Friday, 19th April 2024

ಈ ರಾಜಕೀಯ ದಿಗ್ಗಜರ ಬದಲಾವಣೆ ಅಸಾಧ್ಯ

ಸಂತೋಷಜೀ ಅವರು ಜಾತಿಯನ್ನು ಮೀರಿ ಜನರನ್ನು ಆಕರ್ಷಿಸಿ ಮತ ಬೇಟೆಯಾಡುವ ನಾಯಕರಲ್ಲ. ಇತಿಹಾಸವೇ ಇದಕ್ಕೆೆ ಸಾಕ್ಷಿಿಯಾಗಿದೆ. ಅವರನ್ನು ರಾಜ್ಯದ ಜನರು ಅಷ್ಟು ಸುಲಭವಾಗಿ ಒಪ್ಪಿಿಕೊಳ್ಳುವುದಿಲ್ಲ. ಅಸಂಖ್ಯ ಜನರಿಗೆ ಅವರ್ಯಾಾರು ಎಂದೇ ತಿಳಿದಿಲ್ಲ. ಇದೇ ಪರಿಸ್ಥಿಿತಿ ರಾಜ್ಯ ಕಾಂಗ್ರೆೆಸ್‌ನಲ್ಲೂ ಇದೆ. ಇಷ್ಟೆೆಲ್ಲ ಸಮಸ್ಯೆೆಗಳು ಕಣ್ಣುಮುಂದೆ ಇರುವಾಗ, ಕಾಂಗ್ರೆೆಸ್ ಹಾಗೂ ಬಿಜೆಪಿ ಪಕ್ಷಗಳು ಈ ಇಬ್ಬರ ದಿಗ್ಗಜರ ವಿಚಾರದಲ್ಲಿ ಕೊಂಚ ಆಟವಾಡಿದರೂ, ನಿರ್ನಾಮವಾಗುವುದು ಗ್ಯಾಾರೆಂಟಿ. ಹೀಗಾದರೆ ನೆಲಕಚ್ಚಿಿರುವ ಜೆಡಿಎಸ್ ಮೇಲೆ ಎದ್ದರೂ ಅಚ್ಚರಿಪಡಬೇಕಿಲ್ಲ.

ಇತ್ತೀಚೆಗೆ ರಾಜಕೀಯದಲ್ಲಿ ಹೊಸ ಪ್ರಯೋಗಗಳು ತುಂಬಾ ಸಾಮಾನ್ಯವಾಗಿಬಿಟ್ಟಿಿವೆ. ಹಳೆ ತಲೆಗಳನ್ನು ಸರಿಸಿ, ಹೊಸ ಮುಖಗಳನ್ನು ಮುಂದೆ ತರುವುದು, ವಯಸ್ಸಾಾದವರನ್ನು ನಿವೃತ್ತಿಿಗೊಳಿಸಿ, ಯುವಕರಿಗೆ ಆದ್ಯತೆ ನೀಡುವುದು ಹಲವಾರು ಪ್ರಯೋಗಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಾಾ ಬಂದಿವೆ. ಅದರಲ್ಲಿಯೂ ಮೋದಿ, ಅಮಿತ್ ಶಾ ಜೋಡಿಯಂತೂ, ಈ ರೀತಿಯ ಪ್ರಯೋಗಗಳನ್ನು ಮಾಡುವುದರಲ್ಲಿ ಎತ್ತಿಿದ ಕೈ. ಸ್ವಾಾಮೀಜಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಿ ಮಾಡಿದರು, ಹೂ ಮಾರುವ ಹುಡುಗನೊಬ್ಬನಿಗೆ ಹರಿಯಾಣದಿಂದ ಟಿಕೆಟ್ ನೀಡಿದರು. ಈ ಪ್ರಯೋಗಗಳು ಎಷ್ಟರಮಟ್ಟಿಿಗೆ ಫಲ ನೀಡುತ್ತವೆ ಎಂಬುದನ್ನು ಅರಿತೇ ಮಾಡಿದ್ದಾಾರೆಂದು ಹೇಳಲಾಗುವುದಿಲ್ಲ.

ಕೆಲವರು ಇದರ ಲಾಭಗಳನ್ನು ಪಡೆದುಕೊಂಡರೆ, ಇನ್ನು ಕೆಲವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೇ, ಕೆಟ್ಟ ಹೆಸರು ತಂದುಕೊಂಡರು. ಹೌದು, ಪ್ರಯೋಗಗಳು ಆಗಬೇಕು. ಹಾಗಾದಾಗಲಷ್ಟೇ, ಹಳೆಯ ನೀರು ಹರಿದು ಹೋಗಿ, ಹೊಸ ನೀರು ಬಂದಂತೆ ಆಲೋಚನೆಗಳು ಬರುತ್ತವೆ. ಅತಿ ಹೆಚ್ಚು ಯುವಶಕ್ತಿಿಯಿಂದ ಕೂಡಿರುವ ಭಾರತದಂಥ ದೇಶದಲ್ಲಿ ಯುವಜನತೆಯ ಸಮಸ್ಯೆೆಯನ್ನು ಯುವ ನಾಯಕರು ಮಾತ್ರ ಅರ್ಥಮಾಡಿಕೊಳ್ಳಬಲ್ಲರು. ಆದರೆ ಸಮಸ್ಯೆೆಗಳಿಗೆ ಬೇಕಾದ ಪರಿಹಾರಗಳನ್ನು ಕೊಡಲು ಸಮರ್ಥರೇ ಇಲ್ಲವೋ, ತಿಳಿದಿಲ್ಲ. ಅವರ ನಡೆ, ನುಡಿ, ಭಾಷಾ ಪ್ರಯೋಗಗಳು ಇತ್ತೀಚೆಗೆ ಈ ಅನುಮಾನವನ್ನು ಹುಟ್ಟುಹಾಕಿದೆ.

