಾಗಿ ತಾವೇ ಎತ್ತಿಿಟ್ಟುಕೊಳ್ಳುತ್ತಿಿದ್ದರು. ಒಮ್ಮೆೆ ಯಾವದಾದರೂ, ಯಾರಾದರೂ ವಸ್ತು, ಚಡ್ಡಿಿಯೋ, ಬನೀನೋ, ಪೆನ್ನೋೋ, ಪಸ್, ಮೊಬೈಲ್ ಕಳೆಯಿತೆಂದರೆ ತಿಂಗಳುಗಟ್ಟಲೇ ಸಿಗುತ್ತಿಿದ್ದಿಲ್ಲ.

ಪೋಸ್‌ಟ್‌, ಕೊರಿಯರ್‌ಗಳು ಬಂದರಂತೂ ಯಾರೋ ಇಸಿದುಕೊಳ್ಳುವದು, ಎಲ್ಲೋೋ ಇಟ್ಟುಬಿಡುವದು, ಅಪಾಯಿಂಟ್‌ಮೆಂಟ್ ಆರ್ಡರ್‌ಗಳೇ ಕೈಗೆ ಸಿಗದೆ ಆ ಮನೆಯ ನಾಲ್ಕೆೆಂಟು ಯುವಕರು ಒಳ್ಳೊೊಳ್ಳೆೆ ಅವಕಾಶಗಳನ್ನೆೆ ಕಳೆದುಕೊಂಡು ತಲೆ ತಲೆ ಚಚ್ಚಿಿಕೊಳ್ಳುತ್ತಿಿದ್ದರು. ಪಕ್ಕದ ಮನೆಯಾಕೆ ಒಮ್ಮೆೆ ಶ್ಯಾಾವಿಗೆ ಪಾಯಸ ಮಾಡಿ, ಭಾಗೀರಥಿಗೆಂದು ಒಂದು ಪುಟ್ಟ ಬಟ್ಟಲಲ್ಲಿ ತಂದು, ತಾನೇ ತಿನಿಸಿ, ಆ ಬಟ್ಟಲನ್ನು ತೊಳೆದುಕೊಡ್ತಿಿನಿ ಕೊಡ್ರಿಿ ಎಂದವರ ಕೈಗೆ ಕೊಟ್ಟು ಆರು ತಿಂಗಳಾದರೂ ತೊಳೆದ ಬಟ್ಟಲು ಸಿಗದೇ ಕನಸಿನಲ್ಲೂ ಆಕೆ ನನ್ನ ಬಟ್ಟಲು, ನನ್ನ ಬಟ್ಟಲು ಎಂದು ಕನವರಿಸುವಂತಾಗಿತ್ತು. ಓಣಿಯ ಇತರ ಹೆಂಗಸರೆಲ್ಲ ಅವರ ಮನ್ಯಾಾಗ ಒಂಟೆ, ಆನೆ, ಕಳದರೇ ಸಿಗಲ್ಲ ಇನ್ನ ನಿನ್ನ ಬಟ್ಟಲು ಸಿಕ್ಕಿಿತೇನು? ಅದರ ಆಶಾ ಬಿಡು ಎಂದೇ ಆಕೆಯನ್ನು ವೈರಾಗ್ಯದ ಸ್ಥಿಿತಿಗೆ ತಂದರು.

ಇಂಥ ಮನೆಯ ಎದುರಿನ ಮನೆಯೇ ನಿವೃತ್ತ ಶಿರಸ್ತೇದಾರ್ ಮಾಧವರಾಯರ ಮನೆ. ಇದು ಭಾಗೀರಥಿಯ ಮನೆಗೆ ತದ್ವಿಿರುದ್ಧ ಮನೆ. ಗಂಡ, ಹೆಂಡತಿ ಪದ್ದಕ್ಕ ಇಬ್ಬರೇ. ಏಕಮಾತ್ರ ಪುತ್ರ ಗೋಪಾಲ ಕೃಷ್ಣ, ಗೋಪಿ ಎಂದೇ ಕರೆಯುತ್ತಿಿದ್ದರು. ಅವನು ಸ್ಕೂಲಿಗೆ ಹೋದನೆಂದರೆ ಮನೆ ಬಿಕೋ ಎನ್ನುತ್ತಿಿತ್ತು ಬಿಕೋ ಎನ್ನುವ ಮನೆಯೇ ಮಾಧವರಾಯರಿಗೆ ಬೇಕಿದ್ದುದೂ ಆಗಿತ್ತು. ಅವರಿಗೆ ಮೊದಲಿನಿಂದ ಅಂದರೆ ಹಿಂದಿನ ಜನ್ಮದಿಂದಲೂ ಜನ ಬೇಡ, ಗೌಜು, ಗದ್ದಲವಾಯಿತೆಂದರೆ ಮೈಮೇಲೆ ಕೆಂಪು ಗಾದರಿಗಳಾಗುತ್ತಿಿದ್ದವು, ಬಂಧುಬಳಗ ಬೇಕಷ್ಟಿಿದ್ದರೂ ಸರಕಾರಿ ಶಿರಸ್ತೆೆದಾರಿಕೆಯಿದ್ದಾಾಗ ಇವರು ಅವರನ್ನು ದೂರವೇ ಇಟ್ಟಿಿದ್ದರು. ನಿವೃತ್ತರಾದ ಮೇಲೆ ಬಂಧುಬಳಗ ಇವರನ್ನು ದೂರವಿಟ್ಟು ಬಿಟ್ಟರು. ಮುಯ್ಯಿಿಗೆ ಮುಯ್ಯಿಿ, ಸೇಡಿಗೆ ಸೇಡು, ರಕ್ತಕ್ಕೆೆ ರಕ್ತ ಅಲ್ಲವೆ?

ಮಾಧವರಾಯರ ಮಗ ಗೋಪಿ ಒಂಟಿ ಸಲಗ, ಜೇನುಗೂಡಿನಂಥ ಮನೆಯ ಭಾಗೀರಥಿ ಮತ್ತು ಅವನು, ಅದು ಹೇಗೋ ಬಾಲ್ಯದಿಂದಲೇ ಆಡಿ, ಬೆಳೆದು ವಯಸ್ಸಿಿಗೆ ಬಂದ ಮೇಲೆ ಪ್ರೇಮಿಗಳೂ ಆಗಿಬಿಟ್ಟದ್ದು ದೈವಲೀಲೆ. ತಂದೆ ತಾಯಿಯನ್ನು ಬಿಟ್ಟು ಇನೊಬ್ಬ ಮನುಷ್ಯರನ್ನು ನೋಡದ ಗೋಪಿ, ಭಾಗೀರಥ ಮನಿ ಗದ್ದಲ ನೋಡಿ ‘ನಿಮ್ಮನಿಯಾಗ ಇಷ್ಟಾಾಕ ಮಂದಿ ಇದ್ದೀರಿ? ಯಾರಿವರು, ನಿಮ್ಮನಿಯಾಗ ಜಾತ್ರಿಿ ಅದಯೇನು? ಸಂಜಿಮುಂದ ತೇರು ಎಳೀತಿರೇನು?’ ಎಂದು ಕೇಳಿದ್ದ ಒಮ್ಮೆೆ. ಅವರ ಮನೆಗೆ ಹೋಗಿದ್ದ ಭಾಗೀರಥಿ ‘ನಿಮ್ಮನಿಯಾಗ ಇಬ್ರೇನ ಇರೋದು, ಯಾಕ ನಿಮ್ಮವ್ವ ಅಪ್ಪನ್ನ ಯಾರೂ ಸೇರುದಿಲ್ಲೇನು ಬಂಧುಬಳಗ?’ ಎಂದು ಸಹಜವಾಗಿ ಕೇಳಿದ್ದರೂ ಸತ್ಯವನ್ನೆೆ ಪ್ರಶ್ನಿಿಸಿದ್ದಳು.