ಈ ಪ್ರಯೋಗಗಳು ಸರಿಯಾದ ಸಮಯದಲ್ಲಿ ಮಾಡಿದರೆ ಮಾತ್ರ ಫಲ ಕೊಡುತ್ತದೆ. ಅದರಲ್ಲಿಯೂ ದಕ್ಷಿಿಣ ಭಾರತದ ರಾಜ್ಯಗಳಲ್ಲಿ ಈ ಪ್ರಯೋಗಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಪ್ರಾಾದೇಶಿಕ ಪಕ್ಷಗಳು ಬೀಡು ಬಿಟ್ಟಿಿರುವ ಆಳವಾದ ಬೇರುಗಳು ಯಾವ ಸಮಯದಲ್ಲಾಾದರೂ, ದೊಡ್ಡದಾದ ಸಮಸ್ಯೆೆಯೊಂದನ್ನು ತಂದೊಡ್ಡಬಹುದು.

ಕರ್ನಾಟಕದ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ, ಹೊಸ ಪ್ರಯೋಗಗಳನ್ನು ಬಿಜೆಪಿ ಹಾಗೂ ಕಾಂಗ್ರೆೆಸ್ ಎರಡೂ ಪಕ್ಷದವರೂ ಮಾಡಲು ಹೊರಟಿರುವುದು ಕಣ್ಣಿಿಗೆ ಕಾಣುತ್ತದೆ. ಅದರಲ್ಲಿಯೂ ದೊಡ್ಡ ಮಟ್ಟದ ಪ್ರಯೋಗವನ್ನು ಮಾಡಲು ಹೊರಟಿರುವುದು ಕಾಣುತ್ತದೆ. ಇಬ್ಬರು ದಿಗ್ಗಜ ನಾಯಕರುಗಳನ್ನು ತೆರೆಯ ಹಿಂದೆ ಸರಿಸಿ, ಹೊಸ ನಾಯಕರುಗಳನ್ನು ಹುಟ್ಟುಹಾಕುವ ಯೋಚನೆಗಳು ಸರಾಗವಾಗಿ ಕಾಣುತ್ತಿಿವೆ.

ಹೌದು ನಾನು ಹೇಳುತ್ತಿಿರುವ ನಾಯಕರುಗಳು ಬಿಜೆಪಿಯ ಯಡಿಯೂರಪ್ಪ ಹಾಗೂ ಕಾಂಗ್ರೆೆಸ್‌ನ ಸಿದ್ದರಾಮಯ್ಯ ಈ ಇಬ್ಬರೂ ನಾಯಕರುಗಳು ತಮ್ಮದೇ ಆದ ಛಾಪನ್ನು ರಾಜ್ಯ ರಾಜಕೀಯದಲ್ಲಿ ಮೂಡಿಸಿದವರು. ಅವರ ಬಗ್ಗೆೆ ಸಾವಿರ ನಕಾರಾತ್ಮಕ ಅಂಶಗಳಿರಲಿ, ಇಂದಿಗೂ ಅವರನ್ನು ಮೀರಿಸಬಲ್ಲ ಮತ್ತೊೊಬ್ಬ ನಾಯಕ ಯಾರೂ ಇಲ್ಲವೆನ್ನಬಹುದು.

ಜನತಾದಳ ಪರಿವಾರದಿಂದ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಬೆಳೆದಿರುವ ನಾಯಕ ಸಿದ್ದರಾಮಯ್ಯ ಯಥಾ ಪ್ರಕಾರ ಅವರೂ ಸಹ ದೇವೇಗೌಡರ ರಾಜಕೀಯ ಒಳಸಂಚಿಗೆ ಬಲಿಯಾಗಿ ಎಚ್ಚೆೆತ್ತುಕೊಂಡ ಅವರ ಮುಂದೆಯೇ ಹೆಮ್ಮರವಾಗಿ ಬೆಳೆದ ನಾಯಕ. ಹಳೆ ಮೈಸೂರು ಭಾಗದಲ್ಲಿ ಜನತಾದಳ ಪಕ್ಷವು ಗಟ್ಟಿಿಯಾಗಿ ಬೇರೂರಲು ಕಾರಣರಾದವರನ್ನು ತುಳಿದು ಹಾಕಿದ ಕೀರ್ತಿ ದೇವೇಗೌಡರದ್ದು. ಕೇವಲ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಮಾತ್ರ ಬೆಳೆಸುವ ಮನಸ್ಥಿಿತಿಯ ನಾಯಕನೆಂದು ತಿಳಿದಕೂಡಲೇ ಪಕ್ಷವನ್ನು ಬಿಟ್ಟು ಧೈರ್ಯವಾಗಿ ಹೊರ ನಡೆದರು. ಕರ್ನಾಟಕದಲ್ಲಿ ಸಂಕಷ್ಟದಲ್ಲಿದ್ದ ಕಾಂಗ್ರೆೆಸ್ ಪಕ್ಷವನ್ನು ಮೇಲೆತ್ತಿಿ, ಸಂಕಷ್ಟದಿಂದ ಪಾರು ಮಾಡಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಎಸ್‌ಎಂ ಕೃಷ್ಣ ಕಾಲಾನಂತರದಲ್ಲಿ ಕಾಂಗ್ರೆೆಸ್ ಪಕ್ಷದಲ್ಲಿ ಬಹುದೊಡ್ಡ ಅಲೆಯನ್ನೇ ಸೃಷ್ಟಿಿಸಿದ ನಾಯಕ ಸಿದ್ದರಾಮಯ್ಯ. ನೆನಪಿರಲಿ, ನಾನು ಕೇವಲ ಸಿದ್ದರಾಮಯ್ಯನವರ ರಾಜಕೀಯ ನಾಯಕತ್ವವನ್ನು ಹೊಗಳುತ್ತಿಿರುವುದು. ಅವರ ಹಲವು ಯೋಜನೆಗಳು, ಹಲವಾರು ಹೇಳಿಕೆಗಳನ್ನು ನಾನು ಈ ಹಿಂದೆಯೂ ಖಂಡಿಸಿದ್ದೆೆ, ಈಗಲೂ ಖಂಡಿಸುತ್ತೇನೆ.

ಕಾಂಗ್ರೆೆಸ್ ಪಕ್ಷವನ್ನು ಅಹಿಂದ ಮತ ಬ್ಯಾಾಂಕ್ ಆಗಿ ಪರಿವರ್ತಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರವೂ ತುಂಬಾನೇ ದೊಡ್ಡದು. ರಾಜ್ಯಾಾದ್ಯಂತ ಇರುವ ಅಹಿಂದ ಸಂಘಟನೆಗಳೆಲ್ಲವನ್ನೂ ಒಗ್ಗೂಡಿಸಿ, ಅವರ ಮತಗಳನ್ನೆೆಲ್ಲ ಕ್ರೋೋಢಿಕರಿಸಿ ಇಂದಿಗೂ ಹಾಗೆಯೇ ಒಗ್ಗೂಡಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ. 2012ರಲ್ಲಿ ಬಳ್ಳಾಾರಿಗೆ ಪಾದಯಾತ್ರೆೆ ನಡೆಸಿ, ಸಂಚಲನ ಮೂಡಿಸಿದ್ದರು. ವಿರೋಧ ಪಕ್ಷದಲ್ಲಿ ಕುಳಿತು ಗಣಿಗಾರಿಕೆಯ ಅಕ್ರಮವನ್ನೇ ಅಸ್ತ್ರವನ್ನಾಾಗಿಸಿಕೊಂಡು, ಬಳ್ಳಾಾರಿಯ ರೆಡ್ಡಿಿ ಬ್ರದರ್ಸ್ ಕೋಟೆಯನ್ನೇ ಹೊಡೆದುಹಾಕಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ಗೆ ಬಹಳ ದೊಡ್ಡ ಹೊಡೆತವನ್ನು ನೀಡಿದ್ದರು. ಸರ್ವಾಧಿಕಾರಿಯಂತೆ ಮೆರೆಯುತ್ತಿಿದ್ದ ರೆಡ್ಡಿಿಗಳ ಕೋಟೆಯನ್ನು ಅಷ್ಟು ಸುಲಭವಾಗಿ ಬೇರೆ ಯಾರೂ ಸಹ ಮಾಡುವ ಧೈರ್ಯವನ್ನು ಮಾಡಿರಲಿಲ್ಲ.

ಅಪಾಯಕಾರಿಯೆಂದು ತಿಳಿದರೂ ಸಹ ಅಂಥ ಸಾಹಸಕ್ಕೆೆ ಕೈಹಾಕಿ ಯಶಸ್ವಿಿಯಾದರು. ಕರ್ನಾಟಕದ ಮತ ಬಾಂಧವರಿಗೆ ಬಿಜೆಪಿ ಪಕ್ಷದಲ್ಲಿನ ನಾಯಕರುಗಳ ಮೇಲೆ ಅಸಹ್ಯ ಮೂಡುವಂತೆ ಮಾಡಿದರು. ಇನ್ನು ಯಡಿಯೂರಪ್ಪನವರು ಜೈಲಿಗೆ ಹೋದ ವಿಷಯವನ್ನು ಅಷ್ಟೇ ರಾಜಕೀಯವಾಗಿ ಬಳಸಿಕೊಂಡು ಬಿಜೆಪಿಯನ್ನು ದೂಳಿಪಟ ಮಾಡಿದರು. 2013ರಲ್ಲಿ ಬಿಜೆಪಿ ನೆಲ ಕಚ್ಚಲು ಯಡಿಯೂರಪ್ಪನವರು ಹೇಗೆ ಕಾರಣರಾದರೋ, ಸಿದ್ದರಾಮಯ್ಯನವರೂ ಅಷ್ಟೇ ಕಾರಣ. ಸಂತೋಷ್‌ಜೀ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಲಭಿಸಿದ್ದು ಕೇವಲ 40 ಸ್ಥಾಾನ.