ಒಮ್ಮೆೆ ಗೋಪಿ ತಾಯಿಯನ್ನೆೆ ಭಾಗೀರಥಿ ‘ಅಮ್ಮ ನೀವು ಹೆಂಗ ಹೊತ್ತು ಕಳಿತೀರಿ? ಕೆಲಸ ಇಲ್ಲ, ಮಂದಿ ಇಲ್ಲ, ಹಬ್ಬ ಹುಂಣಿವಿಗಳು ಯಾರೂ ಇರಲಿಲ್ಲಂದ್ರ ಹೆಂಗ ಚೆಂದ ಆಗ್ತಾಾವ?’ ಎಂದು ಕೇಳಿದ್ದಕ್ಕೆೆ ಪದ್ದಕ್ಕ ಇದ್ದ ಪದಾರ್ಥದಲ್ಲೇ ಚೆಂದ ಅಡಿಗೆ ಮಾಡುವ ಬಡ ಗೃಹಿಣಿಯಂತೆ, ಕಿರಿದರೊಳ್ ಹಿರಿದರ್ಥವಂ ಇಟ್ಟು ಉತ್ತರ ಕೊಟ್ಟ ಪರಿ ಹೀಗಿತ್ತು: ‘ನಾನು, ನಮ್ಮನಿಯವರು ಇಬ್ಬರಿದ್ದರೂ ರಗಡ ಕೆಲಸ ಆಗ್ತದವ್ವ, ಮೊದಲು ಅವರ ಸ್ನಾಾನ, ಆಮೇಲೆ ನನ್ನ ಸ್ನಾಾನ, ಅವರು ಪೂಜಾಕ್ಕ ಕೂತರಂದ್ರ ನಾನು ಫಳಾರದ ತಯಾರಿ ಮಾಡ್ತಿಿನಿ, ಅವರು ಫಳಾರಕ್ಕ ಕೂತರಂದ್ರ ಅವರಿಗೆ ನೀರು ಇಡೋದು, ಫ್ಯಾಾನ್ ಹಾಕೋದು, ಪುಡಿ, ಮೊಸರು ಬೇಕೇನು ಅಂತ ಕೇಳೋದು ಇದ್ದೇಇರ್ತದಲ್ಲ. ಅವರದಾದ ಮ್ಯಾಾಲ ಪ್ಲೇಟ್ ತೊಳೆದು ಆಮ್ಯಾಾಲೆ ನಾ ಪ್ಲೇಟ ಇಟಗೊಂಡು, ಬಡಿಸಿಕೊಂಡು ತಿಂದು, ಕಾಫಿಗಿಟ್ಟು, ಅವರಿಗೊಂದು ಕಪ್, ನನಗೊಂದು ಕಪ್ ತಗೊಂಡು ಕುಡಿದು ಇಡೋದ್ರೊೊಳಗ ಹನ್ನೊೊಂದು ಆಗೇ ಬಿಡ್ತದವ್ವ, ಆಮೇಲೆ ಅವರು ಪೇಪರ್ ಓದೋದಕ್ಕ ಶುರು ಮಾಡ್ತಾಾರ, ನಾನು ಮಧ್ಯಾಾಹ್ನದ ಅಡಿಗ್ಗೆೆ ರೆಡಿ ಮಾಡಿಕೊಡಿತೀನಿ’ ಎಂದು ರಾಗವಾಗಿ ಹೇಳಿ ಮಾಡುವದು ಕಡ್ಡಿಿಯಷ್ಟಾಾದರೂ ಗುಡ್ಡದಂತೆ ಅದನ್ನು ಕಣ್ಣಿಿಗೆ ಕಟ್ಟಿಿಸುತ್ತಿಿದ್ದಳು.