ಅನಂತರದ ದಿನಗಳಲ್ಲಿ 2013ರಲ್ಲಿ ತಾನು ಮುಖ್ಯಮಂತ್ರಿಿಯಾದಾಗ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಐದು ವರ್ಷಗಳ ಕಾಲ ಯಾವುದೇ ತಂಟೆ ತಕರಾರಿಲ್ಲದೇ, ಗಟ್ಟಿಿಯಾದ ಆಡಳಿತವನ್ನು ನೀಡಿದ ನಾಯಕರಿವರು. ಅವರ ಯೋಜನೆಗಳ ಬಗ್ಗೆೆ ಅಪಸ್ವರಗಳಿದ್ದರೂ, ಪಕ್ಷದ ನಾಯಕನಾಗಿ ಅವರು ಎಲ್ಲರನ್ನೂ ನಿಯಂತ್ರಣದಲ್ಲಿ ಹಿಡಿದಿಟ್ಟುಕೊಂಡು ಜತೆಗೆ ಕರೆದುಕೊಂಡು ಹೋಗುವುದರಲ್ಲಿ ಮಾತ್ರ ಅದ್ಭುತ ಯಶಸ್ಸು ಕಂಡರು. ಇನ್ನು ಮುಸ್ಲಿಿಂ ಮತಬ್ಯಾಾಂಕನ್ನು ಕಾಂಗ್ರೆೆಸ್ಸಿಿನೆಡೆಗೆ ಬದಲಾಯಿಸಿದರು. ಇದರ ಫಲವಾಗಿಯೇ 2018ರ ಚುನಾವಣೆಯಲ್ಲಿ ದೇವೇಗೌಡರು ಮುಂದಿನ ಜನ್ಮದಲ್ಲಿ ತಾನು ಮುಸಲ್ಮಾಾನನಾಗಿಯೇ ಹುಟ್ಟುತ್ತೇನೆ ಎಂದು ನಾಟಕ ಮಾಡಿದರೂ, ಕೇವಲ 37 ಸೀಟುಗಳನ್ನುಪಡೆಯುವಂತಾಯಿತು. ಮುಸಲ್ಮಾಾನರು ದೇವೇಗೌಡರಿಗೆ ಸರಿಯಾಗ ಗುನ್ನವನ್ನೇ ಇಟ್ಟು, ಸಿದ್ದರಾಮಯ್ಯನವರನ್ನು ಅಪ್ಪಿಿಕೊಂಡರು. ಈಗ ಎಷ್ಟೇ ತಿಪ್ಪರಲಾಗ ಹಾಕಿದರೂ, ಮುಸಲ್ಮಾಾನರು ಅಷ್ಟು ಸುಲಭವಾಗಿ ಜೆಡಿಎಸ್‌ನೆಡೆಗೆ ಹೋಗುವುದಿಲ್ಲ.

ಇತ್ತೀಚಿನ ಸಮ್ಮಿಿಶ್ರ ಸರಕಾರದಲ್ಲಿ ಕುಮಾರಸ್ವಾಾಮಿ ಪಟಾಲಂನ ನಾಟಕಗಳನ್ನು ಜತೆಯಲ್ಲಿಯೇ ಇದ್ದುಕೊಂಡು, ಜನರ ಮುಂದೆ ಇಡುವುದನ್ನು ಮಾತ್ರ ಮರೆಯಲಿಲ್ಲ. ಜನರಿಗೆ ಜೆಡಿಎಸ್ ಮೇಲೆ ಅಸಹ್ಯ ಮೂಡಿದ್ದಂತೂ ನಿಜ. ಒಕ್ಕಲಿಗರನ್ನು ಒಂದುಗೂಡಿಸಿ, ಇಡೀ ರಾಜ್ಯಕ್ಕೆೆ ಅಧಿಪತಿಯಾಗಬೇಕೆಂದಿದ್ದ ಕುಮಾರಣ್ಣನ ಆಸೆಗೆ ಶಾಶ್ವತವಾಗಿ ತಿಲಾಂಜಲಿಟ್ಟಿಿದ್ದು ಸಿದ್ದರಾಮಯ್ಯ. ಕಾಂಗ್ರೆೆಸ್ ಹೈಕಮಾಂಡ್ ಈಗ ಇಂಥ ನಾಯಕರನ್ನು ಸೈಡ್‌ಲೈನ್ ಮಾಡಿ, ಬೇರೆಯವರಿಗೆ ಪಟ್ಟ ನೀಡುವ ಹುಮ್ಮಸ್ಸಿಿನಲ್ಲಿದ್ದಂತೆ ಕಾಣುತ್ತಿಿದೆ. ಡಿ.ಕೆ.ಶಿವಕುಮಾರ ಒಬ್ಬ ಡ್ಯಾಾಶಿಂಗ್ ಲೀಡರ್ ಆಗಿದ್ದರೂ ಸಹ, ರಾಜ್ಯಾಾದ್ಯಂತ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿರುವ ನಾಯಕನಂತೂ ಅಲ್ಲವೇ ಅಲ್ಲ.

ಹೆಚ್ಚೆೆಂದರೆ ಹಳೆ ಮೈಸೂರು ಕೆಲವು ಕ್ಷೇತ್ರಗಳನ್ನು ಹಿಡಿತದಲ್ಲಿಟ್ಟುಕೊಂಡಿರಬಹುದಷ್ಟೇ. ಇವರನ್ನು ತಮ್ಮ ನಾಯಕರೆಂದು ಉತ್ತರ ಹಾಗೂ ಮಧ್ಯ ಕರ್ನಾಟಕದ ನಾಯಕರುಗಳು ಒಪ್ಪಿಿಕೊಳ್ಳುವುದೇ ಇಲ್ಲ. ಇಂದಿಗೂ ಎಂ.ಬಿ.ಪಾಟೀಲ, ಜಾರಕಿಹೊಳಿ, ಯು.ಟಿ.ಖಾದರ್, ಜಮೀರ್ ಅಹ್ಮದ್ ಖಾನ್‌ರಂಥ ಘಟಾನುಘಟಿಗಳು ಸಿದ್ದರಾಮಯ್ಯನವರನ್ನೇ ತಮ್ಮ ನಾಯಕನೆಂದು ಒಪ್ಪಿಿಕೊಳ್ಳುವುದು. ಅಷ್ಟರಮಟ್ಟಿಿಗೆ ಇವರಿಗೆಲ್ಲ ಅವಕಾಶಗಳನ್ನು ನೀಡಿ, ಕೇವಲ ಐದು ವರ್ಷಗಳಲ್ಲಿ ಬೆಳೆಸಿದ ಕೀರ್ತಿ ಸಿದ್ದರಾಮಯ್ಯನವರದ್ದು. ಬೆಳಗಾವಿಯಲ್ಲಿ ಡಿ.ಕೆ.ಶಿವಕುಮಾರ ಹಿಡಿತ ಸಾಧಿಸಲು ಹೋಗಿ, ಜಾರಕಿಹೊಳಿಯನ್ನು ಎದುರು ಹಾಕಿಕೊಂಡರು, ಬಳ್ಳಾಾರಿಗೆ ಹೋಗಿ ಅಲ್ಲಿಯೂ ವಿಫಲರಾಗಿ ಕೊನೆಗೆ ಸರಕಾರವೇ ಬೀಳಲು ಮುಖ್ಯವಾಗಿ ಕಾರಣರಾದರು. ಉತ್ತರ ಭಾಗದ ಕಾಂಗ್ರೆೆಸ್ಸಿಿನ ಮತದಾರನಿಗೂ ದಕ್ಷಿಿಣದ ಮತದಾರನಿಗೂ ತುಂಬಾ ವ್ಯತ್ಯಾಾಸವಿದೆ.

ಇಬ್ಬರೂ ವಿರುದ್ಧ ದಿಕ್ಕಿಿನಲ್ಲಿಯೇ ಯೋಚಿಸುವವರು. ಇಬ್ಬರನ್ನೂ ಅರ್ಥಮಾಡಿಕೊಂಡು, ಸ್ಥಳೀಯ ನಾಯಕತ್ವವನ್ನು ಬೆಳೆಸಿ; ಪಕ್ಷವನ್ನು ಸಂಘಟಿಸಿದ ಚತುರ ರಾಜಕಾರಣಿ ಸಿದ್ದರಾಮಯ್ಯ. ಈ ರೀತಿಯ ನಾಯಕರನ್ನು ಈಗಿನ ಪರಿಸ್ಥಿಿತಿಯಲ್ಲಿ ಕೈಬಿಟ್ಟು ಪರ್ಯಾಾಯ ನಾಯಕತ್ವವನ್ನು ನೇಮಿಸಲು ಹೊರಟರೆ, ಕಾಂಗ್ರೆೆಸ್ ಪಕ್ಷವು ನಿಜವಾಗಿಯೂ ಆತ್ಮಹತ್ಯೆೆಯನ್ನು ಮಾಡಿಕೊಳ್ಳಬೇಕಾಗುತ್ತದೆಯಷ್ಟೇ. ನಂಜಾವಧೂತ ಸ್ವಾಾಮೀಜಿಯ ಆಕ್ರೋೋಶದ ಮಾತುಗಳನ್ನು ಕುಂಚಿಟಿಗ ಹಾಗೂ ಗಂಗಟ್‌ಗಾರ್, ಒಕ್ಕಲಿಗರು ಮಾತ್ರ ಕೇಳಬಹುದಷ್ಟೇ, ಉಳಿದವರು ಸೊಪ್ಪೇ ಹಾಕುವುದಿಲ್ಲ. ಅಲ್ಲಿನ ಜನರು ಇವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಸುಮ್ಮನೆ ಮಾತನಾಡಿ, ಇಲ್ಲಿನ ಕೆಲ ಸಮುದಾಯಗಳಿಂದ ಚಪ್ಪಾಾಳೆ ಗಿಟ್ಟಿಿಸಬಹುದೇ ಹೊರತು ಬೇರೇನೂ ಮಾಡಲು ಆಗುವುದಿಲ್ಲ.