ಭಾಗೀರಥಿಗೆ ತಮ್ಮ ಮನೆಯದು ನಿಜವಾದ ಜೀವನವೋ, ಗೋಪಿ ತಾಯಿ ಕೆಲಸಗಳು ನಿಜವಾದ ಜೀವನವೋ ತಿಳಿಯದಂತಾಗುತ್ತಿಿತ್ತು. ಅಂತೂ ಭಾಗೀರಥಿ ಮನೆಮಂದಿಯೆಲ್ಲ ಒಪ್ಪಿಿ ಗೋಪಿಗೆ, ಭಾಗೀರಥಿಯನ್ನು ನಿಶ್ಚಯಿಸಿದರು. ಭಾಗೀರಥಿ ಎಲ್ಲೂ ಹೋಗಲ್ಲ, ಮನೆ ಎದುರಿಗೆ ಇರ್ತಾಳ ಎಂಬುದೇ ಎಲ್ಲರಿಗೂ ಈ ಸಂಬಂಧವನ್ನು ಒಪ್ಪಲು ಕಾರಣವಾಗಿ ಸಂತಸ ತಂದುಕೊಟ್ಟಿಿತ್ತು. ಮಾಧವರಾಯರು ಶಿರಸ್ತೇದಾರ್ ಶಿಸ್ತಿಿನಲ್ಲೇ ಸೂಚನೆ ಕೊಟ್ಟಿಿದ್ದರು, ಏನಂದರ, ‘ಹುರ್ರ‌್ಯಂತ, ಮನ್ಯಾಾಗ ಇದ್ದಬದ್ದ ಮಂದಿ ಎಲ್ಲಾಾನ ನಮ್ಮನಿಯೊಳಗ ಸೇರೋದು ಬ್ಯಾಾಡ, ಎಲ್ಲ ಕಾರ್ಯಕ್ರಮಗಳೂ ನಿಮ್ಮನಿಯಾಗ ನಡೀಲಿ, ನಾವು ಗಂಡ-ಹೆಂಡತಿ, ಪುರೋಹಿತರು ಹೇಳಿಕಳಿಸಿದಾಗ ಬಂದು ಅವರು ಹೇಳಿದ ವಿಧಿ ವಿಧಾನ ಮಾಡಿ ಕನ್ಯಾಾ ಒಪ್ಪಿಿಸಿ ಹೋಗತೀವಿ, ನಂದು ಶಿಸ್ತಿಿನ ಜೀವನ ಟೈಮ್ ಟು ಟೈಮ್ ಎಲ್ಲ ಆಗಬೇಕು’ ಎಂದುಬಿಟ್ಟರು.

ಅದರಂತೆ ವಾರಗಟ್ಟಲೆ ಅಹೋರಾತ್ರಿಿ ಭಾಗೀರಥಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ, ಜನಜಂಗುಳಿ, ನಗು, ಕೇಕೆ ನಡೆದರೆ- ಮಾಧವರಾಯ ದಂಪತಿಗಳು ಮಾತ್ರ ತಮ್ಮ ಮಗನೊಂದಿಗೆ ಸಿನಿಮಾದಲ್ಲಿ ನಟಿಸುವ ಸ್ನೇಹಪೂರ್ವಕ ಅಭಿನಯದ ನಟರಂತೆ ಅವುಗಳಲ್ಲಿ ಪ್ರಮುಖ ಶಾಟ್‌ಗಳಲ್ಲಿ ಮುಖ ತೋರಿಸಿ, ಅಭಿನಯಿಸಿ ದಡಕ್ಕನೆ ಮನೆಗೆ ಬಂದು ಬಿಡುತ್ತಿಿದ್ದರು. ಗೋಪಿ-ಭಾಗೀರಥಿಯರಿಗೆ ಮಾತ್ರ ಬಾಲ್ಯದಿಂದ ಪ್ರೀತಿಸಿದವರು ಒಂದಾದಿವಿ ಎಂಬ ಹಿಗ್ಗು, ಉತ್ಸಾಾಹ, ಉಮೇದು ಬಿಟ್ಟರೆ, ಜೇನುಗೂಡು, ಒಂಟಿಸಲಗಗಳ ಈ ಬಂಧುತ್ವ ಭಗವಂತನ ಚೇಷ್ಟೆೆಯೇ ಹೌದು ಎಂದು ಅರಿವಾಗಲೇ ಇಲ್ಲ.