ಈಗಿನ ಸಂದರ್ಭಧಲ್ಲಿ ಸ್ವತಃ ಸಿದ್ದರಾಮಯ್ಯನವರೇ ರಾಜಕೀಯ ನಿವೃತ್ತಿಿ ಹೊಂದುವವರೆಗೂ, ನಾಯಕತ್ವದ ಬದಲಾವಣೆಯಂತೂ ಮಾಡುವ ಹಾಗಿಲ್ಲ. ಒಂದು ಬೃಹತ್ ಆಲದ ಮರವಾಗಿ ಬೆಳೆದು, ಹಲವಾರು ಜನರಿಗೆ ತನ್ನ ಕೆಳಗೆ ಆಶ್ರಯ ನೀಡುವ ಮೂಲಕ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ನಾಯಕನನ್ನು ಈಗ ಮುಟ್ಟಲು ಸಾಧ್ಯವಿಲ್ಲ.

ಬಿಜೆಪಿಯಲ್ಲೂ ಇಂಥದ್ದೇ ಒಂದು ದೊಡ್ಡ ಷಡ್ಯಂತ್ರ ನಡೆಯುತ್ತಿಿದೆ. ಯಾರು ಏನೇ ಹೇಳಿದರೂ ಸಹ ಇಂದಿಗೂ ಬಿಜೆಪಿಯಲ್ಲಿ ಯಡಿಯೂರಪ್ಪನವರೇ ಮಾಸ್ ಲೀಡರ್. ಕೇವಲ ಎರಡು ಸೀಟಿನಿಂದ 110 ಸೀಟು ಗೆಲ್ಲುವವರೆಗೂ ಪಕ್ಷ ಸಂಘಟನೆ ಮಾಡಿರುವ ನಾಯಕ ಯಡಿಯೂರಪ್ಪ. ಬೆಳಗ್ಗೆೆ ಐದು ಗಂಟೆಗೆ ಎದ್ದು ಹಳೆಯ ಸ್ಕೂಟರ್‌ನಲ್ಲಿ ಕುಳಿತು ಮೆಜೆಸ್ಟಿಿಕ್‌ನಲ್ಲಿ ಪಾರ್ಕಿಂಗ್ ಮಾಡಿ, ಬಸ್ಸಿಿನಲ್ಲಿ ಬೀದರ್ ಜಿಲ್ಲೆೆಗೆ ಹೊರಟು ಅನಂತಕುಮಾರ ಒಡಗೂಡಿ ಸೈಕಲ್ ಮೇಲೆ ಪಕ್ಷದ ಪ್ರಚಾರವನ್ನು ಮಾಡಿರುವಂಥ ದೃಢ ನಾಯಕರಿವರು. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಇವರ ಚಾತುರ್ಯತೆಗೆ ಎಲ್ಲೆೆಯೇ ಇಲ್ಲ. ಕಾಗೋಡು ತಿಮ್ಮಪ್ಪನ ಸ್ವಂತ ಊರು ಕಾಗೋಡುವಿನಲ್ಲೇ ಪಕ್ಷಕ್ಕೆೆ ಲೀಡ್ ತರುವ ಸಾಮರ್ಥ್ಯವಿರುವ ನಾಯಕರಿವರು.

ಕುಳಿತಲ್ಲಿಂದಲೇ ಯಾವ ಬೂತ್‌ಗಳಿಂದ ಪಕ್ಷಕ್ಕೆೆ ಹಾನಿಯಾಗುವ ಸಂಭವವಿದೆ ಎಂಬುದನ್ನು ಅರಿತು, ರಾತ್ರೋೋ ರಾತ್ರಿಿ ಆ ಬೂತ್ ಮಟ್ಟದ ಸ್ಥಳೀಯ ನಾಯಕರುಗಳಿಗೆ ಭರವಸೆ ನೀಡಿ, ಚುನಾವಣಾ ಫಲಿತಾಂಶವನ್ನೇ ಉಲ್ಟಾಾ ಮಾಡಿರುವ ಹಲವಾರು ಉದಾಹರಣೆಗಳಿವೆ. ಈ ವಯಸ್ಸಿಿನಲ್ಲಿಯೂ ಉ.ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆೆಗಳಿಗೆ ಭೇಟಿ ನೀಡಿ, ಹಗಲು ರಾತ್ರಿಿಯೆನ್ನದೇ ಜನರಿಗೆ ಹತ್ತಿಿರವಾಗುವ ನಾಯಕರಿವರು. ರಾಜಕೀಯವಾಗಿ ಒಟ್ಟೊೊಟ್ಟಿಿಗೆ 30-40 ಕ್ಷೇತ್ರಗಳ ಲೆಕ್ಕಾಾಚಾರವನ್ನೇ ಬುಡಮೇಲು ಮಾಡಬಲ್ಲಂಥ ನಾಯಕ ಯಡಿಯೂರಪ್ಪ. ಇಡೀ ಲಿಂಗಾಯತ ಸಮುದಾಯವನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡು, ಲಿಂಗಾಯತ ಜನಾಂಗದ ಪ್ರಶ್ನಾಾತೀತ ನಾಯಕನಾಗಿ ಬೆಳೆದ ಯಡಿಯೂರಪ್ಪನವರ ಸಾಧನೆ ಸಣ್ಣದಲ್ಲ. ಅಂಥ ಮತ್ತೊೊಬ್ಬ ಲಿಂಗಾಯತ ನಾಯಕ ಅಷ್ಟು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ.

ಸ್ವತಃ ಇವರ ಮಕ್ಕಳಾದ ವಿಜಯೇಂದ್ರ ಹಾಗೂ ರಾಘವೇಂದ್ರರಿಗೆ ಅಪ್ಪನ ಮಾಸ್ ನಾಯಕತ್ವ ತುಂಬುವ ಲಕ್ಷಣವಿಲ್ಲ. ಲಿಂಗಾಯತರೂ ಅಷ್ಟು ಸುಲಭವಾಗಿ ಹೊಸ ನಾಯಕತ್ವವನ್ನು ಒಪ್ಪುುವುದಿಲ್ಲ. ಕರ್ನಾಟಕದ ಅತಿದೊಡ್ಡ ಮತಬ್ಯಾಾಂಕ್ ಆಗಿರುವ ಲಿಂಗಾಯತರ ಭಾವನೆಗಳ ಜತೆ ಆಟವಾಡಿದರೆ, ಅವರೆಲ್ಲರೂ ಕಾಂಗ್ರೆೆಸ್ ಕಡೆಗೆ ಹಂಚಿಹೋಗುವ ಎಲ್ಲ ಲಕ್ಷಣಗಳಿವೆ. ಒಮ್ಮೆೆ ಹೋದರೆ ಬಿಜೆಪಿಯ ರಕ್ಷಣೆ ದಕ್ಷಿಿಣ ಭಾರತದ ಹೆಬ್ಬಾಾಗಿಲು ಇನ್ನು 10 ವರ್ಷ ಮುಚ್ಚಿಿದ ಹಾಗೆಯೇ ತೋರುತ್ತದೆ. ಯಡಿಯೂರಪ್ಪನವರಿಗೆ ಒಳ್ಳೆೆಯ ವಿದಾಯವನ್ನು ನೀಡಿ, ಅವರೇ ಲಿಂಗಾಯತರ ಮುಂದೆ ಬಂದು ತಮ್ಮ ಉತ್ತರಾಧಿಕಾರಿಯನ್ನು ನೇಮಿಸಬೇಕು. ಆಗಲೂ ತುಸು ಕಷ್ಟವೇ ಸರಿ. ಆದರೆ ಸದ್ಯದ ಪರಿಸ್ಥಿಿತಿಯಲ್ಲಿ ಇದು ಸಾಧ್ಯವಿಲ್ಲ. ಹಲವಾರು ಜೆಡಿಎಸ್ ಹಾಗೂ ಕಾಂಗ್ರೆೆಸ್ ಪಕ್ಷದ ನಾಯಕರುಗಳನ್ನು ಪಕ್ಷಕ್ಕೆೆ ಕರೆ ತಂದು ಬೆಳೆಸಿದ ಕೀರ್ತಿ ಯಡಿಯೂರಪ್ಪನವರದು. ವಿ.ಸೋಮಣ್ಣನಂಥ ನಾಯಕರನ್ನು ಪಕ್ಷಕ್ಕೆೆ ಕರೆತಂದು ಈ ಮಟ್ಟಿಿಗೆ ಬೆಳೆಸಿದ್ದು ಇದೇ ಯಡಿಯೂರಪ್ಪನವರು. ಶೋಭಾ ಕರಂದ್ಲಾಾಜೆಯಂಥ ಮಹಿಳಾ ನಾಯಕಿಯನ್ನು ಈ ಮಟ್ಟಿಿಗೆ ಬೆಳೆಸಿದ್ದು ಇದೇ ಯಡಿಯೂರಪ್ಪನವರು.

ಕೆಲವು ಅಚಾತುರ್ಯಗಳಿಂದ ಅವರು ಜೈಲಿಗೆ ಹೋದದ್ದು ನಿಜವೇ ಆದರೂ, ರಾಜಕೀಯವಾಗಿ ಒಂದು ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡವರಲ್ಲಿ ಇವರೇ ಮೊದಲಿಗರು.