ಸ್ನೇಹಿತರೆ, ಭಾಗೀರಥಿ ಹುಟ್ಟಿಿ ಬೆಳೆದ ಮನೆಯೇ ಈ ವಿಶಾಲ ಬ್ರಹ್ಮಾಾಂಡ, ಭಗವಂತನ ಮನೆ ಇದು. ಅಷ್ಟದಿಕ್ಪಾಾಲಕರು, ಗ್ರಹಗಳು, ನಕ್ಷತ್ರಗಳು, ಸೂರ್ಯ-ಚಂದ್ರರು ಹಗಲು-ರಾತ್ರಿಿ, ಹುಣ್ಣಿಿಮೆ ಅಮವಾಸ್ಯೆೆ, ಹಬ್ಬ, ಹರಿದಿನಗಳು ಆತನ ಬಂಧು ಬಳಗ, ಆತನದೇ ಈ ಯಜಮಾನಿಕೆ. ತನ್ಮೂಲಕ ನಿಮಗೆ ಕಷ್ಟ-ಸುಖ ಹೊಂದಾಣಿಕೆ, ಪ್ರೀತಿ ಪ್ರೇಮಗಳನ್ನು ಕಲಿಸುತ್ತಾಾನೆ. ಭಾಗೀರಥಿಯೇ ಆತ್ಮವೆಂದುಕೊಳ್ಳಿಿ. ಅದನ್ನು ಅಪರೂಪವಾಗಿ ನೀವು ರೂಪಿಸಿಕೊಂಡರೆ ನಿಮ್ಮನ್ನು ಎಲ್ಲರೂ ಆದರಿಸುತ್ತಾಾರೆ, ಎತ್ತಿಿ ಮುದ್ದಾಾಡುತ್ತಾಾರೆ, ಎಲ್ಲರ ಕೈಗೂಸಾಗಿ ಬೆಳೆದರೆ- ನೀವು ಬಯಸಿದ ‘ಗೋಪಿ’ ಎಂಬ ಮೋಕ್ಷವೂ ಅದರಲ್ಲಿನ ಸುಖವೂ ನಿಮ್ಮದೇ.

ಅದು ಬಿಟ್ಟು ಹಗಲು-ರಾತ್ರಿಿಗಳ ಪರಿವೆ ಇಲ್ಲದೇ ಯಾರನ್ನೂ ಒಳ ಬಿಟ್ಟುಕೊಳ್ಳದೆ, ಬಾಗಿಲು ಜಡಿದುಕೊಂಡು ಶಿಸ್ತು, ಸಮಯ ಪಾಲನೆ ಎಂದು ಬಿಗಿದು, ಸೆಟೆದು, ಬೆನ್ನು ತಿರುಗಿಸದೆ ಪದ್ದಕ್ಕನಂತೆ ಸ್ನಾಾನ, ಊಟ ಮತ್ತೆೆ ನಿದ್ದೆೆಗೆ ಅಣಿಯಾಗುವದೇ ಜೀವನವೆಂದು ಕೊಂಡರೆ ಬರುವ ಜನ್ಮಗಳಲ್ಲಿ ಗಿಡ, ಮರ, ಬೆಟ್ಟಗಳಂತೆ ಇದ್ದಲ್ಲಿಯೇ ಇರಬೇಕಾದೀತು. ಅವೆಲ್ಲ ಹೋದ ಜನ್ಮದ ಮಾಧವರಾಯ-ಪದ್ದಕ್ಕಗಳೇ. ಡಿವಿಜಿಯವರ ಕಗ್ಗದ ಈ ಸಾಲುಗಳು ನಮಗೆ ಮಾದರಿಯಾಗಲಿ:

ಎರಡು ಕೋಣೆಗಳ ನೀ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಕದಾಟಗಳನಾಡು
ವಿರಮಿಸೊಬ್ಬನೆ ಮೌನದೊಳ್ ಒಳಮನೆಯ ಶಾಂತಿಯಲಿ
ವರಯೋಗ ಸೂತ್ರವದು- ಮಂಕುತಿಮ್ಮ.

Leave a Reply

Your email address will not be published. Required fields are marked *

error: Content is protected !!