ಜಾತಿಯಾಧಾರಿತ ರಾಜಕೀಯ ಮಾಡುವುದನ್ನು ನಾನು ಕೂಡ ಒಪ್ಪುುವುದಿಲ್ಲ. ಆದರೆ ನಾವು ಇನ್ನೂ ಸಹ ಆ ಮಟ್ಟವನ್ನು ತಲುಪಿಲ್ಲ. ದೇಶ ಎಂದು ಬಂದಾಗ ಮೋದಿ ಎಂಬ ಮಹಾನ್ ನಾಯಕನನ್ನು ಮೆಚ್ಚಿಿದ ಜನರು ಜಾತಿ ಭೇದವನ್ನು ಬಿಟ್ಟು ಮತಹಾಕಿದರು. ಇದೇ ಫಾರ್ಮುಲಾ ಕರ್ನಾಟಕದಲ್ಲಿ ಆಗುವುದಿಲ್ಲ. ಇಲ್ಲಿ ಇಂದಿಗೂ ರಾಜ್ಯ ನಾಯಕತ್ವ ವಿಷಯ ಬಂದಾಗ, ಜಾತಿಯೇ ನಿರ್ಣಾಯಕ. ಇಂದಿನ ಪರಿಸ್ಥಿಿತಿಯಲ್ಲಿ ಜಾತಿಯಿಲ್ಲದೇ ರಾಜಕೀಯ ಮಾಡಲು ಸಾಧ್ಯವೇ ಇಲ್ಲ. ಈ ಸತ್ಯವನ್ನು ರಾಷ್ಟ್ರನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.

ಸಂತೋಷಜೀ ಅವರು ಜಾತಿಯನ್ನು ಮೀರಿ ಜನರನ್ನು ಆಕರ್ಷಿಸಿ ಮತ ಬೇಟೆಯಾಡುವ ನಾಯಕರಲ್ಲ. ಇತಿಹಾಸವೇ ಇದಕ್ಕೆೆ ಸಾಕ್ಷಿಿಯಾಗಿದೆ. ಅವರನ್ನು ರಾಜ್ಯದ ಜನರು ಅಷ್ಟು ಸುಲಭವಾಗಿ ಒಪ್ಪಿಿಕೊಳ್ಳುವುದಿಲ್ಲ. ಅಸಂಖ್ಯ ಜನರಿಗೆ ಅವರ್ಯಾಾರು ಎಂದೇ ತಿಳಿದಿಲ್ಲ. ಇಷ್ಟೆೆಲ್ಲ ಸಮಸ್ಯೆೆಗಳು ಕಣ್ಣುಮುಂದೆ ಇರುವಾಗ, ಕಾಂಗ್ರೆೆಸ್ ಹಾಗೂ ಬಿಜೆಪಿ ಪಕ್ಷಗಳು ಈ ಇಬ್ಬರ ದಿಗ್ಗಜರ ವಿಚಾರದಲ್ಲಿ ಕೊಂಚ ಆಟವಾಡಿದರೂ, ನಿರ್ನಾಮವಾಗುವುದು ಗ್ಯಾಾರೆಂಟಿ. ಹೀಗಾದರೆ ನೆಲಕಚ್ಚಿಿರುವ ಜೆಡಿಎಸ್ ಮೇಲೆ ಎದ್ದರೂ ಅಚ್ಚರಿಪಡಬೇಕಿಲ್ಲ.

ಇಷ್ಟೆೆಲ್ಲ ಸಮಸ್ಯೆೆ ಇದ್ದರೂ, ಜಾತಿ, ಮತವನ್ನು ಮೀರಿದ ನಾಯಕನೊಬ್ಬನು ಕರ್ನಾಟಕದಲ್ಲಿದ್ದಾಾನೆ. ತನ್ನ ಕೆಲಸಗಳಿಂದ ಗುರುತಿಸಿಕೊಂಡು ಜನರಿಗೆ ಹತ್ತಿಿರವಾಗಿರುವ ಈ ನಾಯಕ ಮಾತ್ರ ಜಾತಿ, ಮತಗಳನ್ನು ಮೀರಿ ದೊಡ್ಡ ನಾಯಕನಾಗಿ ಬೆಳೆಯಬಲ್ಲ. ಈ ನಾಯಕನನ್ನು ನೋಡಿದರೆ ಮಾತ್ರ ನಮಗಿರುವ ಬಹುದೊಡ್ಡ ಸಮಸ್ಯೆೆಗೆ ಪರಿಹಾರ ಸಿಗುವುದೆಂಬ ಭರವಸೆಯಿದೆ ನನಗಿದೆ. ಯಾರಿರಬಹುದೆಂದು ಊಹಿಸಿ, ಮನಸ್ಸಿಿನಲ್ಲಿಯೇ ಖುಷಿ ಪಡಿ.

Leave a Reply

Your email address will not be published. Required fields are marked *

error: Content is protected !!